Monday, July 4, 2022

ಬಂಟ್ವಾಳದಲ್ಲಿ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಯೈ ಕೈ : ಲಾಟಿ ಬೀಸಿದ ಪೊಲೀಸರು

ಬಂಟ್ವಾಳ: ಭಿನ್ನ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಜಮಾಯಿಸಿದ್ದ ಬಿಜೆಪಿ ಹಾಗೂ ಕಾಂಗ್ರೇಸ್ ಕಾರ್ಯ ಕರ್ತರ ನಡುವೆ ವಾಗ್ವಾದ ನಡೆದು ಪರಸ್ಪರ ಹೊಯೈ ಕೈ ನಡೆದ ಘಟನೆ ಕಾವಳಕಟ್ಟೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.


ಘಟನೆಯ ವಿವರ

ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾವಳಮೂಡೂರು ಗ್ರಾ.ಪಂ. ನೀರು ಹಾಗೂ ಮನೆ ತೆರಿಗೆ ಯನ್ನು ಏಕಾಏಕಿ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದರು.


ಈ ಹಂತದಲ್ಲಿ ಆರ್.ಟಿ.ಐ .ಕಾರ್ಯಕರ್ತ ಪದ್ಮನಾಭ ಮಯ್ಯ  ಬಿಜೆಪಿ ನಡೆಸಿದ ಪ್ರತಿಭಟನೆ ಯಲ್ಲಿ ಕಾಣಿಸಿಕೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಉಭಯ ಪಕ್ಷದ ಕಾರ್ಯಕರ್ತರ ನಡುವೆ ನೂಕಾಟ, ಪರಸ್ಪರ ತಳ್ಳಾಟ ನಡೆಯಿತು.
ಇದೇ ವೇಳೆ ಆರ್.ಟಿ.ಐ.ಕಾರ್ಯಕರ್ತ ಪದ್ಮನಾಭ ಮಯ್ಯ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ರೂಪ ಬದಲಾಯಿತು.
ಉಭಯ ಪಕ್ಷದ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಉಭಯ ಪಕ್ಷದ ನಾಯಕ ರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯಿತು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ನ್ನು ಪೋಲೀಸರು ಲಾಟಿ ಬೀಸಿ ಚದುರಿಸಿದರು. ಆರ್.ಟಿ.ಐ ಕಾರ್ಯಕರ್ತ ಪದ್ಮನಾಭ ಮಯ್ಯ ಅವರು ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದರೆ, ಕಾಂಗ್ರೆಸ್ ಕಾರ್ಯ ಕರ್ತರಾದ
ಸದಾನಂದ ಶೆಟ್ಟಿ, ಬಿ.ಆರ್.ಅಂಚನ್ ಬಂಟ್ವಾಳ ಸರಕಾರಿ ಆಸ್ಪತ್ರೆಯ ಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಪುಂಜಾಲಕಟ್ಟೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕಾಗಮಿಸಿ ಕಾವಳಮೂಡೂರು ಸೊಸೈಟಿ ಆಧ್ಯಕ್ಷ ಪದ್ಮಶೇಖರ್ ಜೈನ್ , ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ ಬಜ ಅವರಿಂದ ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ‘ಬ್ಲಡ್ ಡೋನರ್ಸ್’ ಇದರ 350ನೇ ರಕ್ತದಾನ ಶಿಬಿರಕ್ಕೆ ಚಾಲನೆ

ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ವತಿಯಿಂದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು, ಫಾದರ್ ಮುಲ್ಲರ್ ರಕ್ತನಿಧಿ ಕೇಂದ್ರ ಮಂಗಳೂರು, ಯೆನೆಪೋಯಾ ಮೆಡಿಕಲ್ ಕಾಲೇಜು ರಕ್ತನಿಧಿ ಕೇಂದ್ರ ದೇರಳಕಟ್ಟೆ ಇದರ...

“ಪೀ ಬನ್ನಗ ಬಿತ್ತಿಲ್‌ ನಾಡುನ ಪರಿಸ್ಥಿತಿ” ಮಳೆ ಅವಾಂತರದ ಬಗ್ಗೆ ಮಾಜಿ ಶಾಸಕ ಲೋಬೊ ವ್ಯಂಗ್ಯ

ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರು ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದಾದ್ಯಂತ ಅವ್ಯವಸ್ಥೆ ಉಂಟಾಗಿದೆ. ಮಳೆ ಪ್ರಾರಂಭವಾಗುವ ಮೊದಲು ಪೂರ್ವ ತಯಾರಿ ಮಾಡದಿದ್ದರೆ ಇಂದಿನ ಅವಾಂತರಕ್ಕೆ ಕಾರಣವಾಗುತ್ತದೆ.ಇದು ಪೀ ಬನ್ನಗ ಬಿತ್ತಿಲ್‌...

ಮಂಗಳೂರಿನಲ್ಲಿ 518 ಅಕ್ರಮ ವಿದೇಶಿಗರು ಪೊಲೀಸರ ವಶಕ್ಕೆ

ಮಂಗಳೂರು: ಮಂಗಳೂರು ಪೊಲೀಸರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಯೂರಿರುವ ವಿದೇಶಿಗರ ಪತ್ತೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.ಸರಿಯಾದ ದಾಖಲೆಗಳಿಲ್ಲದ 518 ವಿದೇಶಿ ವಲಸಿಗರೆಂದು ಹೇಳಲಾದವರ ವಿಚಾರಣೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಕ್ರಮವಾಗಿ ‌ನೆಲೆಸಿರುವ ವಿದೇಶಿಯರ...