Connect with us

DAKSHINA KANNADA

ಸುರತ್ಕಲ್ ಶೋರೂಂ ನಿಂದ ಕಾರು ಕಳವು ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ..!

Published

on

ಮಂಗಳೂರು : ಸುರತ್ಕಲ್‌ ನ ಹೊಸಬೆಟ್ಟು ವಿನಲ್ಲಿರುವ ಕಾರ್‌ ಮಾರ್ಟ್‌ ಎಂಬ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ ಮಳಿಗೆಗೆ ಕನ್ನ ಹಾಕಿ ಎರಡು ಕಾರು ಮತ್ತು ಇತರ ಸೊತ್ತುಗಳನ್ನು ಕಳವು ಮಾಡಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ತಾಲೂಕು ಕಿನ್ನಿ ಪದವು ನಿವಾಸಿ 21 ವರ್ಷ ಪ್ರಾಯದ ಮಹಮ್ಮದ್‌ ಶಫೀಕ್‌ ಯಾನೆ ಶಫೀಕ್‌ ಮತ್ತು ಇನ್ನೋರ್ವ ಅಪ್ರಾಪ್ತ ವಯಸ್ಸಿನ ಬಾಲಕ ಬಂಧಿತ ಆರೋಪಿಗಳು.

ತಲೆಗೆ ಹೆಲ್ಮೆಟ್‌ ಹಾಗೂ ಮೈಮೇಲೆ ರೈನ್ ಜಾಕೆಟ್ ಧರಿಸಿದ್ದ ಇಬ್ಬರು ಜುಲೈ 12 ರಂದು ರಾತ್ರಿ ಸುರತ್ಕಲ್‌ ನ ಹೊಸಬೆಟ್ಟು ವಿನಲ್ಲಿರುವ ಕಾರ್‌ ಮಾರ್ಟ್‌ ಎಂಬ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ ಮಳಿಗೆಗೆ ತೆರಳಿ ಕಚೇರಿಯ ಗಾಜಿನ ಬಾಗಿಲನ್ನು ಸುತ್ತಿಗೆಯಿಂದ ಜಖಂ ಗೊಳಿಸಿ ಪುಡಿ ಮಾಡಿ ಒಳ ನುಗ್ಗಿ ಕಚೇರಿಯ ಟೇಬಲ್‌ ಮೇಲಿದ್ದ ಮೊಬೈಲ್‌ ಫೋನ್‌, ಲ್ಯಾಪ್‌ಟೊಪ್, ಪ್ರಿಂಟರ್‌ ಮತ್ತು ಹೊರಗೆ ಪಾರ್ಕಿಂಗ್‌ ನಲ್ಲಿ ನಿಲ್ಲಿಸಿದ್ದ ಕ್ರೇಟಾ ಮತ್ತು ಸ್ವಿಫ್ಟ್‌ ಕಾರುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು.

ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಈ ಬಗ್ಗೆ ಶೋ ರೂಮ್‌ ಮಾಲಕ ಅಬೀದ್‌ ಅಹಮ್ಮದ್‌ ಸೂರಲ್ಪಾಡಿ ಅವರು ನೀಡಿದ ದೂರಿನಂತೆ ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದರು.

ಘಟನೆ ನಡೆದ 11 ದಿನಗಳೊಳಗೆ ಅಂದರೆ ಜುಲೈ 22 ರಂದು ಕಳವಾದ ಸ್ವಿಫ್ಟ್‌ ಕಾರನ್ನು ಪೊಲೀಸರು ಅಪ್ರಾಪ್ತ ಬಾಲಕನಿಂದ ವಶಕ್ಕೆ ಪಡೆದಿದ್ದರು.

ಈ ಬಾಲಕ ನೀಡಿದ ಮಾಹಿತಿಯಂತೆ ಬಳಿಕ ಆರೋಪಿ ಮಹಮ್ಮದ್‌ ಶಫೀಕ್‌ ಯಾನೆ ಶಫೀಕ್‌ ನನ್ನು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕಾವೂರು ಮರಕಡ ಬಳಿ ಬಂಧಿಸಲಾಗಿದೆ.

ಅತ ತೋರಿಸಿ ಕೊಟ್ಟಂತೆ ತೊಕ್ಕೋಟು ಬಸ್‌ ನಿಲ್ದಾಣದ ಬಳಿ ಕ್ರೇಟಾ ಕಾರನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಸುತ್ತಿಗೆ, ಹೆಲ್ಮೆಟ್‌, ರೈನ್‌ ಕೋಟ್‌, ಗ್ಲೌಸ್‌, ಮಾಸ್ಕ್‌ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಅರೋಪಿ ಶಫೀಕ್‌ ನು ಮೂಡುಬಿದಿರೆಯ ಕೆಸರುಗದ್ದೆ ಎಂಬಲ್ಲಿಂದ ಒಂದು ವರ್ಷದ ಹಿಂದೆ ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ್‌ ಅವರ ಮಾರ್ಗದರ್ಶನದಲ್ಲಿ ಸುರತ್ಕಲ್‌ ಠಾಣೆಯ ನಿರೀಕ್ಷಕ ಮಹೇಶ್‌ ಪ್ರಸಾದ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

 

DAKSHINA KANNADA

ಪ್ರವಾಸಿಗರಿಗೆ ಗುಡ್ ನ್ಯೂಸ್ : ಮತ್ತೆ ಆರಂಭವಾಯ್ತು ಲಕ್ಷದ್ವೀಪ – ಮಂಗಳೂರು ಸ್ಪೀಡ್ ಪ್ಯಾಸೆಂಜರ್ ಹಡಗು

Published

on

ಮಂಗಳೂರು : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪದ ಬೀಚ್‌ನಲ್ಲಿ ವಾಯುವಿಹಾರ ನಡೆಸುವ ಮೂಲಕ ಲಕ್ಷದ್ವೀಪ ಬಾರಿ ಸುದ್ದಿಯಾಗಿತ್ತು. ಈ ವೇಳೆ ಮಂಗಳೂರು ಲಕ್ಷದ್ವೀಪ ನಡುವೆ ಈ ಹಿಂದೆ ಇದ್ದ ಪ್ರಯಾಣಿಕರ ಹಡಗು ಆರಂಭಿಸಲು ಬೇಡಿಕೆ ಕೂಡಾ ಆರಂಭವಾಗಿತ್ತು.

ಇದೀಗ ಲಕ್ಷದ್ವೀಪದ ಆಡಳಿತ ಮಂಗಳೂರಿಗೆ ಸ್ಪೀಡ್ ಪ್ಯಾಸೆಂಜರ್ ಹಡಗನ್ನು ಆರಂಭಿಸಿದೆ. ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ ಸ್ಪೀಡ್ ಪ್ಯಾಸೆಂಜರ್ ಬೋಟ್‌ನಲ್ಲಿ 150 ಜನ ಲಕ್ಷದ್ವೀಪವಾಸಿಗಳು ಆಗಮಿಸಿದ್ದಾರೆ.

ಪ್ರಯಾಣ ದರ ಎಷ್ಟು?


ಮಂಗಳೂರು ಲಕ್ಷದ್ವೀಪದ ನಡುವೆ ಮತ್ತೆ ಸಂಪರ್ಕ ಸೇತುವೆ ನಿರ್ಮಿಸಲು ಲಕ್ಷದ್ವೀಪ ಆಡಳಿತ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭಿಸಿದೆ. ಕೋವಿಡ್ ಆರಂಭಕ್ಕೂ ಮೊದಲು ಮಂಗಳೂರು ಲಕ್ಷದ್ವೀಪದ ನಡುವೆ ಎರಡು ಪ್ರಯಾಣಿಕ ಹಡಗುಗಳು ಸಂಚಾರ ಮಾಡುತ್ತಿತ್ತು. ಸಾಕಷ್ಟು ಪ್ರಯಾಣಿಕರು ಮಂಗಳೂರು ಲಕ್ಷದ್ವೀಪ ನಡುವೆ ಪ್ರಯಾಣ ಮಾಡುವ ಮೂಲಕ ಅದರ ಅನುಕೂಲ ಪಡೆದುಕೊಂಡಿದ್ದರು.


ಲಕ್ಷದ್ವೀಪದವರಿಗೆ ತಮ್ಮ ದೈನಂದಿನ ಅವಶ್ಯಕತೆಗೆ ಮಂಗಳೂರು ಅವಲಂಬಿತರಾಗಿದ್ದರೆ, ಮಂಗಳೂರಿನ ಜನರಿಗೆ ಲಕ್ಷದ್ವೀಪ ವೀಕೆಂಡ್ ಪಾಯಿಂಟ್. ಆದ್ರೆ ಕೋವಿಡ್ ಕಾರಣದಿಂದ ಲಕ್ಷಾದ್ವೀಪಕ್ಕೆ ಇದ್ದ ಹಡಗಿನ ವ್ಯವಸ್ಥೆ ನಿಂತು ಹೋಗಿದ್ದು, ಈಗ ಮತ್ತೆ ಆರಂಭವಾಗಿದೆ. ಹಿಂದೆ 24 ಗಂಟೆ ಇದ್ದ ಪ್ರಯಾಣ ಕೇವಲ 5.30 ರಿಂದ 6 ಗಂಟೆಗಳಿಗೆ ಇಳಿದಿದೆ. ಹಡಗಿನಲ್ಲಿ ಎಲ್ಲಾ ವ್ಯವಸ್ಥೆ ಇರೋ ಕಾರಣದಿಂದ ಜನರು ಕೂಡಾ ಉತ್ಸಾಹದಿಂದ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಹೈ-ಸ್ಪೀಡ್ ಪ್ರಯಾಣಿಕ ಹಡಗಿನ ದರ ಕೇವಲ 450 ರೂ. ಆಗಿದೆ.

ಹೆಚ್ಚಿನ ಹಡಗಿಗೆ ಬೇಡಿಕೆ :


ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಆರಂಭದಿಂದ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಾಗಲಿದೆ. ಅಷ್ಟೇ ಅಲ್ಲದೆ, ಲಕ್ಷದ್ವೀಪಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಂಗಳೂರಿನಿಂದ ತೆರಳುವ ಮೂಲಕ ಅಲ್ಲೂ ಕೂಡಾ ಆರ್ಥಿಕ ಅಭಿವೃದ್ದಿ ಆಗಲಿದೆ.


ಸ್ಪೀಡ್ ಪ್ಯಾಸೆಂಜರ್ ಹಡಗು ಕನಿಷ್ಟ ಎರಡು ದಿನಕ್ಕೊಮ್ಮೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುವ ವ್ಯವಸ್ಥೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ. ಈಗ ಆರಂಭವಾಗಿರೋ ಹಡಗಿನಲ್ಲಿ ಸುಖಕರ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಟಿವಿ, ಎಸಿ, ಸೇರಿದಂತೆ ಅಗತ್ಯ ಸೇವೆಗಳು ಲಭ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಹಡಗಿನ ಬಳಕೆ ಮಾಡುವ ಸಾಧ್ಯತೆ ಇರುವ ಕಾರಣ ಹೆಚ್ಚಿನ ಹಡಗಿನ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದೀಗ ಆರಂಭಗೊಂಡಿರೋ ಪ್ರಯಾಣಿಕರ ಹಡಗು ಸೇವೆ ಜೂನ್ ತಿಂಗಳ ಬಳಿಕ ಸ್ಥಗಿತವಾಗಲಿದೆ.

ಇದನ್ನೂ ಓದಿ :  ‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಮಳೆಗಾಲ ಕಳೆದ ಬಳಿಕ ಇದು ಮತ್ತೆ ಆರಂಭವಾಗುತ್ತದೆಯೋ ಇಲ್ಲವೋ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದ್ರೆ, ಮತ್ತೆ ಆರಂಭಿಸುವ ಬಗ್ಗೆ ಲಕ್ಷಾದ್ವೀಪ ಆಡಳಿತ ಭರವಸೆ ನೀಡಿದೆ. ಒಟ್ಟಾರೆ ಹೇಳೋದಾದ್ರೆ ಸದ್ಯಕ್ಕಂತೂ ಲಕ್ಷದ್ವೀಪಕ್ಕೆ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭದಿಂದ ಮಂಗಳೂರಿನ ಜನರಿಗಂತೂ ಸಾಕಷ್ಟು ಖುಷಿಯಾಗಿರೋದಂತು ನಿಜ.

Continue Reading

BELTHANGADY

ಮುಂದಿನ ನಾಲ್ಕು ದಿನ ಕರಾವಳಿಯಲ್ಲಿ ಮಳೆಯ ಸಿಂಚನ..! ಹವಾಮಾನ ಇಲಾಖೆ ಮುನ್ಸೂಚನೆ

Published

on

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿಗೆ ಬಸವಳಿದು ಜನರು ಕಂಗಾಲಾಗಿದ್ದು, ಕೆಲವೊಂದು ಕಡೆ ವರುಣನ ಕೃಪೆಗಾಗಿ ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

rain

ಈ ನಡುವೆ ಬಿಸಿ ಶಾಖದಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನ ಜನರು ನಿನ್ನೆ ಕೆಲವೆಡೆ ಸುರಿದ ಮಳೆಯಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಬೆಂಗಳೂರಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅಲ್ಲಲ್ಲಿ ಅಲ್ಪಾ ಸ್ವಲ್ಪ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ರಾಜ್ಯದ ​ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹಗುರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಅದರಲ್ಲೂ ಬೆಂಗಳೂರಿನಲ್ಲಿ ಗುಡುಗು, ಮಿಂಚಿನ ಜತೆಗೆ ಅಲ್ಲಲ್ಲಿ ಚದುರಿದ ಮಳೆ ಬೀಳುವ ಸಂಭವವಿದೆ. ಮೇ 6 ಮತ್ತು 7 ರಂದು ಸಾಧಾರಣ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

DAKSHINA KANNADA

ಕೋಸ್ಟಲ್ ವುಡ್ ಅಂಗಳದಲ್ಲಿ ‘ಗಬ್ಬರ್ ಸಿಂಗ್’ ಹವಾ ಶುರು

Published

on

ಮಂಗಳೂರು : ಬಹುನಿರೀಕ್ಷಿತ ಚಿತ್ರ ‘ಗಬ್ಬರ್ ಸಿಂಗ್’ ಇಂದು (ಮೇ 3) ತೆರೆಗಪ್ಪಳಿಸಿದೆ. ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಚಂದ್ರಶೇಖರ ನಾನಿಲ್, ನಾಗೇಶ್ ಪೂಜಾರಿ ಅರ್ಪಿಸುವ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದ “ಗಬ್ಬರ್ ಸಿಂಗ್” ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.


ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ಎಂ.ಶೇಖರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಲನಚಿತ್ರಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ತುಳು ಸಿನಿಮಾ ತೆರೆಕಾಣದೆ ಕೆಲವು ಸಮಯ ಆಗಿದೆ. ಬೇಸಿಗೆ ಕಾಲದಲ್ಲಿ ತರೆಕಾಣುತ್ತಿರುವ ಗಬ್ಬರ್ ಸಿಂಗ್ ಸಿನಿಮಾ ಹಾಸ್ಯಭರಿತವಾಗಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸಿದೆ. ಭೋಜರಾಜ್ ವಾಮಂಜೂರು ಅವರ ಹಾಸ್ಯಕ್ಕೆ ಒತ್ತು ಕೊಟ್ಟ ಪಾತ್ರ ಜೊತೆಗೆ ಗಿರೀಶ್ ಶೆಟ್ಟಿಯವರ ಖಡಕ್ ವಿಲನ್ ಪಾತ್ರ, ನಾಯಕ ಶರಣ್ ಶೆಟ್ಟಿ, ನಾಯಕಿ ವೆನ್ಸಿಟಾ ಡಯಾಸ್ ಪಾತ್ರಗಳು ಗಮನ ಸೆಳೆಯುತ್ತದೆ ಎಂದರು.

ಸಮಾರಂಭದಲ್ಲಿ ಡಾ ಮೆಲ್ವಿನ್ ಡಿ ಸೋಜಾ, ರಂಜಿತಾ ಹೇಮನಾಥ ಶೆಟ್ಟಿ ಕಾವು, ಭೋಜರಾಜ ವಾಮಂಜೂರು, ತುಳು ಚಲನ ಚಿತ್ರನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಉದ್ಯಮಿ ಗಿರೀಶ್ ಎಂ ಶೆಟ್ಟಿಕಟೀಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮೋಹನ್ ಕೊಪ್ಪಲ, ತಮ್ಮಲಕ್ಷ್ಮಣ, ಮಧು ಸುರತ್ಕಲ್, ಚಂದ್ರಶೇಖರ ನಾನಿಲ್ ಹಳೆಯಂಗಡಿ, ಜಯಾನಂದ ಅಮೀನ್, ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ನಟ ಶರಣ್ ಶೆಟ್ಟಿ, ನಟಿ ವೆನ್ಸಿಟಾ ಡಯಾಸ್, ರಾಹುಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲೆಲ್ಲಿ ತೆರೆಗೆ?

ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ “ಗಬ್ಬರ್ ಸಿಂಗ್” ಸಿನಿಮಾ ತೆರೆ ಕಂಡಿದೆ.

ನೈಜಘಟನೆಯಾಧಾರಿತ ಚಿತ್ರ :


‘ಗಬ್ಬರ್ ಸಿಂಗ್’ ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಇದನ್ನೂ ಓದಿ : ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು

ತಾರಾಂಗಣ :

ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. “ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ.

ಸಿನಿಮಾ ಕತೆ, ಚಿತ್ರಕತೆ, ಸತೀಶ್ ಪೂಜಾರಿ ಬಾರ್ಕೂರ್, ಮಧು ಸುರತ್ಕಲ್ ಸಂಭಾಷಣೆ, ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

Continue Reading

LATEST NEWS

Trending