Connect with us

    LATEST NEWS

    ‘ತಂದೆಯನ್ನು ಭೇಟಿ ಮಾಡಲು ಹೋದರೆ ಹೊಡಿತಾರೆ..’ ಸಿ.ಪಿ ಯೋಗೇಶ್ವರ್‌ ಪುತ್ರಿಯ ಅಳಲು..! ರಾಜಕೀಯ ಚರ್ಚೆಗೆ ಕಾರಣವಾಯ್ತು ಈ ವೀಡಿಯೋ

    Published

    on

    ಬೆಂಗಳೂರು: ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಿಜಿಪಿ ಮುಖಂಡರ ಪುತ್ರಿಯ ಹೇಳಿಕೆಯ ವೀಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ ಅವರ ಪುತ್ರಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ತಂದೆ ವಿರುದ್ಧ ಹರಿಹಾಯ್ದಿದ್ದಾರೆ.

    nisha yogeshwar

    ಸಿ.ಪಿ. ಯೋಗೇಶ್ವ‌ರ್ ಮತ್ತು ಅವರ ಎರಡನೇ ಪತ್ನಿ ವಿರುದ್ಧ ಮೊದಲನೇ ಪತ್ನಿಯ ಪುತ್ರಿ ನಿಶಾ ಯೋಗೇಶ್ವ‌ರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.  ಕೌಟುಂಬಿಕ ಸಮಸ್ಯೆಗಳ ಕುರಿತಾಗಿ ವಿಡಿಯೊ ವೊಂದನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವೀಡಿಯೋ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

    ‘ನನ್ನ ತಂದೆ ಮತ್ತು ಚಿಕ್ಕಮ್ಮ(ಮಲತಾಯಿ) ಇಬ್ಬರೂ ಮೊದಲನೇ ಪತ್ನಿಯ ಮಗಳಾದ ನನ್ನನ್ನು ಬೆಳೆಸಿ ಆದರ್ಶವಾಗಲಿಲ್ಲ. ತಂದೆಯ ಭೇಟಿಗೆ ಹೋದರೆ ಪೊಲೀಸರನ್ನು ಕರೆಯಿಸುತ್ತಾರೆ. ಮಾತನಾಡಿಸಲು ಮುಂದಾದರೆ ಕಪಾಳಕ್ಕೆ ಹೊಡೆಯುತ್ತಾರೆ. ನಿನಗೆ ಒಂದು ರೂಪಾಯಿ ಕೂಡ ಕೊಡುವುದಿಲ್ಲ. ಭಿಕ್ಷೆ ಬೇಡಿ ಬದುಕು ಎನ್ನುತ್ತಾರೆ. ನನ್ನ ಬದುಕಿನಿಂದ ತಂದೆ ಹೊರ ಹೋದಾಗಿನಿಂದಲೂ ವನವಾಸ ಅನುಭವಿಸುತ್ತಲೇ ಇದ್ದೇನೆ’ ಎಂದು ಹೇಳಿದ್ದಾರೆ.

    Read More..; ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

    ‘ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದೆ. ನನ್ನ ಹೆಸರಿನ ಮುಂದೆ ತಮ್ಮ ಹೆಸರನ್ನು ಬಳಸದಂತೆ ತಾಕೀತು ಮಾಡಿದರು. ಅವರ ಹೆಸರು ಇಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಎಂದು ಹೀಯಾಳಿಸಿದ್ದಾರೆ. ಈ ಬಗ್ಗೆ ಮಾತನಾಡಲು ಇಷ್ಟಪವಿಲ್ಲದಿದ್ದರೂ ಕೂಡಾ ಮಾತನಾಡಲೇಬೇಕಾದ ಪರಿಸ್ಥಿತಿ ಬಂದಿದೆ. ನಾನು ಹತ್ತು ವರ್ಷವಿದ್ದಾಗಲೇನನ್ನ ತಂದೆ ನಮ್ಮ ಬದುಕಿನಿಂದ ಹೊರ ನಡೆದಿದ್ದಾರೆ. ಆದರೂ, ಚುನಾವಣೆ ಸಂದರ್ಭದಲ್ಲಿ ಕರೆದಾಗ ಅವರ ಪರ ಪ್ರಚಾರ ಮಾಡಿದ್ದೆ. ಅವರಿಷ್ಟಕ್ಕೆ ಅನುಗುಣವಾಗಿ ಕೆಲಸ ಮಾಡಿದಾಗ ಎಲ್ಲವೂ ಚೆನ್ನಾಗಿತ್ತು. ಈಗ 24 ವರ್ಷದ ನಂತರ ನನ್ನ ಬಗ್ಗೆ ಯೋಚಿಸಿದ್ದಕ್ಕೆ ಆದರ್ಶ ಮಗಳಾಗದೆ ಯಾರಿಗೂ ಬೇಡವಾಗಿದ್ದೇನೆ. ತಂದೆ ಹೆಸರನ್ನು ಬಳಸಬಾರದೆಂಬ ಮಾತು ಬರುತ್ತಿವೆ’ ಎಂದು ನಿಶಾ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ‘ಈ ರೀತಿ ಕಾಮೆಂಟ್ ಮಾಡುವವರು ಯಾರೆಂದು ನನಗೆ ಗೊತ್ತಿದೆ. ಅವರೆಲ್ಲರೂ ಒಂದು ಕಡೆ ಸೇರಿ ನನ್ನ ಆಧಾರ್, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಸೇರಿದಂತೆ ಹಲವು ಕಡೆ ತಂದೆ ಹೆಸರನ್ನು ಹೇಗೆ ತೆಗೆಯಬೇಕೆಂದು ನನಗೆ ಹೇಳಿ ಕೊಡಲಿ. ಹೆಸರು ತೆಗೆದರೆ ಅವರು ನನ್ನ ತಂದೆ ಎಂಬ ಸತ್ಯ ಸುಳ್ಳಾಗುತ್ತಾ..?  24 ವರ್ಷದ ಹಿಂದೆ ಅವರ ಜೀವನದಿಂದ ನನ್ನನ್ನು ತೆಗೆದುಬಿಟ್ಟಿದ್ದೀರಿ. ಈಗ ಹೆಸರಿನ ಮುಂದೆಯೇ ಅವರನ್ನು ತೆಗೆಯಲು ಮುಂದಾಗಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.

    ಕೈ ಸೇರಲು ಯತ್ನ:

    ಇನ್ನು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಕ್ರಿಯವಾಗಿದ್ದ ನಿಶಾ, ಕಾಂಗ್ರೆಸ್ ಸೇರಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನಾಯಕರ ಜೊತೆಯೂ ಕಾಣಿಸಿಕೊಂಡಿದ್ದರು. ಪಕ್ಷ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ್ದ ಶಿವಕುಮಾರ್ ನಿಶಾ ರವರಿಗೆ ಇನ್ನೂ ಮದುವೆ ಆಗಿಲ್ಲ. ಅವರು ತಂದೆ ಮನೆಯಲ್ಲೇ ಇರಬೇಕು. ಮಗಳ ಮದುವೆ ಸಮಯದಲ್ಲಿ ತಂದೆ ಧಾರೆ ಎರೆದು ಕೊಡಬೇಕು. ತಂದೆ- ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ ಎಂದು ಹೇಳಿದ್ದರು.

    ಮೋದಿ ಭೇಟಿ ಮಾಡಿಸಲಿಲ್ಲ – ನಿಶಾ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ ನನ್ನ ತಾಯಿಯ ಕಪಾಳಕ್ಕೆ ತಂದೆ ಹೊಡೆದಿದ್ದರು. ಚಿಕ್ಕಮ್ಮನ ಮಗ ನನ್ನ ತಮ್ಮನಿಗೆ ಹೊಡೆದು, ಮನೆಯಿಂದ ಸಾಮಗ್ರಿ ಹೊರ ಹಾಕಿದ್ದರು. ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದೆ. ಆದರೆ, ಬೇಕೆಂದೇ ಭೇಟಿ ಮಾಡಿಸಲಿಲ್ಲ. ಇದೆಂಥಾ ನ್ಯಾಯ ಎಂದು ನಿಶಾ ಪ್ರಶ್ನಿಸಿದ್ದಾರೆ.

    ಮಗಳಿಗೆ ಯಾಕೆ ಒಂದು ದಾರಿ ತೋರಿಸಲಿಲ್ಲ ಎಂದು ನನ್ನ ತಂದೆಯನ್ನು ಪ್ರಶ್ನಿಸಿ. ಅವರು ನನ್ನಿಂದ ಮಾತ್ರ ಸರಿಯಾದುದನ್ನು ಬಯಸಿದರೆ ಸಾಕೇ? ಅವರು ಸರಿಯಾಗಿರಬೇಕಲ್ಲವೇ? ಮಾತನಾಡಲು ನನ್ನ ಬಳಿ ಸಾಕಷ್ಟಿದೆ. ನನ್ನನ್ನು ಶಾಂತವಾಗಿರಲು ಬಿಡಿ. ಇಲ್ಲದಿದ್ದರೆ, ನೀವು ಎಲ್ಲಿ ತಲೆ ಎತ್ತಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲವೊ ಅಲ್ಲಿಗೆ ವಿಡಿಯೊ ಕಳಿಸುತ್ತೇನೆ ಎಂದು ತಂದೆಗೆ ಎಚ್ಚರಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಏರ್ ಪೋರ್ಟ್ ಗೆ ಪ್ರಿಯಕರ ಡ್ರಾಪ್ ಮಾಡಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದ ಯುವತಿ!

    Published

    on

    ಮಂಗಳೂರು : ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳು ಅರಳಲು ಹೆಚ್ಚು ಸಮಯ ಪಡೆಯುತ್ತಿಲ್ಲ. ಜೊತೆಗೆ ಮುರಿಯಲೂ ಕೂಡ. ಸಣ್ಣದೊಂದು ಮನಸ್ತಾಪ ಸಂಬಂಧವನ್ನು ದೂರ ಮಾಡುತ್ತದೆ. ಇತ್ತೀಚೆಗೆ ಇಂತಹುದೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಗೆಳತಿಯೊಬ್ಬಳು ತನ್ನ ಪ್ರಿಯಕರನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾಳೆ.


    ಫ್ಲೈಟ್ ಮಿಸ್​​ ಆಗಲು ಪ್ರಿಯಕರ ಕಾರಣ :

    ವರದಿಗಳ ಪ್ರಕಾರ, ಈ ಘಟನೆ ನಡೆದಿರುವುದು ನ್ಯೂಜಿಲೆಂಡ್ ನಲ್ಲಿ. ಪ್ರಿಯಕರ ತನ್ನನ್ನು ವಿಮಾನ ನಿಲ್ದಾಣಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಯುವತಿಯೊಬ್ಬಳು ಪ್ರಕರಣ ದಾಖಲಿಸಿದ್ದಾಳೆ. ಆತನಿಂದಾಗಿ ತನ್ನ ಫ್ಲೈಟ್ ಮಿಸ್​​ ಆಯ್ತು, ಇದಲ್ಲದೇ ಮರುದಿನ ಬೇರೆ ಫ್ಲೈಟ್ ನಲ್ಲಿ ಹೋಗಲು ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗಿತ್ತು ಎಂಬುದು ಯುವತಿಯ ದೂರು.

    ಪ್ರಿಯಕರನ ಮೇಲೆ ತೀವ್ರ ಕೋಪಕೊಂಡಿದ್ದ ಯುವತಿ ಆರು ವರ್ಷಗಳ ತನ್ನ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಾಳೆ. ಅಲ್ಲದೆ, ವಿಮಾನಕ್ಕಾಗಿ ಪಾವತಿಸಿದ ಹಣವನ್ನು ಆತ ನೀಡುವಂತೆ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾಳೆ.

    ಇದನ್ನೂ ಓದಿ :  ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?

    ಕೋರ್ಟ್ ಸಲಹೆ ಏನು?

    ಯುವತಿಯ ವಾದವನ್ನು ಆಲಿಸಿದ ನ್ಯಾಯಾಧೀಶ ರೆಫ್ರಿ ಕ್ರಿಶ್ಯಾ ಕೌವಿ, ಯುವತಿ ಹೇಳಿದ ಅಪರಾಧಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಾಗ್ದಾನವನ್ನು ಉಲ್ಲಂಘಿಸಿದ್ದಕ್ಕಾಗಿ ಯಾರನ್ನೂ ಶಿಕ್ಷಿಸುವುದು ಅಸಾಧ್ಯ ಎಂದು ತೀರ್ಪು ನೀಡಿದ್ದಾರೆ.
    ಅಲ್ಲದೇ, ಇಂತಹ ಸಣ್ಣ ವಿಚಾರಗಳಿಗೆ ಸಂಬಂಧ ಕಡಿದುಕೊಳ್ಳುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.

    Continue Reading

    LATEST NEWS

    ಸೂರಜ್ ರೇವಣ್ಣ ಪರ ದೂರು ನೀಡಿದ್ದ ಶಿವಕುಮಾರ್ ನಾಪತ್ತೆ!

    Published

    on

    ಮಂಗಳೂರು/ಹಾಸನ : ಸೂರಜ್ ರೇವಣ್ಣ ಅವರನ್ನು ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜ*ನ್ಯ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ಪ್ರಕರಣವನ್ನೂ ಸಿಐಡಿ ತನಿಖೆಗೂ ವಹಿಸಲಾಗಿದೆ.

    ಆದರೆ, ಇತ್ತ ಹೊಳೆನರಸೀಪುರದಲ್ಲಿ ಸಂತ್ರಸ್ತನ ವಿರುದ್ಧವೇ ದೂರು ದಾಖಲಾಗಿದ್ದು, ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದ್ರೆ, ಇದೀಗ ಸಂತ್ರಸ್ತನ ದೂರಿನ ಅನ್ವಯ ಸೂರಜ್​ನನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದಾನೆ.


    ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ ನಂತರ ಶಿವಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಕುಮಾರ್ ನಾಪತ್ತೆಯಾಗಿದ್ದಾನೆ.

    ಇದನ್ನೂ ಓದಿ : ನಾಳೆಯಿಂದ ಸಂಸತ್ ಅಧಿವೇಶನ..! ಎನ್‌ಡಿಎ ಮುಂದಿದೆ ಹಲವು ಸವಾಲು..!

    ಸಂತ್ರಸ್ತನ ವಿರುದ್ಧ ಶಿವಕುಮಾರ್​​ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹೋಗಿಯೇ ಸೂರಜ್ ರೇವಣ್ಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಈ ಪ್ರಕರಣ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

    Continue Reading

    LATEST NEWS

    ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಿಬಿಐಗೆ ವಹಿಸಿದ ಕೇಂದ್ರ

    Published

    on

    ಮಂಗಳೂರು/ ನವದೆಹಲಿ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ನಡೆದಿರುವ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿದೆ.


    ಈ ಮಧ್ಯೆ ಭಾನುವಾರ ( ಜೂನ್ 23 ) ದಂದು ನೀಟ್ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಅಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಆರಂಭವಾಗಬೇಕಾಗಿತ್ತಾದ್ರೂ ಇದೀಗ ಪರೀಕ್ಷೆಯನ್ನು ಮುಂದೂಡಿರುವುದಾಗಿ ತಿಳಿಸಿದೆ. ಇದರಿಂದ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು(ಜೂ.23) ಪರೀಕ್ಷೆ ನಡೆಸಿ ಜೂನ್ 30 ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಲಾಗಿತ್ತಾದ್ರೂ, ಈಗ ಪರೀಕ್ಷೆಯನ್ನೇ ಏಕಾ ಏಕಿ ರದ್ದು ಮಾಡಿದ್ದು ಯಾಕೆ? ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ : ಸಂಸದ ಹೆಚ್ ಡಿಕೆ ನಿರ್ಧಾರಕ್ಕೆ ಬ್ರೇಕ್; ದೇವದಾರಿ ಗಣಿಗಾರಿಕೆ ತಡೆಗೆ ರಾಜ್ಯ ಸರ್ಕಾರ ಸೂಚನೆ

    ಆದ್ರೆ ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    Continue Reading

    LATEST NEWS

    Trending