Thursday, September 29, 2022

ಮಂಜೇಶ್ವರದಲ್ಲಿ ಏಕಾಏಕಿ ಕುಸಿದ ಕಟ್ಟಡ

ಮಂಜೇಶ್ವರ: ಏಕಾಏಕಿ ಕಟ್ಟಡವೊಂದು ಕುಸಿದು ಬಿದ್ದ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶದ ವರ್ಕಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ನಡೆದಿದೆ.

ಕಟ್ಟಡದಲ್ಲಿದ್ದ ಅಂಗಡಿ, ಕಚೇರಿಗಳನ್ನು ಮುನ್ನ ದಿನವೇ ತೆರವು ಮಾಡಲಾದ ಕಾರಣ ದೊಡ್ಡ ಮಟ್ಟದ ಅನಾಹುತ ಸಂಭವಿಸಿಲ್ಲ.


ಈ ಬಹುಮಹಡಿ ಕಟ್ಟಡದಲ್ಲಿ ಎರಡು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡಿದ್ದರಿಂದ ಅಲ್ಲಿನ ನಿವಾಸಿಗಳು ಅಂಗಡಿ, ಕಚೇರಿಗಳನ್ನು ಸ್ಥಳಾಂತರಿಸಿದ್ದರು.

ವರ್ಕಾಡಿ ನಿವಾಸಿ ಸುರೇಂದ್ರ ಪೂಜಾರಿ ಎಂಬವರಿಗೆ ಸೇರಿದ ಕಟ್ಟಡ ಇದಾಗಿದೆ. ಮೂರು ಅಂತಸ್ತಿನ ಕಟ್ಟಡವನ್ನು 10 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ.


ಕೆಲ ದಿನಗಳ ಹಿಂದೆ ಕಟ್ಟಡದ ಕೆಳಗಿನ ಪ್ರದೇಶದಲ್ಲಿ ಭೂಕುಸಿತವಾಗಿತ್ತು. ಇದರಿಂದ ಕಟ್ಟಡ ಅಪಾಯದಂಚಿನಲ್ಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು.


ಕಟ್ಟಡದಲ್ಲಿ ಎರಡು ಕುಟುಂಬಗಳೂ ವಾಸವಾಗಿದ್ದವು. ಅದಲ್ಲದೆ ಟೈಲರ್ ಅಂಗಡಿ, ಪೀಠೋಪಕರಣಗಳ ಅಂಗಡಿ, ಬಿಜೆಪಿಯ ಕಚೇರಿ ಮುಂತಾದವುಗಳೂ ಕಾರ್ಯನಿರ್ವಹಿಸುತ್ತಿದ್ದವು.

ಇಲ್ಲಿನ ಜನರನ್ನು ಬೇಗನೇ ಸ್ಥಳಾಂತರಿಸಿದ ಕಾರಣ ದೊಡ್ಡ ಅಪಾಯ ಉಂಟಾಗಿಲ್ಲ.

LEAVE A REPLY

Please enter your comment!
Please enter your name here

Hot Topics

ಕಡಬ: ಕಾನ್ವೆಂಟ್‌ಗೆ ನುಗ್ಗಿ ಹಲ್ಲೆಗೆ ಯತ್ನ-ಇಬ್ಬರು ಯುವಕರು ಅರೆಸ್ಟ್

ಕಡಬ: ಕಾನ್ವೆಂಟ್‌ವೊಂದಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಕಡಬದ ನೆಲ್ಯಾಡಿಯಲ್ಲಿ ನಡೆದಿದೆ.ಕಡಬ ತಾಲೂಕಿನ ಪೇರಡ್ಕ ನಿವಾಸಿಗಳಾದ ಸದಾಂ...

ಮುಲ್ಕಿ: ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ

ಮಂಗಳೂರು: ಮನೆಯೊಂದರಲ್ಲಿ ವ್ಯಕ್ತಿಯೋರ್ವ ನಿಗೂಢವಾಗಿ ಸಾವನ್ನಪ್ಪಿದ್ದು ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದು ಮೃತದೇಹವನ್ನು ತೆರವುಗೊಳಿಸಿದ ಘಟನೆ ಮುಲ್ಕಿಯ ಕಿಲ್ಪಾಡಿ ಮದಕ ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ಸ್ಥಳಿಯ ನಿವಾಸಿ ಸುಧೀರ್ ಶೆಟ್ಟಿ...

ಉಡುಪಿ: PFIಗೆ ಸೇರಿದ ಹಲವು ಕಚೇರಿಗಳು ಸೀಝ್-SDPI ಕಚೇರಿಗೆ ಬೀಗ ಜಡಿದ ಪೊಲೀಸರು

ಉಡುಪಿ: ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳಿಗೆ ದೇಶದಾದ್ಯಂತ ಕೇಂದ್ರದ ಗೃಹ ಸಚಿವಾಲಯವು ನಿರ್ಬಂಧ ವಿಧಿಸಿದ ಬೆನ್ನಲ್ಲೇ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇರುವ ಪಿಎಫ್ಐ ಸಂಘಟನೆಗೆ ಸೇರಿದ ಹಲವು ಕಚೇರಿಗಳನ್ನು ಸೀಝ್‌...