Connect with us

    BELTHANGADY

    ಪುತ್ತೂರಿನಿಂದ ಬೈಕ್ ರೈಡಿಂಗ್ ತೆರಳಿದ ತಂಡ: ಎರಡು ಕಡೆ ಅಪಘಾತ-ಓರ್ವ ಮೃತ್ಯು, ಮತ್ತಿಬ್ಬರು ಗಂಭೀರ

    Published

    on

    ನೆಲ್ಯಾಡಿ: ಬೈಕ್ ರೈಡಿಂಗ್ ಗೆ ತೆರಳಿದ ತಂಡ ಬೇರೆ ಬೇರೆ ಕಡೆ ನಡೆದ ಸರಣಿ ಅಪಘಾತದಲ್ಲಿ, ಒರ್ವ ಮೃತ್ಯು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಒಂದು ಅಪಘಾತ ನೆಲ್ಯಾಡಿ ಸಮೀಪದ ಎಂಜಿರ ಬಳಿ ನಡೆದರೆ ಮತ್ತೊಂದು ಅಪಘಾತ ಗುಂಡ್ಯ ಸಮೀಪ ನಡೆದಿದೆ.
    ಘಟನೆ ವಿವರ
    ಇಂದು ಬೆಳಗ್ಗೆ 11.30 ರ ಸುಮಾರಿಗೆ ಪುತ್ತೂರಿನಿಂದ 8 ಬೈಕುಗಳಲ್ಲಿ ತಂಡವೊಂದು ಬೈಕ್‌ ರೈಡಿಂಗ್ ಹೊರಟಿದೆ.

    ಅವುಗಳ ಪೈಕಿ ಕೆಟಿಎಂ ಬೈಕೊಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡಬ ತಾಲ್ಲೂಕಿನ ಎಂಜಿರ ಸಮೀಪ ತೆರಳುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಹೊಸ ವಾಹನಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್‌ ವಾಹನಕ್ಕೆ ಮಧ್ಯಾಹ್ನ ಡಿಕ್ಕಿ ಹೊಡೆದಿದೆ.

    ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

     

    ವೇಗದ ಚಾಲನೆಯಿಂದಾಗಿ ಅಪಘಾತವಾಗಿದ್ದು ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟ ಯುವಕನ ಮೈಮೇಲೆ ಕಂಟೇನರ್ ಲಾರಿ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಅಪಘಾತದ ವಿಷಯ ಮುಂದೆ ಹೋಗುತ್ತಿದ್ದ ಈತನ ತಂಡದ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಗುಂಡ್ಯ ಕಡೆಯಿಂದ ತಂಡವು ಹಿಂತಿರುಗಿ ಬಂದಿದೆ.

    ಹೀಗೆ ಬರುತ್ತಿರುವಾಗ ತಂಡದ ಸದಸ್ಯನೊಬ್ಬ ಚಲಾಯಿಸುತ್ತಿದ್ದ ಇನ್ನೊಂದು ಬೈಕ್ ಕೂಡ ಸ್ಕಿಡ್‌ ಆಗಿ ಅಪಘಾತಕ್ಕೀಡಾಗಿದೆ.

    ಈ ವೇಳೆ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
    ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಮೃತಪಟ್ಟಿರುವ ಹಾಗೂ ಗಾಯಗೊಂಡಿರುವ ಯುವಕರ ಬಗ್ಗೆ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಅಪಘಾತ ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    BELTHANGADY

    ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

    Published

    on

    ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಫ್ಲಾಯ್ಡ್ ಮಿಸ್ಕಿತ್ ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ ಜರುಗಿದ ಅಂತರಾಷ್ಟ್ರೀಯ ಮಟ್ಟದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

    ಫ್ಲಾಯ್ಡ್ ಮಿಸ್ಕಿತ್ ಮಡಂತ್ಯಾರು ನಿವಾಸಿ ಬೇಬಿ ಡಯಾನ ಮಿಸ್ಕಿತ್ ಹಾಗೂ ಕ್ಲೌಡಿ ಫ್ರಾನ್ಸಿಸ್ ಮಿಸ್ಕಿತ್ ದಂಪತಿಗಳ ಪುತ್ರರಾಗಿದ್ದು, ಸಿದ್ಧಾರ್ಥ್ ಎಂ.ಸಿ ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮಿತಾ ಹಾಗೂ ಬಿ.ಸಿ.ರೋಡ್ ನ ನ್ಯಾಯವಾದಿ ಪಿ.ಚೆನ್ನಪ್ಪ ಸಾಲಿಯಾನ್ ದಂಪತಿಗಳ ಪುತ್ರರಾಗಿದ್ದಾರೆ.

    ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ವಿಟ್ಲ ತರಬೇತಿ ನೀಡಿರುತ್ತಾರೆ.

    Continue Reading

    BELTHANGADY

    ಬೆಳ್ತಂಗಡಿ: ವಿದ್ಯುತ್‌ ತಗುಲಿ ಯುವಕ ಮೃ*ತ್ಯು

    Published

    on

    ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾ*ತಕ್ಕೆ ಬ*ಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

    ಹರೀಶ (32) ಮೃ*ತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃ*ತಪಟ್ಟಿದ್ದಾರೆ.

    Continue Reading

    BELTHANGADY

    ವಿಧಾನಸಭಾ ಅಧಿವೇಶನ: ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

    Published

    on

    ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.

    ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು.

    ಅಗಲಿದ ಗಣ್ಯರಾದ ಧಾರ್ಮಿಕ ಮುಖಂಡ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್), ನಿರೂಪಕಿ ಅಪರ್ಣಾ, ಸಾಹಿತಿ ಕಮಲಾ ಹಂಪನಾ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.

    Continue Reading

    LATEST NEWS

    Trending