ಉಡುಪಿ : ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಇಂದು ರಾತ್ರೀ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಎಕ್ಸ್ ಪ್ರೆಸ್ ಬಸ್ಸು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ವ್ಯಕ್ತಿ ದಾರಣವಾಗಿ ಸಾವನ್ನಪ್ಪಿದ್ದಾನೆ.
ಮೃತಪಟ್ಟವರನ್ನು ಮೂಳೂರು ನಿವಾಸಿ ಹರಿ ಓಂ ಯಾನೆ ರಮೇಶ್ ಜಿರ‍್ಕೇರಾ ಎಂದು ಗುರುತಿಸಲಾಗಿದೆ.
ಮೂಳೂರು ರಾಷ್ಟ್ರೀಯ ಹೆದ್ದಾರಿ 66 ರ ಬಳಿಯ ಸಾಗರ ಹೋಟೇಲು ಎದುರು ರಸ್ತೆ ದಾಟಲು ನಿಂತಿದ್ದಾಗ, ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ಖಾಸಾಗಿ ವೇಗಧೂತ ಬಸ್ಸು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ರಮೇಶ್‌ರವರ ತಲೆ ಜಜ್ಜಿ ಹೋಗಿದ್ದು, ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.