Connect with us

bengaluru

ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ-ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಕೋಣಗಳ ಪ್ರಯಾಣ

Published

on

ಉಪ್ಪಿನಂಗಡಿ : ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ನ. 25 ಮತ್ತು 26ರಂದು ಪುತ್ತೂರು ಶಾಸಕರ ನೇತೃತ್ವದಲ್ಲಿ ಕಂಬಳ ಕೂಟ ನಡೆಯಲಿದೆ. ಈ ಮೂಲಕ ಕರಾವಳಿಯ ಜನಪದ ಕ್ರೀಡೆ ಕಂಬಳ ವಿಶ್ವವ್ಯಾಪಿಯಾಗಲಿದೆ. ಈ ಹಿನ್ನೆಲೆ ಕಂಬಳ ಕೂಟಕ್ಕೆ ಲಾರಿ ಮೂಲಕ ಕೋಣಗಳು ಇಂದು ಉಪ್ಪಿನಂಗಡಿಯಿಂದ ಬೆಂಗಳೂರಿನತ್ತ ಹೊರಟಿತು. ತೆಂಗಿನ ಕಾಯಿ ಒಡೆಯುವ ಮೂಲಕ ಪ್ರಯಾಣಕ್ಕೆ ಚಾಲನೆಯನ್ನು ನೀಡಲಾಯಿತು.

ಬೆಳಗ್ಗೆ 9.30ಕ್ಕೆ ಉಪ್ಪಿನಂಗಡಿಯ ಜೂನಿಯ‌ರ್ ಕಾಲೇಜು ಮೈದಾನದಿಂದ ನಿರ್ಗಮನ ಕಾರ್ಯಕ್ರಮ ನಡೆಯಿತು. ಸುಮಾರು 150 ಜೋಡಿ ಕೋಣಗಳನ್ನು ಕರಾವಳಿಯ ನಾನಾ ಭಾಗಗಳಿಂದ ಉಪ್ಪಿನಂಗಡಿಗೆ ಕರೆತಂದು ಇಲ್ಲಿಂದ ಲಾರಿಗಳಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಪ್ರತೀ ಜೋಡಿ ಕೋಣಕ್ಕೆ ಒಂದು ಲಾರಿಯನ್ನು ನಿಗದಿ ಮಾಡಲಾಗಿದ್ದು. ಮಂಗಳವಾದ್ಯ, ಕೊಂಬು, ಕಹಳೆಗಳ ಕಲರವದೊಂದಿಗೆ ವಿಜೃಂಭಣೆಯಿಂದ ಬೀಳ್ಕೊಡಲಾಯಿತು. ಕೋಣಗಳಿಗೆ ಬೇಕಾದ ನೀರು, ಆಹಾರವನ್ನು ಆಯಾ ಲಾರಿಗಳಲ್ಲೇ ಒಯ್ಯಲಾಗುತ್ತಿದೆ. ಪ್ರತೀ ಕೋಣಗಳ ಓಟಗಾರರು, ಪರಿಚಾರಕರ ತಂಡಗಳು ಕೂಡ ಜತೆಯಲ್ಲೇ ಸಾಗಲಿದೆ.ಜೊತೆಗೆ ಪಶು ವೈದ್ಯಕೀಯ ತಜ್ಞರು, ನೀರಿನ ಟ್ಯಾಂಕರ್‌ಗಳು ಸೇರಿದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ನೆಲ್ಯಾಡಿ, ಗುಂಡ್ಯ, ಸಕಲೇಶಪುರ ಮೂಲಕ ಸಾಗುವ ಕೊಣಗಳಿಗೆ ಹಾಸನದಲ್ಲಿ ವಿಶ್ರಾಂತಿ ನೀಡಲಾಗುತ್ತದೆ.

ಅಲ್ಲಿಂದ ಮತ್ತೆ ಪ್ರಯಾಣವನ್ನು ಮತ್ತೆ ಮುಂದುವರೆಸಲಾಗುತ್ತದೆ. ಬೆಂಗಳೂರಿನ ಅರಮನೆ ಮೈದಾನಕ್ಕೆ ತಲುಪಿದ ಬಳಿಕ ದಿನಾಂಕ 24ರಂದು ಪೂರ್ತಿ ದಿನ ಕೋಣಗಳಿಗೆ ವಿಶ್ರಾಂತಿಯನ್ನು ನೀಡಲಾಗುತ್ತದೆ. ನಂತರದಲ್ಲಿ 25ರಂದು ಅವುಗಳನ್ನು ಕಂಬಳ ಕೆರೆಗೆ ಇಳಿಸಲಾಗುತ್ತದೆ. ಕೋಣಗಳನ್ನು ಸರತಿ ಸಾಲಿನಲ್ಲಿ ಮೆರವಣಿಗೆ ರೂಪದಲ್ಲಿ ಕೊಂಡೊಯ್ಯುವ ಮೂಲಕ ಇದನ್ನೊಂದು ಐತಿಹಾಸಿಕ ಕ್ಷಣವಾಗಿ ರೂಪಿಸುವುದು ಕಂಬಳ ಸಮಿತಿಯ ತೀರ್ಮಾನವಾದರೂ, ಘಾಟಿ ಪ್ರದೇಶವಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಎದುರಾಗಿದೆ. ಆದರೂ ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರಿ ಪೊಲೀಸರು ಹಾಗೂ ಆಯಾ ಪ್ರದೇಶಗಳ ಪೊಲೀಸರು ಸಂಪೂರ್ಣ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.

ಬೀಳ್ಕೊಡುಗೆ ಸಮಾರಂಭದಲ್ಲಿ ಸ್ವಾಗತ ಸಮಿತಿಯ ಸದಸ್ಯರಾದ ವಿಜಯ ವಿಕ್ರಮ ಕಂಬಳದ ರುವಾರಿ ಉಮೇಶ್ ಶೆಣೈ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಚಂದ್ರಶೇಖರ ಮಡಿವಾಳ, ಕಾನೂರು ಸುಂದಾರಾಚಾರ್ಯ, ಖ್ಯಾತ ಕಂಬಳ ನಿರೂಪಕ, ತೀರ್ಪುಗಾರ ಮಠಂತಬೆಟ್ಟು ನಿರಂಜನ್ ರೈ, ಮಠಂತಬೆಟ್ಟು ಮುರಳೀಧರ್ ರೈ, ಕೇಶವ ಬಂಢಾರಿ, ಪಂಜಿಗುಡ್ಡೆ ಈಶ್ವರ್ ಭಟ್ ಪುತ್ತೂರು ಹಾಗೂ ಉಪ್ಪಿನಂಗಡಿ ಕಂಬಳ ಸಮಿತಿಯ ಸದಸ್ಯರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

 

bangalore

ವಿಧಾನ ಪರಿಷತ್ ನಲ್ಲಿ ಕೋಲಾಹಲ..ಕೈ ಕೈ ಮಿಲಾಯಿಸೋ ಹಂತಕ್ಕೆ ಹೋದ ನಾಯಕರು

Published

on

ಬೆಂಗಳೂರು : ವಿಧಾನಸೌಧ ಆವರಣದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಆರೋಪ ವಿಧಾನ ಪರಿಷತ್ ಕಲಾಪದಲ್ಲೂ ಭಾರೀ ಕೋಲಾಹಲ ಹುಟ್ಟು ಹಾಕಿತು.


ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ವಿಷಯ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಚಾರಕ್ಕೆ ಕಿಡಿಕಾರಿದ ಪರಿಷತ್​ ಸದಸ್ಯ ಎನ್​ ರವಿಕುಮಾರ್ ​​ ಇದು “ದೇಶದ್ರೋಹಿ ಸರ್ಕಾರ” ಎಂದರು. ಇದರಿಂದ ಕೆರಳಿದ ಕಾಂಗ್ರೆಸ್​​​ ಸದಸ್ಯ ಅಬ್ದುಲ್ ಜಬ್ಬಾರ್ “ಅವನ ಬಾಯಿ ಬಂದ್ ಮಾಡಿ” ಎಂದು ರವಿಕುಮಾರ್​ ಅವರನ್ನು ಏಕವಚನದಲ್ಲೇ ಉಲ್ಲೇಖಿಸಿದ್ದು, ಪರಿಷತ್ ನಲ್ಲಿ ಕೋಲಾಹಲ ಎಬ್ಬಿಸಿತು. ಅಬ್ದುಲ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತಾಡಿದರೆ ಸರಿ ಇರಲ್ಲವೆಂದರು. ಬಳಿಕ ರವಿಕುಮಾರ್ ಎದ್ದು ಅಬ್ದುಲ್​ ಜಬ್ಬರ್​ ಬಳಿ ಹೋದರು. ರವಿಕುಮಾರ್ ಜೊತೆ ತುಳಸಿ ಮುನಿರಾಜುಗೌಡ ಮುನ್ನುಗ್ಗಿ ಹೋದರು. ಎರಡೂ ಕಡೆಯ ಸದಸ್ಯರು ಸಭಾಪತಿಗಳ ಮುಂದೆಯೇ ಕೈಕೈ ಮಿಲಾಯಿಸಲು ಮುಂದಾದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮಾರ್ಷಲ್‌ಗಳು ಹರಸಾಹಸಪಟ್ಟರು. ಮಧ್ಯ ಪ್ರವೇಶಿಸಿದ ಸಚಿವ ಹೆಚ್‌.ಕೆ.ಪಾಟೀಲ್‌ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಕ್ಷಮೆ ಕೇಳುವಂತೆ ಸಲಹೆ ನೀಡಿದರು. ಇದಕ್ಕೆ ಎನ್​. ರವಿಕುಮಾರ್​ ದೇಶದ ಪರವಾಗಿ ಮಾತನಾಡಿದ್ದೇನೆ, ಅದು ಕ್ಷಮೆ ಕೇಳುವ ವಿಷಯವಾ ಎಂದರು. ಇತ್ತ ಅಬ್ದುಲ್ ಜಬ್ಬಾರ್ ನಿಮ್ಮ ಮೂಲಕ ನಾನು ಆಡಿದ ಮಾತು ವಾಪಸ್ ಪಡೆಯುತ್ತೇನೆ ಎಂದರು.

Continue Reading

bengaluru

ಶಾಲೆಯಲ್ಲಿ ಕೊಟ್ಟ ಮಾತ್ರೆ ನುಂಗಿ 4ನೇ ತರಗತಿ ವಿದ್ಯಾರ್ಥಿನಿ ಸಾವು..!

Published

on

ಬೆಂಗಳೂರು: ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ನುಂಗಿ 4ನೇ ತರಗತಿ ಮೃತಪಟ್ಟ ಘಟನೆ ಬೆಂಗಳೂರಿನ ಕರಿಸಂದ್ರದ ಉರ್ದು ಶಾಲೆಯಲ್ಲಿ ನಡೆದಿದೆ.


ಝೋಯಾ (9) ಮೃತಪಟ್ಟ ವಿದ್ಯಾರ್ಥಿನಿ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಝೋಯಾ ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ಸೇವಿಸಿದ್ದಳು. ಆಕೆ ಮಾತ್ರೆ ತಿನ್ನುತ್ತಿದ್ದಂತೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿದೆ. ಆ ಬಳಿಕ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆದರೆ ಚಿಕಿತ್ಸೆ ಫಲಿಸದೆ ಝೋಯಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ

Continue Reading

bangalore

ಕೊಳೆತ ಬಟ್ಟೆ ನೋಡಿ ರೈತನನ್ನು ಮೆಟ್ರೋಗೆ ಹತ್ತಿಸದ ಸಿಬ್ಬಂದಿ – ಭಾರಿ ಆಕ್ರೋಶ..!

Published

on

ಬೆಂಗಳೂರು: ಮೂಟೆ ಹೊತ್ತುಕೊಂಡು ರೈತನೋರ್ವ ಮೆಟ್ರೋ ರೈಲಿಗೆ ಹತ್ತುವಾಗ ಮೆಟ್ರೋ ಸಿಬ್ಬಂದಿ ಗಲೀಜು ಬಟ್ಟೆ ಹಾಕಿದ್ದಾನೆ ಎಂದು ಅವರನ್ನು ಒಳಗೆ ಬಿಡದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಬೆನ್ನಲೆ ಭಾರಿ ವಿರೋಧಕ್ಕೆ ಕಾರಣವಾಗಿದೆ.

ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎನ್ನವ ವಿಡಿಯೋ ವೈರಲ್ ಆಗಿದೆ.

 

Continue Reading

LATEST NEWS

Trending