LATEST NEWS
ಮ್ಯಾಗಿ ತಿಂದು ಬಾಲಕ ದಾರುಣ ಸಾ*ವು
ಲಕ್ನೋ: 2 ನಿಮಿಷದಲ್ಲಿ ಏನಾದ್ರೂ ಮಾಡಿ ತಿನ್ಬೇಕು ಅಂದ್ರೆ ಥಟ್ ಅಂತ ನೆನಪು ಆಗೋದು ಮ್ಯಾಗಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಮ್ಯಾಗಿ ಅಂದ್ರೆ ತುಂಬಾ ಇಷ್ಟ. ಆದರೆ ಇದೇ ಮ್ಯಾಗಿ ಹಾಗೂ ನೂಡಲ್ಸ್ ತಿಂದು ಬಾಲಕನೊರ್ವ ಸಾ*ವನ್ನಪ್ಪಿದ ಘಟನೆ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ರೋಹನ್ (6) ಮೃ*ತ ಬಾಲಕ.
ಉತ್ತರ ಪ್ರದೇಶದಲ್ಲಿ ನೂಡಲ್ಸ್ ಜೊತೆ ಅನ್ನ ತಿಂದು ಒಂದೇ ಕುಟುಂಬದ 6 ಜನರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಿಂದ ಮನೆಗೆ ವಾಪಸ್ಸ್ ಆದ ಬಳಿಕ 6 ವರ್ಷದ ಬಾಲಕ ಮೃ*ತಪಟ್ಟಿದ್ದಾನೆ.
ಅಸಲಿಗೆ ಆಗಿದ್ದೇನು?
ಮೃ*ತ ರೋಹನ್ ತಾಯಿ ಸೀಮಾ ತನ್ನ ಮಕ್ಕಳಾದ ರೋಹನ್, ವಿವೇಕ್ ಹಾಗೂ ಮಗಳು ಸಂಧ್ಯಾ ಜೊತೆ ರಾತ್ರಿ ನೂಡಲ್ಸ್ ಜೊತೆ ಅನ್ನ ತಿಂದು ಮಲಗಿದ್ದರು. ಇದಾದ ನಂತರ ಸೀಮಾ ಹಾಗೂ ಆಕೆಯ ಮೂವರು ಮಕ್ಕಳು ರಾತ್ರೋರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮರುದಿನ ಕುಟುಂಬಸ್ಥರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ಕುಟುಂಬಸ್ಥರು ಮನೆಗೆ ವಾಪಸ್ ಬಂದಿದ್ದರು. ಮತ್ತೊಮ್ಮೆ ಕುಟುಂಬಸ್ಥರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದೇ ವೇಳೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರೋಹನ್ ಮೃ*ತಪಟ್ಟಿದ್ದಾನೆ.
ಇನ್ನು, ಈ ಘಟನೆ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆ ತಂಡ ಈ ಬಗ್ಗೆ ತನಿಖೆ ಆರಂಭಿಸಿದೆ. ಈ ಕುರಿತು ಮಾಹಿತಿ ನೀಡಿದ ಪುರನ್ಪುರ ಆರೋಗ್ಯ ಕೇಂದ್ರದ ಡಾ.ರಶೀದ್, ಸಮುದಾಯ ಆರೋಗ್ಯ ಕೇಂದ್ರಕ್ಕೆ ಐವರನ್ನು ಕರೆತರಲಾಗಿದೆ. ನೂಡಲ್ಸ್ ಜೊತೆ ಅನ್ನ ತಿಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉನ್ನತ ಕೇಂದ್ರಕ್ಕೆ ಕಳುಹಿಸಲಾಗಿದೆ. ಇತರ ಜನರ ಚಿಕಿತ್ಸೆಯು ನಡೆಯುತ್ತಿದೆ ಅಂತ ತಿಳಿಸಿದ್ದಾರೆ.
LATEST NEWS
ಉಡುಪಿ: ಬೈಂದೂರಿನ ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ
ಉಡುಪಿ: ಬೈಂದೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಒತ್ತಿನೆಣೆ ತಿರುವಿನಲ್ಲಿ ಗುಡ್ಡದ ಮಣ್ಣು ಕುಸಿದ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ರಾತ್ರಿ ಅಧಿಕ ಮಳೆ ಸುರಿದ ಪರಿಣಾಮ ಗುಡ್ಡ ಕುಸಿತ ಸಂಭವಿಸಿದೆ.
ಗುಡ್ಡದ ಮೇಲ್ಭಾಗದಲ್ಲಿ ಮಣ್ಣು ಅಪಾಯಕಾರಿ ಸ್ಥಿತಿಯಲ್ಲಿದೆ. ಕೆಲವು ತಿಂಗಳ ಹಿಂದೆ ಅಗ್ನಿಶಾಮಕ ವಾಹನದ ಮೂಲಕ ನೀರು ಸಿಂಪಡಿಸಿ ಕುಸಿಯುವ ಭೀತಿಯಲ್ಲಿರುವ ಗುಡ್ಡದ ಮಣ್ಣನ್ನು ಸಮತಟ್ಟು ಮಾಡಲಾಗಿತ್ತು. ಈ ಹಿಂದೆಯೂ ಈ ಭಾಗದಲ್ಲಿ ಗುಡ್ಡ ಕುಸಿಯುವ ಸಂಭವವಿದ್ದಾಗ ಮಣ್ಣು ತೆರವುಗೊಳಿಸಿ ಮುಂಜಾಗ್ರತೆ ವಹಿಸಲಾಗಿತ್ತು. ಆದರೆ ಕಳೆದೆರಡು ದಿನದಿಂದ ಮಳೆಯ ಪ್ರಮಾಣ ಅಧಿಕವಾದ ಕಾರಣ ಗುಡ್ಡದ ಮಣ್ಣು ಕುಸಿದಿದೆ.
ಭೂ ಕುಸಿತದಿಂದ ಚರಂಡಿಗೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ. ಗುಡ್ಡದ ಮಣ್ಣು ಕುಸಿತದಿಂದ ಹೆದ್ದಾರಿ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಸ್ಥಳಕ್ಕೆ ತೆರಳಿದ ಐಆರ್ಬಿ ಅಧಿಕಾರಿಗಳು ಮಣ್ಣು ತೆರವುಗೊಳಿಸಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಒತ್ತಿನೆಣೆ ತಿರುವಿನ ರಾಘವೇಂದ್ರ ಮಠದ ಬಳಿ ಕುಸಿತ ಸಂಭವಿಸುವ ಆತಂಕ ಇರುವ ಕಾರಣ ಹೆದ್ದಾರಿ ಇಲಾಖೆ ಮತ್ತು ಐಆರ್ಬಿ ಕಂಪೆನಿ ಪ್ಲಾಸ್ಟರಿಂಗ್ ಮೂಲಕ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದೆ.
ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ ಬಳಿಕ ದಿಲ್ಲಿಯಿಂದ ಹಿರಿಯ ಭೂ ವಿಜ್ಞಾನಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದರ ಹೊರತಾಗಿ, ಸಮೀಪದಸೋಮೇಶ್ವರ ಗುಡ್ಡ ಕೂಡಾ ಮಳೆಯ ಅಬ್ಬರದಿಂದಾಗಿ ಕುಸಿಯುತ್ತಿದೆ.ಗುಡ್ಡ ಭಾಗದಲ್ಲಿ ಖಾಸಗಿ ವ್ಯಕ್ತಿಗಳು ರೆಸಾರ್ಟ್ ನಿರ್ಮಿಸಲು ಅನಧಿಕೃತವಾಗಿ ರಸ್ತೆ ನಿರ್ಮಿಸಿದ ಕಾರಣ ಮಳೆಗಾಲದಲ್ಲಿ ಗುಡ್ಡದ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಆತಂಕ ಉಂಟು ಮಾಡಿತ್ತು.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಇದುವರಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಎರಡು ದಿನಗಳ ಹಿಂದೆ ಮಳೆಗೆ ಗುಡ್ಡ ಇನ್ನಷ್ಟು ಕುಸಿದಿದ್ದು, ಗುಡ್ಡದ ಮೇಲ್ಭಾಗದಲ್ಲಿರುವ ಕ್ಷಿತಿಜ ನೇಸರ ಧಾಮ ಕೂಡಾ ಅಪಾಯದಲ್ಲಿದೆ.ಈ ಬಗ್ಗೆ ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ.
DAKSHINA KANNADA
ದೀಪಾವಳಿಗೆ ಬಂಪರ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು
ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭ ದೀರ್ಘ ರಜೆಯ ಕಾರಣ ಬೆಂಗಳೂರು – ಮಂಗಳೂರು ಮಧ್ಯೆ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಟಿಕೇಟ್ ರೇಟ್ ಕೇಳಿಯೇ ಕಂಗಾಲಾಗುತ್ತಾರೆ. ಅದರ ಮಧ್ಯೆಯೂ ಸೀಟ್ ಭರ್ತಿಯಾಗಿದೆ ಎಂದಾಗ ಆತಂಕಕ್ಕೊಳಗಾಗುತ್ತಾರೆ. ಹಾಗಾಗಿ ಅಂತಹವರ ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ – ಮಂಗಳೂರು ಜಂಕ್ಷನ್- ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೇ ನಿರ್ಧರಿಸಿದ್ದು, ಅ.30 ಮತ್ತು 31ರಂದು ಈ ರೈಲುಗಳು ಸಂಚರಿಸಲಿವೆ.
ನಂ.06565 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅ.31ರಂದು ಮಧ್ಯಾಹ್ನ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ನಂ.06566 ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ರೈಲು ಅ.31ರಂದು ಮಧ್ಯಾಹ್ನ 1 ಗಂಟೆಗೆ ಮಂಗ ಳೂರು ಜಂಕ್ಷನ್ನಿಂದ ಹೊರಡಲಿದ್ದು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ.
ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ರೈಲು ಒಟ್ಟು 21 ಬೋಗಿ ಸಂಯೋಜನೆಯನ್ನು ಒಳಗೊಂಡಿದೆ.
ಪ್ರಯಾಣಿಕರ ಬೇಡಿಕೆ :
ಕಳೆದ ವರ್ಷ ದಸರಾ, ದೀಪಾವಳಿ ಸಂದರ್ಭದಲ್ಲಿ ಮಂಗಳೂರು – ಬೆಂಗಳೂರು – ಮೈಸೂರು ನಡುವೆ ವಿಶೇಷ ರೈಲು ಓಡಾಟ ನಡೆಸಿತ್ತು. ಈ ಬಾರಿ ದಸರಾದಲ್ಲಿ ನಂ.06569 ಯಶವಂತಪುರ – ಕಾರವಾರ ವಿಶೇಷ ಎಕ್ಸ್ಪ್ರೆಸ್ ರೈಲು ಮತ್ತು ನಂ. 06570 ಕಾರವಾರ – ಮೈಸೂರು ವಿಶೇಷ ಎಕ್ಸ್ಪ್ರೆಸ್ ರೈಲು ವಯಾ ಪಡೀಲ್ ಮೂಲಕ ಸಂಚರಿಸಿದೆ. ಇದರಿಂದ ಮಂಗಳೂರಿಗೆ ಬರುವವರಿಗೆ ಹೆಚ್ಚಿನ ಲಾಭವಾಗಿಲ್ಲ. ದೀಪಾವಳಿಗಾದರೂ ಮಂಗಳೂರು – ಬೆಂಗಳೂರು ನಡುವೆ ಹೆಚ್ಚುವರಿ ರೈಲು ಓಡಲಿ ಎನ್ನುವುದು ರೈಲ್ವೇ ಹೋರಾಟಗಾರರ ಆಗ್ರಹವಾಗಿತ್ತು.
ಸಂಸದರಿಂದ ಮನವಿ ಪತ್ರ:
ವಿಶೇಷ ರೈಲಿಗೆ ಬೇಡಿಕೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೇ ಮಹಾ ಪ್ರಬಂಧಕರಿಗೆ ಪತ್ರ ಬರೆದು, ದೀಪಾವಳಿ ಹಬ್ಬಕ್ಕೆ ಬೆಂಗಳೂರು – ಮಂಗಳೂರು ನಡುವೆ ವಿಶೇಷ ರೈಲು ಓಡಿಸುವಂತೆ ಮನವಿ ಮಾಡಿದ್ದರು. ಬೆಂಗಳೂರಿನಿಂದ ಊರಿಗೆ ಬರುವ ಸಾವಿರಾರು ಪ್ರಯಾಣಿಕರಿಗೆ ಈ ರೈಲಿನಿಂದ ಅನುಕೂಲವಾಗಲಿದೆ. ಆದ್ದರಿಂದ ಆದ್ಯತೆ ಮೇರೆಗೆ ರೈಲನ್ನು ಓಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ರೈಲ್ವೇ ಇಲಾಖೆಗೂ ಹೆಚ್ಚಿನ ಲಾಭವಾಗಲಿದೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದರು. ಪ್ರಯಾಣಿಕರು, ಹೋರಾಟಗಾರರು ಹಾಗೂ ಜನ ಪ್ರತಿನಿಧಿಗಳ ಬೇಡಿಕೆ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ವಿಶೇಷ ರೈಲು ಓಡಾಟಕ್ಕೆ ಮುಂದಾಗಿದೆ.
LATEST NEWS
ಶೋಭಾ ಕರಂದ್ಲಾಜೆ ಚಿಕನ್ ಆ್ಯಂಡ್ ಮಟನ್ ಶಾಪ್; ಪೋಟೋ ವೈರಲ್.!
ಮಂಗಳೂರು/ಕೊಪ್ಪಳ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯೋರ್ವ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಅವರ ಹೆಸರಿನಲ್ಲಿ ಚಿಕನ್ ಆ್ಯಂಡ್ ಮಟನ್ ಅಂಗಡಿ ಓಪನ್ ಮಾಡಿದ್ದಾರೆ.
ಯುವಕ ಖಾಧೀರ್ ಕಲಾಲ ಎಂಬುವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಹೆಸರಿನಲ್ಲಿ ಈ ಅಂಗಡಿ ತೆರೆದಿದ್ದಾರೆ.
ಶೋಭಾ ಕರಂದ್ಲಾಜೆ ಮೇಲಿನ ಅಭಿಮಾನಕ್ಕೆ ಈ ರೀತಿ ಹೆಸರು ಇಟ್ಟಿದ್ದೇನೆ ಎಂದು ಖಾಧೀರ್ ಕಲಾಲ ತಿಳಿಸಿದ್ದಾರೆ. 2008ರಲ್ಲಿ ಚುನಾವಣೆಗೆ ಪ್ರಚಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿದ್ದ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಆಗಿದ್ದರು. ಅವರ ರಾಜಕೀಯ ಮಾತುಗಳನ್ನು ಕೇಳಿ ಅಭಿಮಾನಿ ಆಗಿದ್ದೇನೆ ಎಂದಿದ್ದಾರೆ.
ಚಿಕನ್ ಆ್ಯಂಡ್ ಮಟನ್ ಅಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹಾಕಿಸಿರುವ ವಿಚಾರ ಸಾಕಷ್ಟು ವೈರಲ್ ಆಗಿದೆ.
ಅಪ್ಪಟ ಅಭಿಮಾನಿ ಆಗಿರುವ ಖಾಧೀರ್ ಕಲಾಲ್ ಕಳೆದ 5 ವರ್ಷಗಳ ಹಿಂದೆ ಶೋಭಾ ಕರಂದ್ಲಾಜೆ ಅವರ ಪೋಟೋವನ್ನು ಕೈಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ ಆ್ಯಂಡ್ ಚಿಕನ್ ಸೆಂಟರ್ ಹೆಸರು ಹಾಕಿಸಿದ್ದಾರೆ.
- FILM6 days ago
ಮಾಲ್ಡೀವ್ಸ್ ದ್ವೀಪದಲ್ಲಿ ಹನಿಮೂನ್..! ಜಾಲಿ ಮೂಡ್ನಲ್ಲಿ ತರುಣ್ ಸುಧೀರ್ ದಂಪತಿ
- LATEST NEWS5 days ago
‘ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!
- FILM7 days ago
ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ
- BIG BOSS5 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು