Thursday, August 11, 2022

ನೆಲ್ಯಾಡಿ: ನಿಂತಿದ್ದ ಕಾರಿನ ಮೇಲೆ ಬಿದ್ದ ಧೂಪದ ಮರ- ಓರ್ವನ ದುರಂತ ಅಂತ್ಯ

ನೆಲ್ಯಾಡಿ: ನಿಂತಿದ್ದ ಕಾರಿನ ಮೇಲೆ ಮರಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ದುರಂತ ಘಟನೆ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಅಡ್ಡಹೊಳೆಯಲ್ಲಿ ಇಂದು ನಡೆದಿದೆ.


ನೆಲ್ಯಾಡಿ ಮೂಲಕ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಬೆಳಿಗ್ಗೆ 7.30ರ ವೇಳೆಗೆ ಶಬ್ದ ಬಂದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ನಿಲ್ಲಿಸಿ ಬಾನೆಟ್ ತೆಗೆದು ಪರಿಶೀಲಿಸುತ್ತಿದ್ದ ವೇಳೆ ರಸ್ತೆ ಬದಿ ಜವರಾಯನ ರೂಪದಲ್ಲಿದ್ದ ಒಣಗಿದ ಧೂಪದ ಮರವೊಂದು ಕಾರು ಹಾಗೂ ಅವರ ಮೇಲೆಯೇ ಬಿದ್ದಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು ಕಾರಿನಲ್ಲಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಉಡುಪಿ ಮೂಲದವರಾಗಿದ್ದು ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜಗಮಗಿಸುತ್ತಿದೆ ಮಂಗಳೂರು ಸಿಟಿ ಕಾರ್ಪೊರೇಶನ್

ಮಂಗಳೂರು: ಆಜಾದಿ ಕಾ ಅಮೃತ್‌ಮಹೋತ್ಸವದ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ.ನಿನ್ನೆ ರಾತ್ರಿಯಿಂದ ಮಂಗಳೂರು ನಗರ ಪಾಲಿಕೆ ಕಚೇರಿಯಲ್ಲಿ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದ್ದು, ಇದೀಗ ಪಾಲಿಕೆ ಕಚೇರಿ ಜಗಮಗಿಸುತ್ತಿದೆ. ಹರ್‌ಘರ್‌ತಿರಂಗಾ...

ಕೃಷಿಕರೇ ಗಮನಿಸಿ: ಕಿಸಾನ್ ಸಮ್ಮಾನ್ ನಿಧಿಯ ಪರಿಹಾರಕ್ಕಾಗಿ ಆ. 15 ರೊಳಗೆ ಇ-ಕೆವೈಸಿ ಕಡ್ಡಾಯ

ಮಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕರ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾhttp://pmkisan.gov.in ಪೋರ್ಟಲ್‌ನ ಫಾರ್ಮರ್ಸ್ ಕೋರ್ನರ್ ಮೂಲಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್...

ಪ್ರವೀಣ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ-ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಶಿಯಾಬ್, ಬಶೀರ್, ರಿಯಾಝ್ ಎಂದು...