ಪಾಣಿಪತ್: ನಾಡಿಗೆ ಬಂದ ಚಿರತೆಯನ್ನು ಸೆರೆಹಿಡಿಯುವ ವೇಳೆ ಚಿರತೆ ಹಾಗೂ ಪೊಲೀಸರ ನಡುವೆ ಬಿಗ್ ಫೈಟ್ ನಡೆದ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಪೊಲೀಸ್ ಹಾಗೂ ಚಿರತೆ ಫೈಟ್ ವೀಡಿಯೋ ವೈರಲ್ ಆಗಿದೆ.
ಕಳೆದ ಶನಿವಾರ ರಾತ್ರಿ ಹರಿಯಾಣದ ಪಾಣಿಪತ್ ಜಿಲ್ಲೆಯ ಕಾಡಂಚಿನ ಗ್ರಾಮವೊಂದರಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆಯನ್ನು ನಡೆಸುತ್ತಿದ್ದರು.
ಈ ವೇಳೆ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಚಿರತೆ ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದೆ. ಈ ವೇಳೆ ಆತಂಕಗೊಂಡ ಚಿರತೆ ಸ್ಥಳದಲ್ಲಿ ಗುಂಪುಗೂಡಿದ್ದ ಪೊಲೀಸರ ಮೇಲೆ ಎರಗಿದೆ. ಆಗ ಚಿರತೆ ಹಾಗೂ ಪೊಲೀಸರ ನಡುವೆ ಅಕ್ಷರಶಃ ಕಾಳಗ ನಡೆದು ಹೋಗಿದೆ.
ಈ ವೀಡಿಯೋವನ್ನು ಪಾಣಿಪತ್ ಎಸ್‌ಪಿ ಶಶಾಂಕ್ ಕುಮಾರ್ ಸಾವನ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.