Connect with us

    LATEST NEWS

    ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!

    Published

    on

    ಮಂಗಳೂರು/ನವದೆಹಲಿ : ನವೆಂಬರ್ 8 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ . ಚಂದ್ರಚೂಡ್ ಅವರು ನಿವೃತ್ತಿಯಾಗಲಿದ್ದಾರೆ. ರಜೆಯನ್ನು ಹೊರತು ಪಡಿಸಿ ಕೇವಲ ಹದಿನೈದು ದಿನಗಳ ಕಾಲ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಹದಿನೈದು ದಿನಗಳಲ್ಲಿ ಬಾಕಿ ಉಳಿದ ಪ್ರಕರಣಗಳ ಕುರಿತಾಗಿ ಹಲವು ಪ್ರಮುಖ ತೀರ್ಪುಗಳನ್ನು ನೀಡುವ ಸಾಧ್ಯತೆ ಇದೆ.

    2022ರ ಅಕ್ಟೋಬರ್ 10 ರಂದು ಭಾರತದ ಮುಖ್ಯನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ಅವರು ಅಧಿಕಾರ ವಹಿಸಿಕೊಂಡಿದ್ದರು. ಧನಂಜಯ ಯಶವಂತ ಚಂದ್ರಚೂಡ್ ಎಂದು ಇವರ ಪೂರ್ಣ ಹೆಸರಾಗಿದ್ದು, ಮುಂಬೈ ಮೂಲದವರಾಗಿದ್ದಾರೆ.

    ಇದನ್ನೂ ಓದಿ : ಸುಳ್ಯ: ಬಾಳುಗೋಡಿನಲ್ಲಿ ಮಲಗಿದ್ದಲ್ಲೇ ವ್ಯಕ್ತಿ ಸಾ*ವು

    ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ, ಅಲಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ, ಬಾಂಬೇ ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2016 ರ ಮೇ 13 ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾಗಿದ್ದರು.

    ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರ ಅವಧಿಯಲ್ಲಿ ಕೆಲವೊಂದು ಪ್ರಮುಖ ತೀರ್ಪುಗಳನ್ನು ಕಾಯ್ದಿರಿಸಲಾಗಿದ್ದು, 8 ಪ್ರಮುಖ ಪ್ರಕರಣದ ತೀರ್ಪು ನಿವೃತ್ತಿಯ ಮೊದಲು ನೀಡುವ ಸಾಧ್ಯತೆ ಇದೆ.

    LATEST NEWS

    ವರದಕ್ಷಿಣೆಗಾಗಿ ಗೃಹಣಿಯ ಕತ್ತು ಹಿಸುಕಿ ಕೊ*ಲೆ

    Published

    on

    ಮಂಗಳೂರು/ಹುಬ್ಬಳ್ಳಿ: ತವರು ಮನೆಯಿಂದ ವರದಕ್ಷಿಣೆ ತರದ್ದಕ್ಕೆ ಗಂಡನ ಮನೆಯವರು ಗೃಹಿಣಿಯ ಕತ್ತು ಹಿಸುಕಿ ಕೊ*ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿಶಾಲ ನಗರದಲ್ಲಿ ನಡೆದಿದೆ.

    ಹೀನಾ ಕೌಸರ(28) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಎರಡೂ ವರ್ಷದ ಹಿಂದೆ ಮಹಮ್ಮದ್ ಅಜರುದ್ದೀನ್ ಎಂಬಾತನೊಂದಿಗೆ ಹೀನಾ ಮದುವೆಯಾಗಿತ್ತು. ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ನಂತರ ಮಹಮ್ಮದ್ ಕುಟುಂಬಸ್ಥರು ಹೀನಾಗೆ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
    ಈ ಹಿಂದೆ ಹಲವು ಬಾರಿ ಮಹಮ್ಮದ್ ಕುಟುಂಬಸ್ಥರಿಗೆ ಹಿರಿಯರು ಬುದ್ಧಿವಾದ ಹೇಳಿದ್ದರು. ಆದರೂ ಹೀನಾಳಿಗೆ ವರದಕ್ಷಿಣೆ ಕಿರುಕುಳ ಮಾತ್ರ ಮುಂದುವರೆದಿತ್ತು.
    ಭಾನುವಾರವೂ ವರದಕ್ಷಿಣೆ ತರುವಂತೆ ಹೀನಾಳೊಂದಿಗೆ ಮಹಮ್ಮದ್ ಕುಟುಂಬಸ್ಥರು ಜಗಳವಾಡಿದ್ದರು. ಗಂಡ ಮಹಮ್ಮದ್ ಅಜರುದ್ದೀನ್, ಅತ್ತೆ ಫರಿದಾಬಾನು, ಮಾವ ಕರೀಮ್‌ಸಾಬ್, ಹಾಗೂ ನಾದಿನಿ ಶಬ್ಬೋ ಸೇರಿ ಆಕೆಯನ್ನು ಕ*ತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಿ ಹೀನಾ ತಂದೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

     

    Continue Reading

    LATEST NEWS

    ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮ*ಹತ್ಯೆ

    Published

    on

    ಮಂಗಳೂರು/ಕೊಲಾರ: ಪತಿ ಮತ್ತು ಆತನ ಕುಟುಂಬಸ್ಥರಿ0ದ ನಿರಂತರ ವರದಕ್ಷಿಣಿ ಕಿರುಕುಳದಿಂದಾಗಿ ಬೇಸತ್ತು ಮಹಿಳೆ ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾದ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.

    ಆತ್ಮ*ಹತ್ಯೆಗೆ ಶರಣಾದ ಮಹಿಳೆಯನ್ನು ಕೊಲಾರದ ಕೆಜಿಎಫ್‌ನ ಕಂಗನಲ್ಲೂರು ಗ್ರಾಮದ ಸೌಮ್ಯ (25) ಎಂದು ಗುರುತಿಸಲಾಗಿದೆ.
    ಅ. 6ರ ಭಾನುವಾರ ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿರುವ ತಾಯಿಯ ಮನೆಗೆ ಬಂದಿದ್ದ ಸೌಮ್ಯ, ರಾತ್ರಿ ಮನೆಯಿಂದ ಹೊರ ಬಂದು ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷದ ಹಿಂದೆ ಸುನಿಲ್ ಕುಮಾರ್ ಎಂಬಾತನ ಜೊತೆ ಸೌಮ್ಯ ಮದುವೆಯಾಗಿದ್ದರು.
    ಮೃ*ತ ಮಹಿಳೆಯ ಪೋಷಕರು ಆಕೆಯ ಪತಿ ಸುನಿಲ್ ಕುಮಾರ್ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಸೌಮ್ಯ ಆತ್ಮ*ಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Continue Reading

    LATEST NEWS

    ವಿದ್ಯುತ್ ತಂತಿ ಸ್ಪರ್ಶಿಸಿ ಮಗು ಸಹಿತ ಎರಡು ಕರಡಿ ಮೃ*ತ್ಯು

    Published

    on

    ಮಂಗಳೂರು/ಹಾಸನ: ವಿದ್ಯುತ್ ತಂತಿ ಸ್ಪರ್ಶಿಸಿ 3 ಕರಡಿಗಳು ಮೃ*ತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಕಲ್ಲುಸಾಗರಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಡವಾಗಿ ಸ್ಥಳೀಯರ ಗುರುತಿಸಿದ್ದಾರೆ.


    ಹಾಸನದ ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿಗಳು ಹೆಚ್ಚಾಗಿದ್ದು, ಕಳೆದ 6 ತಿಂಗಳಲ್ಲಿ ಸುಮಾರು ಐದಾರು ಮಂದಿ ದಾಳಿ ಮಾಡಿ ಗಾಯ**ಗೊಳಿಸಿದ್ದವು.


    ಅರಣ್ಯ ಪ್ರದೇಶದ ಬಳಿ ವಿದ್ಯುತ್ ಕಂಬದಿಂದ ತಂಡಾಗಿ ಬಿದ್ದಿದ್ದ ತಂತಿ ತುಳಿದ ಹಿನ್ನಲೆ ತಾಯಿ ಮತ್ತು ಮರಿ ಕರಡಿಯ ಜೊತೆ ಗಂಡು ಕರಡಿ ಸಾವಿಗೀಡಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

    Continue Reading

    LATEST NEWS

    Trending