Connect with us

    LATEST NEWS

    ದಸರಾ ಪ್ರಯುಕ್ತ 2000ಕ್ಕೂ ಹೆಚ್ಚು ವಿಶೇಷ KSRTC ಬಸ್​ ವ್ಯವಸ್ಥೆ!

    Published

    on

    ಬೆಂಗಳೂರು: ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ದಸರಾ ಹಬ್ಬ ಆಚರಣೆ ಮಾಡಲಾಗ್ತಿದೆ. ಮೈಸೂರು ಮಾತ್ರವಲ್ಲ, ಶ್ರೀರಂಗಪಟ್ಟಣ, ಮಂಗಳೂರು, ರಾಯಚೂರು, ಚಿಕ್ಕಮಗಳೂರು ಹೀಗೆ ಹಲವು ಕಡೆಗಳಲ್ಲಿ ನಾಡಹಬ್ಬವನ್ನ ಆಚರಣೆ ಮಾಡಲಾಗ್ತಿದೆ.

    ನಾಡಹಬ್ಬ ದಸರಾಕ್ಕೆ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ತಮ್ಮ ಊರುಗಳಿಗೆ ತೆರಳಿ ಫುಲ್​ ಮಜಾ ಮಾಡೋಣ ಅಂತಾ ದಸರಾ ರಜೆ ಬಗ್ಗೆ ಜನರು ಪ್ಲಾನ್​ ಮಾಡ್ಕೊಂಡಿರುತ್ತಾರೆ. ತಮ್ಮ ತವರು ಮೈಸೂರು ಅಂತಾ ಹಲವೆಡೆ ತೆರಳೋದಕ್ಕೆ ಸಕಲ ಸಿದ್ಧತೆ ಮಾಡ್ಕೊಂಡಿದ್ದಾರೆ. ಹಾಗೆಯೇ ಹೊರಡೋದಕ್ಕೆ ಸಿದ್ಧವಾಗಿರೋ ಜನಕ್ಕಾಗಿ ಕರ್ನಾಟಕ ಸಾರಿಗೆ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್​ 9 ರಿಂದ ಅಕ್ಟೋಬರ್​ 12 ರವರೆಗೆ 2000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

    ಈ ವಿಶೇಷ ಬಸ್​ಗಳು ಎಲ್ಲೆಲ್ಲಿಗೆ?

    ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ಈ ವಿಶೇಷ ಬಸ್​ ವ್ಯವಸ್ಥೆ ಮಾಡಲಾಗಿದೆ.

    LATEST NEWS

    ಮ್ಯಾನೇಜರ್‌ಗೆ ವಂಚನೆ; ಲಕ್ಷಾಂತರ ನಗದು ಸಹಿತ ವೈಟರ್ ಪರಾರಿ

    Published

    on

    ಮಣಿಪಾಲ: ಹೊಟೇಲ್ ಮ್ಯಾನೇಜರ್‌ಗೆ ವೈಟರ್ ವಂಚಿಸಿ ಲಕ್ಷಾಂತರ ನಗದಿನೊಂದಿಗೆ ಪರಾರಿಯಾದ ಘಟನೆ ಮಣಿಪಾಲದ ಈಶ್ವರನಗರ ಹೊಟೇಲ್‌ನಲ್ಲಿ ನಡೆದಿದೆ.


    ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಗಿರೀಶ್ ವಂಚನೆಗೊಳಗಾದವರು.
    ಹೊಟೇಲ್‌ನಲ್ಲಿ ವೈಟರ್‌ ಆಗಿ ಕೆಲಸ ಮಾಡಿಕೊಂಡಿದ್ದ ಜಯಮೋಹನ್ ಸೊಮೇಶ್ ಎಂಬಾತ ಗಿರೀಶ್ ಅವರೊಂದಿಗೆ ವಾಸವಾಗಿದ್ದನು. ಸೆ.29 ರಂದು ಗಿರೀಶ್ ಅವರು ಕೆಲಸ ಮುಗಿಸಿ ರೂಮಿಗೆ ಬಂದು 26,650 ರೂ. ನಗದು ಹಾಗೂ 10,000 ರೂ. ಬೆಲೆಬಾಳುವ ವಿವೋ ವೈ 18 ಮಾದರಿಯ ಮೊಬೈಲ್ ಫೋನ್ ಅನ್ನು ತನ್ನ ರೂಮಿನ ಡ್ರಾವರಲ್ಲಿಟ್ಟು ಮಲಗಿದ್ದರು.
    ಮರುದಿನ ಬೆಳಿದ್ದೆ ನೋಡಿದಾಗ ಜಯಮೋಹನ್ ಸ್ಥಳದಲ್ಲಿರಲಿಲ್ಲ. ಡ್ರಾವರ್‌ನಲ್ಲಿ ಇಟ್ಟಿದ್ದ ನಗದು, ಮೊಬೈಲ್ ಹಾಗೂ ಹೊಟೇಲ್ ಹೆಸರಿನಲ್ಲಿರುವ ಎಚ್‌ಡಿಎಫ್‌ಸಿ ಖಾತೆಯಿಂದ 81,000 ರೂ. ಗಳನ್ನು ಗೂಗಲ್ ಪೇ ಮೂಲಕ ಆರೋಪಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾದ್ದು, ತನಿಖೆ ನಡೆಸುತ್ತಿದ್ದಾರೆ.

    Continue Reading

    BIG BOSS

    ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?

    Published

    on

    ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಮಹಿಳೆಯರ ಒಳಉಡುಪಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

    ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಸ್ವರ್ಗ ನಿವಾಸಿಗಳು ಮಾತ್ರ ಭಾಗಿ ಆಗಲು ಅವಕಾಶ ಇತ್ತು. 10 ಮಂದಿಯಲ್ಲಿ ಆರು ಜನರು ಮಾತ್ರ ಕ್ಯಾಪ್ಟನ್ಸಿ ಟಾಸ್ಕಲ್ಲಿ ಇರಬಹುದು ಎಂದು ಬಿಗ್ ಬಾಸ್ ಆದೇಶ ಕೊಟ್ಟರು. ಇಷ್ಟೇ ಅಲ್ಲ, ಆರು ಮಂದಿಯನ್ನು ಸ್ವರ್ಗ ನಿವಾಸಿಗಳ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದರು.

    ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಎಲ್ಲರೂ ಬಂದರು. ಇದು ಜಗದೀಶ್ ಅವರ ಕೋಪಕ್ಕೆ ಕಾರಣ ಆಯಿತು. ಅವರು ನೇರವಾಗಿ ಸ್ಪರ್ಧಿಗಳ ವಿರುದ್ಧ ಹರಿಹಾಯ್ದರು. ಅದರಲ್ಲೂ ಈ ಐಡಿಯಾ ನೀಡಿದ ಉಗ್ರಂ ಮಂಜು ವಿರುದ್ಧ ಸಿಡಿದೆದ್ದರು. ಮಾತು ಮಿತಿ ಮೀರುತ್ತಿತ್ತು. ‘ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ ನಿಜ ಜೀವನದಲ್ಲಿ ನಾನು ನಿನಗೆ ಉಗ್ರಂ ತೋರಿಸುತ್ತೇನೆ’ ಎಂದು ಜಗದೀಶ್ ಹೇಳಲು ಆರಂಭಿಸಿದರು.

    ಇದಕ್ಕೆ ಮಂಜು ಹೆಚ್ಚಿನ ಉತ್ತರ ಕೊಡೋಕೆ ಹೋಗಿಲ್ಲ.’ಬೋ..’ `ಬೋ..’ ಎಂದಷ್ಟೇ ಹೇಳಿದರು.’ಬೋ ಪ್ಯಾಂಟೀಸ್ ಎಲ್ಲ ನೋಡಿದೀನಿ.ನನ್ನ ಹೆಂಡತಿ ಹಾಕೋದು ಇದನ್ನೇ’ ಎಂದು ಜಗದೀಶ್ ಹೇಳಿದ್ದಾರೆ. ಇದು ಮನೆಯವರ ಅಸಮಾಧಾನಕ್ಕೆ ಕಾರಣ ಆಗಿದೆ. ಈ ವೇಳೆ ನಿಜವಗಾಲೂ ಇನ್ಸ್‌ಕ್ಯೂರ್ ಫೀಲ್ ಆಗ್ತಿದೆ ಎಂದು ಭವ್ಯಾ ಗೌಡ ಹೇಳಿದ್ದಾರೆ.

    Continue Reading

    LATEST NEWS

    ಗೆಳೆಯನ ಕತ್ತು ಹಿಸುಕಿ ಕೊ*ಲೆ; ಇಬ್ಬರು ಅರೆಸ್ಟ್

    Published

    on

    ಬೆಂಗಳೂರು : ಕೊಡಗಿನ ಕುಶಾಲನಗರದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಿನ್ನೆ(ಅ.4) ನಡೆದಿತ್ತು. ಸ್ನೇಹಿತರ ನಡುವೆ ನಡೆದಿದ್ದ ಹಣಕಾಸು ವ್ಯವಹಾರದ ಗಲಾಟೆ ಕೊ*ಲೆಯಲ್ಲಿ ಅಂತ್ಯವಾಗಿತ್ತು. ಇದೀಗ ಬೆಂಗಳೂರಿನಲ್ಲಿ ಪ್ರಕರಣವೊಂದು ವರದಿಯಾಗಿದ್ದು,  ಕುಡಿದು ಬಂದು ಜಗಳಕ್ಕಿಳಿದಿದ್ದ ಯುವಕನೊಬ್ಬನನ್ನು ಆತನ ಸ್ನೇಹಿತರೇ ಕತ್ತು ಹಿಸುಕಿ ಹ*ತ್ಯೆ ಮಾಡಿದ್ದಾರೆ. ಮೈಕೋಲೇಔಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಸುಜಿತ್‌ (22) ಹ*ತ್ಯೆಯಾದ ಯುವಕ. ಈತ ಬಿಹಾರಿ ಮೂಲದವನಾಗಿದ್ದು, ಈ ಹಿಂದೆ ಬಿಳೇಕಲ್ಲಹಳ್ಳಿಯಲ್ಲಿರುವ ಪ್ಲೈವುಡ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ವೇಳೆ ಮದ್ಯಪಾನ ಮಾಡಿ ಬರುತ್ತಿದ್ದರಿಂದ ಮಾಲಕರು ಆತನನ್ನು ಕೆಲಸದಿಂದ ತೆಗೆದಿದ್ದರು. ಹಾಗಾಗಿ ಸುಜಿತ್‌ ಬೇರೆ ಕಡೆ ಕೆಲಸ ಮಾಡುತ್ತಿದ್ದ.

    ಕೊ*ಲೆಯಲ್ಲಿ ಅಂತ್ಯವಾದ ಜಗಳ :

    ಹ*ತ್ಯೆಯಾದ ದಿನ ಈ ಪ್ಲೈವುಡ್‌ ಅಂಗಡಿಯಲ್ಲಿ ನಾಲ್ವರು ಕೆಲಸಗಾರರು ಮರಗೆಲಸ ಮಾಡುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿನಲ್ಲಿ ಇಬ್ಬರು ಕೆಲಸಗಾರರು ಹೊರಗೆ ಹೋಗಿದ್ದರು. ಆ ಸಂದರ್ಭದಲ್ಲಿ ಸುಜಿತ್‌ ಪ್ಲೈವುಡ್‌ ಅಂಗಡಿ ಬಳಿ ಕುಡಿದು ಬಂದು ಇಬ್ಬರು ಕೆಲಸಗಾರರ (ಮಾಜಿ ಸಹೋದ್ಯೋಗಿಗಳು, ಸ್ನೇಹಿತರು) ಜೊತೆ ಜಗಳಕ್ಕಿಳಿದಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ರಿಪೀಸ್‌‍ ಪಟ್ಟಿಯಿಂದ ಕೆಲಸಗಾರರು ಸುಜಿತ್‌ ತಲೆಗೆ ಹೊಡೆದು, ಕುತ್ತಿಗೆ ಹಿಸುಕಿದ್ದು, ಉಸಿರುಗಟ್ಟಿ ಸುಜಿತ್‌ ಮೃ*ತಪಟ್ಟಿದ್ದಾನೆ.

    ಇದರಿಂದ ಗಾಬರಿಯಾದ ಇಬ್ಬರೂ ಕೆಲಸಗಾರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೆಲ ಸಮಯದ ಬಳಿಕ ಹೊರಗೆ ಹೋಗಿದ್ದ ಇನ್ನಿಬ್ಬರು ಕೆಲಸಗಾರರು ಅಂಗಡಿಗೆ ಬಂದಾಗ ಸುಜಿತ್‌ ಕೊ*ಲೆಯಾಗಿರುವುದು ಗಮನಿಸಿ, ಮಾಲಕರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ : BBK11: ಧನರಾಜ್​ ಆಚಾರ್ಯ ಡೈಲಾಗ್​ಗೆ ಬಿಗ್​ಬಾಸ್​ ಮನೆಮಂದಿ ಫುಲ್​ ಖುಷ್

    ಬಳಿಕ ಮಾಲಕರು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃ*ತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.

    Continue Reading

    LATEST NEWS

    Trending