Connect with us

    LATEST NEWS

    ಕರ್ನಾಟಕ ಕ್ಯಾಥೋಲಿಕ್ ತಿಂಕ್ ಟ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಹೊಸ ನಾಯಕತ್ವ ಆಯ್ಕೆ

    Published

    on

    ಬೆಂಗಳೂರು: ಬೆಂಗಳೂರಿನ ಸುವೋಧನಾ, ಕ್ರಾಸ್ ನಲ್ಲಿ ನಡೆದ ಕರ್ನಾಟಕ ಕ್ಯಾಥೋಲಿಕ್ ತಿಂಕ್ ಟ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಸಮಾಜದ ಸವಾಲುಗಳನ್ನು ಎದುರಿಸಲು ತಿಂಕ್ ಟ್ಯಾಂಕ್‌ನ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಚುನಾವಣೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಶ್ರೀ ರಾಯ್ ಕಾಸ್ಟೆಲಿನೊ ಅವರನ್ನು ತಿಂಕ್ ಟ್ಯಾಂಕ್‌ನ ಅಧ್ಯಕ್ಷರಾಗಿ ಏಕಮತದಿಂದ ಆಯ್ಕೆ ಮಾಡಲಾಯಿತು. ಹಾಗೂ ಶ್ರೀ ಜಾಕಬ್ ಕ್ರಾಸ್ಟಾ ಮತ್ತು ಶ್ರೀ ಎಂಟೋನಿ ಮೆಂಡೋನ್ಸಾ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

    ಲೈಟಿ ಕ್ಷೇತ್ರದ ಪ್ರಾದೇಶಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಕ್ಲಾರಾ ಫೆರ್ನಾಂಡಸ್ ಅವರು ಕಾರ್ಯದರ್ಶೆಯ ಪದವಿಯನ್ನು ಕೂಡ ವಹಿಸಿಕೊಳ್ಳಲಿದ್ದಾರೆ ಮತ್ತು ಶ್ರೀಮತಿ ನಿರ್ಮಲ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

    ಕರ್ನಾಟಕ ಕ್ಯಾಥೋಲಿಕ್ ತಿಂಕ್ ಟ್ಯಾಂಕ್ ಕಾನೂನು, ನಾಗರಿಕ ಸೇವೆಗಳು, ಶಿಕ್ಷಣ, ಮಾಧ್ಯಮ, ಮತ್ತು ಆರೋಗ್ಯ ಸೇವೆಗಳಂತಹ ವಿಭಿನ್ನ ಕ್ಷೇತ್ರಗಳ ವೃತ್ತಿಪರರನ್ನು ಒಗ್ಗೂಡಿಸುತ್ತದೆ, ಈ ಮೂಲಕ ಕರ್ನಾಟಕದಲ್ಲಿರುವ چر್ಚ್ಗೆ ತಾಂತ್ರಿಕ ಸಲಹೆ ಮತ್ತು ಬೆಂಬಲವನ್ನು ನೀಡುತ್ತದೆ.

    LATEST NEWS

    ಮಹಾಕ್ಷ್ಮೀ ಹ*ತ್ಯೆಗೈದ ಆರೋಪಿ ಆತ್ಮಹ*ತ್ಯೆ; ಸಾ*ವಿಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟ ಹಂತ*ಕ

    Published

    on

    ಬೆಂಗಳೂರು/ಮಂಗಳೂರು: ಮಹಾಲಕ್ಷ್ಮೀ ಕೊಲೆ ಮಾಡಿದ್ದ ಆತ್ಮಹ*ತ್ಯೆ ಮಾಡಿಕೊಂಡ ಬಳಿಕ ಕೊಲವೊಂದು ವಿಚಾರಗಳು ಬೆಳಕಿಗೆ ಬರುತ್ತಿದೆ. ಮಹಾಕ್ಷ್ಮೀಯನ್ನು ಕೊ*ಲೆ ಮಾಡಿದ ಬಳಿಕ ಮೂರು ರಾಜ್ಯಗಳನ್ನು ತನ್ನ ಬೈಕ್‌ನಲ್ಲೇ ಸವಾರಿ ಮಾಡಿ ತನ್ನ ಹುಟ್ಟೂರು ಸೇರಿಕೊಂಡಿದ್ದಾನೆ.

    ಇನ್ನೇನು ಕೊಲೆ ಆರೋಪಿಯನ್ನು ಅರೆಸ್ಟ್ ಮಾಡುವ ಹುಮ್ಮಸ್ಸಿನಲ್ಲಿ ಹೊರಟ ಪೊಲೀಸರು ಹಂತಕ ಮುಕ್ತಿ ರಾಜನ್ ರಾಯ್ ಹುಟ್ಟೂರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರ ಗ್ರಾಮ ತಲುಪಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
    ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದ ಹಂತಕ ಮಹಾಲಕ್ಷ್ಮಿ ಕೆಲಸ ಮಾಡುವ ಸ್ಥಳದಲ್ಲಿ ನಾನು ಸ್ಟೋರ್ ಮ್ಯಾನೇಜರ್ ಆಗಿದ್ದೆ. ಇಬ್ಬರೂ ಸ್ನೇಹಿತರಾಗಿದ್ದೆವು. ಬಳಿಕ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದೆವು ಎಂದು ಬರೆದುಕೊಂಡಿದ್ದಾನೆ.
    ಏನಿದು ಘಟನೆ:
    ಸೆ.2 ರಂದು ಮಹಾಲಕ್ಷ್ಮಿಯ ಮನೆಗೆ ತೆರಳಿದ್ದ ಹಂತಕ ಹಾಗೂ ಮಹಾಲಕ್ಷ್ಮಿಯ ನಡುವೆ ಜಗಳವಾಗಿದೆ. ಮದುವೆ ಆಗು ಎಂದು ಮಹಾಲಕ್ಷ್ಮಿ ಒತ್ತಾಯಿಸಿದ್ದಕ್ಕೆ ನಿನಗೆ ಈಗಾಗಲೇ ಮದುವೆಯಾಗಿ ಮಗುವಿದೆ. ಹೀಗಿದ್ದಾಗ ಲೀವಿಂಗ್ ರಿಲೇಶನ್‌ನಲ್ಲೇ ಇರೋಣ ಅಂತಾ ಹಂತಕ ಹೇಳಿದ್ದನಂತೆ. ಈ ನಡುವೆ ಜಗಳವಾಗಿ ಮಹಾಲಕ್ಷ್ಮಿ, ಮುಕ್ತಿ ರಂಜನ್ ರಾಯ್ ಮೇಲೆ ಹಲ್ಲೆ ಮಾಡಿದ್ದಳಂತೆ. ಕೋಪದಿಂದ ಮಹಾಲಕ್ಷ್ಮಿ ಕಪಾಳಕ್ಕೆ ಮುಕ್ತಿ ಹೊಡೆದಾಗ ಪ್ರಜ್ಞೆ ತಪ್ಪಿ ಮಹಾಲಕ್ಷಿ ಬಿದ್ದಿದ್ದಾಳೆ.
    ಪ್ರಜ್ಞೆ ತಪ್ಪಿ ಬಿದ್ದ ಮಹಾಲಕ್ಷ್ಮಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹಂತಕ ಮಲ್ಲೇಶ್ವರದಲ್ಲಿ ಆ್ಯಕ್ಸೆಲ್ ಬ್ಲೇಡ್ ಮತ್ತು ಚಾಕು ಖರೀದಿಸಿದ್ದಾನೆ. ಬಳಿಕ ಹಾಲ್‌ನಲ್ಲಿದ್ದ ಶವವನ್ನು ಸ್ನಾನದ ಮನೆಗೆ ಎಳೆದೊಯ್ದು 59 ಪೀಸ್‌ಗಳನ್ನಾಗಿ ಕತ್ತರಿಸಿದ್ದಾನೆ. ಬಳಿಕ ಹೆಬ್ಬಗೋಡಿಯ ಸಹೋದರನ ಮನೆಗೆ ಹೋಗಿ ನಡೆದ ಕೃತ್ಯ ಹೇಳಿದ್ದ. ಅದಾದ ಬಳಿಕ ತನ್ನ ಬೈಕ್‌ನಲ್ಲೇ ಮೂರು ದಿನಗಳ ಕಾಲ 1,550 ಕಿಮೀ ಸಂಚಾರ ಮಾಡಿ ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ, ಒಡಿಶಾ ಕ್ರಾಸ್ ಮಾಡಿ ತನ್ನೂರಾದ ಬೋನಿಪುರ ತಲುಪಿದ್ದ. ಹಂತಕನನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ತಿಳಿದಾಗ ಎಲ್ಲಾ ವಿಚಾರವನ್ನು ತನ್ನ ತಾಯಿ ಜೊತೆ ಹೇಳಿಕೊಂಡಿದ್ದಾನೆ. ಬೆಳಗಿನ ಜಾವ ಮನೆಯಿಂದ ಹೊರಗೆ ಬಂದು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
    Continue Reading

    LATEST NEWS

    ಸೆ.29ರಂದು ಕೋಟಿ ಗಾಯತ್ರಿ ಜಪಾಯಜ್ಞ ಸಂಕಲ್ಪ ದಿನ

    Published

    on

    ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಅ. 26 ಮತು 27ರಂದು ನಡೆಸಲು ಉದ್ದೇಶಿಸಿದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞದ ಪೂರ್ವಾಭಾವಿಯಾಗಿ ಸೆ. 29ನೇ ಭಾನುವಾರ ಬೆಳಗ್ಗೆ 10.00 ಗಂಟೆಗೆ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ಸಂಕಲ್ಪ ದಿನ ಆಯೋಜಿಸಲಾಗಿದೆ.

    ಇದೇ ವೇಳೆ ಮಾತೆಯರು ಸರ್ವಮಂಗಳ ಮಾಂಗಲ್ಯ ಸ್ತೋತ್ರ ಪಠಣ ಸಂಕಲ್ಪ ಮಾಡಲಿದ್ದಾರೆ ಎಂದು ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬ್ರಾಹ್ಮಣ ಸಮುದಾಯದ ಎಲ್ಲ ಜ್ಞಾನಿಗಳು, ವಿದ್ವಾಂಸರು, ವಿಪ್ರರು, ಮುಂದಾಳುಗಳು, ಹಿರಿಯರು, ಯುವಸಮುದಾಯ, ಮಕ್ಕಳು, ಮಹಿಳೆಯರು ಹೀಗೆ ಎಲ್ಲರೂ ಸೇರಿ ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮತೇಜದ ಬೆಳಕಲಿ ಎಂಬ ಸದಾಶಯದೊಂದಿಗೆ ಕಡಲ ಕಿನಾರೆ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಕೋಟಿ ಗಾಯತ್ರಿ ಜಪಯಜ್ಞ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಪೂರ್ವಾಭಾವಿಯಾಗಿ ನಡೆಯುವ ಸಂಕಲ್ಪ ದಿನದಂದು ರಾಜ್ಯ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಆಶಯ ಭಾಷಣ ಮಾಡಲಿದ್ದಾರೆ.

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ ಅವರು ಮಹಾಸಭಾದ ಧ್ಯೇಯ ಉದ್ದೇಶಗಳನ್ನು ಜನರಿಗೆ ತಿಳಿಸಲಿದ್ದಾರೆ. ಯಾಗ ಸಮಿತಿಯ ಸಂಚಾಲಕ ಕಟೀಲಿನ ಅನುವಂಶಿಕ ಅರ್ಚಕ ಶ್ರೀಹರಿ ನಾರಾಯಣ ದಾಸ ಆಸ್ರಣ್ಣ ಅವರು ಯಜ್ಞದ ಬಗ್ಗೆ ಮಾಹಿತಿ ನೀಡಲಿರುವರು.

    ಶರವು ಕ್ಷೇತ್ರದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರ ವೇ.ಮೂ. ವಾಸುದೇವ ಆಸ್ರಣ್ಣರು, ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳು, ಜ್ಯೋತಿಷಿ ನಾಗೇಂದ್ರ ಭಾರದ್ವಾಜ್, ಕರ್ನಾಟಕ ಬ್ಯಾಂಕಿನ ನಿಕಟ ಪೂರ್ವ ಅಧ್ಯಕ್ಷರಾದ ಎಂ.ಎಸ್. ಮಹಾಬಲೇಶ್ವರ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ವೇದಮೂರ್ತಿ ಕೃಷ್ಣ ಭಟ್ ಪಾವಂಜೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಾಲಯದ ಅರ್ಚಕರು, ಜಿಲ್ಲೆಯ ಎಲ್ಲ ಪುರೋಹಿತರು, ಸಹಾಯಕ ಪುರೋಹಿತರು, ಸಂಸ್ಕೃತ ಶಿರೋಮಣಿಗಳು, ವೇದಜ್ಞರು ಭಾಗವಹಿಸಲಿರುವರು.

    ಕೋಟಿ ಗಾಯತ್ರಿ ಜಪಯಜ್ಞ ಯಶಸ್ವಿಗಾಗಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮುದಾಯ ಸಂಕಲ್ಪ ಮಾಡಿ ಜಪ ಆರಂಭಿಸಿರುತ್ತಾರೆ. ಯಶಸ್ವಿಗಾಗಿ ಹಲವು ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

    Continue Reading

    BANTWAL

    ಹಿರಿಯ ಸಾಮಾಜಿಕ ಮುಂದಾಳು ಉದ್ಯಮಿ ರಘು ಸಪಲ್ಯ ನಿ*ಧನ

    Published

    on

    ಮಂಗಳೂರು: ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಸಕ್ರೀಯರಾಗಿದ್ದ ಮತ್ತು ಹಲವು ದೇವಸ್ಥಾನಗಳ ಅಧ್ಯಕ್ಷರಾಗಿ, ದೇವಸ್ಥಾನಗಳ ಅಭಿವೃದ್ದಿಗೆ ಕಾರಣೀಕರ್ತರಾಗಿದ್ದ ಉದ್ಯಮಿ ರಘು ಸಪಲ್ಯ ನಿ*ಧನರಾಗಿದ್ದಾರೆ.

    ಬಂಟ್ವಾಳ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾಗಿ, ಸುಮಂಗಲ ಹಾಲ್ ಹಾಗೂ ಸುಮಂಗಲ ಕೋ ಅಪರೇಟ್‌ ಬ್ಯಾಂಕ್ ಸ್ಥಾಪನೆಯ ಮೂಲಕ ಸಹಕಾರಿ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಜ್ಯೋತಿ ಬೀಡಿ ಎಂಬ ಬೀಡಿ ಉದ್ಯಮದ ಮೂಲಕ ಅನೇಕ ಬಡ ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟ ಹೆಗ್ಗಳಿಕೆ ಇವರದ್ದು. ಬಡವರಿಗೆ ಅಶಕ್ತರಿಗೆ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಕೊಡುಗೈ ಧಾನಿಯಾಗಿ ಇವರು ಗುರುತಿಸಿಕೊಂಡಿದ್ದರು.

    ಅಪಾರ ದೈವ ಭಕ್ತರಾಗಿದ್ದ ರಘು ಸಪಲ್ಯ ಅವರು ಜಿಲ್ಲೆಯಲ್ಲಿ ಮಾತ್ರವಲ್ಲದೆ ಹೊರ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಸಹಕಾರ ನೀಡಿದ್ದರು. ನೇರ ನಡೆನುಡಿಯವರಾಗಿದ್ದರೂ ಅಜಾತ ಶತ್ರು ಎಂಬ ಹೆಸರು ಗಳಿಸಿದ್ದ ಇವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಘದ ಸ್ವಯಂ ಸೇವಕರಾಗಿ ಹೋರಾಟದಲ್ಲಿ ಭಾಗಿಯಾಗಿದ್ದರು.

    ಪಾಣೆ ಮಂಗಳೂರು ಭಯಂಕೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟ್, ಉಳಿಯ ಕ್ಷೇತ್ರ, ಅತ್ತಾವರ ಉಮಾಮಹೇಶ್ವರ ಕ್ಷೇತ್ರ, ಕೀರ್ತಿಶ್ವರ ಕ್ಷೇತ್ರ ಮಂಜೇಶ್ವರ, ಕೋದಂಡ ರಾಮ ಭಜನಾ ಮಂದಿರ ಹೀಗೆ ಹಲವಾರು ಧಾರ್ಮಿಕ ಕ್ಷೇತ್ರದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.

    Continue Reading

    LATEST NEWS

    Trending