Connect with us

    LATEST NEWS

    ರಾಹುಲ್‌ಗೆ ಕೆನ್ನೆಗೆ ಯಾರಾದ್ರೂ ಹೊಡಿಬೇಕು..! ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ..!

    Published

    on

    ಮಂಗಳೂರು : ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಕೆಯ ತನ್ನ ಭಾಷಣದ ವೇಳೆ ಹಿಂದೂ ಸಮಾಜವನ್ನು ಅವಹೇಳನ ಮಾಡಿದ್ದಾರೆ ಅಂತ ಬಿಜೆಪಿ ಪ್ರತಿಭಟನೆ ನಡೆಸ್ತಾ ಇದೆ. ಇದೇ ವಿಚಾರಕ್ಕೆ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ್ದೇನು..?

    ಸಂಸತ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ತನ್ನ ಮೊದಲ ಭಾಷಣದಲ್ಲೇ ವಿವಾದ ಸೃಷ್ಠಿಸಿದ್ದಾರೆ. ಭಾಷಣದಲ್ಲಿ ರಾಹುಲ್ ಗಾಂಧಿ “ಬಿಜೆಪಿ ಹಾಗೂ ಸಂಘಪರಿವಾರ ಸೇರಿದಂತೆ ಪ್ರಧಾನಿ ಮೋದಿ ಕೂಡಾ ನೈಜ್ಯ ಹಿಂದೂ ಅಲ್ಲ” ಎಂದು ಹೇಳಿಕೆ ನೀಡಿದ್ದರು.  ಈಶ್ವರನ ಫೋಟೋ ತೋರಿಸಿ ” ಹಿಂದೂ ಯಾವತ್ತೂ ಹಿಂಸೆಯನ್ನು ಪ್ರೋಚೋಧಿಸುವುದಿಲ್ಲ ಎಂದು ಈಶ್ವರನ ಈ ಚಿತ್ರ ಹೇಳುತ್ತದೆ . ಆದ್ರೆ ಬಿಜೆಪಿ ಹಿಂಸೆಯನ್ನು ಪ್ರಚೋಧಿಸುತ್ತದೆ, ಪ್ರಧಾನಿ ಮೋದಿ ಹಿಂಸೆಯ ಭಾಷಣ ಮಾಡುತ್ತಾರೆ ಹೀಗಾಗಿ ಅವರು ನೈಜ್ಯ ಹಿಂದೂ ಆಗಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.


    ಇದೇ ವಿಚಾರ ಈಗ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದು, ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸ್ತಾ ಇದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕ್ರೋಶಭರಿತ ಮಾತನಾಡಿರುವ ಶಾಸಕ ಭರತ್ ಶೆಟ್ಟಿ “ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಯಾರಾದ್ರೂ ಕೆನ್ನೆಗೆ ಹೊಡಿಬೇಕು ಅನಿಸುತ್ತಿದೆ” ಎಂಬ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

    ರಾಹುಲ್ ಗಾಂಧಿ ಪರ ನಿಂತ ಜೋತಿರ್‌ ಮಠದ ಜಗದ್ಗುರು

    ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಜಗದ್ಗುರು ಅವಿಮುಕ್ತೇಶ್ವರಾನಂದ ಸ್ವಾಮೀಜಿಯವರು ರಾಹುಲ್ ಗಾಂಧಿ ಎಲ್ಲೂ ಹಿಂದೂ ಧರ್ಮಕ್ಕೆ ಅವಮಾನ ಮಾಡಿಲ್ಲ. ಅವರು ಭಾಷಣದಲ್ಲಿ ಇದು ಸ್ಪಷ್ಟವಾಗಿದ್ದು, ಅವರು ತನ್ನ ಎದುರು ಇರುವ ಪಕ್ಷವನ್ನು ಉಲ್ಲೇಖಸಿದ್ದಾರೆ ಎಂದು ಹೇಳಿದ್ದಾರೆ.

    ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಜಗದ್ಗುರು ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮಾದ್ಯಮಕ್ಕೆ ಪ್ರತಿಕ್ರಿಯಿಸಿ, “ಆರೋಪ ಕೇಳಿ ಬಂದಾಗ ನಾನೂ ಕೂಡಾ ಅವರ ಸಂಪೂರ್ಣ ಭಾಷಣವನ್ನು ವೀಕ್ಷಿಸಿದ್ದೇನೆ. ಎಲ್ಲೂ ಕೂಡಾ ಅವರು ಹಿಂದೂ ಧರ್ಮವನ್ನು ಹಿಂಸೆ ಮಾಡುವವರು ಎಂದಿಲ್ಲ. ಅವರು ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶ ಇಲ್ಲಾ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಅವರ ಹೇಳಿಕೆಯನ್ನು ತಿರುಚಿ ಒಂದು ಭಾಗವನ್ನು ಮಾತ್ರ ಹರಡಿ ಅವರು ಹಿಂದೂಗಳಿಗೆ ಹಿಂಸಾತ್ಮಕರು ಎಂದಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ರಾಹುಲ್ ಗಾಂಧಿ ತನ್ನ ಎದರು ಇರುವಂತಹ ರಾಜಕೀಯ ಪಕ್ಷ ಹಾಗೂ ಅದರ ನಾಯಕನನ್ನು ಉದ್ದೇಶಿಸಿ ಹೇಳಿದ ಭಾಗವಷ್ಟೇ ಹರಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಮ್ತಾಜ್ ಅಲಿ ಜೀವಂತವಿದ್ದಾರಾ ? ಮುಳುಗುತಜ್ಙ ಈಶ್ವರ ಮಲ್ಪೆ ತಂಡದವರು ದೇಹ ಪತ್ತೆ ಹಚ್ಚಿದ್ರಾ ? ಇಲ್ಲಿದೆ ಸಂಪೂರ್ಣ ಮಾಹಿತಿ… !

    Published

    on

    ಮಂಗಳೂರು: ಮೋಯಿದ್ದೀನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ನಾಪತ್ತೆಯಾಗಿದ್ದಾರೆ. ಕೂಳೂರು ಸೇತುವೆಯ ಮೇಲೆ ಕಾರು ಪತ್ತೆಯಾಗಿರುವ ಹಿನ್ನಲೆಯಲ್ಲಿ ನದಿಯಲ್ಲಿ ಶೋಧ ಕಾರ್ಯಚರಣೆ ತೀವ್ರವಾಗಿ ಮುಂದುವರಿಯುತ್ತಿವೆ.


    ಮುಳುಗುತಜ್ಙ ಈಶ್ವರ ಮಲ್ಪೆ ತಂಡ ಸಹಿತ ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತರವಾಗಿವೆ. ಮಾಜಿ ಶಾಸಕ ಮೋಯಿದ್ದೀನ್ ಬಾವ ಕೂಡ ಸ್ಥಳದಲ್ಲಿದ್ದು, ಪರಿಶೀಲಿಸುತ್ತಿದ್ದಾರೆ.
    ಒಂದು ಹಂತದ ಹುಡುಕಾಟ ನಡೆಸಿದ ತಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, “ನಾವು ಏಳು ಜನ ಆಳಕ್ಕೆ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ. ಆದರೆ, ಎಲ್ಲೂ ಕೂಡ ದೇಹ ಪತ್ತೆಯಾಗಿಲ್ಲ” ಎಮದರು.
    “ಸದ್ಯಕ್ಕೆ 100 ಮೀ. ಸುತ್ತಾಟ ಹುಡುಕಾಟ ನಡೆಸಲಾಗಿದೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ಆಳದಲ್ಲಿ ಕತ್ತಲಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ” ಎಂದರು.


    ಮುಂದುವರೆದು ಮಾತನಾಡಿ, “ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು. ಇಷ್ಡು ಬೇಗ ಸಮುದ್ರ ಸೇರುವುದಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸುತ್ತಿದ್ದೇವೆ. ಅವರು ಜೀವಂತವಾಗಿ ಇರಲಿ ಎಂದು ಆಶಿಸುತ್ತೇವೆ” ಎಂದರು.
    ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ. ಫಾರೂಕ್, ಐವನ್ ಡಿಸೋಜ ಭೇಟಿ ನೀಡಿದ್ದಾರೆ.

    Continue Reading

    LATEST NEWS

    ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದ ರಾಮ; ಮುಂದೇನಾಯ್ತು ಗೊತ್ತಾ???

    Published

    on

    ಮಂಗಳೂರು/ದೆಹಲಿ: ನಗರದ ಶಹದಾರದಲ್ಲಿರುವ ಜೈ ಶ್ರೀರಾಮಲೀಲಾ ವಿಶ್ವಕರ್ಮ ನಗರದಲ್ಲಿ ಶನಿವಾರ (ಅ.5) ನಡೆದ ರಾಮಲೀಲಾ ಕಾರ್ಯಕ್ರಮದ ವೇಳೆ ಭಗವಾನ್ ರಾಮನ ಪಾತ್ರವನ್ನು ಹಾಕಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುಸಿದು ಬಿದ್ದು, ಮೃತಪಟ್ಟಿರುವ ಘಟನೆ ನಡೆದಿರುವುದು ತಿಳಿದು ಬಂದಿದೆ.


    ಮೃತ ಸುಶೀಲ್ ಕೌಶಿಕ್ (45) ಅವರು ರಿಯಲ್ ಎಸ್ಟೇಟ್ ಡೀಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಯಲ್ಲೇ ನಾಟಕಗಳಲ್ಲಿ ನಟಿಸುವ ಹವ್ಯಾಸವನ್ನೂ ಹೊಂದಿದ್ದರು. ಅದರಲ್ಲೂ ರಾಮ ಲೀಲಾ ನಾಟಕದಲ್ಲಿ ಭಗವಾನ್ ಶ್ರೀರಾಮನ ಪಾತ್ರಧಾರಿಯಾಗಿ ಎಲ್ಲರ ಗಮನ ಸೆಳೆದಿದ್ದರು.
    ಕಾರ್ಯಕ್ರಮ ನಡೆಯುತ್ತಿರುವಾಲೇ ಎದೆನೋವು ಕಾಣಿಸಿಕೊಂಡು ವೇದಿಕೆ ಬದಿಗೆ ಹೋಗಿದ್ದಾರೆ. ಬದಿಗೆ ಸರಿಯುತ್ತಿದ್ದಂತೆ ಅಲ್ಲೇ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಹೃದಯಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    Continue Reading

    LATEST NEWS

    ಮೊಬೈಲ್ ಗೇಮ್ ದುಷ್ಪರಿಣಾಮ; ಸಾಲದಲ್ಲಿ ಮುಳುಗಿ ಮಗನ ಸಮೇತ ಕುಟುಂಬ ಆ*ತ್ಮಹತ್ಯೆಗೆ ಶರಣು

    Published

    on

    ಮಂಗಳೂರು/ತೆಲಂಗಾಣ: ಆನ್‌ಲೈನ್ ಜೂಜಾಟದ ಮೂಲಕ ಮಗ ಮಾಡಿದ 30 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ದಂಪತಿ ಮತ್ತು ಅವರ ಮಗ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.


    ಮೃ*ತರನ್ನು ರಂಗವೇಣಿ ಸುರೇಶ್ (53), ಪತ್ನಿ ಹೇಮಲತಾ (45) ಮತ್ತು ಮಗ ಹರೀಶ್ (22) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹರೀಶ್ ಆನ್‌ಲೈನ್ ಮೊಬೈಲ್ ಗೇಮ್‌ಗಳಿಗೆ ವ್ಯಸನಿಯಾಗಿದ್ದನು. ಅವನ ಚಟದಿಂದಾಗಿ ಕುಟುಂಬವು ರೂ.30 ಲಕ್ಷ ಸಾಲವನ್ನು ಹೊಂದಿತ್ತು.
    ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿದರೂ ಸಾಲ ತೀರಿಸಲು ಸಾಕಾಗಲಿಲ್ಲ. ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಕಂಗಾಲಾಗಿದ್ದರು. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೋಧನ್ ಏರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

     

    Continue Reading

    LATEST NEWS

    Trending