ಉಡುಪಿ: ಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದ ಘಟನೆ ಇಂದು ಮಧ್ಯಾಹ್ನ ಉಡುಪಿಯ ಪಡುಬಿದ್ರಿ ಬೀಡಿನ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಸಮುದ್ರ ತಡೆಗೋಡೆಗೆ ಬಳಸುವ ಕಲ್ಲುಗಳನ್ನು...
ಉಡುಪಿ : ಟಿಪ್ಪು ಸುಲ್ತಾನ್ ಹೆಸರಿನ ರೈಲಿನ ಹೆಸರು ಒಡೆಯರ್ ಬದಲಾವಣೆ ಆದ ಬಳಿಕ ಇದೀಗ ಹಿಂದೂ ಸಂಘಟನೆಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಉಡುಪಿ ಕುಂದಾಪುರದ ಬೈಂದೂರಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ‘ಸಲಾಂ ಆರತಿ’ ಬಗ್ಗೆ...
ಉಡುಪಿ: ಮೀನುಗಾರರೊಬ್ಬರು ಅಕಸ್ಮಿಕವಾಗಿ ಕಾಲುಜಾರಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದ ಪರಿಣಾಮ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ. ಮೃತರನ್ನು ರಮೇಶ್ ಕೋಟ್ಯಾನ್ (75) ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ದೇವದಾಸ್...
ಉಡುಪಿ: ಕಟೀಲು ಮೇಳದಲ್ಲಿ ಸಹಾಯಕ ಮದ್ದಲೆಗಾರರಾಗಿದ್ದ ಚಿದಾನಂದ ಗೌಡ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸುರತ್ಕಲ್ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಚಿದಾನಂದ ಗೌಡ (31) ಕಳೆದ 15 ವರ್ಷಗಳಿಂದ ಕಟೀಲು ಮೇಳದಲ್ಲಿ ನಿತ್ಯವೇಷಧಾರಿಯಾಗಿ, ಸಹಾಯಕ ಮದ್ದಲೆಗಾರರಾಗಿ ತಿರುಗಾಟ...
ಉಡುಪಿ : ಬೈಕ್ಗೆ ರಿಕ್ಷಾ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟಕಲ್ಲು ಪೇಟೆಯಲ್ಲಿ ಗುರುವಾರ ಸಂಭವಿಸಿದೆ. ಬಂಟಕಲ್ಲಿನ ಬೈದಶ್ರೀ ಫ್ಯಾನ್ಸಿ ಸ್ಟೋರ್ನ...
ಉಡುಪಿ: ಭಕ್ತರ ಸೋಗಿನಲ್ಲಿ ದೇವಾಲಯ ಪ್ರವೇಶಿಸಿ ಚಿನ್ನ ಕದಿಯುತ್ತಿದ್ದ ಕಳ್ಳಿಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಉಡುಪಿಯ ಕೋಟ ಅಮೃತೇಶ್ವರಿ ದೇವಾಲಯದ ಆವರಣದಲ್ಲಿ ನಡೆದಿದೆ. ತಮಿಳುನಾಡು ಮೂಲದ ಗಾಯತ್ರಿ (40), ಕಾಳಿ (32) ಬಂಧಿತ ಕಳ್ಳಿಯರು....
ಉಡುಪಿ: ಉಚ್ಚಿಲ ಶ್ರೀಮಹಾಲಕ್ಷೀ ದೇವಳದ ದಸರಾ ಮಹೋತ್ಸವದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅವರು ಕೂಡಾ ಹುಲಿಕುಣಿತಕ್ಕೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಮೊದಲ ಬಾರಿಗೆ ಉಡುಪಿಯಲ್ಲಿ ಆಯೋಜಿಸಲಾಗಿದ್ದ ದಸರಾ...
ಉಡುಪಿ: ಇದೇ ಮೊದಲ ಬಾರಿಗೆ ಮೊಗವೀರ ಸಮುದಾಯದ ಮುಂದಾಳು, ನಾಡೋಜ ಜಿ ಶಂಕರ್ ಅವರ ಸಾರಥ್ಯದಲ್ಲಿ ಉಡುಪಿ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದೆ, ನವದುರ್ಗೆಯರ ವೈಭವದ ಶೋಭಾಯಾತ್ರೆ ಉಚ್ಚಿಲ ದಸರಾ ನಿನ್ನೆ ನಡೆಯಿತು....
ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು ಇರಿಸಿದ್ದರು....
ಮಂಗಳೂರು: ಜಿಲ್ಲಾ ಕಂಬಳ ಸಮಿತಿಯ ಸಭೆಯು ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರಗಿದ್ದು, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. 5ರಂದು ಶಿರ್ವ ಕಂಬಳದೊಂದಿಗೆ...