LATEST NEWS
ಚಲಿಸುತ್ತಿದ್ದ ಬೈಕಿನಲ್ಲಿ ಪಟಾಕಿ ಸಿಡಿಸಿ ಪುಂಡಾಟ; ಇಬ್ಬರ ಬಂಧನ
ಮಂಗಳೂರು/ಬೆಂಗಳೂರು : ಚಲಿಸುತ್ತಿದ್ದ ಸ್ಕೂಟರ್ ನಲ್ಲಿ ಪಟಾಕಿ ಸಿಡಿಸಿ ಪುಂಡಾಟ ಮೆರೆದ ಇಬ್ಬರನ್ನು ಹೆಣ್ಣೂರು ಸಂಚಾರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾಡುಗೊಂಡನಹಳ್ಳಿ ನಿವಾಸಿ ಎಸ್ ಆದಿತ್ಯ ಮತ್ತು ಥಣಿಸಂದ್ರದ ಅಮರ ಜ್ಯೋತಿ ಲೇಔಟ್ ನಿವಾಸಿ ವಿ ಅಕ್ಷಯ್ ಕುಮಾರ್ (18) ಎಂದು ಬಂಧಿತರು. ಆದಿತ್ಯ ಪಿಯು ವಿದ್ಯಾರ್ಥಿಯಾಗಿದ್ದರೆ, ಅಕ್ಷಯ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ,
ಆದಿತ್ಯ ಸ್ಕೂಟರ್ ಓಡಿಸುತ್ತಿದ್ದು, ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಅಕ್ಷಯ್ ಪಟಾಕಿಗಳನ್ನು ಸಿಡಿಸಿ ರಸ್ತೆಗೆ ಎಸೆದು ಪುಂಡಾಟ ಪ್ರದರ್ಶಿಸಿದ್ದ. ಹೆಲ್ಮೆಟ್ ಧರಿಸದೇ, ಅಡ್ಡಾದಿಡ್ಡಿಯಾಗಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಇಬ್ಬರು ಆರೋಪಿಗಳು ಪಟಾಕಿ ಅಂಟಿಸಿ ರಸ್ತೆಯಲ್ಲಿ ಕಂಡವರತ್ತ ಎಸೆಯುತ್ತ ಸಾಗಿದ್ದರು. ಕಿಡಿಗೇಡಿಗಳ ಪುಂಡಾಟವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ಕಾರು ಅಪಘಾ*ತದಲ್ಲಿ ಖ್ಯಾತ ಕಿರುತೆರೆ ನಟನ ಮಗ ಸಾ*ವು
ಈ ಕುರಿತು ಕೂಡಲೇ ಕಾರ್ಯಪ್ರವೃತ್ತರಾದ ಹೆಣ್ಣೂರು ಸಂಚಾರ ಪೊಲೀಸರು, ಎಲೆಕ್ಟ್ರಿಕ್ ಸ್ಕೂಟರ್ ನೋಂದಣಿ ಸಂಖ್ಯೆ ಆಧರಿಸಿ ಇಬ್ಬರನ್ನು ಪತ್ತೆ ಹಚ್ಚಿ, ಹೆಲ್ಮೆಟ್ ರಹಿತ ಚಾಲನೆ, ಹಿಂಬದಿ ಸವಾರನ ಹೆಲ್ಮೆಟ್ ರಹಿತ ಪ್ರಯಾಣ, ಪರವಾನಗಿ ರಹಿತವಾಗಿ ವಾಹನ ಚಾಲನೆ, ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ಚಾಲನೆ, ಸಂಚಾರಕ್ಕೆ ಅಡಚಣೆ, ಜಿಗ್ ಜಾಗ್ ಡ್ರೈವಿಂಗ್, ಲೇನ್ ಶಿಸ್ತು ಉಲ್ಲಂಘನೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಇಬ್ಬರಿಂದ 5,500 ರೂ ದಂಡ ವಸೂಲಿ ಮಾಡಿದ್ದಾರೆ.
LATEST NEWS
ಉಡುಪಿ : ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ವಂಚನೆ; 2.80 ಲಕ್ಷ ಕಳೆದುಕೊಂಡ ಯುವತಿ !
ಉಡುಪಿ : ಮೊಬೈಲ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಂದೇಶ ಪಡೆದ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಚೈತ್ರಾ (26) , ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿ 2.80 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಸುಮಾರು ಏಳು ತಿಂಗಳ ಹಿಂದೆ ತನ್ನ ಮೊಬೈಲ್‌ನಲ್ಲಿ ಮಾಡಿದ ಮೆಸೇಜ್‌ಗೆ ವಿಡಿಯೋ ಒಂದನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದು, ಅದರಿಂದ ಗೇಮ್ ಡೌನ್‌ಲೋಡ್ ಮಾಡಿದ್ದರು. ಅದಕ್ಕೆ 20,000ರೂ. ಹಾಕುವಂತೆ ಬಂದ ಸೂಚನೆಯಂದೆ ಗೂಗಲ್‌ಪೇ ಮೂಲಕ ಹಣ ಹಾಕಿದ್ದರು.
ಅದೇ ರೀತಿ ಸೈಬರ್ ವಂಚಕರ ವಿವಿಧ ಖಾತೆಗಳಿಗೆ ಒಟ್ಟು 2,80,000ರೂ. ಗಳನ್ನು ಗೂಗಲ್‌ಪೇ ಮೂಲಕ ಹಾಕಿದ್ದು, ಕೊನೆಗೂ ಆನ್‌ಲೈನ್ ವಂಚಕರಿಂದ ಮೋಸ ಹೋಗಿರುವುದು ತಿಳಿದಿದೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG BOSS
BBK11: ಬಿಗ್ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ಮದ್ವೆ ಆಗ್ತಾರಂತೆ ಈ ಸ್ಪರ್ಧಿ; ಯಾರವರು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಐದನೇ ವಾರಕ್ಕೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಬಿಗ್ಬಾಸ್ಗೆ ಮೂರನೇ ವಾರಕ್ಕೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಗಾಯಕ ಹನುಮಂತ ಮದುವೆ ಆಗ್ತಾರಂತೆ. ಹೌದು, ಬಿಗ್ಬಾಸ್ ಮನೆಯಿಂದ ಆಚೆ ಬಂದ ಬೆನ್ನಲ್ಲೇ ಮದುವೆ ಆಗ್ತಾ ಇರೋದೆ ಅಂತ ಹೇಳಿದ್ದಾರೆ.
ಗೌತಮಿ ಜಾಧವ್ ಯಾವಾಗ ಮದುವೆ ಆಗ್ತೀರಾ ಅಂತ ಹೇಳುತ್ತಾರೆ. ಆಗ ಅದಕ್ಕೆ ಹನುಮಂತ ಇಲ್ಲಿಂದ ಹೋಗಿದ ಕೂಡಲೇ ಮದ್ವೆ ಆಗ್ತೀನಿ. ಹುಡುಗಿ ಇದ್ದಾಳೆ ಅಂತ ಹೇಳಿದ್ದಾರೆ. ಅದಕ್ಕೆ ಗೌತಮಿ ಆ ಹುಡುಗಿ ಹೆಸರೇನು? ಅವರ ಬಗ್ಗೆ ಒಂದು ಹಾಡು ಹಾಡಿ ಅಂತ ಪಿಡಿಸಿದ್ದಾರೆ. ಇದಾದ ಬಳಿಕ ಗೌತಮಿ ಅವರ ಮುಂದೆ ಎರಡು ಹಾಡು ಹಾಡಿದ್ದಾರೆ.
ಸದ್ಯ ಬಿಗ್ಬಾಸ್ ಮನೆಗೆ ಬಂದ ಹನುಮಂತ ಅವರು ಎರಡು ಬಾರಿ ಕ್ಯಾಪ್ಟನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಹೊಡೆಸಿಕೊಂಡು ಸಹ ಸ್ಪರ್ಧಿಗಳಿಗೆ ಶಾಕ್ ನೀಡಿದ್ದರು. ಸದ್ಯ ಬಿಗ್ಬಾಸ್ ಮನೆಯಲ್ಲಿ ಹನುಮಂತ ಅವರು ಎಲ್ಲರ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.
DAKSHINA KANNADA
ಹಿಂದುಗಳ ಶ್ರದ್ಧಾಕೇಂದ್ರದ ಗುರುಗಳ ಮೇಲೆ ನಡೆದಿರುವ ದಾ*ಳಿ ಅತ್ಯಂತ ಗಂಭೀ*ರ ವಿಚಾರ: ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು : ಕಾಸರಗೋಡಿನ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ತೀರ್ಥ ಶ್ರೀಗಳು ಸಂಚರಿಸುತ್ತಿದ್ದ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಚೌಟ, 400 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಎಡನೀರು ಸಂಸ್ಥಾನದ ಪೀಠಾಧಿಪತಿಯಾಗಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದಾ*ಳಿ ಮಾಡಿದ ದು*ಷ್ಕರ್ಮಿಗಳನ್ನು ಕೇರಳ ಸರ್ಕಾರವು ಕೂಡಲೇ ಬಂಧಿಸಿ ಇಂಥಹ ವಿಕೃತ ಮನಸ್ಥಿತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು. ಶಾಂತಿ-ಸಾಮರಸ್ಯದ ಮೂಲಕ ಹಿಂದೂ ಸಮಾಜದ ಪರ ಕೆಲಸ ಮಾಡುತ್ತಿರುವ ಸ್ವಾಮೀಜಿ ಮೇಲೆಯೇ ಕಿಡಿಗೇಡಿಗಳು ನಡುರಸ್ತೆಯಲ್ಲೇ ಈ ರೀತಿ ಕಾನೂನು ಕೈಗೆತ್ತಿಕೊಂಡು ಹ*ಲ್ಲೆಗೆ ಮುಂದಾಗಿರುವುದು ಅತ್ಯಂತ ಗಂಭೀ*ರ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಕಾಸರಗೋಡಿನ ಬೋವಿಕ್ಕಾನ–ಇರಿಯಣ್ಣಿ ಮಾರ್ಗ ಮಧ್ಯೆ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರನ್ನು ಫಾಲೋ ಮಾಡಿಕೊಂಡು ಬಂದು ದು*ಷ್ಕರ್ಮಿಗಳ ಗುಂಪು ದಾ*ಳಿ ನಡೆಸಿರುವುದು ಅಕ್ಷಮ್ಯ. ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಹಾಗೂ ಹಿಂದೂ ಸಮಾಜದ ಆಧರಣೀಯರು, ಮಾರ್ಗದರ್ಶಕರಾಗಿರುವ, ಆಧ್ಯಾತ್ಮಿಕ ಗುರು ಎಡನೀರು ಸಂಸ್ಥಾನದ ಶ್ರೀಗಳ ಮೇಲೆ ನಡೆದಿರುವ ಈ ದಾಳಿಯು ಹಿಂದೂ ಸಮುದಾಯದವರ ಮೇಲೆ ನಡೆಸಿರುವ ದಾ*ಳಿಯಾಗಿದೆ. ಇಂತಹ ಜಿಹಾದಿ ಮನಸ್ಥಿತಿಯ ಘಟನೆಗಳನ್ನು ಇಡೀ ಹಿಂದೂ ಸಮಾಜವು ಒಟ್ಟಾಗಿ ಖಂಡಿಸಬೇಕು ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
ಇದನ್ನೂ ಓದಿ : ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಹೀಗಿರುವಾಗ, ಕೇರಳ ಸರ್ಕಾರವು ಸ್ವಾಮೀಜಿ ಮೇಲಿನ ಹ*ಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಸರ್ಕಾರದ ಕಡೆಯಿಂದ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಚೌಟ ಒತ್ತಾಯಿಸಿದ್ದಾರೆ
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS7 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!
Pingback: ಪ್ರಚಾರದ ವೇಳೆ ಬೈಕ್ನಿಂದ ಬಿದ್ದ ನಿಖಿಲ್ ಕುಮಾರಸ್ವಾಮಿ - NAMMAKUDLA NEWS - ನಮ್ಮಕುಡ್ಲ ನ್ಯೂಸ್