Friday, July 1, 2022

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಪ್ರವಾಸ ಬಂದಿದ್ದ ಬಿಜೆಪಿ ಮುಖಂಡ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ : ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಬಿಜೆಪಿ ಮುಖಂಡರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೃತ ವ್ಯಕ್ತಿಯನ್ನು ಡಾ. ನರೇಂದ್ರ ಕುಮಾರ್(45) ಎಂದು ಗುರುತಿಸಲಾಗಿದೆ.

ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಿದ್ದ ಡಾ. ನರೇಂದ್ರ ಕುಮಾರ್ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿದ್ದರು. ನಿನ್ನೆ ಧರ್ಮಸ್ಥಳದ ಖಾಸಗಿ ಗೆಸ್ಟ್ ಹೌಸ್‌ನಲ್ಲಿ ರೂಂ ಮಾಡಿದ್ದರು.

ಇಂದು ಬೆಳಗ್ಗೆ ಅವರಿಗೆ ಏಕಾಏಕಿ ಎದೆನೋವು ಕಾಣಿಸಿದ್ದು ವಾಹನದಲ್ಲಿ ಕುಳ್ಳಿರಿಸಿ ನೇತ್ರಾವತಿ ಬಳಿ ಬರುತ್ತಿದ್ದಾಗ ವಾಹನದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ತರಲಾಗಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾ. ನರೇಂದ್ರ ಕುಮಾರ್ ಅವರ ಪತ್ನಿ ಸಂದರ್ಶಿನಿ ಶ್ರೀ ಜ್ಞಾನಕ್ಷಿ ವಿದ್ಯಾ ಕೇಂದ್ರದಲ್ಲಿ ಪ್ರಾಂಶುಪಾಲರಾಗಿದ್ದಾರೆ.

LEAVE A REPLY

Please enter your comment!
Please enter your name here

Hot Topics

ನೂಪುರ್‌ ಶರ್ಮಾ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದ ಸುಪ್ರೀಂ ಕೋರ್ಟ್‌

ನವದೆಹಲಿ: ಶರ್ಮಾ ಅವರ ಹಿಡಿತವಿಲ್ಲದ ನಾಲಿಗೆ ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ. ದೇಶದ ಭದ್ರತೆಗೇ ಆತಂಕ ಉಂಟುಮಾಡಿದೆ. ಶರ್ಮಾ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.ಪ್ರವಾದಿ...

ಉಡುಪಿ: ಬಾವಿಗೆ ಹಾರಿ ಯುವತಿ ಜೀವಾಂತ್ಯ

ಉಡುಪಿ: ಬಾವಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕಾಪುವಿನ ಮಡಂಬು ಇನ್ನಂಜೆಯಲ್ಲಿ ನಡೆದಿದೆ.ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ, ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ (22) ಸಾವನ್ನಪ್ಪಿದ ಯುವತಿ.ಶರ್ಮಿಳಾರವರು ಸುಮಾರು 8 ತಿಂಗಳಿನಿಂದ...

ಟೈಲರ್ ಕನ್ನಯ್ಯ ಲಾಲ್ ಕೊಲೆಗೈದವರಿಗೆ ಮರಣದಂಡನೆ ವಿಧಿಸಿ: ಶಾಸಕ ಕಾಮತ್‌ ಆಗ್ರಹ

ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಮಂಗಳೂರು...