LATEST NEWS
ಉಡುಪಿ: ಗುಂಡಿ ತಪ್ಪಿಸಲು ಹೋಗಿ ಗದ್ದೆಗೆ ಉರುಳಿದ ಕಾರು
ಉಡುಪಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ತಪ್ಪಿಸಲು ಹೋಗಿ ಕಾರೊಂದು ಗದ್ದೆಗೆ ಉರುಳಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಉಡುಪಿ ಕಟಪಾಡಿಯ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಸಮೀಪ ಉಡುಪಿಯಿಂದ ಪಡುಬಿದ್ರೆ ಕಡೆಗೆ ಹೋಗುತ್ತಿರುವ ಕಾರು ಹೆದ್ದಾರಿ ಯಲ್ಲಿರುವ ಹೊಂಡವನ್ನು ತಪ್ಪಿಸಲು ಹೋಗಿ ರಸ್ತೆಯಿಂದ ಗದ್ದೆಗೆ ಉರುಳಿದೆ. ಕಾರು ಚಲಾಯಿಸುತ್ತಿದ್ದ ಪತ್ರಿಕಾ ವರದಿಗಾರ ಹಮೀದ್ ಪಡುಬಿದ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ.
LATEST NEWS
ಉಡುಪಿ: ಪಾರ್ಟಿ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ; ಅಪಾರ ಹಾನಿ
ಉಡುಪಿ: ಪಾರ್ಟಿ ಮಾಡುತ್ತಿದ್ದ ಸಂದರ್ಭ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಾರ ಪ್ರಮಾಣದ ಹಾನಿ ಉಂಟಾದ ದುರ್ಘಟನೆ ಉಡುಪಿ ಕಲ್ಸಂಕ ಸಮೀಪದ ಬಡಗುಪೇಟೆ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ಇಂದು (ನ.4) ರಾತ್ರಿ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್ ಲೀಕ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ಮಾಡುತ್ತಿರುವಾಗ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೊಠಡಿಯಲ್ಲಿ ಇದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಬಳಿಕ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.
ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ಸೊತ್ತುಗಳು ಸುಟ್ಟು ಕರಕಲಾಗಿವೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
LATEST NEWS
ಉಡುಪಿ : ಗಂಡ ಮಾತ್ರವಲ್ಲದೆ ಅಣ್ಣನಿಗೂ ಸ್ಲೋ ಪಾಯಿಸನ್ ಕೊಟ್ಟಿದ ಪ್ರತಿಮಾ!? ಬಾಲಕೃಷ್ಣನ ಕೇಸ್ ನಲ್ಲಿ ಮತ್ತೊಂದು ಟ್ವಿಸ್ಟ್..!
ಉಡುಪಿ : ಪ್ರಿಯಕರನ ಜೊತೆ ಸೇರಿ ಸ್ಲೋ ಪಾಯಿಸನ್ ಕೊಟ್ಟು ಪತಿಯನ್ನು ಕೊಂದ ಪ್ರಕರಣದಲ್ಲಿ ಪತ್ನಿ ಪ್ರತಿಮಾಳನ್ನು ಬಂಧಿಸಿದ್ದ ಘಟನೆ ಉಡುಪಿ ಅಜೆಕಾರಿನಲ್ಲಿ ನಡೆದಿತ್ತು.
ಪ್ರತಿಮಾಳಿಗೆ ಮಾರ್ಗದರ್ಶಕನಾಗಿದ್ದ ಎರಡನೇ ಆರೋಪಿ ದಿಲೀಪ್ ಹೆಗ್ಡೆಯನ್ನೂ ಅರೆಸ್ಟ್ ಮಾಡಲಾಗಿತ್ತು.
ದಿಲೀಪ್, ಕಾರ್ಕಳದ ಪ್ರತಿಷ್ಠಿತ ಲಾಡ್ಜ್ ಓನರ್ ನ ಮಗನಾಗಿದ್ದ ಕಾರಣ, ‘ಯಾವುದೇ ಆಮಿಷಕ್ಕೊಳಗಾಗದೆ ಸರಿಯಾದ ತನಿಖೆ ನಡೆಸಬೇಕು’ ಎಂದು ಡಿವೈಎಸ್ಪಿ ಗೆ ಮೇಲಿಂದ ಆದೇಶ ಬಂದಿತ್ತು.
ಸ್ಲೋ ಪಾಯ್ಸನ್ ಕೊಟ್ಟರೂ ಆಸ್ಪತ್ರೆಗಳಲ್ಲಿ ಯಾಕೆ ಗೊತ್ತಾಗಿಲ್ಲ?
ಮೃತ ಬಾಲಕೃಷ್ಣ ಪೂಜಾರಿಯ ಸಹೋದರ ಪ್ರಕಾಶ್ “ಸ್ಲೋ ಪಾಯ್ಸನ್ ಕೊಟ್ಟರೂ ಆಸ್ಪತ್ರೆಗಳಿಗೆ ಯಾಕೆ ಗೊತ್ತಾಗಿಲ್ಲ?” ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಮಣಿಪಾಲ, ಕೆಎಂಸಿ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಯಾವ ಆಸ್ಪತ್ರೆಯಲ್ಲೂ ಸ್ಲೋ ಪಾಯಿಸನ್ ಕೊಟ್ಟ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾಗಿ ಆಸ್ಪತ್ರೆಗಳನ್ನು ಕೂಡ ಆರೋಪಿ ಸ್ಥಾನದಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಹೋದರನಿಗೂ ವಿಷಪ್ರಾಶನದ ಅನುಮಾನ
ಪ್ರತಿಮಾ ಸಹೋದರ ಸಂದೀಪ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಪ್ರತಿಮಾಳ ಕೃತ್ಯ ಬಯಲಿಗೆ ತಂದವನೇ ಸಂದೀಪ್. ವಾಯ್ಸ್ ರೆಕಾರ್ಡ್ ಮಾಡುವ ಮೂಲಕ ಸಂಚು ಬಯಲು ಮಾಡಿದ್ದು, ಈಗ “ನನಗೂ ಸಹೋದರಿ ಸ್ಲೋ ಪಾಯಿಸನ್ ಹಾಕಿರಬಹುದು” ಎಂದು ಹೇಳಿಕೆ ನೀಡಿದ್ದಾನೆ.
“ನನಗೆ ನರಗಳ ನೋವು ಕಾಣಿಸುತ್ತಿದೆ. ಸಹೋದರಿಯ ಅಕ್ರಮ ಸಂಬಂಧಕ್ಕೆ ನಾನು ಅಡ್ಡಿಯಾಗಿದ್ದೆ. ನಾನು ಕೂಡ ಹೆಲ್ತ್ ಚೆಕ್ ಅಪ್ ಮಾಡಿಸಿಕೊಳ್ಳಬೇಕು. ಎರಡು ಬಾರಿ ಆಕೆಯ ಮನೆಯಲ್ಲಿ ಊಟ ಮಾಡಿದ್ದೆ. ಆಕೆ ನನಗೂ ವಿಷ ಹಾಕಿರಬಹುದು ಎಂಬ ಸಂಶಯವಿದೆ. ನನ್ನ ಪ್ರತಿಮಾಗೆ ಹಾಗು ದಿಲೀಪ್ ಇಬ್ಬರಿಗೂ ಕಠಿಣ ಶಿಕ್ಷೆ ಆಗಬೇಕು” ಎಂದು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಅಜೆಕಾರು ಠಾಣೆಯಲ್ಲಿ ಮಾತುಕತೆ ನಡೆದಿತ್ತು
ದಿಲೀಪ್ ಹೆಗ್ಡೆ ಜೊತೆಗಿನ ಒಡನಾಟ ಬಯಲಾದ ಬಳಿಕ ಮಾತುಕತೆ ವೇಳೆ ದಿಲೀಪ್ ತಂದೆ ಕೂಡ ಬಂದಿದ್ದು, ‘ಇನ್ನು ಮುಂದೆ ನನ್ನ ಮಗ ಆಕೆಯ ಜೊತೆ ಕಾಣಿಸಿಕೊಳ್ಳಲ್ಲ’ ಎಂದಿದ್ದರು. ಆದರೂ ಇಬ್ಬರ ನಡುವೆ ಒಡನಾಟ ನಿಲ್ಲದೆ ಮಾತುಕತೆ ನಡೆದ ಸಿಸಿಟಿವಿ ಫುಟೇಜ್ ಅಜೆಕಾರ ಠಾಣೆಯಲ್ಲಿ ಭದ್ರವಾಗಿದೆ. ಎಲ್ಲಾ ಸಾಕ್ಷಿಗಳ ಪರಿಗಣಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು” ಎಂದು ಸಂದೀಪ್ ಹೇಳಿಕೆ ನೀಡಿದ್ದಾರೆ.
ಶವದ ಮರಣೋತ್ತರ ಪರೀಕ್ಷೆ ವರದಿ
ಕೊಲೆ ಸಂಶಯದಿಂದ ಆರಂಭದಲ್ಲೇ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಉಸಿರುಗಟ್ಟಿ ಸಾಯಿಸಿರುವುದು ಪೋಸ್ಟ್ಮಾರ್ಟಮ್ ರಿಪೋರ್ಟ್ ನಲ್ಲಿ ಸಾಬೀತಾಗಿದೆ. ಕೊಲೆಯಾಗಿ 6ನೇ ದಿನ ಮೂಳೆ ಸಂಗ್ರಹಿಸಿರುವ ಪೊಲೀಸರು ವಿಷ ಬಳಕೆಯ ರಾಸಾಯನಿಕ ಅಂಶ ಮೂಳೆಗಳಲ್ಲಿ ಪತ್ತೆ ಆಗಬೇಕೆಂದು ಅಜೆಕಾರು ಪೊಲೀಸರು ಕಾಯುತ್ತಿದ್ದಾರೆ.
DAKSHINA KANNADA
ಮಂಗಳೂರು : ಕೂಟ ಮಹಾ ಜಗತ್ತಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೇತನ ವಿತರಣೆ
ಮಂಗಳೂರು : ಕೂಟ ಮಹಾ ಜಗತ್ತು ಮಂಗಳೂರು ಅಂಗ ಸಂಸ್ಥೆಯ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣಾ ಕಾರ್ಯಕ್ರಮವು ಜರುಗಿತು.
ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿಘ್ನೇಶ್ ಕಾರಂತ್, ಮೈಟ್‌ನ ಬಿ.ಇ ಹಾಗೂ ಸಂಜನಾ ಹೇರ್ಳೆ ಕೆ. ಅವರಿಗೆ ತಲಾ ೨೫ ಸಾವಿರ ಸ್ಕಾಲರ್‌ಶಿಪ್ ನೀಡಲಾಯಿತು.
“ಭವಿಷ್ಯದ ದಿನಗಳಲ್ಲಿ ಮತ್ತೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು” ಎಂದು ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಹೇಳಿದರು.
“ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಸದಸ್ಯತ್ವ ಅಭಿಮಾನ ಆಗಬೇಕಿದೆ. ವ್ಯಾಪ್ತಿಯ ಎಲ್ಲರೂ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕೆಲಸ ಆಗಬೇಕು” ಎಂದು ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಹೇಳಿದರು.
ಸಂಘಟನಾ ಕಾರ್ಯದರ್ಶಿ ಕೃಷ್ಣಮಯ್ಯ, ಶಿವರಾಮಯ್ಯ, ಪದ್ಮನಾಭ ಮಯ್ಯ, ಮಹಿಳಾ ವೇದಿಕೆಯ ಪ್ರಭಾರಾವ್, ಲಲಿತಾ ಆರ್.ಉಪಾಧ್ಯಾಯ, ಶಶಿಪ್ರಭಾ ಐತಾಳ್, ಸುಮತಿ ಕೋರಿಯಾ, ಅನುರಾಧ, ಅನುಪಮಾ ಮೊದಲಾದವರು ಉಪಸ್ಥಿತರಿದ್ದರು.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS6 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!