LATEST NEWS
ವಧು ಹುಡುಕಿಕೊಡದ ಮ್ಯಾರೇಜ್ ಬ್ಯೂರೋಗೆ ಬರೊಬ್ಬರಿ 60 ಸಾವಿರ ರೂ. ದಂಡ
ಬೆಂಗಳೂರು: ಮದುವೆಯಾಗಲು ಕನ್ಯೆ ಸಿಗುತ್ತಿಲ್ಲ ಎಂದು ಅನೇಕ ಯುವಕರು ನೋವು ತೋಡಿಕೊಳ್ಳುತ್ತಾರೆ. ಲವ್ ಮಾಡಿ ಮದುವೆಯಾಗೋಣವೆಂದರೇ ಯಾವ ಹುಡಗಿನೂ ಪ್ರಪೋಸಲ್ ಎಕ್ಸಪ್ಟ್ ಮಾಡಿಕೊಳ್ಳುತ್ತಿಲ್ಲ ಅಂತ ಅನೇಕ ಯುವಕರು ಮರಗುತ್ತಾರೆ. ಅದರಲ್ಲಂತೂ ರೈತ ಮಕ್ಕಳಿಗೆ ಕನ್ಯೆ ಸಿಗುವುದೇ ದರ್ಲಬವಾಗಿದೆ. ಹೀಗಾಗಿ ಎಲ್ಲರೂ ಮ್ಯಾರೇಜ್ ಬ್ಯೂರೋಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಅವುಗಳಿಂದಲೂ ಕನ್ಯೆ ಸಿಗುತ್ತಿಲ್ಲ. ಹೌದು, ವಧು ಹುಡುಕಿಕೊಡಲಿಲ್ಲ ಅಂತ ಮ್ಯಾಟ್ರಿಮೋನಿ ಪೋರ್ಟಲ್ಗೆ ಗ್ರಾಹಕರ ನ್ಯಾಯಾಲಯ 60 ಸಾವಿರ ರೂ. ದಂಡ ವಿಧಿಸಿದೆ.
ಬೆಂಗಳೂರಿನ ಎಂಎಸ್ ನಗರ ನಿವಾಸಿ ಕೆಎಸ್ ವಿಜಯಕುಮಾರ್ ಅವರು ತಮ್ಮ ಮಗ ಬಾಲಾಜಿಗೆ ಕನ್ಯೆ ಹುಡುಕುತ್ತಿದ್ದರು. ಅದರಂತೆ, ವಿಜಯಕುಮಾರ್ ಅವರು ಕಲ್ಯಾಣ ನಗರದಲ್ಲಿರುವ ದಿಲ್ ಮಿಲ್ ಮ್ಯಾಟ್ರಿಮೋನಿಗೆ ಭೇಟಿ ನೀಡಿದ್ದರು. ಈ ವೇಳೆ ಸಂಸ್ಥೆ ಬಾಲಾಜಿಗೆ 45 ದಿನಗಳಲ್ಲಿ ವಧು ಹುಡುಕುವುದಾಗಿ ಭರವಸೆ ನೀಡಿತ್ತು. ಬಳಿಕ, ಕೆಸ್ ವಿಜಯಕುಮಾರ್ ಅವರು ಮಾರ್ಚ್ 17 ರಂದು ಸಂಸ್ಥಗೆ ತಮ್ಮ ಮಗನ ಮಗನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರು. ಜೊತೆಗೆ 30 ಸಾವಿರ ರೂ. ಶುಲ್ಕ ಪಾವತಿಸಿದ್ದರು. 45 ದಿನಗಳು ಕಳೆದರೂ ಸಂಸ್ಥೆ ವಧು ಹುಡುಕಿಕೊಡುವಲ್ಲಿ ವಿಫಲವಾಯಿತು. ಆಗ, ವಿಜಯಕುಮಾರ್ ಅವರು ಹಣ ಮರಳಿಸುವಂತೆ ಹೇಳಿದರು. ಆದರೆ, ಸಂಸ್ಥೆ ಮಾತ್ರ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ.
ಹೀಗಾಗಿ, ವಿಜಯಕುಮಾರ್ ಅವರು ಮಾರ್ಚ್ 30 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆಗ, ಸಂಸ್ಥೆ ಏಪ್ರಿಲ್ 30ರವರೆಗೆ ಕಾಯುವಂತೆ ಮನವಿ ಮಾಡಿಕೊಂಡಿತು. ಒಂದು ತಿಂಗಳು ಕಾಯುತ್ತಿದ್ದರೂ ದಿಲ್ ಮಿಲ್ ಮ್ಯಾಟ್ರಿಮೋನಿ ಸಂಸ್ಥೆಯಿಂದ ಪ್ರತಿಕ್ರಿಯೆ ಬಂರಲಿಲ್ಲ. ಹೀಗಾಗಿ, ವಿಜಯಕುಮಾರ್ ಅವರು ಮತ್ತೊಮ್ಮೆ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ನಿಂದಿಸಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ.
ನಂತರ, ವಿಜಯಕುಮಾರ್ ಅವರು ಮೇ5 ರಂದು ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದರು. ಇದಕ್ಕೆ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ. ಹೀಗಾಗಿ, ವಿಜಯಕುಮಾರ್ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ವಿಜಯಕುಮಾರ್ ಅವರ ಆರೋಪಕ್ಕೆ ದಿಲ್ ಮಿಲ್ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ.
ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಎಂಎಸ್ ರಾಮಚಂದ್ರ ಅವರು ವಿಚಾರಣೆ ವೇಳೆ, ದೂರುದಾರರಿಗೆ ಸೇವೆ ಸಲ್ಲಿಸುವ ವೇಳೆ ಸ್ಪಷ್ಟವಾದ ಕೊರತೆ ಕಂಡು ಬಂದಿದೆ. ಇದು ಅನ್ಯಾಯದ ವ್ಯಾಪಾರದ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಹೇಳಬಹುದು. ಹೀಗಾಗಿ ದೂರುದಾರರು ಸಂಸ್ಥೆಗೆ ನೀಡಲಾದ ಶಲ್ಕದೊಂದಿಗೆ ಪರಿಹಾರ ಮೊತ್ತವನ್ನೂ ನೀಡಬೇಕೆಂದು ಆದೇಶಿಸಿದರು.
ಶುಲ್ಕವಾಗಿ ಸಂಗ್ರಹಿಸಿದ 30,000 ರೂ., ಸೇವಾ ಕೊರೆತಗೆ 20,000 ರೂ., ಮಾನಸಿಕ ಸಂಕಟ ಉಂಟುಮಾಡಿದ್ದಕ್ಕಾಗಿ 5,000 ರೂ. ವ್ಯಾಜ್ಯಕ್ಕೆ 5,000 ರೂಪಾಯಿಗಳನ್ನು ದೂರುದಾರ ವಿಜಯಕುಮಾರ್ ಅವರಿಗೆ ಮರುಪಾವತಿಸುವಂತೆ ಆಯೋಗ ಆದೇಶಿದೆ.
LATEST NEWS
ಅಟ್ಟಾಡಿಸಿಕೊಂಡು ಬಂದ ಆನೆಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಅರಣ್ಯ ಸಿಬ್ಬಂದಿ ಸಾ*ವು
ಮಂಗಳೂರು/ಮೈಸೂರು : ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಟ್ಟಾಡಿಸಿಕೊಂಡು ಬಂದ ಆನೆಯಿಂದ ತಪ್ಪಿಸಿಕೊಳ್ಳಲು ಹೋಗಿ ಕಪಿಲಾ ನದಿಯಲ್ಲಿ ಮುಳುಗಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಬಿನಿ ಹಿನ್ನೀರಿನಲ್ಲಿರುವ ಕಾಳೇನಹಳ್ಳಿ ಹಾಡಿಯ ಶಶಾಂಕ್ (22) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ನೌಕರನಾಗಿದ್ದ ಶಶಾಂಕ್, ಎನ್.ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಗಸ್ತು ತಿರುಗುತ್ತಿದ್ದಾಗ ದುರಂ*ತ :
ಫಾರೆಸ್ಟ್ ಐಬಿ ಸಮೀಪದ ಆರಮಲ್ಲೇಶ್ವರ ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕರಾದ ಶಶಾಂಕ್ ಪಿ ಸಿ ಮತ್ತು ರಾಜಣ್ಣ ಪಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದರು.
ಆನೆಯು ದೊಡ್ಡ ಪೊದೆಯೊಂದರ ಹಿಂದೆ ಇದ್ದುದರಿಂದ, ಇದನ್ನು ಗಮನಿಸದ ಅರಣ್ಯ ಸಿಬ್ಬಂದಿ ಸಮೀಪಕ್ಕೆ ಹೋಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಬಂದ ಆನೆ ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಇಬ್ಬರೂ ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿದ್ದಾರೆ.
ಇದನ್ನೂ ಓದಿ : ಇನ್ಮುಂದೆ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದೊಯ್ಯುವಾಗ ಸೇಫ್ಟಿ ಬೆಲ್ಟ್ ಕಡ್ಡಾಯ
ಬಳಿಕ ರಾಜಣ್ಣ ಈಜಿ ದಡಕ್ಕೆ ಬಂದು ಪ್ರಾಣ ಉಳಿಸಿಕೊಂಡಿದ್ದರೆ, ಶಶಾಂಕ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಬಳಿಕ ರಾಜಣ್ಣ ಗ್ರಾಮದತ್ತ ಧಾವಿಸಿ ಅರಣ್ಯಾಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಆರ್‌ಎಫ್‌ಒ ಅಮೃತೇಶ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ.
LATEST NEWS
KSRTC: ದೀಪಾವಳಿ ರಜೆ, ಟಿಕೆಟ್ ಬುಕ್ಕಿಂಗ್‌ನಲ್ಲಿ ಕೆಎಸ್‌ಆರ್‌ಟಿಸಿ ಹೊಸ ದಾಖಲೆ
ಬೆಂಗಳೂರು: ದೀಪಾವಳಿ ಹಬ್ಬ ಮತ್ತು ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮತ್ತು ಆದಾಯದಲ್ಲಿ ಕೆಎಸ್‌ಆರ್‌ಟಿಸಿ ಹೊಸ ದಾಖಲೆ ಮಾಡಿದೆ. ಒಂದೇ ದಿನ 85,462 ಟಿಕೆಟ್‌ಗಳು ಬುಕ್ಕಿಂಗ್ ಆಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೋಗುವ ಮತ್ತು ವಾಪಸ್ ಆಗುವ ಹೆಚ್ಚು ಟಿಕೆಟ್‌ಗಳು ಬುಕ್ ಆಗಿದ್ದು, ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ನಗರದಿಂದ ದಾವಣಗೆರೆ, ಮೈಸೂರು, ಹುಬ್ಬಳ್ಳಿ, ತಿರುಪತಿ, ಶಿವಮೊಗ್ಗ ಮತ್ತು ಕಲಬುರಗಿಗೆ ಹೆಚ್ಚಿನ ಟಿಕೆಟ್‌ಗಳು ಬುಕ್ ಆಗಿವೆ. 2006ರಲ್ಲಿ ಕೆಎಸ್‌ಆರ್‌ಟಿಸಿ ಅವತಾರ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಈ ಅಪ್ಲಿಕೇಶನ್ ಮೂಲಕ ಒಂದೇ ದಾಖಲೆಯ ಟಿಕೆಟ್‌ಗಳು ಬುಕ್ ಆಗಿವೆ. ಒಂದು ದಿನ 67,033 ಟಕೆಟ್ ಬುಕ್ ಆಗಿದ್ದು, ಸುಮಾರು 4.63 ಕೋಟಿ ರೂ. ಆದಾಯ ಬಂದಿದೆ.
ಈ ಅಪ್ಲಿಕೇಶನ್ ಬಿಡುಗಡೆ ಮಾಡಿದ ಬಳಿಕ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಒಂದೇ ದಿನ ಅಂದರೆ ನವೆಂಬರ್ 3ರಂದು 85,462 ಟಿಕೆಟ್‌ಗಳು ಬುಕ್ ಆಗಿದ್ದು, 5.59 ಕೋಟಿ ರೂ. ಆದಾಯ ಬಂದಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಹೆಚ್ಚುವರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಓಡಿಸಿದೆ.
ಹೆಚ್ಚುವರಿ ಬಸ್‌ಗಳ ಸಂಚಾರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ನಗರಕ್ಕೆ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಓಡಿಸಿದೆ. ಅಕ್ಟೋಬರ್ 30ರಂದು 480 ಹೆಚ್ಚುವರಿ ಬಸ್‌ಗಳು ಸಂಚಾರ ನಡೆಸಿವೆ. ನವೆಂಬರ್ 3ರಂದು 643 ಹೆಚ್ಚುವರಿ ಬಸ್‌ಗಳು ಓಡಿವೆ.
ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ 2019ರ ದಸರಾ ಸಂದರ್ಭದಲ್ಲಿ 61,093 ಟಿಕೆಟ್‌ಗಳು ಆನ್‌ಲೈನ್ ಮೂಲಕ ಬುಕ್ ಆಗಿದ್ದವು. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಈ ಎಲ್ಲಾ ದಾಖಲೆಗಳನ್ನು ಸರಿಗಟ್ಟಲಾಗಿದೆ. ಜೂನ್ 2024ರಲ್ಲಿ ಕೆಎಸ್‌ಆರ್‌ಟಿಸಿ ಅಪ್‌ಡೇಟ್ ಆಗಿರುವ 4.0 ಅವತಾರ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು.
ಈ ಹೊಸ ಅಪ್ಲಿಕೇಶನ್ ಪ್ರಯಾಣಿಕ ಸ್ನೇಹಿಯಾಗಿದೆ. ಹಲವು ಹೊಸ ಫೀಚರ್‌ಗಳನ್ನು ಸೇರಿಸಲಾಗಿದೆ. ಬಸ್‌ಗಳ ಹುಡುಕಾಟ, ಪೇಮೆಂಟ್ ವಿಧಾನದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕ್ಯೂ ಆರ್ ಕೋಡ್ ಮೂಲಕವೂ ಟಿಕೆಟ್ ಬುಕ್ ಮಾಡಲು ಇದರಲ್ಲಿ ಅವಕಾಶವನ್ನು ನೀಡಲಾಗಿದೆ. ಬುಕ್ಕಿಂಗ್ ಖಾತ್ರಿ, ಬಸ್ ವಿಳಂಬ ಸೇರಿದಂತೆ ಇತರ ನೋಟಿಫಿಕೇಶನ್ ವಾಟ್ಸಪ್ ಮೂಲಕವೂ ಬರುವಂತೆ ಅಪ್‌ಡೇಟ್ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆನ್‌ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿ ನಾವು ಹೊಸ ದಾಖಲೆ ಬರೆದಿದ್ದೇವೆ. ನಮ್ಮ ವ್ಯವಸ್ಥೆ ಪ್ರಯಾಣಿಕ ಸ್ನೇಹಿಯಾಗಿದೆ. ಹೊಸದಾದ, ಪರಿಸರ ಸ್ನೇಹಿ ವ್ಯವಸ್ಥೆಯನ್ನು ನಾವು ಶೀಘ್ರದಲ್ಲಿಯೇ ಪರಿಚಯಿಸಲಿದ್ದೇವೆ. ಕಾಗದ ಬಳಕೆ ಕಡಿಮೆ ಮಾಡಲು ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯೂ ಬರಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯ ಮತ್ತು ಕಾರ್ಪೊರೇಟ್ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಆರ್‌ಟಿಸಿ ಅವತಾರ್ 4.0 ಅಪ್ಲಿಕೇಶನ್ ಅನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಮುಂದಾಗಿದೆ. ಈ ಅಪ್ಲಿಕೇಶನ್‌ನಲ್ಲಿಯೇ ಕಾರ್ಗೋ ಸೇವೆಯನ್ನು ಬುಕ್ ಮಾಡಲು ಆಯ್ಕೆಯನ್ನು ನೀಡಲಾಗುತ್ತದೆ. ಅಲ್ಲದೇ ಸಮಾರಂಭಗಳಿಗೆ ಬಸ್‌ಗಳನ್ನು ಬಾಡಿಗೆಗೆ ಪಡೆಯಲು ಅನುಕೂಲವಾಗುವಂತೆ ಅಪ್ಲಿಕೇಶನ್‌ನಲ್ಲಿಯೇ ಫೀಚರ್‌ಗಳನ್ನು ಸೇರಿಸಲಾಗುತ್ತದೆ.
LATEST NEWS
ಗೆಳತಿಯರ ಜೊತೆ ಸೇರಿ ಪತ್ನಿಯ ಹ*ತ್ಯೆ; ಸಂಚು ಬಯಲಾದಾಗ ಪೊಲೀಸರಿಗೆ ಶಾಕ್ !!!
ಮಂಗಳೂರು/ಒಡಿಶಾ : 24 ವರ್ಷದ ಫಾರ್ಮಸಿಸ್ಟ್ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ತನ್ನ ಪತ್ನಿಯನ್ನು ಕೊ*ಲೆ ಮಾಡಿದ ಹೃದಯ ವಿದ್ರಾವಕ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ನಡೆದಿದೆ.
ಕೊ*ಲೆ ಮಾಡಿದ ಆರೋಪಿ ತನ್ನ ಪತ್ನಿಯನ್ನು ಭುವನೇಶ್ವರದ ಆಸ್ಪತ್ರೆಗೆ ಕರೆದೊಯ್ದು ಆ*ತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿದಾಗ, ವೈದ್ಯರು ಮೃ*ತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಆ*ತ್ಮಹತ್ಯೆ ಬಗ್ಗೆ ಆರೋಪಿ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲಿಸರು ಶ*ವವನ್ನು ಮ*ರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯು ಹೊರಬಂದಾಗ, ಪೊಲೀಸರು ಆಘಾತಕ್ಕೊಳಗಾಗಿದ್ದರು. ಮ*ರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ಮೃ*ತ ಮಹಿಳೆಯ ಕೈ ಮತ್ತು ಕುತ್ತಿಗೆಯಲ್ಲಿ ಗಾ*ಯದ ಗುರುತುಗಳಿದ್ದವು. ಅರಿವಳಿಕೆ ಮಿತಿಮೀರಿದ ಸೇವನೆಯಿಂದ ಸಾ*ವು ಸಂಭವಿಸಿದೆ ಎಂದು ವರದಿಯಲ್ಲಿತ್ತು.
ಇಂಜೆಕ್ಷನ್ ಬಳಸಿ ಕೊ*ಲೆಗೆ ಸಂಚು :
ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಗಂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ‘ಬೇರಿಬ್ಬರು ಗೆಳತಿಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅವರ ಸಹಾಯದಿಂದ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದೇನೆ’ ಎಂದು ಒಪ್ಪಿಕೊಂಡಿದ್ದಾನೆ.
ಆರೋಪಿ ಪ್ರದ್ಯುಮನ್ ಕುಮಾರ್ ದಾಸ್‌ನ ಅಕ್ರಮ ಸಂಬಂಧದ ಬಗ್ಗೆ ಅವನ ಹೆಂಡತಿಗೆ ತಿಳಿದಿದ್ದು, ಇದರಿಂದ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು. ಈ ಕಾರಣದಿಂದ ಆತನ ಹೆಂಡತಿ ಕಳೆದ ಎಂಟು ತಿಂಗಳಿಂದ ಪೋಷಕರ ಮನೆಯಲ್ಲಿ ವಾಸವಿದ್ದಳು. ಆರೋಪಿ ಪ್ರದ್ಯುಮನ್ ಕುಮಾರ್ 28 ಅಕ್ಟೋಬರ್ 2024 ರಂದು ತನ್ನ ಗೆಳತಿಯೊಬ್ಬರ ಮನೆಯಲ್ಲಿ ತನ್ನನ್ನು ಭೇಟಿಯಾಗುವಂತೆ ಪತ್ನಿಗೆ ಮನವರಿಕೆ ಮಾಡಿಕೊಟ್ಟಿದ್ದ. ಪ್ರದ್ಯುಮನ್ ನಂತರ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸಂಗಾತಿಯಿಂದ ಅರಿವಳಿಕೆ ಇಂಜೆಕ್ಷನ್ ಖರೀದಿಸಿದ್ದಾನೆ.
ಪತ್ನಿ ತನ್ನ ಪತಿಯನ್ನು ಭೇಟಿಯಾಗಲು ಹೋದಾಗ ಆತ ಆಕೆಗೆ ಬಲವಂತವಾಗಿ ಎರಡು ಅರಿವಳಿಕೆ ಚುಚ್ಚುಮದ್ದು ನೀಡಿದ್ದಾನೆ. ಇದರಿಂದಾಗಿ ಆಕೆ ಸ*ತ್ತಳು. ಆರೋಪಿಯ ಗೆಳತಿಯರಿಬ್ಬರೂ ದಾದಿ ಕೆಲಸ ಮಾಡುತ್ತಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS7 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!