Connect with us

    DAKSHINA KANNADA

    ಲಂಡನ್‌ನ ‘ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌’ಗೌರವ ಪಡೆದ ಕರಾವಳಿ ಪುತ್ರ ದಾನಶೂರ ಡಾ. ರೊನಾಲ್ಡ್ ಕುಲಾಸೋಗೆ ಹುಟ್ಟೂರ ಗೌರವ..!

    Published

    on

    ಲಂಡನ್‌ನ ‘ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ ‘ನಿಂದ ಶ್ರೇಷ್ಠತಾ ಪ್ರಮಾಣಪತ್ರ ಪಡೆದ ಕೊಡುಗೈ ದಾನಿ, ಸಮಾಜ ಸೇವಾಸಕ್ತ ಡಾ. ರೊನಾಲ್ಡ್‌ ಕುಲಾಸೊ ಮತ್ತು ಅವರ ಪತ್ನಿ ಜೀನ್ ಕುಲಾಸೊ ಅವರಿಗೆ ಮಂಗಳೂರು ನಾಗರಿಕ ಸನ್ಮಾನ ಶುಕ್ರವಾರ  ನಡೆಯಿತು.

    ಮಂಗಳೂರು :  ಲಂಡನ್‌ನ ‘ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ ‘ನಿಂದ ಶ್ರೇಷ್ಠತಾ ಪ್ರಮಾಣಪತ್ರ ಪಡೆದ ಕೊಡುಗೈ ದಾನಿ, ಸಮಾಜ ಸೇವಾಸಕ್ತ ಡಾ. ರೊನಾಲ್ಡ್‌ ಕುಲಾಸೊ ಮತ್ತು ಅವರ ಪತ್ನಿ ಜೀನ್ ಕುಲಾಸೊ ಅವರಿಗೆ ಮಂಗಳೂರು ನಾಗರಿಕ ಸನ್ಮಾನ ಶುಕ್ರವಾರ  ನಡೆಯಿತು.

    ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಶನ್ ಸಭಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಅತಿ ವಂ.ಡಾ.ಪೀಟರ್‌ ಮಚಾದೊ ಅಧ್ಯಕ್ಷತೆ ವಹಿಸಿದ್ದರು.

    ಪ್ರಾರಂಭದಲ್ಲಿ  ಡಾ.ರೊನಾಲ್ಡ್‌ ಕುಲಾಸೊ ಅವರನ್ನು ಗಣ್ಯರ ಸಮ್ಮುಖ ಭವ್ಯ ಮೆರವಣಿಗೆಯಲ್ಲಿ ಸಭಾ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು.

    ಡಾ. ಕುಲಾಸೊ ಅವರ ಸಮಾಜ ಸೇವಾ ಕಾರ್ಯಗಳ ಸಹಿತ ವಿವಿಧ ಕ್ಷೇತ್ರಗಳ ಸಾಧನೆಗಳ ಬಗ್ಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

    ಅಭಿನಂದನಾ ಭಾಷಣ ಮಾಡಿದ ಮಂಗಳೂರಿನ ಬಿಷಪ್ ಅತಿ ವಂ. ಡಾ.ಪೀಟರ್‌ ಪಾವ್ಲ್‌ ಸಲ್ದಾನ್ಹಾ ಅವರು ಸಹಾಯ ಮಾಡುವಾಗ ಯಾವತ್ತೂ ಗಡಿ, ಭಾಷೆ, ಜಾತಿ, ಧರ್ಮ ನೋಡದೆ ಎಲ್ಲರಿಗೂ ನೆರವು ನೀಡುವ ಡಾ.ರೊನಾಲ್ಡ್ ಕುಲಾಸೊ ನಮ್ಮ ಮಣ್ಣಿನ ಮಗ ಎನ್ನಲು ಹೆಮ್ಮೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ರೊನಾಲ್ಡ್‌ ಕುಲಾಸೊ, ತಾನು ಯಾವುದೇ ಪ್ರಶಸ್ತಿ ಅಥವಾ ಸನ್ಮಾನಕ್ಕಾಗಿ ಸಮಾಜ ಸೇವೆ ಮಾಡುತ್ತಿಲ್ಲ;

    ಸಮಾಜಕ್ಕೆ ನನ್ನ ಕರ್ತವ್ಯ ಎಂದು ಭಾವಿಸಿ ಸೇವೆ ಮಾಡುತ್ತಿದ್ದೇನೆ. ಬಡವರಿಗೆ ಮತ್ತು ಸಮಾಜಕ್ಕಾಗಿ ಹಣ ಮೀಸಲಿಡುವುದಾಗಿ ದೇವರ ಮುಂದೆ ಮಾಡಿದ್ದ ಬದ್ಧತೆಯನ್ನು ಈಡೇರಿಸುತ್ತಿದ್ದೇನೆ.

    ನುಡಿದಂತೆ ನಡೆದರೆ ನಮಗೆ ಬೋಧಿಸುವ ನೈತಿಕತೆ ಇರುತ್ತದೆ ಎಂದು ಹೇಳಿದರು.

     

    ಉಡುಪಿಯ ಬಿಷಪ್‌ ಅತಿ ವಂ.ಡಾ.ಜೆರಾಲ್ಡ್‌ ಐಸಾಕ್‌ ಲೋಬೊ, ಬೆಳ್ತಂಗಡಿಯ ಬಿಷಪ್ ಡಾ. ಲಾರೆನ್ಸ್‌ ಮುಕ್ಕೂಯಿ ಬಳ್ಳಾರಿಯ ಬಿಷಪ್‌ ಅತಿ ವಂ. ಡಾ. ಹೆನ್ರಿ ಡಿ’ ಸೋಜಾ, ಶಿವಮೊಗ್ಗ ಬಿಷಪ್ ಅತಿ ವಂ.ಡಾ. ಫ್ರಾನ್ಸಿಸ್‌ ಸೆರಾವೊ, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ,  ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷ ಡಾ.ಶಾಂತರಾಮ ಶೆಟ್ಟಿ, ಬ್ರಹ್ಮ ಕುಮಾರಿ ಸೆಂಟರ್‌ನ ಬಿ.ಕೆ.ವಿಶ್ವೇಶ್ವರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾ.ರಿಚಾರ್ಡ್‌ ಅಲೋಶಿಯಸ್ ‌ಕುವೆಲ್ಲೋ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಸದಸ್ಯರಾದ ಸುರೇಶ್ ಬಲ್ಲಾಳ್, ಯು.ಟಿ.ಇಫ್ತಿಕಾರ್ ಅಲಿ, ವಾಲ್ಟರ್ ನಂದಳಿಕೆ, ಲೂಯಿ ಜೆ. ಪಿಂಟೊ, ಡೆನ್ನಿಸ್ ಡಿಸಿಲ್ವ, ಸಂತೋಷ್ ಡಿಕೋಸ್ತ ಮತ್ತಿತರರು ಉಪಸ್ಥಿತರಿದ್ದರು.

    ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಜೆ.ಆರ್.ಲೋಬೋ ಸ್ವಾಗತಿಸಿದರು. ಚಿತ್ರನಟಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.

    DAKSHINA KANNADA

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    DAKSHINA KANNADA

    ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?

    Published

    on

    ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.


    ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.

    ಇದನ್ನು ಓದಿ:ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.

    Continue Reading

    bangalore

    ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?

    Published

    on

    ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.


    ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.

    ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.

    Continue Reading

    LATEST NEWS

    Trending