DAKSHINA KANNADA
ಕಾಲೇಜಿನ ಹೆಸರಿನಲ್ಲಿ ಫೋನ್ ಮಾಡಿ 2.34 ಲಕ್ಷ ವಂಚನೆ: ದೂರು ದಾಖಲು
Published
3 years agoon
By
Adminಮಂಗಳೂರು: ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗೆ ಕಾಲೇಜಿನ ಹೆಸರಿನಲ್ಲಿ ಫೋನ್ ಕರೆ ಮಾಡಿದ ಮಹಿಳೆವೋರ್ವಳು ಬರೋಬ್ಬರಿ 2.34 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಕಾಲೇಜಿನ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಜುಲೈ 7 ರಂದು 9959689529 ನಂಬರ್ನಿಂದ ಕರೆ ಮಾಡಿದ ಮಹಿಳೆಯೊಬ್ಬಳು, ತಾನು ಕಾಲೇಜಿನ ಯೂನಿವರ್ಸಿಟಿಯಿಂದ ಮಾತನಾಡುತ್ತಿದ್ದು, 3ನೇ ವರ್ಷದ ಕಾಲೇಜು ಶುಲ್ಕ ಮತ್ತು ಡೆಪಾಸಿಟ್ ಕಟ್ಟಬೇಕು. ಇಲ್ಲದಿದ್ದಲ್ಲಿ ಹಾಲ್ ಟಿಕೆಟ್ ಕ್ಯಾನ್ಸಲ್ ಮಾಡಲಾಗುವುದು. ಶುಲ್ಕ ಕಟ್ಟಲು ಲಿಂಕನ್ನು ಕಳುಹಿಸಲಾಗಿದೆ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದಳು. ಬಳಿಕ ಮೊಬೈಲ್ ಸಂದೇಶದಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ವಾಲೆಟ್ ಮೂಲಕ 200 ರಿಚಾರ್ಜ್ ಮಾಡಿದ್ದರು. ಜುಲೈ 8 ರಂದು ಮತ್ತೆ ಕರೆ ಮಾಡಿದ ಮಹಿಳೆ ವಿದ್ಯಾರ್ಥಿ ಖಾತೆಯಿಂದ ಹಂತಹಂತವಾಗಿ ಒಟ್ಟು 2,34,326 ರೂ. ವರ್ಗಾಯಿಸಿಕೊಂಡಿದ್ದಾರೆ. ವಂಚನೆಯ ಅರಿವಾದ ಬಳಿಕ ವಿದ್ಯಾರ್ಥಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
DAKSHINA KANNADA
ಮಂಗಳೂರು: ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಗೆ 1.31 ಲಕ್ಷ ರೂಪಾಯಿ ವಂಚನೆ
Published
26 minutes agoon
27/11/2024ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1.31 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ :
ನವೆಂಬರ್ 24ರಂದು ತನಗೆ ವಾಟ್ಸ್‌ಆ್ಯಪ್ ನಂಬರ್‌ವೊಂದರಿಂದ ಮೆಸೇಜ್ ಬಂದಿದ್ದು, ಅದನ್ನು ಡೌನ್‌ಲೋಡ್ ಮಾಡಿದ ಬಳಿಕ ಮೊಬೈಲ್‌ಗೆ 16 ಒಟಿಪಿಗಳು ಬಂದಿದೆ. ಬಳಿಕ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ 30,400 ರೂ., ಡೆಬಿಟ್ ಕಾರ್ಡ್ ಮೂಲಕ 16,700 ರೂ. ಮತ್ತು ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್ ಬಂದಿತ್ತು. ತಕ್ಷಣ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ನ್ನು ದೂರುದಾರರು ಬ್ಲಾಕ್ ಮಾಡಿದ್ದಾರೆ.
ಯಾರೋ ಅಪರಿಚಿತರು ಎಪಿಕೆ ಫೈಲ್ ಮೂಲಕ ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ಪಡೆದು ಫ್ಲಿಪ್‌ಕಾರ್ಟ್‌ನಲ್ಲಿ 39,398 ರೂ. ಮೌಲ್ಯದ ವನ್‌ಪ್ಲಸ್ ಮೊಬೈಲ್, 32,398 ರೂ. ಮೌಲ್ಯದ ಮೊಟೊರೊಲಾ ಎಜ್ ಮೊಬೈಲ್, 12,800 ರೂ. ಮೌಲ್ಯದ ಏರ್ ಪೋಡ್, 14,700 ರೂ., 29,400 ರೂ., 3,000 ರೂ. ಮೌಲ್ಯದ ಫ್ಲಿಪ್‌ಕಾರ್ಟ್ ವೋಚರ್‌ಗಳನ್ನು ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್ ಮಾಡಿ 1,31,396 ರೂ. ವಂಚಿಸಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
DAKSHINA KANNADA
ಮಂಗಳೂರು : ಮತ್ತೆ ಡ್ರಗ್ ಸೀಜ್; ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ
Published
50 minutes agoon
27/11/2024ಮಂಗಳೂರು: ನಗರವನ್ನು ಡ್ರಗ್ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಪೊಲೀಸ್ ಕಾರ್ಯಾಚರಣೆ ಆರಂಭವಾಗಿ ವರ್ಷಗಳ ಕಳೆದಿದೆ. ಮಾದಕ ವ್ಯಸನ ಹಾಗೂ ಮಾರಾಟದ ವಿಚಾರವಾಗಿ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆಯಿಂದ ಮಾಡಲಾಗಿದೆ. ಆದ್ರೆ ಈ ಡ್ರಗ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಲು ಪೊಲೀಸ್ ಇಲಾಖೆಯಿಂದ ಸಾದ್ಯವಾಗುತ್ತಿಲ್ಲ.
ಮಂಗಳೂರಿನಲ್ಲಿ ಮಾದಕ ವಸ್ತುವಿಗೆ ಡಿಮ್ಯಾಂಡ್ ಇರುವ ಹಿನ್ನೆಲೆಯಲ್ಲಿ ಡ್ರಗ್ ಮಾಫಿಯಾ ದಿನಕ್ಕೊಂದು ಹೊಸ ತಂತ್ರದ ಮೂಲಕ ಡ್ರಗ್ಸ್ ಮಂಗಳೂರಿಗೆ ತಲುಪಿಸುತ್ತಿದೆ. ಹಾಗಂತ ಪೊಲೀಸರು ಇಂತಹ ಆಸಾಮಿಗಳನ್ನು ಹಿಡಿದು ಜೈಲಿಗಟ್ಟುವುದು ಕೂಡಾ ನಿಂತಿಲ್ಲ. ಇದೀಗ ಪಜೀರು ಗ್ರಾಮದ ಕಂಬಳ ಪದವು ಎಂಬಲ್ಲಿ ಮತ್ತೆ ಮೂವರು ಡ್ರಗ್ ಸೆಲ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ಒಂದುವರೆ ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ತಲಪಾಡಿಯ ಗೌತಮ್, ಕುಂಪಲದ ಕಾರ್ತಿಕ್ ಹಾಗೂ ತೊಕ್ಕೊಟ್ಟಿನ ನಿಖಿಲ್ ಎಂದು ಗುರುತಿಸಲಾಗಿದೆ.
DAKSHINA KANNADA
ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಮಾರಾಟವಾಗಿಲ್ಲ; ಅಧೀಕ್ಷಕರಿಂದ ಸ್ಪಷ್ಟನೆ
Published
1 hour agoon
27/11/2024ಮಂಗಳೂರು: ಮಂಗಳೂರಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ತನ್ನ ಮಗು ಮಾರಾಟವಾಗಿದೆ ಎಂದು ಭವ್ಯಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿರುವುದು. ಆಕೆಯ ಈ ಆರೋಪವು ಸಂಪೂರ್ಣ ನಿರಾಧಾರವಾಗಿದೆ ಎಂದು ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 18ರಂದು ಬೆಳಗ್ಗೆ 9.58ಕ್ಕೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಭವ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗುವಿಗೆ ಒಂದು ಕಣ್ಣು ಗುಡ್ಡೆ ಇಲ್ಲದಿರುವುದನ್ನು ತಜ್ಞರು ಆಕೆಗೆ ತಿಳಿಸಿದ ಸಂದರ್ಭ ಆ ಶಿಶು ತನ್ನದಲ್ಲವೆಂದು ಆಕೆ ನಿರಾಕರಿಸಿದ್ದರು. ತನ್ನ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿದ್ದಾರೆ ಎಂದು ಸುಳ್ಳು ಆರೋಪವನ್ನು ಹೊರಿಸಿದ್ದರು. ಈ ವಿಚಾರದಲ್ಲಿ ಪೊಲೀಸ್ ತನಿಖೆ ನಡೆದು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಡಿಎನ್‌ಎ ಪರೀಕ್ಷೆ ಮಾಡುವ ಸಲುವಾಗಿ ಪ್ರಕ್ರಿಯೆಯನ್ನು ನಡೆಸಲಾಗಿದೆ.
ಡಿಎನ್‌ಎ ಪರೀಕ್ಷೆಯ ವರದಿಯನ್ನು ನೇರವಾಗಿ ತನಿಖಾಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ಸಂಬಂಧಿತರು ನೀಡಿದ್ದರು. ಈ ಮಧ್ಯೆ ಭವ್ಯಾ ಅವರ ಮಗು ದ.ಕ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ. ಇತ್ತೀಚಿನ ಎರಡು ದಿನಗಳಲ್ಲಿ ಭವ್ಯಾ ತನ್ನ ಶಿಶುವನ್ನು ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಮಾರಾಟ ಮಾಡಿರುತ್ತಾರೆ ಎಂದು ಮಾನಹಾನಿಕರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸುತ್ತಾ, ಸಮಾಜದಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಅಲ್ಲದೆ ಹೆರಿಗೆ ಮತ್ತು ಸ್ತ್ರೀರೋಗ ಸಂಬಂಧ ವಿಚಾರದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸರಕಾರಿ ಸ್ವಾಮ್ಯದ ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಕಳಂಕವನ್ನು ತರುವ ವಿಚಾರಗಳು ಖೇದಕರ. ಈ ಪ್ರಕರಣವು ನ್ಯಾಯಾಲಯದ ಪರಾಮರ್ಶೆಯ ಹಂತದಲ್ಲಿರುವ ಕಾರಣ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
LATEST NEWS
ಅಪಹರಣವಾದ 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ನವಜಾತ ಶಿಶು
ಕುಂದಾಪುರ: ಹೆಜ್ಜೇನು ದಾಳಿಯಿಂದ ಐವರಿಗೆ ಗಂಭೀರ ಗಾಯ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ 12ನೇ ವಷ೯ದ ವೈಭವದ ಪಾದಯಾತ್ರೆ
ಬ್ರಹ್ಮಾವರ ಲಾಕಪ್ ಡೆ*ತ್ ಕೇಸ್ ಕೇರಳ ಸಿಎಂ ಅಂಗಳಕ್ಕೆ
ಮೂರು ಪೂರಿಗಳನ್ನು ಒಟ್ಟಿಗೆ ತಿಂದು 6ನೇ ತರಗತಿ ವಿದ್ಯಾರ್ಥಿ ಸಾವು !
ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಪ್ರಕರಣ – 8 ಜನರ ಬಂಧನ
Trending
- LATEST NEWS7 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru5 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION6 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS4 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!