LATEST NEWS
ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ನಾಯಕನ ಅಕ್ರಮ ಆಸ್ತಿ ಬುಲ್ಡೋಜರ್ನಿಂದ ಧ್ವಂಸಗೊಳಿಸಿದ ಸರ್ಕಾರ
ನೋಯ್ಡಾ: ಕ್ಷುಲ್ಲಕ ಕಾರಣಕ್ಕೆ ನೆರೆ ಹೊರೆಯ ಮನೆಯವರೊಂದಿಗೆ ಕಿತ್ತಾಟ ನಡೆಸಿ ಮಹಿಳೆಗೆ ಹಲ್ಲೆ ನಡೆಸಿದ ಬಿಜೆಪಿಯದ್ದೇ ನಾಯಕನ ಹಲವು ಅಕ್ರಮ ಆಸ್ತಿಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಮೂಲಕ ವಿರೋಧ ಪಕ್ಷದ ಸಹಿತ ತಮ್ಮ ಪಕ್ಷದವರು ಗೂಂಡಾಗಿರಿ ನಡೆಸಿದರೆ ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಏನಿದು ಘಟನೆ
ಶ್ರೀಕಾಂತ್ ತ್ಯಾಗಿ ಎಂಬಾತ ಬಿಜೆಪಿಯ ಕಿಸಾನ್ ಮೋರ್ಚಾ ಸದಸ್ಯನಾಗಿದ್ದು, ಬಿಜೆಪಿಯ ಹಲವು ನಾಯಕರೊಂದಿಗೆ ನಂಟು ಹೊಂದಿರೋದಾಗಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬರೆದುಕೊಂಡಿದ್ದ. ನೋಯ್ಡಾದ ಸೆಕ್ಟರ್-93 ಬಿನಲ್ಲಿ ಇರುವ ಗ್ರಾಂಡ್ ಒಮಾಕ್ಸ್ ಸೊಸೈಟಿಯಲ್ಲಿ ಆಸ್ತಿ ಹೊಂದಿದ್ದ.
ಜನ ವಸತಿ ಪ್ರದೇಶದ ಸೊಸೈಟಿಯಲ್ಲಿ ಕೆಲವು ಗಿಡಗಳನ್ನು ನೆಡಲು ಶ್ರೀಕಾಂತ್ ತ್ಯಾಗಿ ನಿರ್ಧರಿಸಿದ್ದ. ಈ ವೇಳೆ ಇದೇ ಸೊಸೈಟಿಯ ಜನರು ತಗಾದೆ ತೆಗೆದರು. ಸೊಸೈಟಿಯ ನಿಯಮಗಳಿಗೆ ವಿರುದ್ಧವಾಗಿ ಗಿಡ ನೆಡಬೇಡಿ ಎಂದು ತಾಕೀತು ಮಾಡಿದ್ದರು.
ಈ ವೇಳೆ, ತನ್ನ ನೆರೆ ಹೊರೆಯ ಮನೆಯವರೊಂದಿಗೆ ಕಿತ್ತಾಟ ನಡೆಸಿದ ತ್ಯಾಗಿ, ಮಹಿಳೆ ಮೇಲೆ ಹಲ್ಲೆ ಎಸಗಿದ್ದ. ಮಹಿಳೆಯ ಮೇಲೆ ಶ್ರೀಕಾಂತ್ ತ್ಯಾಗಿ ದೌರ್ಜನ್ಯ ಎಸಗುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರ ಜೊತೆಯಲ್ಲೇ ಹಲ್ಲೆ ಘಟನೆ ನಡೆದ ಬಳಿಕ 15 – 20 ರೌಡಿಗಳು ಸೊಸೈಟಿಗೆ ನುಗ್ಗಿ ಜನರಿಗೆ ಧಮಕಿ ಹಾಕಿದ ಘಟನೆಯೂ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಶ್ರೀಕಾಂತ್ ತ್ಯಾಗಿ ವಿರುದ್ಧ ಗೂಂಡಾ ಕಾಯ್ದೆ ಅನ್ವಯ ಕೇಸ್ ದಾಖಲಿಸಿರುವ ಉತ್ತರ ಪ್ರದೇಶ ಸರ್ಕಾರ ಆತನ ಬಂಧನಕ್ಕೆ ಬಲೆ ಬೀಸಿದೆ.
ಘಟನೆ ನಡೆದ ದಿನದಿಂದ ಶ್ರೀಕಾಂತ್ ತ್ಯಾಗಿ ತಪ್ಪಿಸಿಕೊಂಡಿದ್ದಾನೆ. ಆತನ ಪರ ವಹಿಸಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಘಟನೆ ನಡೆದ ಸೊಸೈಟಿಗೆ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್, ನೋಯ್ಡಾ ಪೊಲೀಸ್ ಮುಖ್ಯಸ್ಥ ಅಲೋಕ್ ಕುಮಾರ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಸಾಂತ್ವನ ಹೇಳುವ ಜೊತೆಯಲ್ಲೇ ನ್ಯಾಯದ ಭರವಸೆ ನೀಡಿದ್ದಾರೆ.
ಅಷ್ಟೇ ಅಲ್ಲ, ಶ್ರೀಕಾಂತ್ ತ್ಯಾಗಿಗೆ ಸೇರಿದ ಕೆಲವು ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆದಿದೆ. ಇನ್ನು ಹಲವು ಅಕ್ರಮ ಆಸ್ತಿಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ.
ಬಿಜೆಪಿ ನಾಯಕರೂ ಕೂಡಾ ಪೊಲೀಸರ ಕಠಿಣ ಕ್ರಮವನ್ನು ಶ್ಲಾಘಿಸಿದ್ದಾರೆ ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡಾ ತ್ಯಾಗಿ ಬಂಧನಕ್ಕೆ ಒತ್ತಾಯಿಸಿದೆ.
LATEST NEWS
ಪ್ರಿಯಕರನ ಮೇಲೆ ಆ್ಯ*ಸಿಡ್ ಎರಚಿದ ಯುವತಿ!
ಮಂಗಳೂರು/ ಉತ್ತರ ಪ್ರದೇಶ : ಪ್ರೀತಿಸಿ ಮೋಸ ಮಾಡಿದರೆ ಯುವಕರು ಪ್ರೇಯಸಿಯನ್ನು ಹ*ತ್ಯೆ ಮಾಡುವುದನ್ನು, ಆ್ಯಸಿ*ಡ್ ಎರಚುವ ಸುದ್ದಿಗಳನ್ನು ಕೇಳುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ವಿಭಿನ್ನವಾದ ಘಟನೆ ನಡೆದಿದೆ. ಇಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಮೇಲೆ ಆ್ಯ*ಸಿಡ್ ದಾಳಿ ನಡೆಸಿದ್ದಾರೆ. ಮಂಗಳವಾರ(ಏ.23) ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಕೃತ್ಯ ಎಸಗಿದ್ದು ಯಾಕೆ?
ಯುವತಿ ಈ ರೀತಿ ದುಷ್ಕೃತ್ಯ ಮೆರೆಯಲು ಕಾರಣ ‘ಪ್ರೀತಿ’. ಆಕೆಯ ಪ್ರಿಯತಮ ಪ್ರೀತಿಸಿ ಮೋಸ ಮಾಡಿ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ ಎನ್ನಲಾಗಿದೆ. ಹೀಗಾಗಿ ಯುವತಿ ಆತನ ಮುಖದ ಮೇಲೆ ಆ್ಯ*ಸಿಡ್ ಎರಚಿದ್ದಾಳೆ. ಮದುವೆಯ ಮೆರವಣಿಗೆಯ ವೇಳೆ ಯುವತಿ ವೇಷ ಮರೆಸಿಕೊಂಡು ಬಂದು ವರನ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ ಎನ್ನಲಾಗಿದೆ.
ಆ್ಯ*ಸಿಡ್ ಬಿದ್ದ ಪರಿಣಾಮ ಗಾಯಗೊಂಡ ಯುವಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನಿಗೆ ಆ್ಯ*ಸಿಡ್ ಎರಚಿದ ಯುವತಿಯನ್ನು ಹಿಡಿದ ಮಹಿಳೆಯರು ಸರಿಯಾಗಿ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ತಾಯಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಲಿಯಾದ ಪೊಲೀಸ್ ಅಧಿಕಾರಿ ಮುನ್ನಾ ಲಾಲ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ : ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!
ಯುವಕ – ಯುವತಿ ಪರಸ್ಪರ ಪ್ರೀತಿಸಿದ್ದರು. ದೈಹಿಕ ಸಂಪರ್ಕ ಹೊಂದಿದ್ದರು. ಆದರೆ, ಇವರ ಸಂಬಂಧವನ್ನು ಎರಡೂ ಕುಟುಂಬ ವಿರೋಧಿಸಿತ್ತು ಎನ್ನಲಾಗಿದೆ. ಏಪ್ರಿಲ್ 22 ರಂದು ಯುವಕನ ಮನೆಯವರು ಬೇರೆ ಯುವತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿದ್ದರು. ಇದರಿಂದ ಕೋಪಗೊಂಡ ಯುವತಿ ಮದುವೆ ಮೆರವಣಿಗೆಯಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.
LATEST NEWS
ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!
ರಾಯಚೂರು : ಪತ್ನಿಗೆ ಮೆಸೇಜ್ ಮಾಡಿದ ಕಾರಣಕ್ಕೆ ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ ಆ ಯುವಕನನ್ನು ಬರ್ಬರವಾಗಿ ಕೊ*ಲೆಗೈದಿರುವ ಘಟನೆ ರಾಯಚೂರಿನ ತುಗ್ಗಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಖಾದರ್ ಭಾಷಾ (28) ಕೊ*ಲೆಯಾದ ವ್ಯಕ್ತಿ. ಮಾರುತಿ ಹ*ತ್ಯೆಗೈದ ಪೂಜಾರಿ. ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳು. ಆದರೆ, ಖಾದರ್ ಭಾಷಾ ಮಾರುತಿ ಪತ್ನಿ ಮೇಲೆ ಕಣ್ಣು ಹಾಕಿದ್ದಾನೆ. ಹೀಗಾಗಿ ಮಾರುತಿ, ಖಾದರ್ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಭೀ*ಭತ್ಸವಾಗಿ ಹ*ತ್ಯೆ ಮಾಡಿದ್ದಾನೆ.
ಕೊ*ಲೆಗೈದ ಮಾರುತಿ ಖುದ್ದಾಗಿ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕೊ*ಲೆಯಲ್ಲಿ ಇತರರೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!
International news
4 ಸಾವಿರ ಕೋಟಿಯ ಮನೆ..8 ಖಾಸಗಿ ಜೆಟ್..700 ಹೈಎಂಡ್ ಕಾರುಗಳು..! ಯಾರು ಈ ಶ್ರೀಮಂತ..?
ಮಂಗಳೂರು : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಎಲೋನ್ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲರೂ ಹುಬ್ಬೇರುವಷ್ಟು ಆಸ್ತಿ, ಪಾಸ್ತಿ ಹೊಂದಿದ್ದಾರೆ. ಆದರೆ, ಅವರಿಗಿಂತಲೂ ಶ್ರೀಮಂತರಿದ್ದಾರೆ ಗೊತ್ತಾ!? ಅಬ್ಬಾ! ಹೌದಾ! ಹಾಗಾದರೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ನೀವು ಹುಬ್ಬೇರಿಸುತ್ತಿರಬಹುದು. ಇಲ್ಲಿದೆ ಆ ಕುಟುಂಬದ ಸಂಪೂರ್ಣ ವಿವರ.
ಬ್ಲೂಮ್ಬರ್ಗ್ ವರದಿ ಮಾಡಿರೋ ಶ್ರೀಮಂತರು
ಎಲೋನ್ ಮಸ್ಕ್ ಮನೆ ಬರೋಬ್ಬರಿ 4 ಸಾವಿರ ಕೋಟಿ ಬೆಲೆ ಬಾಳಿದ್ರೆ, ಈ ಕುಟುಂಬ 8 ಖಾಸಗಿ ಜೆಟ್ ಗಳನ್ನು ಹೊಂದಿದೆ. 700 ಹೈ ಎಂಡ್ ಕಾರುಗಳು ಇವರಲ್ಲಿದೆ. ಬ್ಲೂಮ್ ಬರ್ಗ್ ಇತ್ತೀಚಿಗೆ ಮಾಡಿದ ವರದಿಯಂತೆ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಳ್ಳುವ ಎಲೋನ್ ಮಸ್ಕ್ ಆಸ್ತಿ 14,87,360 ಕೋಟಿ(ಹದಿನಾಲ್ಕು ಲಕ್ಷದ ಎಂಬತ್ತೇಳು ಸಾವಿರದ ಮುನ್ನೂರ ಅರುವತ್ತು ಕೋಟಿ)ಯಾಗಿದೆ.
ಆದ್ರೆ, ಆ ಕುಟುಂಬದ ಒಟ್ಟು ಆಸ್ತಿ ಕನಿಷ್ಟ ಅಂದ್ರೂ 25,33,113 ಕೋಟಿ (ಇಪ್ಪತೈದು ಲಕ್ಷದ ಮೂವತ್ತಮೂರು ಸಾವಿರದ ನೂರ ಹದಿಮೂರು ಕೋಟಿ) ಎಂದು ಅಂದಾಜಿಸಿದೆ. ಆದ್ರೆ, ಎಲೋನ್ ಮಸ್ಕ್ ಆಸ್ತಿ ವೈಯಕ್ತಿಕವಾಗಿದ್ದರೆ, ಇವರದ್ದು ಕುಟುಂಬದ ಆಸ್ತಿಯಾಗಿದೆ. ಆದ್ರೆ ಜಗತ್ತಿನಲ್ಲೇ ಅತ್ಯಂತ ಐಶಾರಾಮಿ ಜೀವನ ನಡೆಸ್ತಾ ಇದೆ ಈ ಕುಟುಂಬ.
ಯಾವುದು ಆ ಕುಟುಂಬ?
ಅಂದಹಾಗೆ ಅತ್ಯಂತ ಐಷಾರಾಮಿ ಜೀವನ ಸಾಗಿಸುತ್ತಿರುವ ಆ ಕುಟುಂಬ ‘ಅಬುಧಾಬಿಯ ರಾಜಮನೆತನ‘. ಇದನ್ನು ಅಲ್-ನಯನ್ ಕುಟುಂಬ ಎಂದೂ ಕೂಡಾ ಕರೆಯಲಾಗುತ್ತದೆ. ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಇವರೇ ಅತ್ಯಂತ ಐಶಾರಾಮಿ ಜೀವನ ಸಾಗಿಸುತ್ತಿರುವ ಕುಟುಂಬ. ಇವರು ವಾಸವಾಗಿರುವ ಅರಮನೆಯ ಅಂದಾಜು ಮೌಲ್ಯ 4000 ಕೋಟಿಯದ್ದಾಗಿದೆ. ಇನ್ನು 700 ಐಶಾರಾಮಿ ಕಾರುಗಳು, ಗಾಲ್ಫ್ ಆಡಬಹುದಾದ ದೊಡ್ಡದಾದ ವಿಹಾರ ನೌಕೆ, ಇನ್ನು ತಿರುಗಾಡಲು 8 ಖಾಸಗಿ ಜೆಟ್ಗಳು ಇವರ ಬಳಿ ಇದೆ.
ಜಗತ್ತಿನಾದ್ಯಂತ ಸಾವಿರಾರು ಕೋಟಿ ಹೂಡಿಕೆ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮತ್ತು ಮುಖ್ಯಸ್ಥ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಯಾನ್ ಅವರ ಕುಟುಂಬವು ಪ್ರಪಂಚದಾದ್ಯಂತ ಸಾವಿರಾರು ಹೂಡಿಕೆಗಳನ್ನು ಹೊಂದಿದೆ. ಅಲ್ಲದೇ, ಜಗತ್ತಿನಾದ್ಯಂತ ಸಾಕಷ್ಟು ಆಸ್ತಿಗಳನ್ನು ಈ ಕುಟುಂಬ ಖರೀದಿಸಿದೆ. ಪ್ಯಾರಿಸ್ನಲ್ಲಿರುವ ಚಟೌ ಡಿ ಬೈಲೊ ಮತ್ತು ಯುಕೆಯಲ್ಲಿನ ಅನೇಕ ಆಸ್ತಿಗಳ ಮಾಲೀಕತ್ವದ ಕಾರಣ ಶೇಖ್ ಖಲೀಫಾ ಅವರನ್ನು ಲಂಡನ್ನ ಜಮೀನುದಾರ ಎಂದು ಕರೆಯಲಾಗುತ್ತದೆ. ಈ ಕುಟುಂಬವು ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಹೂಡಿಕೆ ಮಾಡಿದೆ. ಇದು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್ ಎಕ್ಸ್ ಮತ್ತು ರಿಹಾನ್ನಾ ಅವರ ಐಷಾರಾಮಿ ಕಂಪನಿ ಸ್ಯಾವೇಜ್ ಎಕ್ಸ್ನ ಹೆಸರುಗಳನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ : ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?
ರಾಯಲ್ ವಿಹಾರ ನೌಕೆ :
ರಾಯಲ್ ಫ್ಯಾಮಿಲಿ ಅಂದ್ರೆ ಕೇಳ್ಬೇಕಾ..! ಎಲ್ಲವೂ ರಾಯಲ್ ಆಗೇ ಇರುತ್ತದೆ. ಈ ಕುಟುಂಬ ಪ್ರಪಂಚದ ಅತಿದೊಡ್ಡ ವಿಹಾರ ನೌಕೆಯನ್ನು ಹೊಂದಿದೆ, ಅದರ ಮೇಲೆ ಗಾಲ್ಫ್ ಕೋರ್ಸ್ ಅನ್ನು ನಿರ್ಮಿಸಲಾಗಿದೆ. ನೀಲಿ ಸೂಪರ್ಯಾಚ್ನ ಉದ್ದವು ಸುಮಾರು 591 ಅಡಿಗಳು, ಇದರ ಬೆಲೆ ಸುಮಾರು 4,991 ಕೋಟಿ ರೂ. ಜೊತೆಗೆ ಹಲವು ಐಶಾರಾಮಿ ಕಾರುಗಳೂ ಇವೆ. ಬುಗಾಟಿ, ಫೆರಾರಿ, ಮೆಕ್ಲಾರೆನ್, ಮರ್ಸಿಡಿಸ್-ಬೆನ್ಜ್ ಮತ್ತು ಲಂಬೋರ್ಘಿನಿ ಸೇರಿದಂತೆ ಹಲವು ಕಾರುಗಳಿವೆ.