Connect with us

LATEST NEWS

ಜಿಲ್ಲಾಡಳಿತಕ್ಕೆ ಸೆಡ್ಡುಹೊಡೆದ ವ್ಯಾಪಾರಸ್ಥರು ಮತ್ತೆ ಸೆಂಟ್ರಲ್ ಮಾರ್ಕೆಟ್ ನಲ್ಲಿ ಆರಂಭಗೊಳ್ಳಲಿದೆ ವ್ಯಾಪಾರ ವಹಿವಾಟು

Published

on

ಮಂಗಳೂರು : ಕೊರೊನಾ ನೆಪ ಒಡ್ಡಿ ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಿದ್ದ ಜಿಲ್ಲಾಡಳಿತದ ಆದೇಶಕ್ಕೆ ರಾಜ್ಯ ಹೈಕೋರ್ಟ್ ಮಧ್ಯತಂರ ತಡೆಯಾಜ್ಞೆ ನೀಡಿದ್ದು, ಈಗ ಮತ್ತೆ ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ ಚಟುವಟಿಕೆ ಆರಂಭಗೊಳ್ಳಲಿದೆ.


ಸರಿಯಾದ ಯೋಜನೆಗಳಿಲ್ಲದೆ ಮಂಗಳೂರು ಸೆಂಟ್ರಲ್ ಮಾರ್ಕೆಟ್ ನಲ್ಲಿದ್ದ ವ್ಯಾಪಾರಿಗಳನ್ನು ಪೊಲೀಸ್ ಬಲ ಪ್ರಯೋಗಿಸಿ ಏಕಾಏಕಿ ಖಾಲಿ ಮಾಡಿದ್ದ ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಮುಖಭಂಗವಾಗಿದೆ.


ಕೊರೊನಾ ಹಿನ್ನಲೆ ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಈ ಹಿಂದಿನಂತೆ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಹಂಗಾಮಿ ಅಧ್ಯಕ್ಷ ಕ್ಲಾಸಿಕ್ ಹಸನ್ ತಿಳಿಸಿದ್ದಾರೆ.


ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಾನೂನುಬದ್ಧ ವ್ಯಾಪಾರ ಚಟುವಟಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಮಾನ್ಯತೆ ಪಡೆದ ವ್ಯಾಪಾರ ಪರವಾನಿಗೆ ಹೊಂದಿರುವ ವ್ಯಾಪಾರಸ್ಥರು ವಾಣಿಜ್ಯ ಪರವಾನಿಗೆ ಪತ್ರ, ಗುರುತು ಪತ್ರದೊಂದಿಗೆ ಮನಪಾ ಆಯುಕ್ತರನ್ನು ಸಂಪರ್ಕಿಸಲು ನೀಡಿದ ಸೂಚನೆಯಂತೆ ವ್ಯಾಪಾರಿಗಳು ಬುಧವಾರ ದಾಖಲೆಗಳೊಂದಿಗೆ ಭೇಟಿಯಾಗಿದ್ದಾರೆ.

ಸೆಪ್ಟೆಂಬರ್ 24ರಂದು ಸಂಜೆ 4ರಿಂದ 6 ಗಂಟೆ ಅವಧಿಯಲ್ಲಿ ಪಾಲಿಕೆ ಕಚೇರಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಪುರಾವೆ ಮತ್ತು ಇತರ ಸಂಬಂಧಿತ ದಾಖಲೆಗಳೊಂದಿಗೆ ವ್ಯಾಪಾರಿಗಳು ಆಯುಕ್ತರನ್ನು ಸಂಪರ್ಕಿಸಬೇಕು. ದಾಖಲೆಗಳ ಸರಿಯಾದ ಪರಿಶೀಲನೆಯ ಬಳಿಕ ಮತ್ತು ಕೆಲವು ಷರತ್ತುಗಳಿಗೆ ಒಳಪಟ್ಟ ನಂತರ, ಕಾನೂನುಬದ್ಧ ವ್ಯಾಪಾರ ಚಟುವಟಿಕೆಯನ್ನು ಪುನರಾರಂಭಿಸುವ ಬಗ್ಗೆ ವ್ಯಾಪಾರಿಗಳಿಗೆ ಪಾಲಿಕೆ ತಿಳಿಸಲಿದೆ ಎನ್ನುವ ಒಕ್ಕಣೆಯುಳ್ಳ ಸೂಚನೆಯನ್ನು ಸೆಂಟ್ರಲ್ ಮಾರುಕಟ್ಟೆ ದ್ವಾರಗಳಲ್ಲಿ ಅಳವಡಿಸಲಾಗಿದೆ. ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.

DAKSHINA KANNADA

ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್‌..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು

Published

on

ಉಳ್ಳಾಲ: ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಸ್ಟಾಲ್ ಒಂದರಲ್ಲಿ ಆಕಸ್ಮಿ*ಕ ಬೆಂಕಿಯಿಂದಾಗಿ ಸ್ಟಾಲ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಉಳ್ಳಾಲದ ದೇರಳಕಟ್ಟೆಯಲ್ಲಿ ನಡೆದಿದೆ.

sweet corn burn

ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲೇ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಅಂಗಡಿ ಮಾಲೀಕ ಕಾರ್ನ್ ತಯಾರಿಸುವಾಗ ಈ ಅವಘಡ ಸಂಭವಿಸಿದೆ. ತಕ್ಷಣ ಅಂಗಡಿ ಮಾಲೀಕ ಹಾಗೂ ಸ್ವೀಟ್ ಕಾರ್ನ ತಿನ್ನಲು ಬಂದಿದ್ದ ಗ್ರಾಹಕರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಮರಳು ಹಾಗೂ ನೀರನ್ನ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸ್ಟಾಲ್ ಉರಿದು ಭಸ್ಮವಾಗಿ ಹೋಗಿದೆ.

Read More..; ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

sweet corn burn 2

Continue Reading

LATEST NEWS

ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

Published

on

ಬೆಳಗಾವಿ: 25 ರಿಂದ 30 ವರ್ಷದ ಯುವತಿಯೊಬ್ಬಳನ್ನು ಬರ್ಬರವಾಗಿ ಹ*ತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಮಮದಾಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಕೊ*ಲೆ ಮಾಡಿದವರಾರು? ಹ*ತ್ಯೆ ಆದವಳು ಯಾರು? ಎಂಬುದಾಗಲಿ ಗೊತ್ತಾಗಿಲ್ಲ. ನಿನ್ನೆ(ಎ.18) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುವೆ ಪಕ್ಕದಲ್ಲಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಬಿಸಿಲಿನ ತಾಪಕ್ಕೆ ಹುಲ್ಲು ಇರುವ ಜಾಗಕ್ಕೆ ಬೆಂಕಿ ಬಿದ್ದಿರಬಹುದು ಎಂದು ಕೆಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಮೃತದೇಹ ಕಂಡು ಬಂದಿದೆ.

murder

ಯುವತಿಯ ಕತ್ತು ಕೊಯ್ದು ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರಬೇಕು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಯುವತಿಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕುವ ಪ್ರಯತ್ನ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಈ ಯುವತಿ ಯಾರು ಹಾಗೂ ಯಾರು ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ.

Read More..: ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Continue Reading

LATEST NEWS

ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Published

on

ಉಡುಪಿ : ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವನ್ನಪ್ಪಿರುವ ಘಟನೆ ಉಡುಪಿಯ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೃಷ್ಣ ಗಾಣಿಗ ಮೃ*ತ ದುರ್ದೈವಿ. ಉಡುಪಿ ನಗರ ಸಭೆಯಲ್ಲಿ ಎಲೆಕ್ಟ್ರಿಷನ್ ಆಗಿ ಕೃಷ್ಣ ಕೆಲಸ ಮಾಡುತ್ತಿದ್ದರು. ಸಂತೆಕಟ್ಟೆ ಮಾರ್ಗವಾಗಿ ಬ್ರಹ್ಮಾವರದ ಕಡೆಗೆ ಸಾಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.

ಲಾರಿ ಕೃಷ್ಣ ಅವನ್ನು ಕೆಲ ದೂರ ಎಳೆದೊಯ್ದಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು.

ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Continue Reading

LATEST NEWS

Trending