Connect with us

    DAKSHINA KANNADA

    ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

    Published

    on

    ಬೆಂಗಳೂರು: ತೈಲ ಮಾರುಕಟ್ಟೆ ಕಂಪನಿಗಳು ಆಗಸ್ಟ್ 1 ರಿಂದ ಜಾರಿಗೆ ಬರುವಂತೆ 19 ಕೆಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ 8.50 ರೂ. ಏರಿಕೆ ಮಾಡಲಾಗಿದೆ.

    ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ವೆಬ್​ಸೈಟ್ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ 1652.50 ರೂ.ಗೆ ಲಭ್ಯವಿದೆ. ಮೊದಲು ಈ ಬೆಲೆ 1646 ರೂ. ಇಲ್ಲಿ 6.50 ರೂ. ಇತ್ತು. ಈ ಸಿಲಿಂಡರ್ ಈಗ ಕೋಲ್ಕತ್ತಾದಲ್ಲಿ 1764.50 ರೂ.ಗೆ ಲಭ್ಯವಿದೆ.

    ಚೆನ್ನೈನಲ್ಲಿ 1817 ರೂ. ಆಗಿದೆ. 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಹಳೆಯ ಬೆಲೆ ಕೋಲ್ಕತ್ತಾದಲ್ಲಿ 1756 ರೂ., ಮುಂಬೈನಲ್ಲಿ 1598 ರೂ. ಮತ್ತು ಚೆನ್ನೈನಲ್ಲಿ 1809.50 ರೂ. ಆಗಿದೆ.

    BELTHANGADY

    ಬೆಳ್ತಂಗಡಿ : ನೇಣು ಬಿಗಿದು ದಂಪತಿ ಆತ್ಮ*ಹತ್ಯೆ

    Published

    on

    ಬೆಳ್ತಂಗಡಿ : ದಂಪತಿ ನೇ*ಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಾಶಿಪಟ್ನ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ. ಉರ್ದುಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ (63) ಹಾಗೂ ಬೇಬಿ (46) ಆತ್ಮ*ಹತ್ಯೆ ಮಾಡಿಕೊಂಡವರು.


    ಮನೆ ಸಮೀಪ ಇರುವ ಕಾಡಿನಲ್ಲಿ ದಂಪತಿ ನೇ*ಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ನೋಣಯ್ಯ ಪೂಜಾರಿ ತಲೆ ನೋವಿನಿಂದ ಬಳಲುತ್ತಿದ್ದು, ಬೇಬಿ ಅವರಿಗೆ ಮಕ್ಕಳಿಲ್ಲದ ಕೊರಗು ಇತ್ತು ಎಂದು ತಿಳಿದು ಬಂದಿದೆ.
    ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ವಿವಾಹವಾಗಿದ್ದು , ಮೊದಲ ಪತ್ನಿ 10 ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ಮೊದಲ ಪತ್ನಿಗೆ 5 ಜನ ಗಂಡು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ. ಆತ್ಮ*ಹತ್ಯೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಉದ್ಯಮಿ ಮನೆ ದರೋಡೆ ಪ್ರಕರಣ; ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಸೇರಿ ಮೂವರ ಬಂಧನ

    Published

    on

    ಮಂಗಳೂರು : ಉದ್ಯಮಿ ಐಕಳ ಹರೀಶ್‌ ಶೆಟ್ಟಿ ಅವರ ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿದ್ದಕಟ್ಟೆ ನಿವಾಸಿ ಹುಸೈನಬ್ಬ ಯಾನೆ ಸುಹೈಲ್ , ಕೊಲ್ನಾಡು ನಿವಾಸಿ ಝುಬೈರ್‌ ಹಾಗೂ ಕಾಸರಗೋಡು ನಿವಾಸಿ ಕಲಾಮ್‌  ಬಂಧಿತರು.  ಈ ಪೈಕಿ ಸುಹೈಲ್ ಹಾಗೂ ಝುಬೈರ್‌ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಕಲಾಮ್‌ ಆರೋಪಿಗಳು ತಲೆ ಮರೆಸಿಕೊಳ್ಳಲು ನಕಲಿ ಪಾಸ್‌ ಪೋರ್ಟ್‌ ಮಾಡಿಸಿಕೊಟ್ಟ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

    ಬಂಧಿತರಿಂದ ನಕಲಿ ಪಾಸ್‌ ಪೋರ್ಟ್‌, ಮೊಬೈಲ್‌ ಫೋನ್‌, ಪಿಸ್ತೂಲು, ಸಜೀವ ಮದ್ದುಗುಂಡುಗಳು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು 2023ರಲ್ಲಿ ಉದ್ಯಮಿ ಹರೀಶ್‌ ಶೆಟ್ಟಿ ಐಕಳ ಅವರ ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಕಾಸರಗೋಡು ನಿವಾಸಿ ಕಲಾಮ್‌ನ ಸಹಕಾರದಲ್ಲಿ ನಕಲಿ ಪಾಸ್‌ ಪೋರ್ಟ್‌ ಮಾಡಿಸಿಕೊಂಡು  ವಿದೇಶಕ್ಕೆ ತೆರಳಿ ಅಲ್ಲಿ ತಲೆ ಮರೆಸಿಕೊಂಡಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಆರೋಪಿಗಳು ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಲ್ನಾಡು ಕೋರ್ದಬ್ಬು ದೈವಸ್ಥಾನ ಬಳಿ ಮುಲ್ಕಿ ಸುಂದರರಾಮ ಶೆಟ್ಟಿ ಸಭಾಭವನದ ಬಳಿ ಇರುವುದನ್ನು ಖಚಿತ ಪಡಿಸಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ : ಕಿನ್ನಿಗೋಳಿ : ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿಗಳು

    ಈಗಾಗಲೇ ಮುಲ್ಕಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬುಧವಾರ ಸಿಸಿಬಿ ಪೊಲೀಸರು ಮತ್ತಿಬ್ಬರನ್ನು ಬಂದಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 5ಕ್ಕೇರಿದೆ.

    Continue Reading

    DAKSHINA KANNADA

    ಕಿನ್ನಿಗೋಳಿ : ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿಗಳು

    Published

    on

    ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಮತ್ತು ಜೂನಿಯರ್ ಎಂಜಿನಿಯರ್ ನಾಗರಾಜ್‌ ಎಂಬುವವರನ್ನು ಕಿನ್ನಿಗೋಳಿ ಲೋಕಾಯುಕ್ತ ಪೊಲೀಸರು ಸೆರೆ ಹಿಡಿದಿದ್ದಾರೆ.
    ಗುತ್ತಿಗೆದಾರರಿಂದ ಲಂಚ ಸ್ವೀಕಾರ:
    ಪಿಡಬ್ಲ್ಯೂಡಿ ಕ್ಲಾಸ್‌ ವನ್‌ ಪಂಚಾಯತ್ ವ್ಯಾಪ್ತಿಯ ಎಸ್ ಕೋಡಿ ಸರಕಾರಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿಯ ಗುತ್ತಿಗೆ ವಹಿಸಿ ಕೆಲಸ ನಿರ್ವಹಿಸುತ್ತಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯವರು ದೂರು ನೀಡಿದ್ದಾರೆ. ಕಾಮಗಾರಿಯ ಮೊತ್ತ 9,77,154 ರೂಪಾಯಿಗಳ ಬಿಲ್ಲು ಮಂಜೂರಾತಿಯಾಗಿದ್ದು, ಜೂನಿಯ‌ರ್ ಎಂಜಿನಿಯರ್ ನಾಗರಾಜು ಅವರು 37,000 ರೂಪಾಯಿ ಹಾಗೂ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಎಂ.ಆರ್ ಸ್ವಾಮಿ ಅವರು 15,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿದ್ದು, ಜೂನಿಯರ್ ಎಂಜಿನಿಯರ್ ನಾಗರಾಜು ಅವರು ಮುಂಗಡವಾಗಿ 7000 ರೂ. ಹಣವನ್ನು ಗುತ್ತಿಗೆದಾರರಿಂದ ಪಡೆದುಕೊಂಡಿದ್ದರು.
    ಈ ದೂರಿನ ಹಿನ್ನೆಲೆಯಿಂದ ಕಿನ್ನಿಗೋಳಿ ಲೋಕಾಯುಕ್ತ ಪೊಲೀಸರು ಪಟ್ಟಣ ಪಂಚಾಯಿತಿ ದಾಳಿಗೆ ವ್ಯವಸ್ಥೆ ಮಾಡಿ ಆರೋಪಿಗಳಾದ ಜೂನಿಯರ್ ಎಂಜಿನಿಯರ್ ನಾಗರಾಜುರಿಂದ 30 ಸಾವಿರ ರೂಪಾಯಿ ಹಾಗೂ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿಯವರಿಂದ 15 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಅವರನ್ನು ಸೆರೆ ಹಿಡಿಯಲಾಗಿದೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಡಾ. ಉಪಾಧೀಕ್ಷಕರಾದ ಗಾನಾ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್ ಸಿ.ಎಲ್ ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

    ವಿಡಿಯೋ ನೋಡಿ:

    Continue Reading

    LATEST NEWS

    Trending