Connect with us

    BIG BOSS

    BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

    Published

    on

    ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ಎರಡು ದಿನಗಳಿಂದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳದ್ದೇ ಹವಾ ಜೋರಾಗಿದೆ. 50 ದಿನದ ಬಳಿಕ ದೊಡ್ಮನೆ ಆಟಕ್ಕೆ ಬಂದ ರಜತ್‌, ಶೋಭಾ ಬಿಗ್‌ ಬಾಸ್‌ ಮನೆಯಲ್ಲಿ ಆರಂಭದಿಂದಲೂ ಇದ್ದ ಸ್ಪರ್ಧಿಗಳಿಗೆ ಸವಾಲು ಆಗಿದ್ದಾರೆ.


    ಮನೆಯ ಸಾಮಾಗ್ರಿ ಬಳಕೆ ಹಾಗೂ ಮನೆ ಕೆಲಸದ ವಿಚಾರದಲ್ಲೂ ರಜತ್‌, ಶೋಭಾ ಅವರೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಪಡೆದುಕೊಂಡಿರುವುದು ಮನೆಮಂದಿಗೆ ತಲೆನೋವಿನ ಸಂಗತಿ ಆಗಿದೆ.

    ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳಾಗಿ ಬಂದಿರುವ ಶೋಭಾ ಹಾಗೂ ರಜತ್‌ ಅವರ ಪೈಕಿ ತಂಡದ ನಾಯಕರಾಗಲು ಯಾರು ಅರ್ಹ ಹಾಗೂ ಅನರ್ಹರು ಎನ್ನುವ ಆಯ್ಕೆಯನ್ನು ಮಾಡಲು ಇತರೆ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಅವಕಾಶ ನೀಡಿದ್ದಾರೆ. ಈ ವಿಚಾರದಲ್ಲಿ ಮಂಜು ಹಾಗೂ ಶೋಭಾ ನಡುವೆ ಮಾತಿನ ಯುದ್ಧವೇ ನಡೆದಿದೆ.

    ಮನೆಯ ನೀತಿ ನಿಯಮಗಳನ್ನು ಅಲ್ಲಾಡಿಸಿದ್ದು ಶೋಭಾ ಅವರು ಅಂಥ ನನಗೆ ಅನ್ನಿಸುತ್ತದೆ ಎಂದು ಮಂಜು ಹೇಳಿದ್ದಾರೆ. ಇದಕ್ಕೆ ಗರಂ ಆದ ಶೋಭಾ ಅಲ್ಲಾಡಿಸುವುದಕ್ಕೆ ಗಿಲ್ಲಾಡಿಸುವುದ್ದಕ್ಕೆ ವಾಟ್.‌ ನಿಮಗೆ ಕ್ಲಾರಿಟಿಯೇ ಇಲ್ಲ. ನಾನ್‌ ಸೆನ್ಸ್‌ ರೀಸನ್‌ ಕೊಡುತ್ತಿದ್ದೀರಿ ಎಂದಿದ್ದಾರೆ.

    ಇದಕ್ಕೆ ಮಂಜು ಕಿರುಚಬೇಡಿ ರೀ ಇಲ್ಲೇ ಇದ್ದೀನಿ. ಕ್ಲಾರಿಟಿಯೇ ಹೇಳ್ತಾ ಇರೋದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ. ಕೇಳಿಸಿಕೊಳ್ಳಿ ರೆಸ್ಪೆಕ್ಟ್ ಕಳೆದುಕೊಳ್ಳಬೇಡಿ ಎಂದು ಆಕ್ರೋಶದ ಧ್ವನಿಯಲ್ಲೇ ಶೋಭಾ ಮಂಜು ಮೇಲೆ ರೇಗಾಡಿದ್ದಾರೆ.

    ಏನು ಮಾತನಾಡ್ತಾಳೆ ಅಪ್ಪ ನಾನು ನೀನು ಇದ್ರೆ ಉಚ್ಚೆನೇ ಮಾಡಿಕೊಳ್ಳುತ್ತೇವೆ ಎಂದು ಹನುಮಂತು ಧನರಾಜ್‌ ಅವರ ಬಳಿ ಹೇಳಿದ್ದಾರೆ. ಮಂಗಳವಾರ ರಾತ್ರಿ (ನ.19ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

    BIG BOSS

    ಬಿಗ್​ಬಾಸ್​ನಲ್ಲಿ ಅನೀರಿಕ್ಷಿತ ಬೆಳವಣಿಗೆ; ಮನೆಯಿಂದ ಹೊರ ಬರಲು ಡೋರ್ ತಟ್ಟಿದ ಗೋಲ್ಡ್ ಸುರೇಶ್

    Published

    on

    ಬಿಗ್​ಬಾಸ್​ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್​ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಜತ್ ಮೇಲೆ ಬೇಸರಗೊಂಡಿರುವ ಗೋಲ್ಡ್​ ಸುರೇಶ್, ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್​ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಆಗಿದ್ದೇನು..?

    ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಎಪಿಸೋಡ್​​ಗೆ ಸಂಬಂಧಿಸಿದ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿಕೊಂಡಿದೆ. ಅದರಲ್ಲಿ ಬಿಗ್​ಬಾಸ್ ಟಾಸ್ಕ್​ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಬಿಗ್​ಬಾಸ್ ಆಟದ ನಿಯಮದಲ್ಲಿತ್ತು.

    ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ಯುದ್ಧಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್​ ಸುರೇಶ್​ಗೆ ಬಳಸಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್​ಬಾಸ್​ ಅವರು ನನಗೆ ‘ಮಗನೆ, ಗಿಗನೆ’ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್​ಬಾಸ್ ನಾನು ಆಡಲ್ಲ. ಬಿಗ್​​ಬಾಸ್​ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಪ್ರೊಮೋ ಬಿಡುಗಡೆ ಬೆನ್ನಲ್ಲೇ ವೀಕ್ಷಕರು ಎಕ್ಸೈಟ್ ಆಗಿದ್ದು, ಇವತ್ತಿನ ಎಪಿಸೋಡ್​ಗಾಗಿ ಕಾಯುತ್ತಿದ್ದಾರೆ.

    Continue Reading

    BIG BOSS

    ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು

    Published

    on

    ಕನ್ನಡದ ಅತಿ ದೊಡ್ಡ ಶೋ ಅಂದ್ರೆ ಅದು ಬಿಗ್​ಬಾಸ್​​. ಇದೇ ಬಿಗ್​ಬಾಸ್​ ಸೀಸನ್ 11 ದಿನಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಅದರಲ್ಲೂ 50 ದಿನ ಪೂರೈಸಿದ ಬಿಗ್​ಬಾಸ್​ ಮನೆಗೆ ಹನುಮಂತನ ನಂತರ ಮತ್ತೆ ಇಬ್ಬರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಹೌದು, ಕನ್ನಡದ ಬಿಗ್​ಬಾಸ್​ 51ನೇ ದಿನಕ್ಕೆ ಕಾಲಿಟ್ಟಿದೆ.

    ಇದೇ ಹೊತ್ತಲ್ಲಿ 8ನೇ ವಾರಕ್ಕೆ ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಈ ಬಾರಿ ಕೊಂಚ ವಿಭಿನ್ನ ರೂಪದಲ್ಲಿ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. 50ನೇ ದಿನಕ್ಕೆ ಬಿಗ್​ಬಾಸ್​ ಮನೆಗೆ ಬಂದ ರಜತ್​ ಬುಜ್ಜಿ ಹಾಗೂ ಶೋಭಾ ಶೆಟ್ಟಿ ಮುಂದೆ ಮನೆ ಮಂದಿ ನಾಮಿನೇಷನ್​ ಪ್ರಕ್ರಿಯೆ ನಡೆಸಿದ್ದಾರೆ. ಹೀಗಾಗಿ ಸ್ಪರ್ಧಿಗಳು ಯಾವುದೇ ಮುಚ್ಚು ಮರೆ ಇಲ್ಲದೇ ಸರಿಯಾದ ರೀಸನ್​ ಕೊಡುವ ಪ್ರಯತ್ನ ಮಾಡಿದ್ದಾರೆ.

    ಇನ್ನೂ, ಮಡಿಕೆಯನ್ನು ಕೋಲಿನಿಂದ ಹೊಡೆದು ನಾಮಿನೇಟ್​ ಮಾಡಬೇಕಿತು. ಅದರಂತೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ನಾಮಿನೇಷನ್​ಗೆ ಹೆಸರನ್ನು ತೆಗೆದುಕೊಂಡು ಮಡಿಕೆಯನ್ನು ಹೊಡೆದು ಹಾಕಿದ್ದಾರೆ. ಈಗ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಹನುಮಂತ ಐಶ್ವರ್ಯ ಹಾಗೂ ಧರ್ಮ ಕೀರ್ತಿರಾಜ್​ ಅವರಿಗೆ ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಐಶ್ವರ್ಯ ವಾದ ವಿವಾದ ನಡೆಸಿದ್ದಾರೆ.

    ಆಗ ಹನುಮಂತ ಮೊದಲ ದಿನ ಆಟದಲ್ಲಿದ್ದ ಆಸಕ್ತಿ ಲಾಸ್ಟ್​ ಆಡದವರೆಗೂ ಇರಲಿಲ್ಲ. ಚೆನ್ನಾಗಿ ಆಡಿದ್ದೀರಾ ಅನ್ಕೋ, ಸೂಪರ್​ ಆಟ ಆಡಿದ್ದೀರಿ ಅನ್ಕೋ, ಗಿಚ್ಚಿ ಗಿಲಿಗಿಲಿ ಆಡಿದ್ದೀರಾ ಅನ್ಕೋ ಆದರೆ ಮಾರ್ಕ್ಸ್ ಯಾಕೆ ಬರಲಿಲ್ಲ ಅಂತ ಕೇಳಿದ್ದಾರೆ. ಇನ್ನೊಂದು ಹಂತದಲ್ಲಿ ಮನೆಯ ಕ್ಯಾಪ್ಟನ್​ ಭವ್ಯಾ ಗೌಡ ಹನುಮಂತನನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹನುಮಂತ ಸರಿಯಾದ ರೀಸನ್​ ಕೊಡೋದಿಲ್ಲ. ಹೀಗಾಗಿ ಮುಂದೆ ಹೋಗುತ್ತಾ ಹೋಗುತ್ತಾ ಅವರಿಗೆ ಈ ಮನೆಯಲ್ಲಿ ಇರೋದಕ್ಕೆ ಕಷ್ಟ ಆಗಬಹುದು ಅಂತ ಹೇಳಿ ಮಡಿಕೆ ಹೊಡೆದಿದ್ದಾರೆ.

    Continue Reading

    BIG BOSS

    BBK11: ಗೌತಮಿ, ಮಂಜು, ಮೋಕ್ಷಿತಾ ಸ್ನೇಹದ ನಡುವೆ ಬಿರುಕು ಮೂಡಿದ್ದು ಹೇಗೆ; ಅಸಲಿ ಸತ್ಯ ಬಿಟ್ಟಿಟ್ಟ ಅನುಷಾ ರೈ

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 51ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಕಳೆದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಸ್ಯಾಂಡಲ್​ವುಡ್​ ನಟಿ ಅನುಷಾ ರೈ ಅವರು ಆಚೆ ಬಂದಿದ್ದರು.

    ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಕೂಡಲೇ ಬೇಸರಗೊಂಡು ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು. ಇದೀಗ ಬಿಗ್​ಬಾಸ್​ನಿಂದ ಆಚೆ ಬಂದ ಕೂಡಲೇ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

    ಸಂದರ್ಶನದಲ್ಲಿ ಭಾಗಿಯಾಗಿದ್ದ ಅನುಷಾ ರೈ ಬಿಗ್​ಬಾಸ್​ ಮನೆಯಲ್ಲಿ ಸ್ನೇಹಿತರಾಗಿದ್ದ ಮೋಕ್ಷಿತಾ, ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದಾರೆ.

    ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಮೋಕ್ಷಿತಾ, ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಆ ಸ್ನೇಹ ಹೆಚ್ಚು ದಿನ ಉಳಿಯಲ್ಲ. ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು.

    ಹೀಗಾಗಿ ಈ ಗುಂಪಿನಿಂದ ಮೋಕ್ಷಿತಾ ಆಚೆ ಬಂದರು. ಮೊನ್ನೆಯ ಸಂಚಿಕೆಯಲ್ಲೂ ಮೋಕ್ಷಿತಾ, ಐಶ್ವರ್ಯಾ, ಶಿಶಿರ್​ ಹಾಗೂ ಅನುಷಾ ರೈ ಜೊತೆ ಈ ವಿಚಾರದ ಬಗ್ಗೆ ಮಾತಾಡಿದ್ದರು.  ಈ ಬಗ್ಗೆ ಮಾತಾಡಿದ ಅನುಷಾ ರೈ, ಬಿಗ್​ಬಾಸ್​ ನಮಗೆ ಟಾಸ್ಕ್​ವೊಂದನ್ನು ಕೊಟ್ಟಿರುತ್ತಾರೆ. ಆಗ ಎಲ್ಲ ತಂಡದಲ್ಲೂ 3 ಜನ ಇರುತ್ತಾರೆ. ಆಗ ಮೋಕ್ಷಿತಾ, ಧರ್ಮ ಹಾಗೂ ಚೈತ್ರಾ ಒಂದು ಟೀಮ್​ನಲ್ಲಿ ಇರ್ತಾರೆ. ಆಗ ಟಾಸ್ಕ್​ ವಿಚಾರಕ್ಕೆ ವಾಶ್​ ರೂಮ್​ನಲ್ಲಿ ಚರ್ಚೆ ಮಾಡಲು ಹೋಗಿರುತ್ತಾರೆ. ಆಗ ಒಂದು ವಿಚಾರಕ್ಕೆ ಮಂಜಣ್ಣ ಹಾಗೂ ಮೋಕ್ಷಿತಾ ಮಧ್ಯೆ ಬೇಸರ ಆಗುತ್ತೆ ಅಂತ ಹೇಳಿದ್ದಾರೆ.

    Continue Reading

    LATEST NEWS

    Trending