Monday, August 15, 2022

ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ದನದ ಕರು ಸಾಗಾಟ ಇಬ್ಬರು ಆರೋಪಿಗಳ ಬಂಧನ

ಪುತ್ತೂರು : ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಾಸರಗೋಡು ಬಂದಡ್ಕ ನಿವಾಸಿ ಶಿವಪ್ರಸಾದ್ ಭಟ್ ಮತ್ತು ಬಂದಡ್ಕದ ಮಾಣಿಮೂಲೆ ನಿವಾಸಿ ಚಂದ್ರನ್ ಎಂದು ಗುರುತಿಸಲಾಗಿದೆ.


ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಮಾಹಿತಿಯಂತೆ ಪೊಲೀಸರು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ ನರಿಮೊಗರು ಕಡೆಯಿಂದ ಬರುತ್ತಿರುವ ಮಾರುತಿ ಓಮ್ನಿಯನ್ನು ತಡೆದು ತಪಾಸಣೆ ನಡೆಸಿದಾಗ ಓಮ್ನಿಯ ಹಿಂದಿನ ಸೀಟ್‌ನಲ್ಲಿ ಒಂದೂವರೆ ವರ್ಷದ ಹೆಣ್ಣು ಕರುವೊಂದನ್ನು ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಗೋ ಸಾಗಾಟಕ್ಕೆ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಾರುತಿ ಓಮ್ನಿ ಚಾಲಕ ಶಿವಪ್ರಸಾದ್ ಭಟ್ ಮತ್ತು ಚಂದ್ರನ್ ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಕರು ಸಾಗಾಟಕ್ಕೆ ಬಳಸಿದ್ದ ಮಾರುತಿ ಓಮ್ನಿ ( KL 14 L 7819) ನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿಗಳಿಗೆ ಪುತ್ತೂರಿನ ಖಾಸಗಿ‌ ಯೂಟ್ಯೂಬ್ ವರದಿಗಾರ ತಕ್ಷಣವೇ ಜಾಮೀನು ನೀಡಿದ್ದಾರೆ. ವರದಿಗಾರನ ಜಾಮೀನು ಹಿನ್ನಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೋಲೀಸರು ಬಿಡುಗಡೆಗೊಳಿಸಿದ್ದಾರೆ. ಅಕ್ರಮ ಜಾನುವಾರು ಸಾಗಾಟದಲ್ಲಿ ಸಿಕ್ಕಿಬಿದ್ದ ಆರೋಪಿಗಳಿಗೆ ಮಾಧ್ಯಮ ವ್ಯಕ್ತಿಯೊಬ್ಬ ತಕ್ಷಣವೇ ಜಾಮೀನು ನೀಡಿ ಬಿಡಿಸಿಕೊಂಡಿರುವುದು ಇದೀಗ ಮಾಧ್ಯಮ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿ ಜಿಲ್ಲಾಡಳಿತದಿಂದ ‘ಆಜಾದಿ ಕಾ ಅಮೃತ್‌ ಮಹೋತ್ಸವ’

ಉಡುಪಿ: ಉಡುಪಿ ಜಿಲ್ಲಾಡಳಿತದ ವತಿಯಿಂದ ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ ಇಂದು ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ...

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...

ಕುದ್ರೋಳಿಯ ತ್ರಿವರ್ಣ ಚಿತ್ರಾಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಮಂಗಳೂರು: ನಗರದ ಕುದ್ರೋಳಿಯ ಶ್ರೀ ಗೋಕರ್ಣಾನಾಥ ಕ್ಷೇತ್ರದ ಮುಂಭಾಗ ಗುರುಬೆಳದಿಂಗಳು ಸಮಿತಿಯ ಮೂವತ್ತು ಸದಸ್ಯರು ಸೇರಿ 900 ಕೆ.ಜಿ ಧಾನ್ಯಗಳನ್ನು ಬಳಸಿ ರಚಿಸಿದ ತ್ರಿವರ್ಣ ಆಕಾರ ಎಲ್ಲರ ಗಮನ ಸೆಳೆದಿತ್ತು.ಇಂದು ದೇಗುಲಕ್ಕೆ ಭೇಟಿ...