BIG BOSS
ಬಿಗ್ಬಾಸ್ ಮನೆಗೆ ಲಾಯರ್ ಜಗದೀಶ್ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಂತೆ? ಗುಟ್ಟು ಬಿಚ್ಚಿಟ್ಟ ಹಂಸಾ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಿಂದ ನಾಲ್ಕನೇ ಸ್ಪರ್ಧಿಯಾಗಿ ಹಂಸಾ ಅವರು ಆಚೆ ಬಂದಿದ್ದಾರೆ. ನಾಲ್ಕು ವಾರಗಳವರೆಗೆ ಬಿಗ್ಬಾಸ್ ಮನೆಯಲ್ಲಿ ಕಾಲ ಕಳೆದ ಹಂಸಾ ಅವರು ಕೊನೆಯ ಕ್ಷಣದಲ್ಲಿ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಇನ್ನು, ಬಿಗ್ಬಾಸ್ ಮನೆಯಿಂದ ಆಚೆ ಬಂದ ಕೂಡಲೇ ಸ್ಪರ್ಧಿಗಳ ಬಗ್ಗೆ ಅದರಲ್ಲೂ ಲಾಯರ್ ಜಗದೀಶ್ ಅವರ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಹಂಸಾ ಹಾಗೂ ಲಾಯರ್ ಜಗದೀಶ್ ಒಳ್ಳೆಯ ಸ್ನೇಹಿತರಾಗಿದ್ದರು. ಗಲಾಟೆ ಮಾಡುತ್ತಾ ಮಾಡುತ್ತಾ ಒಳ್ಳೆಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕಿಚ್ಚ ಸುದೀಪ್ ಮುಂದೆಯೂ ಈ ಇಬ್ಬರು ಡ್ಯಾನ್ಸ್ ಮಾಡಿ ವೀಕ್ಷಕರ ಮೂಖದಲ್ಲಿ ನಗು ಹುಟ್ಟಿಸಿದ್ದರು.
ಆದರೆ ಅದು ಜಾಸ್ತಿ ದಿನಗಳ ಕಾಲ ಉಳಿಯಲಿಲ್ಲ. ಲಾಯರ್ ಜಗದೀಶ್ ಅವರು ಮಹಿಳಾ ಸ್ಪರ್ಧಿಗಳಿಗೆ ಬೈದಿದ್ದಕ್ಕೆ ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದರು. ಅಲ್ಲದೇ ಲಾಯರ್ ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಅವರನ್ನು ಆಚೆ ಕಳುಹಿಸಲಾಗಿತ್ತು. ಇನ್ನೂ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಈ ಬಗ್ಗೆ ಮಾತಾಡಿದ ಹಂಸ ಅವರು ಲಾಯರ್ ಜಗದೀಶ್ ಅವರ ಮತ್ತೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಬೇಕು ಅಂತ ಹೇಳಿದ್ದಾರೆ.
ನನಗೆ ಬಿಗ್ಬಾಸ್ ಮನೆಯಲ್ಲಿ ಅವರ ಜೊತೆಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಈಗ ಆಚೆ ಬಂದಿದ್ದೀನಿ. ಅವರು ಮನೆಗೆ ಹೋಗ್ತೀನಿ. ಜಗದೀಶ್ ಅವರ ಜೊತೆಗೆ ಮಾತಾಡಬೇಕು. ಯಾಕೆ ನನ್ನ ಬಗ್ಗೆ ಹಾಗೇ ಹೇಳಿದ್ರಿ ಅಂತ ಪ್ರಶ್ನೆ ಮಾಡ್ತೀನಿ. ಬಿಗ್ಬಾಸ್ ಮನೆಗೆ ಜಗದೀಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಗೆಲ್ಲುತ್ತಾರೆ. ಜಗದೀಶ್ ಅವರು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟು ಬಂದ್ರೆ ಸಖತ್ ಮಜಾ ಇರುತ್ತೆ. ನನಗೆ ಅನಿಸುತ್ತೆ ಜಗದೀಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ. ಮಾತಲ್ಲಿ ಸ್ವಲ್ಪ ಹಿಡಿತವಿದ್ದರೆ ಜಗದೀಶ್ ಅವರೇ ಬಿಗ್ಬಾಸ್ ವಿನ್ನರ್ ಆಗ್ತಾರೆ ಅಂತ ಹೇಳಿದ್ದಾರೆ.
BIG BOSS
ಹನುಮಂತನ ಮೇಲೆ ತಿರುಗಿ ಬಿದ್ದ ಮೂವರು! ಮನೆಯ ಕ್ಯಾಪ್ಟನ್ ಈಗ ಗೇಮ್ ಪ್ಲಾನರ್ ಅಂತೆ!
ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಹನುಮಂತನಿಗೆ ನಾಮಿನೇಟ್ ಟಾಸ್ಕ್ ನೀಡಲಾಗಿದೆ. ಅದರಂತೆಯೇ ಹನುಮಂತ ಮೂವರ ಹೆಸರನ್ನು ತೆಗೆದುಕೊಂಡಿದ್ದು, ನಾಮಿನೇಟ್ ಮಾಡಿದ್ದಾನೆ. ಗೋಲ್ಡ್ ಸುರೇಶ್, ಮಾನಸ ಮತ್ತು ಭವ್ಯ ಗೌಡ ಅವರ ಹೆಸರನ್ನು ಆಯ್ಕೆ ಮಾಡಿದ್ದಾನೆ. ಆದರೀಗ ಆತ ನಾಮಿನೇಟ್ ವೇಳೆ ನೀಡಿದ ಕಾರಣಕ್ಕೆ ಮೂವರು ಅಸಮಾಧಾನರಾಗಿದ್ದಾರೆ.
ಹನುಮಂತ ಮೊದಲಿಗೆ ಗೋಲ್ಡ್ ಸುರೇಶ್ ಹೆಸರನ್ನು ತೆಗೆದುಕೊಂಡಿದ್ದು, ಆತ ಅಲ್ಲಲ್ಲಿ ಕೋಳಿ ಮಲಗಿಕೊಂಡಂತೆ ಮಲಗುತ್ತಾನೆ. ಭವ್ಯಾ ಗೌಡ ಯಾವುದರಲ್ಲೂ ಹೆಚ್ಚು ಭಾಗವಹಿಸಿಲ್ಲ, ಮಾನಸ ಅದೊಂತರ ಬಾಂಬ್ ಇದ್ದಂತೆ ಸೌಂಡ್ ಮಾಡುವಾಗ ಟುಸುಕ್ ಅನ್ನುತ್ತೆ ಎಂದು ಕಾರಣ ನೀಡಿದ್ದಾನೆ.
ಹನುಮಂತ ನೀಡಿದ ಕಾರಣಕ್ಕೆ ಮೂವರು ಅಸಾಮಾಧಾನರಾಗಿದ್ದಾರೆ. ಅದಲ್ಲಿ ಭವ್ಯ ನೇರವಾಗಿ ಹನುಮಂತುವಿಗೆ ನೀವು ಕೊಟ್ಟಿರುವ ಕಾರಣ ಚೆನ್ನಾಗಿಲ್ಲ ಎಂದಿದ್ದಾರೆ. ಮಾನಸ ಕಣ್ಣೀರು ಹಾಕಿದ್ದು, ನಿನ್ನಂತ ಗೇಮ್ ಪ್ಲಾನರ್ ನಮ್ ತಾಯಾಣೆ ಈ ಮನೆಯಲ್ಲಿ ಯಾರು ಇಲ್ಲ ಕಣೋ ಎಂದು ಹೇಳಿದ್ದಾರೆ. ಗೋಲ್ಡ್ ಸುರೇಶ್ ಚೈತ್ರಾ ಕುಂದಾಪುರ ಬಳಿ ಆತ ಅನ್ಕೊಂಡಿರುವ ಹಾಗೆ ಇಲ್ಲ ಎಂದು ಹೇಳಿದ್ದಾರೆ.
BIG BOSS
ಒಂದು ವರ್ಷ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ: ಬಿಗ್ಬಾಸ್ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು
ಬಿಗ್ಬಾಸ್ ಮನೆಯಲ್ಲಿ ಇದಾಗಲೇ ಮೂವರು ಎಲಿಮಿನೇಟ್ ಆಗಿದ್ದಾರೆ. ಮುಂದಿನ ಸ್ಪರ್ಧಿ ಯಾರು ಎಂಬ ಬಗ್ಗೆ ಬಿಗ್ಬಾಸ್ ವೀಕ್ಷಕರಿಗೆ ಕುತೂಹಲ ಇದ್ದೇ ಇದೆ. ಅದೇ ಇನ್ನೊಂದೆಡೆ ಫೈಟಿಂಗ್ ಜೋರಾಗಿ ನಡೆದಿದೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ಗಲಾಟೆ ಏರ್ಪಟ್ಟಿದೆ. ಇದರ ಮಧ್ಯೆಯೇ, ಬಿಗ್ಬಾಸ್ ಸ್ಪರ್ಧಿಗಳಿಗೆ, ಯಾರ ಬಳಿಯೂ ಹಂಚಿಕೊಳ್ಳದ ಒಂದು ನೋವನ್ನು ತೋಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಆಗ ಮೊದಲಿಗೆ ಚೈತ್ರಾ ಕುಂದಾಪುರ ಅವರು ನಾನು ಒಂದು ವರ್ಷ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಉಗ್ರಂ ಮಂಜು ಅವರು, ಊಟ ಮಾಡಿದ್ಯಾ ಅಂತ ಕೇಳೋರು ಯಾರೂ ಇರಲಿಲ್ಲ, ಮೈ ಹುಷಾರು ಇಲ್ಲ ಎಂದು ಕೇಳುವವರು ಇರಲಿಲ್ಲ, ಕೆಲವೊಂದು ಚಟಕ್ಕೆ ಬಿದ್ದಿದ್ದೆ ಎನ್ನುತ್ತಲೇ ಬಿಕ್ಕಿದರೆ, ಐಶ್ವರ್ಯ ಸಿಂಧೋಗಿ ಅವರು, ಅಮ್ಮ ಬೆಡ್ ರಿಡನ್ ಆಗಿದ್ರು, ರಿಲೇಷನ್ಸು ಅಮ್ಮನ ತಲೆ ತುಂಬ್ತಾ ಇದ್ರು, ನಾನು ತುಂಬಾ ಅಮ್ಮನ ಮೇಲೆ ಕಿರುಚಾಡ್ತಿದ್ದೆ. ಆದರೆ ಅದೇ ಕೆಲವು ದಿನಗಳ ಬಳಿಕ ಅಮ್ಮ ನನ್ನ ಜೊತೆ ಇರಲಿಲ್ಲ. ಅದೊಂದು ತಪ್ಪು ನಾನು ಮಾಡಬಾರದಿತ್ತು ಎಂದು ಕಣ್ಣೀರು ಹಾಕಿದ್ದಾರೆ.
ಇನ್ನು ಚೈತ್ರಾ ಕುಂದಾಪುರ ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದದ್ದೇ. ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ ಎಂದೆಲ್ಲಾ ಫೇಮಸ್ ಆಗಿರುವವರು.
BIG BOSS
ಬಿಗ್ ಬಾಸ್ ಮನೆಯಲ್ಲೂ ಸದ್ದು ಮಾಡಿದ ‘ನವಗ್ರಹ’ ರೀ-ರಿಲೀಸ್ ವಿಚಾರ
ಬಿಗ್ ಬಾಸ್ ಮನೆಯಲ್ಲಿ ಈ ಮೊದಲು ಹೊರಗಿನ ವಿಚಾರಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಆದರೆ, ಈ ಬಾರಿಯ ಸೀಸನ್ನಲ್ಲಿ ಹಾಗಿಲ್ಲ. ಹೊರಗಿನ ವಿಚಾರಗಳ ಮಾಹಿತಿ ಬಿಗ್ ಬಾಸ್ ಕಡೆಯಿಂದಲೇ ಸಿಗುತ್ತಿದೆ. ಸುದೀಪ್ ತಾಯಿ ನಿಧನ ವಾರ್ತೆ, ಸ್ಪರ್ಧಿಗಳ ಬಗ್ಗೆ ಹೊರಗಿನ ಜನಗಿರುವ ಅಭಿಪ್ರಾಯ ಎಲ್ಲವೂ ಗೊತ್ತಾಗುತ್ತಿದೆ. ಅದೇ ರೀತಿ ‘ನವಗ್ರಹ’ ಸಿನಿಮಾದ ರೀ-ರಿಲೀಸ್ ವಿಚಾರವೂ ಸದ್ದು ಮಾಡುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
ದರ್ಶನ್, ಸೃಜನ್ ಲೋಕೇಶ್ ಮೊದಲಾದವರು ನಟಿಸಿರೋ ‘ನವಗ್ರಹ’ ಸಿನಿಮಾ 2008ರ ನವೆಂಬರ್ 7ರಂದು ರಿಲೀಸ್ ಆಯಿತು. ದಿನಕರ್ ತುಗುದೀಪ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಈಗ ನವೆಂಬರ್ 8ರಂದು ರೀ-ರಿಲೀಸ್ ಆಗುತ್ತಿದೆ. ಮೈಸೂರಿನ ಅಂಬಾರಿ ಕದಿಯೋ ಕಥೆಯನ್ನು ಈ ಚಿತ್ರ ಹೊಂದಿದೆ. ಗೆಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೃಜನ್ ಲೋಕೇಶ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್ ಇದ್ದಾರೆ. ಅವರು ‘ನವಗ್ರಹ’ ಚಿತ್ರದಲ್ಲಿ ವಿಕ್ಕಿ ಹೆಸರಿನ ಪಾತ್ರ ಮಾಡಿದ್ದರು. ಸೃಜನ್ ಅವರು ದೊಡ್ಮನೆ ಒಳಗೆ ಬಂದಿದ್ದನ್ನು ನೋಡಿ ಧರ್ಮಗೆ ಖುಷಿ ಆಗಿದೆ. ಸೃಜನ್ ಅವರು ಬಿಗ್ ಬಾಸ್ಗೆ ಅತಿಥಿಯಾಗಿ ಬರುತ್ತಿದ್ದಂತೆ ಯಾರ ಯಾರ ಪರಿಚಯ ಇದೆ ಎಂಬುದನ್ನು ಹೇಳಿದರು. ಅದೇ ರೀತಿ ಧರ್ಮ ಬಳಿ ವಿಶೇಷ ಸುದ್ದಿ ಇರೋದಾಗಿ ಹೇಳಿದರು.
‘ಧರ್ಮ ಒಂದು ಗುಡ್ ನ್ಯೂಸ್ ಇದೆ. ನವಗ್ರಹ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ’ ಎಂದು ಸೃಜನ್ ಹೇಳಿದರು. ಇದನ್ನು ಕೇಳಿ ‘ಯಾವಾಗ’ ಎಂದು ಪ್ರಶ್ನೆ ಮಾಡಿದರು ಧರ್ಮ. ‘ನವೆಂಬರ್ 8’ ಎಂದು ಸೃಜನ್ ಉತ್ತರ ಕೊಟ್ಟರು. ಇದನ್ನು ಕೇಳಿ ಧರ್ಮ ಅವರು ಸಖತ್ ಖುಷಿಪಟ್ಟರು. ಈ ಮೂಲಕ ದೊಡ್ಮನೆ ಒಳಗೂ ಬಿಗ್ ಬಾಸ್ ವಿಚಾರ ಚರ್ಚೆ ಆಗುತ್ತಿದೆ.
- BIG BOSS3 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- BIG BOSS6 days ago
ಕಲರ್ಸ್ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್ಗೆ ಗುಡ್ ನ್ಯೂಸ್
- LATEST NEWS2 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- FILM6 days ago
ತುಳು ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್