ಉಡುಪಿ: ಕಟೀಲು ಮೇಳದಲ್ಲಿ ಸಹಾಯಕ ಮದ್ದಲೆಗಾರರಾಗಿದ್ದ ಚಿದಾನಂದ ಗೌಡ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸುರತ್ಕಲ್‌ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಚಿದಾನಂದ ಗೌಡ (31) ಕಳೆದ 15 ವರ್ಷಗಳಿಂದ ಕಟೀಲು ಮೇಳದಲ್ಲಿ ನಿತ್ಯವೇಷಧಾರಿಯಾಗಿ, ಸಹಾಯಕ ಮದ್ದಲೆಗಾರರಾಗಿ ತಿರುಗಾಟ ನಡೆಸುತ್ತಿದ್ದ ಇವರು ಪಾರಂಪರಿಕ ಚೌಕಟ್ಟಿನೊಳಗೆ ಮದ್ದಲೆ ನುಡಿತಗಳಿಗೆ ಮತ್ತು ಚಂಡೆವಾದಕರಿಗೆ ಪುರಕವಾಗಿ ಒತ್ತು ಮದ್ದಲೆಯನ್ನು ನುಡಿಸುವ ಕೌಶಲ್ಯವನ್ನು ಹೊಂದಿದ್ದರು.
ಅವಿವಾಹಿತರಾಗಿದ್ದ ಇವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕಲಾವಿದ ಚಿದಾನಂದ ಗೌಡರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.