MANGALORE
ಸಿಇಟಿ ಪರೀಕ್ಷೆ: ಎಕ್ಸ್‌ಪರ್ಟ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಅಮೋಘ ಸಾಧನೆ
Published
2 years agoon
By
Adminಮಂಗಳೂರು: ನಗರದ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯ ವಿಭಿನ್ನ ವಿಭಾಗಗಳ ಮೊದಲ 10 ರ‍್ಯಾಂಕ್‍ಗಳಲ್ಲಿ ಎರಡನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೊದಲ 50ರಲ್ಲಿ 20 ರ‍್ಯಾಂಕ್ ಹಾಗೂ 100ರಲ್ಲಿ 49 ರ‍್ಯಾಂಕ್‍ಗಳು ಎಕ್ಸ್‌ಪರ್ಟ್ ವಿದ್ಯಾರ್ಥಿಗಳ ಪಾಲಾಗಿವೆ. ಅದಿತ್ಯ ಕಾಮತ್ ಅಮ್ಮೆಂಬಳ ಅವರು ಬಿಎನ್‍ವೈಎಸ್‍ನಲ್ಲಿ 7,
ಪಶು ವೈದ್ಯಕೀಯದಲ್ಲಿ 17, ಬಿ ಫಾರ್ಮಾದಲ್ಲಿ 34ನೇ ರ‍್ಯಾಂಕ್ ಗಳಿಸಿದ್ದು ಪ್ರಣವ್ ಎಸ್ ಅವರು ಬಿಎನ್‍ವೈಎಸ್‍ನಲ್ಲಿ 10, ಪಶುವೈದ್ಯಕೀಯದಲ್ಲಿ 14, ಬಿ ಫಾರ್ಮಾದಲ್ಲಿ 18,
ಕೃಷಿಯಲ್ಲಿ 60ನೇ ರ‍್ಯಾಂಕ್ ಗಳಿಸಿದ್ದಾರೆ. ಮುಹಮ್ಮದ್ ರುಮೈಜ್ ಎಂಜಿನಿಯರಿಂಗ್‍ನಲ್ಲಿ 22, ಅಮರೇಗೌಡ ಪಶುವೈದ್ಯಕೀಯದಲ್ಲಿ 23, ಬಿ ಫಾರ್ಮಾದಲ್ಲಿ 31, ಬಿಎನ್‍ವೈಎಸ್‍ನಲ್ಲಿ 53, ಕೃಷಿಯಲ್ಲಿ 61, ವೃಷಭ್ ವಿ.ಜವಳಿ ಪಶುವೈದ್ಯಕೀಯದಲ್ಲಿ 26,
ಬಿ ಫಾರ್ಮಾದಲ್ಲಿ 36, ಬಿಎನ್‍ವೈಎಸ್‍ನಲ್ಲಿ 49, ಅನುಜ್ಞಾ ಕೆ ಬಿಎನ್‍ವೈಎಸ್‍ನಲ್ಲಿ 29, ಕೃಷಿಯಲ್ಲಿ 59, ಪಶುವೈದ್ಯಕೀಯದಲ್ಲಿ 62, ಬಿ ಫಾರ್ಮಾದಲ್ಲಿ 95, ಸ್ಕಂದ ಶಾನಭಾಗ್ ಪಶುವೈದ್ಯಕೀಯದಲ್ಲಿ 29, ಬಿ ಫಾರ್ಮಾದಲ್ಲಿ 35, ಕೃಷಿಯಲ್ಲಿ 97,
ಪವನ್ ಎಸ್. ಧೂಳಶೆಟ್ಟಿ ಕೃಷಿಯಲ್ಲಿ 30, ಬಿಎನ್‍ವೈಎಸ್‍ನಲ್ಲಿ 68, ಪಶುವೈದ್ಯಕೀಯದಲ್ಲಿ 91, ವಿಶಾಲ್ ಎಸ್. ಕೃಷಿಯಲ್ಲಿ 39, ಸಾತ್ವಿಕ್ ಎ.ಎಸ್. ಕೃಷಿಯಲ್ಲಿ 40, ಪಶುವೈದ್ಯಕೀಯದಲ್ಲಿ 50, ಬಿಎನ್‍ವೈಎಸ್‍ನಲ್ಲಿ 52, ಬಿ ಫಾರ್ಮಾದಲ್ಲಿ 59ನೇ ರ‍್ಯಾಂಕ್ ಗಳಿಸಿದ್ದಾರೆ.
ಸ್ನೇಹಲ್ ಮಹಿಮಾ ಕ್ಯಾಸ್ಟಲಿನೊ ಕೃಷಿಯಲ್ಲಿ 44, ಬಿಎನ್‍ವೈಎಸ್‍ನಲ್ಲಿ 85, ಶ್ರೀಸಂಪತ್ ಎಸ್.ಡಿ. ಪಶುವೈದ್ಯಕೀಯದಲ್ಲಿ 49, ಬಿಎನ್‍ವೈಎಸ್‍ನಲ್ಲಿ 51, ಬಿ ಫಾರ್ಮಾದಲ್ಲಿ 60, ಅಭಿಷೇಕ್ ಬಿ. ವೈ. ಕೃಷಿಯಲ್ಲಿ 52,
ತುಬಾಚಿ ಕೃತಿಕ್ ಚನ್‍ಗೌಡ ಬಿಎನ್‍ವೈಎಸ್‍ನಲ್ಲಿ 57, ಪಶುವೈದ್ಯಕೀಯದಲ್ಲಿ 73, ಸಮರ್ಥ್ ಎಸ್. ಬೆಟಗೇರಿ ಬಿಎನ್‍ವೈಎಸ್‍ನಲ್ಲಿ 59, ಪಶುವೈದ್ಯಕೀಯದಲ್ಲಿ 65, ಬಿ ಫಾರ್ಮಾದಲ್ಲಿ 81, ನಮಿತಾ ಎನ್. ಬಿಎನ್‍ವೈಎಸ್‍ನಲ್ಲಿ 71,
ಹಿಮಾಂಶು ಎಲ್. ಕೃಷಿಯಲ್ಲಿ 72, ಸೂರ್ಯದೀಪ್ ಎಸ್. ಕೃಷಿಯಲ್ಲಿ 82, ಬಿಎನ್‍ವೈಎಸ್‍ನಲ್ಲಿ 93, ಭರತ್ ಕುಮಾರ್ ವೈ ಆರ್ ಕೃಷಿಯಲ್ಲಿ 84, ಯಶಸ್ವಿನಿ ಎಸ್. ಬಾಳಪ್ಪನವರ್ ಬಿಎನ್‍ವೈಎಸ್‍ನಲ್ಲಿ 87, ಪಶುವೈದ್ಯಕೀಯದಲ್ಲಿ 92, ಅಭಿ ಎಸ್. ಕುಮಾರ್ ಕೃಷಿಯಲ್ಲಿ 90, ದಿಶಾಂತ್ ಕೆ. ಪಶುವೈದ್ಯಕೀಯದಲ್ಲಿ 98ನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
DAKSHINA KANNADA
ಖ್ಯಾತ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ ಲವ್ ಸ್ಟೋರಿ ಗೊತ್ತಾ ??
Published
3 days agoon
20/11/2024ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೀಡಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ದಂಪತಿಗಳಿಗೆ ಗೌರವಾರ್ಪಣೆ ಮಾಡಲಾಯಿತು.
ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಈಗ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಸುದ್ದಿಯಾಗಲು ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿರುವುದು. ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡ ಟ್ರೋಫಿ ಗೆಲ್ಲಲು ವಿಶೇಷ ಹರಕೆ ಹೊತ್ತಿದ್ದರು. ಅದಕ್ಕಾಗಿ, ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಸೂರ್ಯಕುಮಾರ್ ಯಾದವ್ಗೆ ವಿಶೇಷ ನಂಟು ಬೆಳೆಯಲು ಮುಖ್ಯ ಕಾರಣ ಪತ್ನಿ ದೇವಿಶಾ ಶೆಟ್ಟಿ.
ದೇವಿಶಾ ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬೈನಲ್ಲಿ ಹುಟ್ಟಿ ಬೆಳೆದ ದೇವಿಶಾ ಪೊದ್ದಾರ್ ಪದವಿ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ್ದು, ಸೂರ್ಯಕುಮಾರ್ ಯಾದವ್ ಕೂಡ ಅಲ್ಲಿಯೇ ಓದಿದ್ದರು. 2012 ರಲ್ಲಿ ಕಾಲೇಜ್ನಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಸೂರ್ಯಕುಮಾರ್ ಯಾದವ್, ದೇವಿಶಾ ಶೆಟ್ಟಿ ಅವರನ್ನು ಮೊದಲು ನೋಡಿದ್ದಾರೆ. ಇದೇ ವೇಳೆ ದೇವಿಶಾ ಮಾಡಿದ ನೃತ್ಯಕ್ಕೆ ಫಿದಾ ಆಗಿದ್ದರು. ಸೂರ್ಯಕುಮಾರ್ ಸೀನಿಯರ್ ಆಗಿದ್ದು, ದೇವಿಶಾ ಜೂನಿಯರ್ ವಿದ್ಯಾರ್ಥಿನಿ.
ನಿಧಾನವಾಗಿ ಆವರಿಬ್ಬರ ಸ್ನೇಹ ಬೆಳೆದಿದ್ದು, ಬಳಿಕ ಪ್ರೇಮವಾಗಿ ಬದಲಾಗಿದೆ. ಸೂರ್ಯನ ಪ್ರೇಮ ನಿವೇದನೆಯನ್ನು ದೇವಿಶಾ ಶೆಟ್ಟಿ ಒಪ್ಪಿಕೊಂಡಿದ್ದರು. ಅಲ್ಲದೆ 2012 ರಿಂದ 2016 ರವರೆಗೆ ಇಬ್ಬರು ಪ್ರೇಮಪಕ್ಷಿಗಳಾಗಿ ತಿರುಗಾಡಿದ್ದು, 2016 ರಲ್ಲಿ ತಮ್ಮ ಪ್ರೇಮ ವಿಚಾರವನ್ನು ಮನೆಯವರಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ, ಅದಾಗಲೇ ಐಪಿಎಲ್ ಮೂಲಕ ಸದ್ದು ಮಾಡಿದ್ದ ಸೂರ್ಯನನ್ನು ದೇವಿಶಾ ಕುಟುಂಬದವರು ಒಪ್ಪಿದ್ದು, ಇತ್ತ ಸೂರ್ಯಕುಮಾರ್ ಯಾದವ್ ಅವರ ಕುಟುಂಬದವರಿಗೂ ದೇವಿಶಾ ಇಷ್ಟವಾಗಿದ್ದರು.
ಮೇ 29, 2016 ರಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿದ್ದು, ದಕ್ಷಿಣ ಭಾರತದ ಸಂಪ್ರದಾಯದಂತೆ ಜುಲೈ 7, 2016 ರಂದು ವಿವಾಹವಾದಗಿದ್ದು. ಇದೀಗ ಇಬ್ಬರು ಮಾದರಿ ದಂಪತಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮುಂಬೈನಲ್ಲೇ ಬೆಳೆದರೂ ತವರಿನ ನಂಟು ಬಿಟ್ಟುಕೊಳ್ಳದ ದೇವಿಶಾ ಶೆಟ್ಟಿ ಪತಿಯ ಜೊತೆ ಆಗಾಗ ತುಳುನಾಡಿಗೆ ಬರುವ ಮೂಲಕ ಸುದ್ದಿಯಾಗುತ್ತಿದ್ದಾರೆ.
LATEST NEWS
ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ಉಪನ್ಯಾಸಕಿ ಮೃ*ತ್ಯು
Published
1 week agoon
14/11/2024By
NEWS DESK2ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿಯೋರ್ವರು ಮೃ*ತಪಟ್ಟಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಮೃ*ತಪಟ್ಟವರು. ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.
ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಗ್ಲೋರಿಯಾ ಅವರಿಗೆ ಫುಡ್ ಅಲರ್ಜಿ(ಅನಾಫಿಲ್ಯಾಕ್ಟಿಕ್ ರಿಯಾಕ್ಷನ್) ಸಮಸ್ಯೆ ಇತ್ತು. ಇದರಿಂದಾಗಿ ಈ ಹಿಂದೆಯೂ ಸ್ವಲ್ಪ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಬಳಿಕ ಚೇತರಿಸಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನಿಧನರಾದ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ ಅವರ ಅಂಗಾಂಗಳನ್ನು ಆಸ್ಪತ್ರೆಯಲ್ಲಿ ವಿವಿಧ ಸ್ವೀಕೃತದಾರರಿಗೆ ರವಾನಿಸಲಾಗಿದೆ. ಮೃ*ತರ ಕುಟುಂಬದ ಒಪ್ಪಿಗೆಯಂತೆ ಅಂಗಾಂಗ ದಾನ ಮಾಡಲಾಯಿತು.
DAKSHINA KANNADA
ಅ*ಪ್ರಾಪ್ತ ವಯಸ್ಕನ ಮೇಲೆ ಅ*ಸ್ವಾಭವಿಕ ಲೈಂ*ಗಿಕ ಕ್ರಿಯೆ ಆರೋಪ; ಶಿಕ್ಷಕ ದೋಷಮುಕ್ತ
Published
1 week agoon
13/11/2024ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಮೇಲೆ ಕಾಲೇಜಿನಲ್ಲಿ ಅ*ಸ್ವಾಭಾವಿಕ ಲೈಂ*ಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿದ್ದ ಕಾಲೇಜಿನ ಉಪನ್ಯಾಸಕರೊಬ್ಬರನ್ನು ದೋಷ ಮುಕ್ತಗೊಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದೀರ್ಘ ತನಿಖೆಯ ಬಳಿಕ ನೈಜ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಶಿಕ್ಷನನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ಸೊ) ದೋಷಮುಕ್ತ ಗೊಳಿಸಿದೆ.
ಏನಿದು ಪ್ರಕರಣ ?
‘ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನೃತ್ಯ ಅಭ್ಯಾಸ ಮಾಡುತ್ತಿದ್ದಾಗ ಉಪನ್ಯಾಸಕ ಕಾರ್ತಿಕ್, ನೋಟ್ಸ್ ನೋಡುವ ನೆಪದಲ್ಲಿ ಅ*ಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಕರೆಸಿಕೊಂಡಿದ್ದರು. ನಂತರ ದೈಹಿಕ ಶಿಕ್ಷಕರ ಕೊಠಡಿಗೆ ಕರೆದೊಯ್ದು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ಆಮಿಷವೊಡ್ಡಿ ಬಟ್ಟೆ ಕ*ಳಚಿ ಅ*ಸ್ವಾಭಾವಿಕ ಲೈಂ*ಗಿಕ ಕ್ರಿಯೆ ನಡೆಸಿದ್ದರು. ನಂತರವೂ ಹಲವು ಬಾರಿ ಅ*ಸ್ವಾಭಾವಿಕ ಲೈಂ*ಗಿಕ ಕ್ರಿಯೆ ನಡೆಸಿದ್ದರು’ ಎಂದು ಆ*ರೋಪಿಸಿ ಅ*ಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ದೂರು ನೀಡಿದ್ದ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ್ದ ಸಹಾಯಕ ಪೊಲೀಸ್ ಆಯುಕ್ತ ಪಿ. ಎ. ಹೆಗಡೆ ಮತ್ತು ಎಸ್.ಮಹೇಶ್ ಕುಮಾರ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ : ಉಜಿರೆ: ಕಬಡ್ಡಿ ಕ್ರೀಡಾಪಟುವಾಗಿದ್ದ ಕಾಲೇಜು ವಿದ್ಯಾರ್ಥಿ ಅಸೌಖ್ಯದಿಂದ ಮೃ*ತ್ಯು
‘ಪರೀಕ್ಷೆಗಳಲ್ಲಿ ಅತ್ಯಂತ ಕಡಿಮೆ ಅಂಕಗಳಿಸಿದ್ದನ್ನು ಹಾಗೂ ಈ ಸಲುವಾಗಿ ಆರೋಪಿ ಉಪನ್ಯಾಸಕರು ಪೋಷಕರನ್ನು ಕಾಲೇಜಿಗೆ ಹಲವು ಬಾರಿ ಕರೆಸಿದ್ದನ್ನು ವಿದ್ಯಾರ್ಥಿಯು ನ್ಯಾಯಾಲಯದಲ್ಲಿ ಸಾಕ್ಷ್ಯಗಳ ವಿಚಾರಣಾ ಸಮಯದಲ್ಲಿ ಒಪ್ಪಿಕೊಂಡಿದ್ದ. ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿದ ಪ್ರಕರಣ ಸಂಬಂಧ ಪೋಷಕರನ್ನು ಕಾಲೇಜಿಗೆ ಕರೆಸಿದ್ದನ್ನೂ ಒಪ್ಪಿಕೊಂಡಿದ್ದ. ವಿದ್ಯಾರ್ಥಿಯನ್ನು ಪೊಲೀಸರು ಡ್ರ*ಗ್ಸ್ ಸೇವನೆ ವಿಚಾರವಾಗಿ ವಿಚಾರಣೆ ಮಾಡಿ, ಎಚ್ಚರ ನೀಡಿದ ಕುರಿತು ಕಾಲೇಜಿನ ಪ್ರಾಂಶುಪಾಲರು ನ್ಯಾಯಾಲದಲ್ಲಿ ಹೇಳಿಕೆ ನೀಡಿದ್ದರು. ವಿದ್ಯಾರ್ಥಿ ಡ್ರ*ಗ್ಸ್ ಸೇವನೆ ಮಾಡಿದ ಬಗ್ಗೆ ಆರೋಪಿ ಉಪನ್ಯಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಹಗೆಯಿಂದ ವಿದ್ಯಾರ್ಥಿಯು ಕತೆ ಕಟ್ಟಿ ಉಪನ್ಯಾಸಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ’ ಎಂದು ಆರೋಪಿ ಪರ ವಕೀಲರಾದ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿ ಸಾಬೀತುಪಡಿಸಿದ್ದರು.
LATEST NEWS
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
ಹೊಸ ಟ್ರೆಂಡ್ನ ಪ್ಯಾಂಟ್ ಧರಿಸಿದ ಯುವಕ; ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ
ಕದ್ರಿ ಪಾರ್ಕ್ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್ನಿಂದ ಲಾಂಛನ ಬಿಡುಗಡೆ
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS6 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ