ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 494ಕ್ಕೆ ಏರಿಕೆ.. 43 ಮಂದಿ ಡಿಸ್ಚಾರ್ಜ್..!!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 494ಕ್ಕೆ ಏರಿಕೆ.. 43 ಮಂದಿ ಡಿಸ್ಚಾರ್ಜ್..!!
ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಿನ್ನೆ (ಜೂನ್ 25) ಮತ್ತೆ 29 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 494ಕ್ಕೆ ಏರಿಕೆಯಾಗಿದೆ. ಈ ನಡುವೆ 43 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಸೋಂಕು ದೃಢಪಟ್ಟವರ ಪೈಕಿ 19 ಮಂದಿ ಸೌದಿ ಅರೇಬಿಯ, ಶಾರ್ಜಾ, ಮಸ್ಕತ್ ಹಾಗೂ ಕತಾರ್ ನಿಂದ ಆಗಮಿಸಿದವರಾಗಿದ್ದಾರೆ. 68 ವರ್ಷದ ಮಹಿಳೆಯು ಬುಧವಾರ ಮೃತಪಟ್ಟಿದ್ದಾರೆ.
ಪಿ-9588ರ ಪ್ರಾಥಮಿಕ ಸಂಪರ್ಕದಲ್ಲಿದ್ದ 48 ವರ್ಷದ ಮಹಿಳೆ, 50 ಹಾಗೂ 35 ವರ್ಷದ ಪುರುಷರು, ಪಿ-9589ರ ಪ್ರಾಥಮಿಕ ಸಂಪರ್ಕವುಳ್ಳ 24, 27 ವರ್ಷದ ಮಹಿಳೆಯರು ಹಾಗೂ 27 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.
ಜೂ.17, 19, 21ರಂದು ಅರೇಬಿಯ, ಶಾರ್ಜಾ, ಮಸ್ಕತ್, ಖತರ್ನಿಂದ ಬಂದಿದ್ದ 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಈ ಪೈಕಿ 11 ಮಂದಿ ಮಹಿಳೆಯರು, ಒಂದು ವರ್ಷದ ಮಗು ಸಹಿತ ಎಂಟು ಪುರುಷರಿದ್ದಾರೆ. ಇವರಲ್ಲಿ ಬಹುತೇಕರು ಯುವಕ-ಯುವತಿಯರೇ ಆಗಿದ್ದಾರೆ.
ಮಂಗಳೂರಿನ ನಿವಾಸಿಯಾದ 35 ವರ್ಷದ ಮಹಿಳೆಯನ್ನು ಐಎಲ್ಐ ಪ್ರಕರಣದಲ್ಲಿ ಸೇರ್ಪಡೆ ಮಾಡಲಾಗಿದೆ. 50 ವರ್ಷದ ಮಹಿಳೆಯನ್ನು ‘ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್’ ಪ್ರಕರಣಕ್ಕೆ ಸೇರಿಸಲಾಗಿದೆ.
ಇನ್ನು ಜೂ.21ರಂದು ಮುಂಬೈನಿಂದ ಬಂದಿದ್ದ 24 ವರ್ಷದ ಯುವಕನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿಯಲ್ಲಿ ಸೋಂಕು ದೃಢಪಟ್ಟಿತ್ತು.
ಎಲ್ಲ ಸೋಂಕಿತರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎಸ್.ಎ.ಆರ್.ಐ ಪ್ರಕರಣದಲ್ಲಿ 68 ವರ್ಷದ ಉಳ್ಳಾಲದ ಮಹಿಳೆ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಪ್ರಕರಣವನ್ನು ನಿನ್ನೆ ಸೋಂಕಿತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ 344 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ.
ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 49 ವರ್ಷದ ವ್ಯಕ್ತಿಯು ಡಯಾಬಿಟೀಸ್ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದು,
ಅವರನ್ನು ಐಸಿಯುನಲ್ಲಿ ದಾಖಲಿಸಿ, ‘ಎಚ್ಎಫ್ಎನ್ಸಿ’ ಮೂಲಕ ಆಮ್ಲಜನಕ ನೀಡಲಾಗುತ್ತಿದೆ.
ಇನ್ನೋರ್ವ 57 ವರ್ಷದ ಮಹಿಳೆಯು ಲಿವರ್ ಕಾಯಿಲೆ, ಡಯಾಬಿಟೀಸ್, ಹೃದಯರೋಗ ಮತ್ತು ನ್ಯೂಮೋನಿಯದಿಂದ ಬಳಲುತ್ತಿದ್ದು, ಐಸಿಯುನಲ್ಲಿ ದಾಖಲಿಸಿ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
DAKSHINA KANNADA
ಹಳ್ಳ ಹಿಡಿದ ಸ್ಮಾರ್ಟ್ ಸಿಟಿಯ ಕಾಮಗಾರಿ; ಕುಂಟುತ್ತಾ ಸಾಗಿದ ಮಹಾಕಾಳಿ ಪಡ್ಪು ಅಂಡರ್ ಪಾಸ್
ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್ ಸಿಟಿ ಯೋಜನೆಯವರಿಗೂ ಇದ್ದಂತಿಲ್ಲ.
ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ವ್ಯವಸ್ಥೆ ಮಾಡಲಾಗಿದೆ.
ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ; ಓರ್ವ ಬಂಧನ
ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.
LATEST NEWS
11 ವರ್ಷದ ಬಾಲಕ ಹೃದಯಘಾ*ತಕ್ಕೆ ಬ*ಲಿ
ಹಾಸನ : ಹೃದಯಾಘಾ*ತ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಹೃದಯಾ*ಘಾತಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಕಳವಳಕಾರಿ ಘಟನೆ ನಡೆದಿದ್ದು, 11 ವರ್ಷದ ಬಾಲಕ ಹೃದಯಾ*ಘಾತಕ್ಕೆ ಬ*ಲಿಯಾಗಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಸಚಿನ್ ಮೃ*ತ ಬಾಲಕ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಚಿನ್, ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾ*ಘಾತವಾಗಿದೆ.
ಇದನ್ನೂ ಓದಿ : ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ
ಟಿವಿ ನೋಡುತ್ತಲೇ ಕುಸಿ*ದು ಬಿದ್ದ ಮಗನನ್ನು ಮಾತನಾಡಿಸಲು ಮನೆಯವರು ಪ್ರಯತ್ನಿಸಿದ್ದು, ಏನು ಮಾತನಾಡದೆ ಇರೋದನ್ನು ಗಮನಿಸಿ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಲಕ ಸಾ*ವನ್ನಪ್ಪಿದ್ದ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
FILM
ಕನ್ನಡದ ಸೀರಿಯಲ್ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ
ಬೆಂಗಳೂರು/ಮಂಗಳೂರು: ಸಿನೆಮಾದಲ್ಲಿ ನಟಿಸಬೇಕು ಅನ್ನೋದು ಎಲ್ಲರ ಕನಸು. ಆದರೆ ಇಲ್ಲೊಬ್ಬಾಕೆ ನಟಿಗೆ ಸೀರಿಯಲ್ನಲ್ಲಿ ನಟಿಸಬೇಕು ಎಂಬ ಆಸೆ. ಆದರೆ ಆಕೆಗೆ ಮಾತ್ರ ಮೊದಲು ಒಲಿದು ಬಂದಿದ್ದು ಸಿನೆಮಾದಲ್ಲಿ ನಟಿಸುವ ಅವಕಾಶ. ಇದೀಗ ಆ ನಟಿ ಸುರ್ವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅವನು ಮತ್ತು ಶ್ರಾವಣಿ’ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಕಾಣಿಸಿಕೊಂಡಿರುವ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದಾರೆ.
ಶ್ರಾವಣಿ ಪಾತ್ರದ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈಕೆ 9 ನೇ ತರಗತಿಯಲ್ಲಿದ್ದಅಗಲೇ ಸಿನೆಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊರ್ವಿ, ಗರುಡ, ಮನದ ಮರೆಯಲಿ ಸೇರಿದಂತೆ ನಾಳ್ಕೈದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಕಾನೂನು ಪದವಿ ಮುಗಿಸಿರುವ ಇವರು ಸೀರಿಯಲ್ ನಲ್ಲಿ ಆಭಿನಯಿಸುವತ್ತ ಒಲವು ಮಾಡಿದ್ದಾರೆ. ಹೀಗಾಗಿ ಲುಕ್ ಟೆಸ್ಟ್ ಕೂಡಾ ಕೊಟ್ಟಿದ್ದಾರೆ.
ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!
ಇದೇ ವೇಳೆ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಗೆ ರಿಪ್ಲೇಸ್ಮೆಂಟ್ ಪಾತ್ರಕ್ಕೆ ಕರೆ ಬರುತ್ತದೆ. ರಿಪ್ಲೇಸ್ಮೆಂಟ್ ಪಾತ್ರ ಆಗಿದ್ದರಿಂದ ಜನರಿಗೆ ಇಷ್ಟ ಆಗ್ಬೋದಾ ಅನ್ನುವ ಮೈಂಡ್ ಸೆಟ್ ನಲ್ಲಿ ಇವರು ಕೊನೆಗೂ ಪಾತ್ರಕ್ಕೆ ಸೈ ಎಂದು ಹೇಳಿದ್ದಾರೆ. ಇದೀಗ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ನಟನೆ ಆರಂಭಿಸಿದ ಮೇಲೆ ಆಫರ್ಗಳು ಬರುತ್ತಿದೆ ಎಂದು ಇಶಿಕಾ ಶೆಟ್ಟಿಗಾರ್ ಹೇಳಿದ್ದಾರೆ.