Saturday, November 27, 2021

ಕೊರೊನಾ ವೈರಸ್ ಮಾನವ ನಿರ್ಮಿತ : ಅಘಾತಕಾರಿ ಸುದ್ದಿ ಬಹಿರಂಗಪಡಿಸಿದ ಚೀನಾದ ವೈರಾಲಜಿಸ್ಟ್..!

ಕೊರೊನಾ ವೈರಸ್ ಮಾನವ ನಿರ್ಮಿತ : ಅಘಾತಕಾರಿ ಸುದ್ದಿ ಬಹಿರಂಗಪಡಿಸಿದ ಚೀನಾದ ವೈರಾಲಜಿಸ್ಟ್..!

ವಾಷಿಂಗ್ಟನ್ : ಕೊರೊನಾ ಮಹಾಮಾರಿ  ಜಗತ್ಜತಿಗೆ ಪಸರಿಸಿದ್ದು ಲಕ್ಷಾಂತರ ಜನ ಸಾವನ್ನಪ್ಪಿದರೆ ಕೋಟ್ಯಾಂತರ ಜನ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸೋಂಕು ಬಂದು 9 ತಿಂಗಳು ಕಳೆದಿವೆ ಅದರೆ ಸೃಷ್ಟಿಯ ರಹಸ್ಯ ಇನ್ನೂ ಬಹಿರಂಗಗೊಂಡಿರಲಿಲ್ಲ. 

ಆದರೆ ಚೀನಾದ ವೈರಾಲಜಿಸ್ಟ್ ಒಬ್ಬರು ಕೊರೋನಾ ವೈರಾಣು ವುಹಾನ್ ನ ಸರ್ಕಾರಿ ಪ್ರಯೋಗಾಲಯದಲ್ಲಿ ಮನುಷ್ಯರೇ ನಿರ್ಮಿಸಿದ್ದು ಎಂಬ ಅಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದಾರೆ.

ಬ್ರಿಟೀಷ್ ಟಾಕ್ ಶೋ ನಲ್ಲಿ ಮಾತನಾಡಿರುವ ಚೀನಾ ವೈರಾಲಜಿಸ್ಟ್ ಡಾ. ಲೀ ಮೆಂಗ್ ಯಾನ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹಾಂಕ್ ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ವೈರಾಲಜಿ ಹಾಗೂ ಇಮ್ಯುನಾಲಜಿಯಲ್ಲಿ ಪರಿಣಿತರಾಗಿರುವ ಡಾ. ಲೀ ಮೆಂಗ್ ಯಾನ್ ಅವರಿಗೆ ವುಹಾನ್ ನಲ್ಲಿ ಕಂಡುಬಂದಿರುವ ಹೊಸ ನ್ಯುಮೋನಿಯಾವನ್ನು ಇನ್ವೆಸ್ಟಿಗಟ್ ಮಾಡುವ ಕೆಲಸಕ್ಕೆ ನಿಯೋಜಿಸಿದ್ದರು. ಈ ವೇಳೆ ಹಲವು ಮುಚ್ಚಿಹಾಕಿರುವ ಸಂಗತಿಗಳು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಡಿಸೆಂಬರ್ ಹಾಗೂ ಜನವರಿ ಮಧ್ಯದಲ್ಲಿ ಒಟ್ಟು ಎರಡು ಬಾರಿ ಅಧ್ಯಯನ ನಡೆಸಿರುವ ಡಾ. ಲೀ ಮೆಂಗ್ ಈಗ ಅಮೆರಿಕಾದಲ್ಲಿದ್ದಾರೆ.

ತಮ್ಮ ಗಮನಕ್ಕೆ ಬಂದ ಅಂಶಗಳನ್ನು ತಮ್ಮ ಹಿರಿಯ ಅಧಿಕಾರಿ ಹಾಗೂ ಡಬ್ಲ್ಯುಹೆಚ್‌ಒಗೆ ತಿಳಿಸಲು ಯತ್ನಿಸಿದೆ. ಆದರೆ ನನಗೆ ಮೌನವಾಗಿರುವಂತೆ ಎಚ್ಚರಿಕೆ ನೀಡಲಾಯ್ತು. ಚೀನಾದ ಕಮ್ಯುನಿಸ್ಟ್ ಪಕ್ಷ ಕೊರೋನಾಗೆ ಸಂಬಂಧಿಸಿದಂತೆ ನಿಸ್ಸಂಶಯವಾಗಿ ಮಾಹಿತಿಗಳನ್ನು ಮುಚ್ಚಿಡುತ್ತಿದೆ. ಇದು ಹೈ ಮ್ಯುಟೆಂಟ್ ವೈರಸ್ ಆಗಿದ್ದು, ಅತ್ಯಂತ ಅಪಾಯಕಾರಿಯೂ ಆಗಿದೆ ಎಂದು ಹೇಳಿದ್ದಾರೆ.

ಕೊರೋನಾ ವೈರಾಣು ನೈಸರ್ಗಿಕ ಸೃಷ್ಟಿಯಲ್ಲ, ಅದು ವುಹಾನ್ ನ ಸರ್ಕಾರಿ ನಿಯಂತ್ರಣದ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿರುವುದು,  ಇದನ್ನು ಸಾಬೀತುಪಡಿಸುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ಶೀಘ್ರವೇ ಪ್ರಕಟಿಸುವುದಾಗಿ ಡಾ. ಲೀ ಮೆಂಗ್ ಯಾನ್ ಹೇಳಿದ್ದಾರೆ.

 

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...