Connect with us

    LATEST NEWS

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ Z ಕೆಟಗರಿ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ

    Published

    on

    ನವದೆಹಲಿ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ರಾಷ್ಟ್ರದ ಗಮನಸೆಳೆದಿದ್ದ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೇಂದ್ರ ಸರ್ಕಾರ ‘Z’ ಕೆಟಗರಿ ಭದ್ರತೆ ಒದಗಿಸಿದೆ.

    ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶ ಹೊರಡಿಸಿದೆ. ಗುಪ್ತಚರ ಇಲಾಖೆಯ ಇತ್ತೀಚಿನ ಬೆದರಿಕೆ ವರದಿಯ ನಂತರ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

    ರಾಜ್ಯಪಾಲರು ಅಧಿಕಾರ ಸ್ವೀಕರಿಸಿದಾಗಲೇ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಆ ಕಾರನ್ನು ವಾಪಸ್ ಕಳುಹಿಸಿದ್ದರು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ರಾಜ್ಯದಲ್ಲಿ ಕೆಲವು ಕಡೆ ಪ್ರತಿಭಟನೆಗಳು ನಡೆದಿತ್ತು. ಈ ಪ್ರತಿಭಟನೆಯ ನಂತರ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು.

    ಇದನ್ನೂ ಓದಿ : ಕೋವಿಡ್‌ ಲಸಿಕೆ ಅಡ್ಡಪರಿಣಾಮಗಳ ತನಿಖೆಗೆ ಮನವಿ- ಅರ್ಜಿ ವಜಾಗೊಳಿಸಿದ ಸುಪ್ರೀಂ

    ಜುಲೈ 2021 ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ 13 ನೇ ರಾಜ್ಯಪಾಲರಾಗಿದ್ದಾರೆ. ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ವ್ಯಕ್ತಿ. ಗೆಹ್ಲೋಟ್ ಅವರು 2014 ರಿಂದ 2021 ರವರೆಗೆ ಕೇಂದ್ರ  ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. ರಾಜ್ಯಸಭೆಯಲ್ಲಿ ಸಭಾನಾಯಕರಾಗಿಯೂ ಸೇವೆ ಸಲ್ಲಿಸಿದ್ದು, ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.

     

    LATEST NEWS

    ಮೊದಲ ರಾತ್ರಿ ವಿಡಿಯೋ ವೈರಲ್; ಪತಿಯಿಂದ ಪತ್ನಿಗೆ ಬ್ಲ್ಯಾಕ್‌ಮೇಲ್…ಏನಿದು ಪ್ರಕರಣ ?

    Published

    on

    ಮಂಗಳೂರು/ರಾಯಚೂರು: ಮೊದಲ ರಾತ್ರಿಯ ವಿಡಿಯೋ ಮಾಡಿ ಇಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ರಾಯಚೂರಿನ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಆರೋಪ ಕೇಳಿಬಂದಿದೆ.

    ಈ ಕುರಿತು ರಾಯಚೂರು ಜಿಲ್ಲೆ ಮಾನ್ವಿ ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

    ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡಿರುವ ಪತಿ, ತನ್ನ ವಿರುದ್ಧ ಮಾತನಾಡಿದರೆ ಖಾಸಗಿ ಕ್ಷಣದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಾನ್ವಿ ವಿಭಾಗದ ಜೆಸ್ಕಾಂನಲ್ಲಿ ಮೇಲ್ವಿಚಾರಕ ಹುದ್ದೆಯಲ್ಲಿರುವ ಗುರುರಾಜ್ ಎಂಬವರ ವಿರುದ್ಧ ದೂರು ದಾಖಲಾಗಿದೆ.

    ಮದುವೆಯ ಹಿನ್ನಲೆ :

    ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಗುರುರಾಜ್​ನನ್ನು ನಂಬಿ ಮದುವೆಯಾಗಿದ್ದಾಳೆ. ಗುರುರಾಜ್ ತನ್ನ ಚಾಲಕನನ್ನು ಬಳಸಿಕೊಂಡು ಸಾಕಷ್ಟು ಜನರಿಗೆ ಪತ್ನಿಯ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಕೆಲವು ಮಂದಿ ಬೇರೆ ಹೆಣ್ಣುಮಕ್ಕಳಿಗೂ ಇದೇ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಮತ್ತೊಬ್ಬನ ಬಳಿ ಹೆಂಡತಿಯನ್ನು ಕಳುಹಿಸಲು ಮುಂದಾಗಿದ್ದ ಭೂಪ:

    ತಮಗೆ ಯಾರ ಬಳಿ ಕೆಲಸ ಆಗತ್ತದೆಯೋ ಅಂಥವರ ಬಳಿ ಹೋಗು ಎಂದು ಗುರುರಾಜ್ ಪತ್ನಿಗೆ ಟಾರ್ಚರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿಗೆ ಅಶ್ಲೀಲವಾಗಿ ವಿಡಿಯೋ ಕಾಲ್ ಮಾಡಿರುವ ಸಾಕ್ಷಿಗಳಿವೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ. ಜತೆಗೆ, ಈಗಾಗಲೇ ಪತಿ ಗುರುರಾಜ್ ನಾಲ್ಕು ಮದುವೆ ಆಗಿದ್ದಾರೆ. ತಾನಗೆ ಕೋಟಿಗಟ್ಟಲೇ ಲಾಭ ಬರತ್ತದೆ ಎಂದು ನಂಬಿಸಿ ಮದುವೆಯಾಗಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

    ಸಾಕಷ್ಟು ಬಾರಿ ಪತ್ನಿ ಮೇಲೆ ದಾಳಿ ಮಾಡಿದ್ದು, ರಕ್ಷಣೆಯ ಕೋರಿಕೆ ಕುರಿತು ಮಾನ್ವಿ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

    Continue Reading

    LATEST NEWS

    ಆಳ್ವಾಸ್ ನಲ್ಲಿ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ ಉದ್ಘಾಟನೆ

    Published

    on

    ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ವತಿಯಿಂದ ವಿದ್ಯಾಗಿರಿಯ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ನಿರ್ಮಾಣಗೊಂಡಿರುವ ಕೀರ್ತಿಶೇಷ ಲೋಕನಾಥ ಬೋಳಾರ್ ವೆಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರವು ಸೋಮವಾರ ಉದ್ಘಾಟನೆಗೊಂಡಿತು.

    ಕೇಂದ್ರವನ್ನು ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಂಪಿಯನ್ ಸತೀಶ್ ರೈ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಸ್ಪಷ್ಟತೆ ಇರಲಿ. ಭವಿಷ್ಯದ ಗುರಿಯನ್ನು ಈಡೇರಿಸಲು ಇಂದೇ ಶ್ರಮವಹಿಸಿ ಹೆಜ್ಜೆ ಇಡಬೇಕು. ಪ್ರತಿ ಕ್ರೀಡಾಪಟುವಿನಲ್ಲೂ ಶಿಸ್ತು, ಸಂಯಮ, ಸಮಯಪಾಲನೆ ಅತ್ಯವಶ್ಯಕ. ಕ್ರೀಡಾ ಮನೋಭಾವದಿಂದ ಕ್ರೀಡೆ, ಸಂಸ್ಥೆ ಹಾಗೂ ದೇಶಕ್ಕೂ ಹೆಮ್ಮೆಯ ವಿದ್ಯಾರ್ಥಿಗಳಾಬೇಕು ಎಂದು ನುಡಿದರು.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಇಚ್ಛಾ ಶಕ್ತಿ ಇದ್ದೆ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಂಡರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನುಡಿದರು.

    ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಉಪಸ್ಥಿತರಿದ್ದು ಮಾತನಾಡಿದರು. ಲೋಕನಾಥ ಬೋಳಾರ್ ಅವರ ಪತ್ನಿ ಡಾ. ದೇವಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ ಎಸ್. ರಮಾನಂದ ಶೆಟ್ಟಿ, ಉದ್ಯಮಿ ಕಿಶೋರ್ ಶೆಟ್ಟಿ, ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಆಲ್ವಿನ್ ಪಿಂಟೊ, ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.

    Continue Reading

    LATEST NEWS

    ಸುಳ್ಯ: ಶಂಕಿತ ಇಲಿ ಜ್ವರಕ್ಕೆ ಯುವಕ ಮೃತ್ಯು

    Published

    on

    ಸುಳ್ಯ: ಶಂಕಿತ ಇಲಿ ಜ್ವರಕ್ಕೆ ತುತ್ತಾಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯ ಸುಡಿಂಕಿರಿ ಮೂಲೆಯಲ್ಲಿ ನಡೆದಿದೆ.

    ಸುಡಿಂಕಿರಿ ಮೂಲೆಯ ಚಂದ್ರಶೇಖರ (36)ರವರು ಶಂಕಿತ ಜ್ವರದ ಹಿನ್ನಲೆ ಕಳೆದ 1 ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದಾರೆ. ಮೃತರಿಗೆ ತಂದೆ, ತಾಯಿ, ತಂಗಿ ಇದ್ದಾರೆ.

    Continue Reading

    LATEST NEWS

    Trending