Connect with us

    ಉಡುಪಿಯಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 25 ಮಂದಿಗೆ ಕೊರೊನಾ ಪಾಸಿಟಿವ್..!

    Published

    on

    ಉಡುಪಿಯಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 25 ಮಂದಿಗೆ ಕೊರೊನಾ ಪಾಸಿಟಿವ್..!

    ಉಡುಪಿ: ಕೃಷ್ಣನಗರಿ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಔಟ್ ಬ್ರೇಕ್ ಆಗಿದ್ದು, ಇಂದು ಒಂದೇ ದಿನ 27 ಮಂದಿಗೆ ಕೊರೊನಾ ಪಾಸಿಟಿವ್ ದಾಖಲಾಗಿದೆ.

    ಈ ಮೂಲಕ ಇದೀಗ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.

    ದುಬೈ ಮತ್ತು ಮಹಾರಾಷ್ಟ್ರದಿಂದ ಬರುತ್ತಿರುವ ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಉಡುಪಿ ಜಿಲ್ಲೆಯ ಜನತೆಯ ಚಿಂತೆಗೆ ಕಾರಣವಾಗಿದ್ದು, ಇಂದು ಒಂದೇ ದಿನ 25 ಪ್ರಕರಣಗಳು ಉಡುಪಿಯಲ್ಲಿ ದಾಖಲಾಗಿದೆ.

    ಅದರಲ್ಲಿ 15 ಕಂದಮ್ಮಗಳಿಗೆ ಕೊರೊನಾ ಧೃಡಪಟ್ಟಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

    ಮುಂಬೈನಿಂದ ಬಂದ 21 ಮಂದಿಗೆ ಇಂದು ಸೋಂಕು ದೃಢಪಟ್ಟಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ.

    ಅಲ್ಲದೇ ತೆಲಂಗಾಣದಿಂದ ಬಂದ 3 ಜನ ಹಾಗೂ ಕೇರಳದಿಂದ ಬಂದ ಒಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

    27 ಹೊಸ ಪ್ರಕರಣಗಳಲ್ಲಿ 22 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಾಗಿದ್ದಾರೆ. ಕೋಲಾರದ ಓರ್ವ ತಮಿಳುನಾಡಿನಿಂದ ಬಂದಿದ್ದರೆ, ಮೂವರಿಗೆ ಸೋಂಕಿತ ಸಂಪರ್ಕದಿಂದ ಸೋಂಕು ತಾಗಿದೆ. ಉಡುಪಿಯ ವ್ಯಕ್ತಿ ಯುಎಇನಿಂದ ಬಂದವರಾಗಿದ್ದಾರೆ.

    ಸದ್ಯ ಎಲ್ಲಾ ಕೊರೊನಾ ಸೊಂಕಿತರನ್ನು ಹಂತಹಂತವಾಗಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದು ಉಡುಪಿ ಡಿ‌.ಎಚ್‌. ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.

    ಮುಂಬಯಿಂದ ಹಾಗೂ ದುಬೈಯಿಂದ ಉಡುಪಿಗೆ ಆಗಮಿಸಿದವರಿಂದ ಇಂದು (ಮೇ 21) ಮತ್ತಷ್ಟು ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಇನ್ಮುಂದೆ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ…!

    Published

    on

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡಿನಲ್ಲಿ ನೆಲೆಸಿರುವ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯ ಮಾಡಿದ್ದು, ಭಕ್ತರು ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಅಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

    ಗಂಡಸರು ಶಲ್ಯ, ಪ್ಯಾಂಟ್, ಪಂಚೆ ಧರಿಸಬೇಕು. ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸುವಂತೆ ದೇವಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಅಂತ ಅಡಳಿತ ಮಂಡಳಿ ತಿಳಿಸಿದೆ.

    Continue Reading

    LATEST NEWS

    ಎಂಟು ಕಾಲುಗಳೊಂದಿಗೆ ಜನಿಸಿದ ಕರು..! ಈ ವಿಚಿತ್ರ ನೋಡಲು ಮುಗಿಬಿದ್ದ ಜನ..!!

    Published

    on

    ಉತ್ತರಪ್ರದೇಶ/ಮಂಗಳೂರು: ಇಲ್ಲಿನ ಗ್ರಾಮದ ರೈತರೊಬ್ಬರ ಮನೆಯಲ್ಲಿ ಎಮ್ಮೆಯೊಂದು ಎಂಟು ಕಾಲುಗಳಿರುವ ಕರುವಿಗೆ ಜನ್ಮ ನೀಡುವ ಮೂಲಕ ವಿಸ್ಮಯವನ್ನುಂಟುಮಾಡಿದೆ. ಅಲ್ಲದೇ ಈ ವಿಚಿತ್ರ ಕರುವನ್ನು ನೋಡಲು ಊರವರೆಲ್ಲಾ ಮನೆಗೆ ದೌಡಾಯಿಸಿದ್ದಾರೆ.

    ಎರಡು ಬೆನ್ನು ಹಾಗೂ ಎಂಟು ಕಾಲು ಹಾಗೂ ಒಂದು ತಲೆಯೊಂದಿಗೆ ಜನಿಸಿದ ಈ ಕರುವನ್ನು ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.  ಕರುವನ್ನು ಪರೀಕ್ಷಿಸಿದ ವೈದ್ಯರು ಆನುವಂಶಿಕ ದೋಷದಿಂದ ಇಂತಹ ಕರುಗಳು ಜನಿಸುತ್ತವೆ ಎಂದು ಹೇಳಿದ್ದಾರೆ. ಈ ಘಟನೆ ಸ್ಥಳೀಯರು ಹಾಗೂ ನೆಟ್ಟಿಗರ ಗಮನ ಸೆಳೆದಿದೆ.

    ಕರುವಿನ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    Continue Reading

    FILM

    ‘ಬಿಗ್ ಬಾಸ್’ ಟೀಮ್ ಜೊತೆ ಅಪ್‌ಡೇಟ್ ಹೊತ್ತು ತರುತ್ತಿದ್ದಾರೆ ಸುದೀಪ್- ಏನದು?

    Published

    on

    ‘ಬಿಗ್ ಬಾಸ್ ಕನ್ನಡ 11’ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆ.29ಕ್ಕೆ ಶೋ ಅದ್ಧೂರಿಯಾಗಿ ಆಗಿ ಲಾಂಚ್ ಆಗಲಿದೆ. ಶೋ ಚಾಲನೆಗೂ ಮುನ್ನ ಬಿಗ್ ಬಾಸ್ ತಂಡದ ಜೊತೆ ಬಿಗ್ ಅಪ್‌ಡೇಟ್‌ವೊಂದನ್ನು ಸುದೀಪ್ ಹೊತ್ತು ತರುತ್ತಿದ್ದಾರೆ.

    ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್ ಬಾಸ್ ತಂಡ ತೆರೆಮರೆಯಲ್ಲಿ ಎಲ್ಲ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದೆ. ಈಗ ಬಿಗ್ ಬಾಸ್ ತಂಡದಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಇಂದು 3 ಗಂಟೆ ಸುಮಾರಿಗೆ ಬಿಗ್ ಬಾಸ್ ಸೀಸನ್ 11ರ ಬಗ್ಗೆ ಅಧಿಕೃತ ಚಾಲನೆ ಸಿಗಲಿದೆ. ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೂಡ ಭಾಗಿಯಾಗಲಿದ್ದಾರೆ. ಹಲವು ವಿಚಾರಗಳ ಕುರಿತು ನಟ ಮಾತನಾಡಲಿದ್ದಾರೆ.

    ಮೊದಲ ಸೀಸನ್‌ನಿಂದ ಹಿಡಿದು ಹತ್ತು ಸೀಸನ್‌ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಇದೀಗ ಬಿಗ್ ಬಾಸ್ ಶೋ 11ನೇ ಸೀಸನ್‌ಗೆ ಕಾಲಿಟ್ಟಿದೆ. ಈಗಾಗಲೇ ಪ್ರೋಮೋಗಳ ಮೂಲಕ ಬಿಗ್ ಬಾಸ್ ಸೀಸನ್ 11ರ ಮೇಲೆ ಫ್ಯಾನ್ಸ್‌ಗೆ ಸಾಕಷ್ಟು ನಿರೀಕ್ಷೆಯಿದೆ. ಜೊತೆಗೆ ಈ ಬಾರಿ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡ್ತಿಲ್ಲ ಅನ್ನೋ ಸುದ್ದಿಯೂ ಹರಿದಾಡಿತ್ತು. ಆ ನಂತರ ಪ್ರೋಮೋದಲ್ಲಿ ನಟನ ಆಗಮನದ ಮೂಲಕ ವದಂತಿಗಳಿಗೆ ಬ್ರೇಕ್‌ ಬಿದ್ದಿತ್ತು.

    ಅಂದಹಾಗೆ, ಬಿಗ್ ಬಾಸ್‌ಗೆ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸದ್ದು ಮಾಡುತ್ತಿದೆ. ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಕಿರುತೆರೆ ನಟಿ ಅಮೂಲ್ಯ, ಭವ್ಯಾ ಗೌಡ, ವರ್ಷಾ ಕಾವೇರಿ ಸೇರಿದಂತೆ ಅನೇಕರು ಹೆಸರು ಚಾಲ್ತಿಯಲ್ಲಿದೆ. ಯಾರೆಲ್ಲಾ ದೊಡ್ಮನೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಶೋ ಶುರುವಾದ್ಮೇಲೆ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.

    Continue Reading

    LATEST NEWS

    Trending