ಮಂಗಳೂರು: ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಪಂದನ ತಂಡವು ಬಡ ವರ್ಗದ ಚಿಕಿತ್ಸೆಗಾಗಿ ಕಳೆದ ಹಲವಾರು ವರ್ಷಗಳಿ೦ದ ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಾ ಬರುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ನುಡಿದರು.
ಬಿರುವೆರ್ ಕುಡ್ಲ ದುಬೈ ಅಬುದಾಬಿ ಘಟಕದ ಪರವಾಗಿ ಎರಡು ಕುಟು೦ಬಗಳಿಗೆ ತಲಾ 25 ಸಾ.ರೂ ನೆರವು ನಿಧಿಯನ್ನು ಇಂದು ವಿತರಿಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶದಂತೆ ಜಾತಿ ಮತ ಬೇಧವೆನ್ನೆದೆ ಬಿರುವೆರ್ ಕುಡ್ಲ ಸಂಘಟನೆ ಬಡವರಿಗೆ ನೆರವು ನೀಡುತ್ತಾ ಬರುತ್ತಿದೆ. ಕೊರೊನಾ ಸಂದರ್ಭ ಸರಕಾರದ ಜತೆ ಕೈ ಜೋಡಿಸಿ ಉಚಿತ ಆಂಬುಲೆನ್ಸ್ ಸೇವೆ ನೀಡಿದೆ. ಶಿಕ್ಷಣಕ್ಕಾಗಿ ಸಹಾಯಧನ ನೀಡಿದೆ.
ಇಂತಹ ಸಂಘಟನೆಗಳಿಗೆ ಸದಾ ಪ್ರೋತ್ಸಾಹ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು. ಬಿರುವೆರ್ ಕುಡ್ಲದ ಜನಪರ ಕೆಲಸ ಕಾರ್ಯವನ್ನು ಶಾಘಿಸಿ, ಸಂಸ್ಥೆಯ ಸೇವಾ ಕಾರ್ಯ ಮುಂದುವರಿಯಲಿ ಎಂದು ಹಾರೈಸಿದರು.
ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್,ರಾಕೇಶ್ ಪೂಜಾರಿ, ರಾಕೇಶ್ ಚಿಲಿಂಬಿಸಚಿನ್ ದುಬ್ಯಾಲೋಹಿತ್ ಗಟ್ಟಿಕಿಶೋರ್ ಬಾಬು,ರಾಮ್‌ಪ್ರಸಾದ್ ಎಕ್ಯೂರು, ಪ್ರಾಣೇಶ್ ಬಂಗೇರ,ಕಿರಣ್ ಶೆಟ್ಟಿ, ರಕ್ಷಣ್ ಪೂಚಾರಿ, ವಾಝಿ ಫೆರ್ನಾಂಡಿಸ್, ರಾಜೇಶ್ ಉರ್ವ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿದರು.