Connect with us

    FILM

    ವಿಚ್ಛೇದನದ ಬಗ್ಗೆ ಮೌನ ಮುರಿದ ಸ್ಟಾರ್ ಕಪಲ್…ಚಂದನ್ ಶೆಟ್ಟಿ – ನಿವೇದಿತಾ ಗೌಡ ಜಂಟಿ ಸುದ್ದಿಗೋಷ್ಟಿ ನಡೆಸಿ ಹೇಳಿದ್ದೇನು?

    Published

    on

    ಬೆಂಗಳೂರು: ವಿಚ್ಛೇದನದ ಬಳಿಕ ಮೊದಲ ಬಾರಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸುದ್ದಿಗೋಷ್ಟಿ ನಡೆಸಿದ್ದು, ಎಲ್ಲಾ ವದಂತಿಗಳಿಗೂ ಉತ್ತರ ನೀಡಿದ್ದಾರೆ. ಕೆಲವು ಊಹಾಪೋಹಗಳಿಗೆ ಉತ್ತರಿಸಿದ ಚಂದನ್ ಶೆಟ್ಟಿ ಅವರು ನಿವೇದಿತಾ ಹಾಗೂ ನಾನು ವಿಚ್ಛೇದನ ಪಡೆದಿದ್ದು ಯಾಕೆ ಅನ್ನೋ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಮೊದಲು ಮಾತನಾಡಿದ ಚಂದನ್ ಅವರು ಡಿವೋರ್ಸ್ ಪಡೆಯಲು ಬೇರೆ ಯಾವುದೇ ಕಾರಣಗಳಿಲ್ಲ. ನಾವು ಮದುವೆಯಾದ 4 ವರ್ಷಗಳಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ನಾನು ಬೆಳೆದ ರೀತಿನೇ ಬೇರೆ. ನನ್ನ ಜೀವನ ಶೈಲಿನೇ ಬೇರೆಯಾಗಿದೆ. ನಿವೇದಿತಾ ಅವರು ಜೀವನವನ್ನು ಅರ್ಥ ಮಾಡಿಕೊಂಡಿರೋ ರೀತಿಯೇ ಬೇರೆ. ನಿವಿ ಜೀವನ ಶೈಲಿ ಬೇರೆ ಇದೆ. ಈ ಬೇರೆ, ಬೇರೆ ರೀತಿ ವರ್ಷಗಳೇ ಕಳೆದರೂ ಹೊಂದಾಣಿಕೆ ಆಗಲಿಲ್ಲ. ಈ ಕಾರಣಕ್ಕೆ ದೂರಾಗಲು ಮುಂದಾದ್ವಿ ಅಷ್ಟೇ ಬೇರೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.

    ಇನ್ನು ಚಂದನ್ ಶೆಟ್ಟಿ ಮಾತನಾಡಿ, ಒಬ್ಬ ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ. ಯಾಕೆಂದರೆ ಆ ವ್ಯಕ್ತಿಯ ಮನೆಗೆ ನಾನು ಕೂಡ ಅನೇಕ ಬಾರಿ ಹೋಗಿದ್ದೇನೆ. ತುಂಬ ಒಳ್ಳೆಯ ಕುಟುಂಬ ಅವರದ್ದು. ಅವರ ಮನೆಗೆ ಹೋಗುವುದು ನನಗೂ ಖುಷಿ ಆಗುತ್ತಿತ್ತು. ಅವರ ಕಾರ್ಯಕ್ರಮಕ್ಕೆ ನಾವಿಬ್ಬರು ಅನೇಕ ಬಾರಿ ಹೋಗಿದ್ದೆವು. ಆ ವ್ಯಕ್ತಿಯ ಜೊತೆ ನಿವೇದಿತಾ ಗೌಡ ಅವರ ಹೆಸರು ಸೇರಿಸುವಂತಹ ವಿಕೃತ ಮನಸ್ಥಿತಿ ನಮ್ಮ ಕನ್ನಡಿಗರಾದ್ದಾಗಿರಬಾರದು’ ಎಂದು ಚಂದನ್​ ಶೆಟ್ಟಿ ಹೇಳಿದ್ದಾರೆ.

    ಈ ಬಗ್ಗೆ ನಿವೇದಿತಾ ಗೌಡ ಕೂಡ ಮಾತನಾಡಿದ್ದಾರೆ. ‘ಆ ರೀತಿಯ ಪೋಸ್ಟ್​ಗಳನ್ನು ನೋಡಿದಾಗ ನನಗೆ ನೋವಾಯಿತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್​. ಪ್ರತಿ ವರ್ಷ ಅವರು ನನ್ನ ಜನ್ಮದಿನಕ್ಕೆ ವಿಶ್​ ಮಾಡುತ್ತಾರೆ. ನಾನು ಕೂಡ ಅವರಿಗೆ ವಿಶ್​ ಮಾಡುತ್ತೇನೆ. ಈ ವರ್ಷವೇ ಈ ರೀತಿ ವದಂತಿ ಹಬ್ಬಿದ್ದು ಯಾಕೆ ಅಂತ ಗೊತ್ತಿಲ್ಲ. ಇದರಿಂದ ಅವರ ಫ್ಯಾಮಿಲಿಯವರಿಗೆ ತುಂಬ ನೋವಾಗುತ್ತದೆ. ಲೈಕ್​ಗಾಗಿ ಈ ರೀತಿ ಪೋಸ್ಟ್​ ಮಾಡಬೇಡಿ’ ಎಂದು ನಿವೇದಿತಾ ಗೌಡ ಹೇಳಿದ್ದಾರೆ.

    ಮಗು ಪಡೆಯುವ ವಿಚಾರದಲ್ಲಿ ನಾನು ನಿವೇದಿತಾಗೆ ಒತ್ತಾಯ ಮಾಡಿದ್ದೇನೆ ಎಂಬ ವದಂತಿ ಕೂಡ ಹಬ್ಬಿದೆ. ಅದು ಸಹ ನಿಜವಲ್ಲ. ನಾನು ಒತ್ತಾಯ ಮಾಡಿಲ್ಲ. ಮಕ್ಕಳ ವಿಚಾರದಲ್ಲಿ ನಿವೇದಿತಾ ಕೂಡ ನಿರಾಕರಿಸಿಲ್ಲ’ ಎಂದು ಚಂದನ್​ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಲವು ವದಂತಿಗಳಿಗೆ ತೆರೆ ಎಳೆದಿರುವ ಚಂದನ್ ಹಾಗೂ ನಿವೇದಿತಾ ಅವರು ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಏನೂ ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ ವಿಚ್ಛೇದನ ಬೇಕಿತ್ತು. ಈ ಕಾರಣಕ್ಕೆ ನಾವು ಬೇರೆ, ಬೇರೆ ಆಗಿದ್ದೇವೆ. ಇಬ್ಬರು ಒಮ್ಮತದಿಂದ ದೂರ ಆಗಿದ್ದೀವಿ ಎಂದು ಸುದ್ದಿಗೋಷ್ಟಿಯಲ್ಲಿ ಇಬ್ಬರು ಸ್ಪಷ್ಟಪಡಿಸಿದ್ದಾರೆ.

    FILM

    ದರ್ಶನ್ ಬೆಂಬಲಕ್ಕೆ ನಿಂತ ಪರಭಾಷಾ ನಟ; ಏನಂದ್ರು ನಾಗಶೌರ್ಯ?

    Published

    on

    ಮಂಗಳೂರು/ ಬೆಂಗಳೂರು : ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಆರೋಪ ಎದುರಿಸುತ್ತಿರೋ ದರ್ಶನ್ ಜೈಲು ಪಾಲಾಗಿದ್ದಾರೆ. ಇತ್ತ ಅನೇಕ ನಟ – ನಟಿಯರು ದರ್ಶನ್ ಪರವಾಗಿ ಮಾತನಾಡುತ್ತಿದ್ದಾರೆ. ದರ್ಶನ್ ಕೊ*ಲೆ ಮಾಡುವಂತವರಲ್ಲ ಎಂಬುದಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ನಟಿ ಭಾವನಾ ರಾಮಣ್ಣ, ಅದೇನೇ ಆಗ್ಲಿ, ಐ ಸ್ಟ್ಯಾಂಡ್ ವಿತ್ ದರ್ಶನ್. ಸಂತೋಷದಲ್ಲಿ ಜೊತೆಗಿದ್ದು ದುಖದಲ್ಲಿ ಇಲ್ಲ ಅನ್ನೋ ರೀತಿ ಅಲ್ಲ. ದರ್ಶನ್ ಅವರು ಹೀರೋ ಆಗೋಕ್ಕಿಂತ ಮುಂಚೆನೆ ನನಗೆ ಗೊತ್ತು. ಅವರು ನನಗೆ ಗೊತ್ತಿರೋರು…ಸಾಕಷ್ಟು ವರ್ಷದಿಂದ ಜೊತೇಲಿ ಇರೋರು ನಾವು ಎಂದಿದ್ದಾರೆ.


    ಈಗ ಪರಭಾಷಾ ನಟ ನಾಗ ಶೌರ್ಯ ದರ್ಶನ್ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ದರ್ಶನ್ ಅಣ್ಣ ತಮ್ಮ ಕೆಟ್ಟ ದುಃಸ್ವಪ್ನದಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ ಎಂದಿದ್ದಾರೆ.

    ಏನಂದ್ರು ನಾಗ ಶೌರ್ಯ ?

    ನನ್ನ ಹೃದಯವು ಮೃ*ತರ ಕುಟುಂಬಕ್ಕೆ ಮರುಗುತ್ತದೆ ಮತ್ತು ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ.

    ಆದಾಗ್ಯೂ, ಜನರು ಈ ವಿಷಯದ ಬಗ್ಗೆ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ನಂಬಲಾಗದಷ್ಟು ನಿರಾಶಾದಾಯಕವಾಗಿದೆ. ದರ್ಶನ್ ಅಣ್ಣ ತಮ್ಮ ಕೆಟ್ಟ ದುಃಸ್ವಪ್ನದಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್ ಅವರನ್ನು ಚೆನ್ನಾಗಿ ಬಲ್ಲವರಿಗೆ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಗುಣ ತಿಳಿದಿದೆ. ಅವರು ಯಾವಾಗಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಮತ್ತು ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ.
    ನನ್ನ ಕರಾಳ ಭಯದಲ್ಲಿಯೂ ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿದೆ ಮತ್ತು ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ ಎಂದು ನಂಬುತ್ತೇನೆ.

    ಇದನ್ನೂ ಓದಿ : ಜೈಲಿನಿಂದಲೇ ದರ್ಶನ್‌ನಿಂದ ಅಭಿಮಾನಿಗಳಿಗೆ ವಿಶೇಷ ಮನವಿ

    ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಸವಾಲಿನ ಅವಧಿಯಲ್ಲಿ ಅವರು ಗೌಪ್ಯತೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ತನ್ನ ಸಮಗ್ರತೆ ಮತ್ತು ಸಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ನಿರಾಪರಾಧಿ ಎಂದು ಸಾಬೀತಾಗುತ್ತಾರೆ. ನಿಜವಾದ ಅಪರಾಧಿಯನ್ನು ನ್ಯಾಯಾಂಗಕ್ಕೆ ತರಲಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ನಾಗಶೌರ್ಯ ಬರೆದುಕೊಂಡಿದ್ದಾರೆ.

    #standbydarshan #justiceforall ಎಂದು ಹ್ಯಾಶ್ ಟ್ಯಾಗ್ ನ್ನೂ ನಟ ಬಳಸಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿದ್ದಾರೆ ದರ್ಶನ್:

    ರೇಣುಕಾಸ್ವಾಮಿ ಕೊ*ಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

    Continue Reading

    FILM

    ಜೈಲಿನಿಂದಲೇ ದರ್ಶನ್‌ನಿಂದ ಅಭಿಮಾನಿಗಳಿಗೆ ವಿಶೇಷ ಮನವಿ

    Published

    on

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನು ದರ್ಶನ್‌ನನ್ನು ನೋಡಲು ಅವರ ಅಭಿಮಾನಿಗಳ ದಂಡು ಜೈಲಿನ ಬಳಿ ದೌಡಾಯಿಸುತ್ತಿದ್ದಾರೆ. ನಿತ್ಯವೂ ಜೈಲಿನ ಬಳಿ ಅಭಿಮಾನಿಗಳು ಬಂದು ದರ್ಶನ್‌ ಪರ ಘೋಷಣೆಗಳನ್ನು ಕೂಗುತ್ತಿದ್ದರು.

    ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷಚೇತನ ಯುವತಿ ದರ್ಶನ್‌ ಭೇಟಿಗಾಗಿ ಜೈಲಿನ ಬಳಿ ಬಂದಿದ್ದಳು. ದರ್ಶನ್ ನೀಡಿದ್ದ ರಿಕ್ಷಾದಲ್ಲಿ ಪೋಷಕರ ಜೊತೆ ದರ್ಶನ್‌ನನ್ನು ನೋಡಲು ಬಂದಿದ್ದರು. ಅನ್ನ, ನೀರು ಬಿಟ್ಟು ದರ್ಶನ್‌ನನ್ನು ನೋಡಲು ಹಠ ಮಾಡಿದ್ದಾಳೆ. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್‌ ಎಂಬ ವಿಶೇಷಚೇತನ ಯುವಕ ಗುಲ್ಬರ್ಗಾದಿಂದ ತ್ರಿ ವ್ಹೀಲರ್ ನಲ್ಲಿ ದರ್ಶನ್‌ನನ್ನು  ಭೇಟಿ ಮಾಡಲು ಬಂದಿದ್ದ ಎನ್ನಲಾಗಿದೆ.

    Read More..; ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಯ ಬಂಧನ

    ಈ ಬಗ್ಗೆ ದರ್ಶನ್ ಬೇಸರಗೊಂಡಿದ್ದಾರೆ. ಜೈಲಿನಲ್ಲೇ ಕುಳಿತು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನೆ ಮಾಡಿದ್ದಾರೆ. ‘ಯಾರೂ ಜೈಲಿನ ಬಳಿ ಬರಬೇಡಿ’ ಎಂದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಜೈಲಿನ ಬಳಿ ಬಂದು ನನ್ನ ಭೇಟಿಗಾಗಿ ಕಾಯುವುದು ಬೇಡ, ನಿಮ್ಮ ಸಮಯವನ್ನು ವ್ಯರ್ಥ ಮಾಡುವುದು ಬೇಡ ಎಂದು ದರ್ಶನ್ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.  ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ ಹೀಗಾಗಿ ಸುಮ್ಮನೆ ಬಂದು ಸಮಯ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    Continue Reading

    FILM

    ಟಿಆರ್ ಪಿನಲ್ಲಿ ಟಾಪ್ 10 ರೊಳಗಿನ ಸ್ಥಾನ ಗಿಟ್ಟಿಸಿಕೊಂಡ ಹೊಸ ಧಾರಾವಾಹಿ; ನಂಬರ್ 1 ಸ್ಥಾನ ಯಾವುದಕ್ಕೆ?

    Published

    on

    ಮಂಗಳೂರು : ಧಾರಾವಾಹಿಗಳನ್ನು ಇಷ್ಟ ಪಡುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಧಾರಾವಾಹಿ ಪ್ರಿಯವಾದುದು. ನಿತ್ಯ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ ಬಾರಿ ಟಿ ಆರ್ ಪಿ ಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್ 1 ಸ್ಥಾನದಲ್ಲಿದೆ. ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ನಿತ್ಯ ಹೊಸ ಹೊಸ ತಿರುವಿನೊಂದಿಗೆ ಗಮನ ಸೆಳೆಯುತ್ತಿರುತ್ತದೆ.


    ಇನ್ನು ಎರಡನೇ ಸ್ಥಾನದಲ್ಲಿ, ‘ಲಕ್ಷ್ಮೀ ನಿವಾಸ’ ಇದೆ. ತುಂಬು ಸಂಸಾರದ ಕಥೆ ಹೊಂದಿರುವ ಲಕ್ಷ್ಮೀ ನಿವಾಸವನ್ನು ಆರಂಭದಿಂದಲೇ ಜನ ಮೆಚ್ಚಿಕೊಂಡಿದ್ದಾರೆ.


    ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ವಿದೆ. ಇದು ಈ ಧಾರಾವಾಹಿಗೆ ಭರ್ಜರಿ ಟಿಆಆರ್​ಪಿ ಸಿಕ್ಕಿದೆ.

    ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.


    ಇನ್ನು ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ.

    Continue Reading

    LATEST NEWS

    Trending