Connect with us

    LATEST NEWS

    ಮಂಗಳೂರಿನಲ್ಲಿ ಬೈಕಿಗೆ ಢಿಕ್ಕಿ ಹೊಡೆದ ಕಾರು: ಸವಾರರಿಬ್ಬರು ಗಂಭೀರ

    Published

    on

    ಮಂಗಳೂರು: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಣ್ಣೀರುಬಾವಿ ಬೀಚ್ ಬಳಿ ನಿನ್ನೆ ರಾತ್ರಿ ನಡೆದಿದೆ.

    ಗಾಯಗೊಂಡವರನ್ನು ಬೆಂಗರೆ ನಿವಾಸಿ ನಝೀರ್ ಎಂಬವರ ಮಗ ಮೊಯ್ದಿನ್ ನಾಝಿಮ್ ಮತ್ತು ಅವರ ಸ್ನೇಹಿತ ಸಾಲೆತ್ತೂರು ನಿವಾಸಿ ಅನಸ್ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಇವರಿಬ್ಬರನ್ನು ನಗರದ ಎರಡು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

    ಘಟನೆಯ ವಿವರ: ನಿನ್ನೆ ಸಂಜೆ 7:30 ಸುಮಾರಿಗೆ ನಾಝಿಮ್ ಸಾಲೆತ್ತೂರಿಗೆ ತೆರಳುವ ಸ್ನೇಹಿತ ಅನಸ್‌ರನ್ನು ತನ್ನ ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಕೂಳೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ.

    ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತ ನಡೆಸಿ ಪರಾರಿಯಾಗಿರುವ ವಾಹನದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

    LATEST NEWS

    ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದಾಗ ಜೇನು ದಾಳಿ : 23ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    Published

    on

    ಉತ್ತಕನ್ನಡ : ಶಾಲಾ ಮೈದಾನದಲ್ಲಿ ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿದ್ದರು. ಈ ವೇಳೆ ಮಕ್ಕಳ ಮೇಲೆ ಜೇನು ದಾಳಿ ಮಾಡಿದೆ. ಇದರಿಂದ 23ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಡಾನ್ ಬಾಸ್ಕೋ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.

    ಶಾಲಾ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ ಮಾಡಿದೆ. ಸುಮಾರು 23ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಒಂದು ಘಟನೆ ನಡೆದಿದೆ. ಶಿರಸಿಯ ಡಾನ್ ಬಾಸ್ಕೋ ಶಾಲಾ ಮೈದಾನದಲ್ಲಿ ಈ ಒಂದು ಘಟನೆ ನಡೆದಿದೆ. ಕೂಡಲೇ ಶಿರಸಿ ತಾಲೂಕು ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು.

    Continue Reading

    LATEST NEWS

    ಗೂಗಲ್ ಮ್ಯಾಪ್ ನಂಬಿ ಅವಾಂತರ ; ಕಾಲುವೆಗೆ ಬಿ*ದ್ದ ಕಾರು !!

    Published

    on

    ಮಂಗಳೂರು/ಬರೇಲಿ: ಜಿಪಿಎಸ್ ಮ್ಯಾಪ್ ಮೂಲಕ ಸಾಗಿದ ಕಾರು ಕಾಲುವೆಗೆ ಬಿ*ದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆದರೆ ಟಾಟಾ ಕಾರು ಈ ಪ್ರಯಾಣಿಕರ ಜೀವ ಉಳಿಸಿದ ಘಟನೆ ಬರೇಲಿಯ ಪಿಲಿಭಿತ್ ಹೆದ್ದಾರಿಯಲ್ಲಿ ನಡೆದಿದೆ.

    ಎಲ್ಲೇ ಹೋಗಬೇಕಿದ್ದರೂ ದಾರಿಯಲ್ಲಿ ಸಿಕ್ಕವರನ್ನು ಕೇಳುವ ಪ್ರಶ್ನೆ ಇಲ್ಲ. ಗೂಗಲ್ ಮ್ಯಾಪ್ ಹಾಕಿದರೆ ಸಾಕು. ಹತ್ತಿರದ ಮಾರ್ಗ, ಕ್ರಮಿಸಬೇಕಾದ ದೂರ, ಸಮಯ ಎಲ್ಲವನ್ನು ಹೇಳುತ್ತೆ. ಆದರೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಜೀವನ ಸುಲಭವಾಗಬೇಕಿತ್ತು. ಆದರ ಬದಲಾಗಿ ಅ*ಪಾಯವೇ ಹೆಚ್ಚಾಗುತ್ತಿದೆ. ಕಾರಣ ಇದೇ ಜಿಪಿಎಸ್ ಮಾರ್ಗ ನಂಬಿ ತೆರಳುತ್ತಿರುವ ಪ್ರಯಾಣಿಕರು ಅಪಘಾತಕ್ಕೀಡಾಗುತ್ತಿರುವ ಘಟನೆಯೂ ಹೆಚ್ಚಾಗುತ್ತಿದೆ. 10 ದಿನಗಳ ಹಿಂದೆ ಮದುವೆ ಹೊರಟ ಕಾರು ಸೇತುವೆ ಮೇಲಿಂದ ಬಿದ್ದ ಮೂವರು ಪ್ರಾ*ಣಕ್ಕೆ ಕುತ್ತು ತಂದಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ದುರ್ಘಟನೆ ಸಂಭವಿಸಿದೆ.

    ಟಾಟಾ ಟಿಗೋರ್ ಕಾರಿನಲ್ಲಿ ಮೂವರು ಪ್ರಯಾಣ ಆರಂಭಿಸಿದ್ದಾರೆ. ದಾರಿ ಗೊತ್ತಿಲ್ಲದ ಕಾರಣ ಜಿಪಿಎಸ್ ಮ್ಯಾಪ್ ಆನ್ ಮಾಡಿ ವಿಳಾಸ ಹಾಕಿದ್ದಾರೆ. ಬಳಿಕ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಸಾಗಿದ್ದಾರೆ. ಆದರೆ ಬರ್ಕಾಪುರ ಗ್ರಾಮದ ಬಳಿ ಬರುತ್ತಿದ್ದಂತೆ ರಸ್ತೆ ಕಾಮಗಾರಿಗಳು ಎದುರಾಗಿದೆ. ಹೀಗಾಗಿ ರಸ್ತೆ ಸಂಚಾರ ಬದಲಿಸಲಾಗಿತ್ತು. ಆದರೆ ಗೂಗಲ್ ಮ್ಯಾಪ್ ಮಾತ್ರ ನೇರವಾಗಿ ಸಾಗಲು ಸೂಚಿಸಿದ ಕಾರಣ ಅದೇ ದಾರಿಯಲ್ಲಿ ಸಾಗಿದ ಕೆಲವೇ ಕ್ಷಣದಲ್ಲಿ ಕಾಲಾಪುರ ಕಾಲುವೆಗೆ ಕಾರು ಉರುಳಿ ಬಿದ್ದಿದೆ. ವೇಗವಾಗಿ ಸಾಗುತ್ತಿದ್ದ ಕಾರಣ ಅ*ಪಘಾತದ ಪ್ರಮಾಣ ಹೆಚ್ಚಾಗಿದೆ. ಟಾಟಾ ಮೋಟಾರ್ಸ‌ನ ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಸೆಡಾನ್ ಕಾರಾಗಿದ್ದ ಕಾರಣ ಪ್ರಯಾಣಿಕರ ಬದುಕುಳಿದಿದ್ದಾರೆ. ಸಣ್ಣ ಪುಟ್ಟ ಗಾ*ಯಗಳಾಗಿದ್ದರೂ ಮೂವರು ಪ್ರಯಾಣಿಕರ ಜೀ*ವಕ್ಕೆ ಯಾವುದೇ ಅಪಾಯವಾಗಿಲ್ಲ.

     

    ಇದನ್ನೂ ಓದಿ : ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ

     

    ಅ*ಪಘಾತ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಮೂವರುು ಪ್ರಯಾಣಿಕರನ್ನು ಕಾರಿನಿಂದ ಹೊರತೆಗೆದಿದ್ದಾರೆ. ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಗಂ*ಭೀರ ಗಾ*ಯಗಳಿಲ್ಲದ ಕಾರಣ ಮೂವರು ಪ್ರಯಾಣಿಕರು ತಪಾಸಣೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ. ಗೂಗಲ್ ಮ್ಯಾಪ್ ನೀಡಿದ ತಪ್ಪು ಸೂಚನೆಯಿಂದ ಕಾರು ಕಾಲುವೆಗೆ ಮ*ಗುಚಿ ಬಿ*ದ್ದಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.

    Continue Reading

    DAKSHINA KANNADA

    ಚುನಾವಣಾ ಬಾಂಡ್‌ ಅಕ್ರಮ : ನಿರ್ಮಲಾ ಸೀತಾರಾಮನ್‌, ನಳೀನ್ ಕುಮಾರ್ ಕಟೀಲ್‌ಗೆ ರಿಲೀಫ್

    Published

    on

    ಮಂಗಳೂರು : ಚುನಾವಣಾ ಬಾಂಡ್ ಹೆಸರಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್‌ಗೆ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಅರ್ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.

    ಚುನಾವಣಾ ಬಾಂಡ್ ಅಕ್ರಮಕ್ಕೆ ಸಂಬಂಧಿಸಿದ ದೂರಿನ ನಂತರ ವಿಶೇಷ ನ್ಯಾಯಾಲಯವೊಂದರ ನಿರ್ದೇಶನದಂತೆ ನಿರ್ಮಲಾ ಸೀತಾರಾಮನ್, ನಳೀನ್ ಕುಮಾರ್ ಕಟೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 384( ಸುಲಿಗೆಗೆ ಶಿಕ್ಷೆ) 120 ಬಿ (ಕ್ರಿಮಿನಲ್ ಪಿತೂರಿ) 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳು ಮಾಡಿದ ಕಾರ್ಯಗಳು) ಅಡಿಯಲ್ಲಿ ಸೀತಾರಾಮನ್, ಇಡಿ ಅಧಿಕಾರಿಗಳು ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರೂ ಎಫ್ ಐಆರ್ ನಲ್ಲಿ ಕೇಳಿ ಬಂದಿತ್ತು.

    ಇದನ್ನೂ ಓದಿ : ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್‌ನ ಖ್ಯಾತ ನಟಿಯ ತಂಗಿ ಅರೆಸ್ಟ್

    ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಪ್ರತಿಷ್ಟಿತ ಕಂಪೆನಿಗಳಿಂದ ಸುಮಾರು 8  ಸಾವಿರ ಕೋಟಿ  ರೂ.ಗಳನ್ನು  ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ ಸಂಸ್ಥಾಪಕ ಆದರ್ಶ್ ಆರ್.ಅಯ್ಯರ್ ಎಂಬವರು ದೂರು ದಾಖಲಿಸಿದ್ದರು.

    Continue Reading

    LATEST NEWS

    Trending