Connect with us

LATEST NEWS

ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ನೀರಿಗೆ ಬಿದ್ದ ಜೋಡಿ: ವರ ಸಾವು-ವಧು ಚಿಂತಾಜನಕ

Published

on

ಕೊಚ್ಚಿ: ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ಜೋಡಿ ನೀರಿಗೆ ಬಿದ್ದು ವರ ಸಾವನ್ನಪ್ಪಿ ವಧು ಗಂಭೀರ ಗಾಯಗೊಂಡ ದುರಂತ ಘಟನೆ ಕೇರಳದ ಜನಕಿಕಾಡುವಿನ ಕುಟ್ಟಿಯಾದಿ ನದಿಯಲ್ಲಿ ನಡೆದಿದೆ.


ಮದುವೆಯ ಬಳಿಕ ಫೋಟೋಶೂಟ್​ ಮಾಡಿಸಲು ಇಚ್ಛಿಸಿದ ವಧು-ವರ ಸೋಮವಾರ ಬೆಳಗ್ಗೆ ಕುಟ್ಟಿಯಾದಿ ನದಿಯ ಹತ್ತಿರ ಬಂದಿದ್ದರು. ಕ್ಯಾಮೆರಾಗೆ ಪೋಸ್​​ ನೀಡುವಾಗ ವಧು ಹೈಹೀಲ್ಡ್ ಚಪ್ಪಲಿ ಹಾಕಿದ ಪರಿಣಾಮ ಆಯತಪ್ಪಿ ವಧು-ವರರ ಕಾಲು ಜಾರಿ ನದಿ ಬಿದ್ದಿದ್ದಾರೆ.

ರೆಜಿಲ್ ಎಂದು ಗುರುತಿಸಲಾದ ವರ ಪ್ರವಾಹಕ್ಕೆ ಸಿಲುಕಿ ನದಿಯಲ್ಲಿ ಮುಳುಗಿದರೆ, ಅವನ ಹೆಂಡತಿ ಕಾರ್ತಿಕಾ ಅವರನ್ನು ಸಾರ್ವಜನಿಕರು ಸಮಯಕ್ಕೆ ರಕ್ಷಿಸಿದ್ದಾರೆ. ವಧುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮಾರ್ಚ್ 14 ರಂದು ವಿವಾಹವಾದ ಜೋಡಿ, ಮದುವೆಯ ನಂತರದ ಫೋಟೋ ಶೂಟ್‌ಗಾಗಿ ನದಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ, ನವಜೋಡಿ ಮತ್ತು ಛಾಯಾಗ್ರಾಹಕರು ನದಿಯ ಸುರಕ್ಷಿತವಲ್ಲದ ತುಂಬಾ ಆಳವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LATEST NEWS

ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್‌..!

Published

on

ಮಂಗಳೂರು: ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರಬೇಕಾದರೆ ಕೂಡಾ ಆಭರಣ, ಪರ್ಸ್ ಕದ್ದುಕೊಂಡು ಹೋಗುವ ಜನರನ್ನು ನಾವು ನೋಡಿರುತ್ತೇವೆ. ಬಸ್ಸು ಮತ್ತು ಎಲ್ಲೆಂದರಲ್ಲಿ ಮಹಿಳೆಯರಿಗೆ ಉಪದ್ರ ಕೊಡುವ ಕಿರಾತಕರನ್ನು ನಾವು ನೋಡಿರುತ್ತೇವೆ. ಹೀಗೆ ಮಹಿಳೆಯರಿಗೆ ಎಲ್ಲಿ ಹೋದರೂ ಅಪಾಯ ಮುಗಿಯುವಂತದ್ದಲ್ಲ. ಇನ್ನು ಅಪರಿಚಿತ ಜಾಗದಲ್ಲಿ ಕೇಳಬೇಕು ಅಂತಾನೆ ಇಲ್ಲ. ಆದರೆ ಇನ್ಮುಂದೆ ಮಹಿಳೆಯರು ಸುರಕ್ಷತೆಯ ವಿಚಾರದಲ್ಲಿ ಭಯಪಡಬೇಕಾಗಿಲ್ಲ. ಏಕಾಂಗಿಯಾಗಿ ಎಲ್ಲಿ ಬೇಕಾದರೂ ಹೋಗಬಹುದು.

ಪ್ರಯಾಣದ ವೇಳೆ ಸಹ ಪ್ರಯಾಣಿಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಮನವರಿಕೆಯಾದರೆ ಕೂಡಲೇ ಈ ಒಂದು ಪ್ಯಾನಿಕ್ ಬಟನ್ ಒತ್ತಿದರೆ ಸಾಕು ನೀವು ಕಳುಹಿಸಬೇಕಾದ ವ್ಯಕ್ತಿಗಳಿಗೆ ಅಲರ್ಟ್ ಮೇಸೆಜ್ ಹೋಗುತ್ತದೆ. ಇಂತಹ ಒಂದು ನೂತನ ಅಪ್ಲಿಕೇಶನ್​ವೊಂದನ್ನು ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಯೇಷಾ ಸರ್ವತ್ ವುಮೆನ್ ಸೇಫ್ಟಿ ಎನ್ನುವ ಸಾಫ್ಟ್​​ವೇರ್‌ಅಪ್ಲಿಕೇಶನ್ ಅನ್ನು ತಯಾರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಮನೆ ಕಾಯಕದ ಜೊತೆಗೆ ಮನೆಯಿಂದ ಆಚೆಗೂ ಸಹ ದುಡಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಪೆನಿ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಬರಬೇಕಾದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತೆ ಕೃತ್ಯಗಳು ನಡೆದಿರುವ ನಿದರ್ಶನಗಳು ಇವೆ. ಅಲ್ಲದೆ ಒಂಟಿಯಾಗಿ ಕ್ಯಾಬ್​ನಲ್ಲಿ ಸಂಚರಿಸುವಾಗ ಆ ಒಂದು ಭಯ ಇದ್ದೇ ಇರುತ್ತದೆ.

ಪ್ಯಾನಿಕ್​ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ:

ಹೀಗಾಗಿ ರೆಡ್ ಝೋನ್ ಪ್ರದೇಶಗಳಲ್ಲಿ ಅಥವಾ ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಈ ಅಪ್ಲಿಕೇಶನ್​ ಮಹಿಳೆಯರ ನೆರವಿಗೆ ಬರಲಿದೆ. ಅಪಾಯದಲ್ಲಿ ಸಿಲುಕಿರುವುದು ಗೊತ್ತಾದರೆ ಕೂಡಲೇ ಪ್ಯಾನಿಕ್​ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿರುವ ಯಾರಿಗಾದರೂ ಕಳುಹಿಸಿದರೆ ಕೂಡಲೇ “ಐಯಮ್ ಇನ್ ಟ್ರಬಲ್” ಎಂದು ಲೊಕೇಶನ್‌ ಸಹಿತ ಸಂದೇಶ ರವಾನೆಯಾಗಲಿದೆ.

ಈ ಆ್ಯಪ್ ಗೆ ಇಂಟರ್ನೆಟ್, ವೈಫೈ, ಜಿಪಿಎಸ್ ಅಗತ್ಯವಿಲ್ಲ:

ಸಾರ್ವಜನಿಕ‌‌ ಪ್ರದೇಶಗಳಲ್ಲಿ ಅಪಾಯ ಎದುರಾಗುವ ಸಂದರ್ಭ ಬಂದರೆ ಕೂಡಲೇ ಮೊಬೈಲ್​ನಲ್ಲಿ ಅಳವಡಿಸಿಕೊಂಡಿರುವ ವುಮೆನ್ ಸೇಫ್ಟಿ ಅಪ್ಲಿಕೇಶನ್​ನಲ್ಲಿ ಪ್ಯಾನಿಕ್​ ಬಟನ್ ಒತ್ತಿದರೆ ಅಲಾರಂ ರೀತಿ ಸೈರನ್ ಮೊಳಗಲಿದೆ.‌ ಈ ಮೂಲಕ ಸುತ್ತಮುತ್ತಲಿನಲ್ಲಿರುವವರ ಗಮನ ಸೆಳೆದು ನೆರವು ಪಡೆಯಬಹುದು.‌ ಎರಡನೇಯದಾಗಿ ನಿರ್ಜನ ಪ್ರದೇಶಗಳಲ್ಲಿ ಅಥವಾ ಒಂಟಿಯಾಗಿ ಪ್ರಯಾಣ ಮಾಡುವಾಗ ನಿಮ್ಮ ಮೊಬೈಲ್​ನಲ್ಲಿರುವ ಸಂಪರ್ಕಿತರ ನಂಬರ್​ಗಳಿಗೆ ಸಂದೇಶ ಕಳುಹಿಸಬಹುದಾಗಿದೆ.‌

ಇದಕ್ಕೆ‌ ಯಾವುದೇ ಇಂಟರ್​ನೆಟ್, ವೈಫೈ ಹಾಗೂ ಜಿಪಿಎಸ್‌ ಸಹಾಯದ ಅಗತ್ಯವಿಲ್ಲ. ಆ್ಯಂಡ್ರಾಯ್ಡ್ ಮೊಬೈಲ್ ಇರುವವರು ಮಾತ್ರ ಅಪ್ಲಿಕೇಶನ್ ನಿಂದ ನೆರವು ಪಡೆಯಬಹುದು. ಏಕಕಾಲದಲ್ಲಿ 150 ಮಂದಿಗೆ ಅಲರ್ಟ್ ಮೆಸ್ಸೇಜ್ ಕಳುಹಿಸಬಹುದಾಗಿದೆ. ಈ ಆ್ಯಪ್ ನ ಪ್ರಯೋಜನ ಸಾಮಾನ್ಯ ಮಹಿಳೆಯರಿಗೂ ತಲುಪಲಿ ಎಂಬುವುದೇ ಆಶಯ.

Continue Reading

LATEST NEWS

ಜ್ವರಕ್ಕೆ ಮಾತ್ರ ಅಲ್ಲ ಬಟ್ಟೆಯ ಕಲೆಯನ್ನು ತೆಗೆಯುತ್ತದೆ ಡೋಲೋ 650 ಮಾತ್ರೆ..!

Published

on

ಮಂಗಳೂರು: ಮನೆಯಲ್ಲಿನ ಮಹಿಳೆಯರಿಗೆ ಒಂದೇ ಒಂದು ಟೆನ್ಶನ್ ಅಂದರೆ ಬಟ್ಟೆ ಒಗೆಯುವಾಗ ಕಲೆ ಹೋಗದೇ ಇರುವುದು. ಏನೇ ಹಾಕಿದರೂ ಕೆಲವೊಂದು ಕಲೆಗಳು ಹಾಗೇ ಉಳಿದು ಬಿಡುತ್ತದೆ. ಡಿಜರ್ಜೆಂಟ್ ಪೌಡರ್ ಅಥವಾ ಡಿಟರ್ಜೆಂಟ್ ಲಿಕ್ವಿಡ್ ಹಾಕಿದ್ರೋ ಬಟ್ಟೆಯ ಕಲೆ ಮಾತ್ರ ಹೋಗುವುದಿಲ್ಲ.

ಕೆಲವೊಂದು ವೈರಲ್ ವಿಡಿಯೋಗಳನ್ನು ನೀವು ನೋಡಿರಬಹುದು. ಪೇಸ್ಟ್ ಹಾಕಿ ಉಚ್ಚಿದ್ರೆ ಕಲೆ ಹೋಗುತ್ತೆ. ಇಲ್ಲ ಅಡುಗೆ ಸೋಡ ಹಾಕಿ ಉಚ್ಚಿದ್ರೆ ಕಲೆ ಹೋಗುತ್ತದೆ ಇಂತಹ ಅದೆಷ್ಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಹಾರಿದಾಡುತ್ತಿರುತ್ತದೆ. ಈ ಬಟ್ಟೆಯ ಕಲೆ ಹೋಗುವಂತರಲ್ಲಿ ಮನೆಯ ಮಹಿಳೆಯರಿಗೆ ಸಾಕಾಗಿರುತ್ತದೆ. ಆದರೆ ಇನ್ನು ಮುಂದೆ ಈ ಟೆಕ್ಶನ್ ಬೇಡ ಮನೆಯಲ್ಲಿ ಡೋಲೋ 650 ಮಾತ್ರ ಇದ್ರೆ ಸಾಕು. ಕ್ಷಣ ಮಾತ್ರದಲ್ಲಿ ಎಂಥ ಕಲೆ ಕೂಡ ಕ್ಷಣಮಾತ್ರದಲ್ಲಿ ಮಾಯವಾಗುತ್ತೆ.

ಡೋಲೋ 650 ಮಾತ್ರೆ

ಜ್ವರ, ತೆಲೆನೋವು, ಮೈ ಕೈ ನೋವಿಗೆ ಬಳಸುವ ಈ ಡೋಲೋ 650 ಮಾತ್ರೆಯನ್ನು ಸುಲಭವಾಗಿ ಬಳಸಿಕೊಂಡು ಬಟ್ಟೆಯಲ್ಲಿನ ಕಲೆಯನ್ನು ಮಾಯ ಮಾಡಬಹುದು. ಇಂತಹ ವಿಡಿಯೋ ಒಂದು ಈಗ ಸೋಷಿಯಲ್ ಮಿಡೀಯಾದಲ್ಲಿ ಹರಿದಾಡುತ್ತಿದೆ. ನಂದು ನಾಯರ್ ಅವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಡೋಲೋ 650 ಮಾತ್ರೆಯನ್ನು ಬಳಸಿಕೊಂಡು ಬಿಳಿ ಬಟ್ಟೆಯಲ್ಲಿದ್ದ ಕಲೆಯನ್ನು ತೆಗೆದುಹಾಕಿದ್ದಾರೆ.

ಇವರು ಒಂದು ಕಪ್‌ ಕುದಿಯುತ್ತಿರುವ ನೀರಿಗೆ ಎರಡು ಡೋಲೋ 650 ಮಾತ್ರೆಗಳನ್ನು ಪುಡಿ ಪುಡಿ ಮಾಡಿ ಹಾಕಿದ್ದಾರೆ. ಅದೇ ನೀರಿಗೆ ಒಂದು ಸ್ಪೂನ್‌ ಅಡಿಗೆ ಸೋಡಾ, ಜೊತೆಗೆ ಡಿರ್ಟಂಜೆಟ್‌ ಪೌಡರ್ ಹಾಕಿ ಮಿಕ್ಸ್ ಮಾಡಬೇಕು. ಇದಾದ ಬಳಿಕ ಈ ನೀರಿಗೆ ಕಲೆಯಾಗಿರೋ ಬಟ್ಟೆಯನ್ನು ಹಾಕಿದ್ದಾರೆ.

3 ನಿಮಿಷಗಳ ಬಳಿಕ ಆ ಬಟ್ಟೆಯನ್ನು ಹೊರ ತೆಗೆದರೆ ಆ ಬಟ್ಟೆಯಲ್ಲಿ ಯಾವೂದೇ ಕಲೆಗಳು ಇಲ್ಲದಿರುವುದನ್ನು ಈ ವೈರಲ್ ವಿಡಿಯೋದಲ್ಲಿ ನೋಡಬಹುದು.

Continue Reading

DAKSHINA KANNADA

ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವದ ಸಂಭ್ರಮ

Published

on

ಬಂಟ್ವಾಳ : ಬಾಳ್ತಿಲ ಗ್ರಾಮದ ಕುದ್ರಬೆಟ್ಟು ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ದಕ್ಷಿಣ ಭಾಗದ ಗುಡ್ಡಗಳ ನಡುವೆ ಹಚ್ಚ ಹಸುರಿನ ಮೇರು ವೃಕ್ಷಗಳಿಂದ ನಯನಮನೋಹರ ಪರಿಸರದ ನಡುವೆ ಕಂಗೊಳಿಸುತ್ತಿರುವ ಊರಿನ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಶ್ರದ್ಧಾ ಭಕ್ತಿಯ ಕೇಂದ್ರ ಶ್ರೀ ಮಣಿಕಂಠ ಮಂದಿರದ ವಠಾರದಲ್ಲಿರುವ ಸಾನಿಧ್ಯವೇ “ಶ್ರೀ ಕಲ್ಲುರ್ಟಿ ದೈವಸ್ಥಾನ ಕುದ್ರೆಬೆಟ್ಟು”.

ಇಲ್ಲಿ ಶ್ರದ್ಧಾ ಭಕ್ತಿಯಿಂದ ತಾಯಿ ಕಲ್ಲುರ್ಟಿಯಲ್ಲಿ ಪ್ರಾರ್ಥಿಸಿದರೆ, ಭಕ್ತರ ಇಷ್ಟಾರ್ಥಗಳು ಕ್ಷಣಮಾತ್ರದಲ್ಲಿ ಈಡೇರುತ್ತದೆ ಎಂಬ ನಂಬಿಕೆಯಿದೆ. ಈ ಕ್ಷೇತ್ರದಲ್ಲಿ ದಿನೇ ದಿನೇ ಹರಕೆ ಸೇವೆಗಳು, ಅಗೆಲು ಸೇವೆಗಳ ಸಂಖ್ಯೆ ಗಣನೀಯ ಏರುತ್ತಿವೆ. ಸುಮಾರು 15 ವರ್ಷಗಳ ಹಿಂದೆ ಈ ಸಾನಿಧ್ಯದ ಪ್ರತಿಷ್ಠಾ ಕಾರ್ಯಗಳು ನಡೆದಿವೆ.

ಇದೀಗ ಶಿಥಿಲಾವಸ್ಥೆಯಲ್ಲಿರುವ ಈ ಸಾನಿಧ್ಯವನ್ನು ಊರ ಪರ ಊರ ಭಗವತ್ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಲು ನಿರ್ಧರಿಸಿದ್ದು, ಆ ಪ್ರಕಾರ ಜನಶಕ್ತಿ ಸೇವಾ ಟ್ರಸ್ಟ್ (ರಿ )ಕುದ್ರೆಬೆಟ್ಟು, ಶ್ರೀ ಮಣಿಕಂಠ ಯುವಶಕ್ತಿ( ರಿ) ಕುದ್ರೆಬೆಟ್ಟು, ಶ್ರೀ ಮಣಿಕಂಠ ಮಾತೃಶಕ್ತಿ ಕುದ್ರೆಬೆಟ್ಟು ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದೆ. ಅಂತೆಯೇ, ಇದೀಗ ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂತನ ಸಾನಿಧ್ಯ ನಿರ್ಮಿಸಲಾಗಿದ್ದು, ಅದರ ಪುನಃ ಪ್ರತಿಷ್ಠಾ ಮಹೋತ್ಸವ ಶುಕ್ರವಾರ ನಡೆದಿದೆ.

ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಿತು.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಕಲ್ಲಡ್ಕ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಶ್ರೀಕಲ್ಲುರ್ಟಿ ದೈವಸ್ಥಾನದಲ್ಲಿ ಶ್ರೀಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮ ನಡೆಯಿತು. ಇದೇ ಸಂದರ್ಭ ದೈವಸ್ಥಾನದ ಪುನಃ ಪ್ರತಿಷ್ಠಾ ಕಾರ್ಯಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜನಶಕ್ತಿ ಸೇವಾ ಟ್ರಸ್ಟ್ ಕುದ್ರೆಬೆಟ್ಟು, ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು, ಶ್ರೀ ಮಣಿಕಂಠ ಮಾತೃಶಕ್ತಿ ಕುದ್ರೆಬೆಟ್ಟು ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಊರಿನ ಪರ ಊರಿನ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.

Continue Reading

LATEST NEWS

Trending