ನವದೆಹಲಿ: ಜನಪ್ರಿಯ ಮಾರುತಿ ಸುಜುಕಿ ಕಾರು ಉತ್ಪಾದಕ ಸಂಸ್ಥೆ ವಾಹನಗಳ ಮೇಲಿನ ಬೆಲೆಯನ್ನು ಇಂದಿನಿಂದ (ಆ.6) ಹೆಚ್ಚಿಸುವುದಾಗಿ ತಿಳಿಸಿದೆ. ಆಗಸ್ಟ್ 30ರಂದು ತಿಳಿಸಿದಂತೆ, ಸೆಪ್ಟೆಂಬರ್ ತಿಂಗಳಿನಲ್ಲಿ ವಾಹನ ಬೆಲೆಯನ್ನು ಜಾಸ್ತಿ ಮಾಡುವುದಾಗಿ ಹೇಳಿಕೊಂಡಿತ್ತು, ಅದರೆ ದಿನಾಂಕವನ್ನು ಬಹಿರಂಗ ಪಡಿಸಿರಲಿಲ್ಲ, ಇದೀಗ ಇಂದಿನಿಂದ ಬೆಲೆಯನ್ನು ಏರಿಕೆ ಮಾಡುವುದಾಗಿ ಅಧಿಕೃತವಾಗಿ ಹೇಳಿದೆ.
ಮಾರುತಿ ಸುಜುಕಿ ಉತ್ಪಾದಿಸುವ ಎಲ್ಲಾ ಮಾದರಿಗಳ ಸರಾಸರಿ ಶೇ. 1.9ರಷ್ಟು ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿತ್ತು.
ಆಗಸ್ಟ್ 30 ರಂದು ನಮ್ಮ ಹಿಂದಿನ ಸಂವಹನದ ಮುಂದುವರಿಕೆಯಾಗಿ, ಇಂದಿನಿಂದ ಅನ್ವಯವಾಗುವಂತೆ ಕಂಪನಿಯು ಆಯ್ದ ಮಾದರಿಗಳಿಗೆ ಬೆಲೆ ಬದಲಾವಣೆಯನ್ನು ಘೋಷಿಸಿತು. ಆಯ್ದ ಮಾದರಿಗಳಲ್ಲಿ ಎಕ್ಸ್ ಶೋ ರೂಂ ಬೆಲೆಗಳಲ್ಲಿ ಶೇಕಡಾ 1.9ರಷ್ಟು ಸರಾಸರಿ ಬೆಲೆ ಏರಿಕೆ ಮಾಡಿದೆ.
ಆಟೋ ದೈತ್ಯ ಆಗಸ್ಟ್ ತಿಂಗಳಿನಲ್ಲಿ ವಿವಿಧ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಳೆದ ವರ್ಷದಲ್ಲಿ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿತ್ತು.
ಆ ಮೂಲಕ ಬೆಲೆ ಏರಿಕೆ ಮಾಡಿ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್ 2021 ರಿಂದ ಎಲ್ಲಾ ಮಾದರಿಗಳ ಬೆಲೆ ಏರಿಕೆ ಮಾಡಿದೆ.
ಮಾರುತಿ ಸುಜುಕಿ ಕಂಪನಿಯು ಕಳೆದ ಜನವರಿ ಮತ್ತು ಏಪ್ರಿಲ್ನಲ್ಲಿ ಕಾರಿನ ಬೆಲೆಯನ್ನು ಕೊಂಚ ಹೆಚ್ಚಿಸಿತ್ತು.
ಏಪ್ರಿಲ್‌ನಲ್ಲಿ ಶೇ. 1.6ರಷ್ಟು ಎಕ್ಸ್ ಶೋರೂಂನ ಬೆಲೆ ಏರಿಕೆ ಮಾಡಿದ್ದು, ಜನವರಿಯಲ್ಲಿ ಆಯ್ದ ಮಾದರಿಗಳಲ್ಲಿ ಬೆಲೆ 34,000 ರೂ. ಹೆಚ್ಚಳವಾಯಿತು.
ಇನ್ನು ಮಾರುತಿ ಸುಜುಕಿ (Marut i Suzuki) 1,81,754 ಯುನಿಟ್ ಪೆಟ್ರೋಲ್ ಕಾರ್ಗಳಾದ ಸಿಯಾಜ್, ಎರ್ಟಿಗಾ, ವಿಟಾರಾ ಬ್ರಿಜಾ, ಎಸ್-ಕ್ರಾಸ್, ಮತ್ತು ಎಕ್ಸ್ ಎಲ್ 6 ಗಳನ್ನು (Ciaz, Ertiga, Vitara Brezza, S-Cross, and XL6) ಮೋಟಾರ್ ಜನರೇಟರ್ ಗಳನ್ನು ಉಚಿತವಾಗಿ ಪರೀಕ್ಷಿಸಿ ಬದಲಿಸಲು ಮತ್ತು ಹಿಂಪಡೆಯುವುದಾಗಿ ಘೋಷಿಸಿದೆ.
ಮೇ 4, 2018 ರಿಂದ ಅಕ್ಟೋಬರ್ 27, 2020 ರ ನಡುವೆ ತಯಾರಿಸಲಾದ ವಾಹನಗಳ ಹಾನಿಗೊಳಗಾದ ಭಾಗವನ್ನು ಬದಲಾಯಿಸಲಾಗುವುದು ಎಂದು ಕಂಪನಿ ಹೇಳಿದೆ. 2021 ರ ನವೆಂಬರ್ ಮೊದಲ ವಾರದಿಂದ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.