Connect with us

    LATEST NEWS

    ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಬಿಗ್‌ ಟ್ವಿಸ್ಟ್..!ಕಮೀಷನರ್ ಹೇಳಿದ್ದೇನು?

    Published

    on

    ಬೆಂಗಳೂರು/ಮಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 50 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಹಂತಕ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಪ್ರತಿಯೊಂದು ಆಯಾಮದಲ್ಲೂ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮಹಾಲಕ್ಷ್ಮಿ ಕುಟುಂಬಸ್ಥರು ಆರೋಪಿಸಿದ್ದ ಅಶ್ರಫ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.

    ಮಹಾಲಕ್ಷ್ಮಿ ದುರಂತ ಸಾವು ಬೆಳಕಿಗೆ ಬಂದ ಮೇಲೆ ಕುಟುಂಬಸ್ಥರು ಆಕೆಯ ಗೆಳೆಯ ಆಶ್ರಫ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಎಲ್ಲರಿಗೂ ಬಲವಾದ ಶಂಕೆ ಈತನ ಮೇಲೆ ಇತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಕೂಡಲೇ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್‌ ಅನ್ನು ವಶಕ್ಕೆ ಪಡೆದಿದ್ದಾರೆ.

    ಸಂಬಂಧ ಇರುವುದಾಗಿ ಸತ್ಯ ಒಪ್ಪಿಕೊಂಡ ಅಶ್ರಫ್..!
    ಮಹಾಲಕ್ಷ್ಮಿ ಕೇಸ್‌ನಲ್ಲಿ ಅನುಮಾನಕ್ಕೆ ಗುರಿಯಾಗಿದ್ದ ಅಶ್ರಫ್, ಪೊಲೀಸರ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡಿದ್ದಾನೆ. ಮಹಾಲಕ್ಷ್ಮಿ ಜೊತೆ ನನಗೆ ಸಂಬಂಧ ಇದ್ದಿದ್ದು ನಿಜ ಎಂದು ಹೇಳಿದ ಆತ ಇವರಿಬ್ಬರ ಪಿನ್ ಟು ಪಿನ್ ಡೀಟೈಲ್ಸ್‌ ನೀಡಿದ್ದಾನೆ. 6 ತಿಂಗಳ ಹಿಂದೆ ಮಹಾಲಕ್ಷ್ಮಿ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದ್ರೆ ನಾನು ಕೊಲೆ ಮಾಡಿಲ್ಲ ಎಂದು ಅಶ್ರಫ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ನಾನು ಆರು ತಿಂಗಳಿಂದ ಆಕೆಯಿಂದ ದೂರ ಇದ್ದೀನಿ. ನಮ್ಮ ಸಂಬಂಧದ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಜಗಳ ಆಯ್ತು. ಆಮೇಲೆ ನಾನು ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗೂ ನನಗೂ ಸಂಬಂಧ ಇಲ್ಲ ಎಂದು ಅಶ್ರಫ್ ಹೇಳಿದ್ದಾನೆ.

    ಈ ಹೇಳಿಕೆಯನ್ನು ದಾಖಲಿಸಿಕೊಂಡಿರುವ ವೈಯಾಲಿಕಾವಲ್‌ ಪೊಲೀಸರು ಅಶ್ರಫ್ ಹಾಗೂ ಮಹಾಲಕ್ಷ್ಮಿಯ ಕಾಂಟ್ಯಾಕ್ಟ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಕಳೆದ ಆರು ತಿಂಗಳಿಂದ ಸಂಪರ್ಕ ಇಲ್ಲದಿರೋದು ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಅಶ್ರಫ್‌ಗೂ ಮಹಾಲಕ್ಷ್ಮಿಯ ಸಾವಿಗೂ ಸಂಬಂಧ ಇಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಸದ್ಯ ಅಶ್ರಫ್ ಅನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹ*ತ್ಯೆ – 20ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್

    ಹಾಗಾದ್ದಲ್ಲಿ ಮಹಾಲಕ್ಷ್ಮಿ ಪೀಸ್‌, ಪೀಸ್ ಮಾಡಿದ್ದು ಯಾರು?
    ವೈಯಾಲಿಕಾವಲ್ ಮಹಿಳೆಯ ಸಾವಿನ ಪ್ರಕರಣವನ್ನು ಇಡೀ ಶೇಷಾದ್ರಿಪುರಂ ಸಬ್ ಡಿವಿಷನ್ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ವೈಯಾಲಿಕಾವಲ್, ಸದಾಶಿವನಗರ, ಹೈಗ್ರೌಂಡ್ಸ್, ಶೇಷಾದ್ರಿಪುರಂ ಇನ್ಸಪೆಕ್ಟರ್‌ಗಳ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಲಾಗಿದೆ. ಎಸಿಪಿ ಪ್ರಕಾಶ್ ರೆಡ್ಡಿ ಅವರು ಇಡೀ ಟೀಂ ಮಾನಿಟರ್ ಮಾಡುತ್ತಿದ್ದಾರೆ. ಒಬ್ಬ ಎಸಿಪಿ, ನಾಲ್ವರು ಇನ್ಸ್‌ಪೆಕ್ಟರ್ ಕಡೆಯಿಂದ ಡಿಸಿಪಿ ಶೇಖರ್ ಅವರು ತನಿಖೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಕಮಿಷನರ್ ದಯಾನಂದ್ ಹೇಳಿದ್ದೇನು?
    ವೈಯಾಲಿಕಾವಲ್‌ ಮಹಾಲಕ್ಷ್ಮಿ ಕೇಸ್‌ ಬಗ್ಗೆ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್​ ಹೇಳಿಕೆ ನೀಡಿದ್ದಾರೆ. ಮಹಾಲಕ್ಷ್ಮಿ ಹ*ತ್ಯೆ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಆತ ಹೊರರಾಜ್ಯದವನಾಗಿದ್ದು ಸದ್ಯ ಬೆಂಗಳೂರಲ್ಲಿ ವಾಸವಿದ್ದ. ಆತನ ಪತ್ತೆ ಹಚ್ಚಿ ಬಂಧನ ಮಾಡುವ ಕಾರ್ಯಾಚರಣೆ ನಡೆದಿದೆ. ಸದ್ಯದಲ್ಲೇ ಆತನನ್ನ ಬಂಧಿಸೋದಾಗಿ ಬಿ.ದಯಾನಂದ್​ ಹೇಳಿದ್ದಾರೆ.

    ಈಗಾಗಲೇ ಅನುಮಾನಾಸ್ಪದ ಆರೋಪಿಯ ಬೆನ್ನಟ್ಟಿರೋ ಪೊಲೀಸರು ಎರಡು ರಾಜ್ಯಗಳಿಗೆ ಎರಡು ಟೀಮ್‌ ಕಳಿಸಿದೆ. ಪಶ್ಚಿಮ ಬಂಗಾಳ ಹಾಗೂ ಬಿಹಾರಕ್ಕೆ ತೆರಳಿರುವ ಪೊಲೀಸರ ತಂಡ ಮಹಾಲಕ್ಷ್ಮಿ ಹಂತಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ದೆಹಲಿ ಸಿಎಂ ಕಚೇರಿಯಲ್ಲಿ ಎರಡು ಕುರ್ಚಿ..! ನಾನು ಭರತನಂತೆ ಎಂದ ಸಿಎಂ ಅತಿಶಿ

    Published

    on

    ಮಂಗಳೂರು/ನವದೆಹಲಿ : ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಎಪಿ ನಾಯಕಿ ಅತಿಶಿ ಸೋಮವಾರ(ಸೆ.23)ದಂದು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಆದ್ರೆ, ಈ ವೇಳೆ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್‌ ಉಪಯೋಗಿಸುತ್ತಿರುವ ಕುರ್ಚಿಯ ಪಕ್ಕದಲ್ಲಿ ಪ್ರತ್ಯೇಕ ಕುರ್ಚಿಯಲ್ಲಿ ಕುಳಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತನ್ನನ್ನು ರಾಮಾಯಣದ ಭರತನಿಗೆ ಹೋಲಿಸಿಕೊಂಡಿರುವ ಹಾಲಿ ಮುಖ್ಯಮಂತ್ರಿ ಅತಿಶಿ, ರಾಮನ ಅನುಪಸ್ಥಿತಿಯಲ್ಲಿ ಭರತ ಆಡಳಿತ ನಡೆಸಿದಂತೆ ನಾಲ್ಕು ತಿಂಗಳು ನಾನು ಆಡಳಿತ ನಡೆಸುವುದಾಗಿ ಹೇಳಿದ್ದಾರೆ.

    “ಈ ಕುರ್ಚಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೇರಿದ್ದು, ಫೆಬ್ರವರಿ ಚುನಾವಣೆಯಲ್ಲಿ ದೆಹಲಿಯ ಜನರು ಮತ್ತೊಮ್ಮೆ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲಿಯವರೆಗೆ, ಈ ಕುರ್ಚಿ ಈ ಕಚೇರಿಯಲ್ಲಿ ಉಳಿಯುತ್ತದೆ. ಅವರು ಹಿಂದಿರುಗುವ ವರೆಗೆ ಕಾಯುತ್ತದೆ.” ಎಂದು ಅತಿಶಿ ಹೇಳಿದ್ದಾರೆ.

    ಶನಿವಾರ ದೆಹಲಿಯ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಅತಿಶಿ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಐದು ಕ್ಯಾಬಿನೆಟ್ ಸಚಿವರ ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದರು.

    ಇದನ್ನೂ ಓದಿ : ಕಾಸರಗೋಡು: ಮೆದುಳು ಜ್ವರಕ್ಕೆ ಯುವಕ ಬಲಿ

    ಅತಿಶಿ ಅವರು ಕೇಜ್ರಿವಾಲ್ ಸರ್ಕಾರದಲ್ಲಿ ಶಿಕ್ಷಣ, ಆದಾಯ, ಹಣಕಾಸು, ವಿದ್ಯುತ್ ಮತ್ತು PWD ಸೇರಿದಂತೆ 13 ಖಾತೆಗಳನ್ನು ನಿಭಾಯಿಸಿದ್ದರು.

    ದೆಹಲಿ ಹೊಸ ಸಿಎಂ ವರ್ತನೆಗೆ ಬಿಜೆಪಿ ಟೀಕೆ :

    ನೂತನ ಮುಖ್ಯಮಂತ್ರಿ ಅತಿಶಿಯ ಈ ನಡೆಯನ್ನು ಬಿಜೆಪಿ ಟೀಕಿಸಿದ್ದು, ಇದು ಸಾಂವಿಧಾನಿಕ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಸಿಎಂ ಕಚೇರಿಗೆ ಮಾಡಿದ ಅವಮಾನ ಎಂದು ಹೇಳಿದೆ. ಈ ವಿಚಾರವಾಗಿ ಬಿಜೆಪಿ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಿಎಂ ಕಚೇರಿಯಲ್ಲಿ ಎರಡು ಕುರ್ಚಿಗಳನ್ನು ಇಡುವುದು ನಿಯಮಗಳಿಗೆ ವಿರೋಧವಾಗಿದೆ. ಇದು ಆದರ್ಶವಲ್ಲ. ಇದು ನಿಯಮಕ್ಕೆ ತೋರಿದ ಅಗೌರವ ಎಂದಿದ್ದಾರೆ. ಫೆಬ್ರವರಿಯಲ್ಲಿ ದೆಹಲಿಯ ಚುನಾವಣೆ ನಡೆಯಲಿದ್ದು, ಇದರಲ್ಲಿ ಜನ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ

    Continue Reading

    LATEST NEWS

    ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೊದಲ ಜಾಮೀನು ಮಂಜೂರು

    Published

    on

    ಬೆಂಗಳೂರು/ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು(ಸೆ.23) ಜಾಮೀನು ವಿಚಾರಣೆ ನಡೆದಿದ್ದು ಮೊದಲ ಜಾಮೀನು ಮಂಜೂರುಗೊಂಡಿದೆ. ಎ16 ಆರೋಪಿಯಾಗಿದ್ದ ಕೇಶವಮೂರ್ತಿ ಎಂಬವನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ರೇಣುಕಾಸ್ವಾಮಿ ಶವ ವಿಲೇವಾರಿಯಲ್ಲಿ ಭಾಗಿಯಾಗಿದ್ದ ಕೇಶವಮೂರ್ತಿಯನ್ನು ಸಾಕ್ಷ್ಯ ನಾಶ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಕೇಶವಮೂರ್ತಿ ಪರ ವಕೀಲ ರಂಗನಾಥ ರೆಡ್ಡಿ ವಾದಿಸಿದ್ದರು. ಆದರೆ ವಿಚಾರಣೆ ವೇಳೆ ಈತ ಕೊಲೆಯಲ್ಲಿ ಭಾಗಿಯಾಗಿಲ್ಲ, ಹೊರತಾಗಿ ಸಾಕ್ಷಿ ನಾಶ ಪಡಿಸುವಲ್ಲಿ ಕೆಲಸ ಮಾಡಿದ್ದಾನೆ. ಹೀಗಾಗಿ ಪೊಲೀಸರು ಸಾಕ್ಷ್ಯ ನಾಶ ಅಡಿಯಲ್ಲಿ ಆತನ ವಿರುದ್ದ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ರೇಣುಕಾಸ್ವಾಮಿ ಚಾರ್ಜ್‌ಶೀಟ್‌ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!

    ಗಿರಿನಗರದ ಹೀರಣ್ಣಗುಡ್ಡದ ಕೇಶವಮೂರ್ತಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಮೊದಲೇ ದರ್ಶನ್ ಅಭಿಮಾನಿಯಾಗಿದ್ದ ಈತ ದರ್ಶನ್ ಗ್ಯಾಂಗ್ ನಡೆಸಿದ್ದ ಕೊಲೆ ಆರೋಪವನ್ನು ಹೊರಲು ಸಿದ್ಧನಾಗಿದ್ದ. ಪವಿತ್ರಾ ಮ್ಯಾನೇಜರ್ ಪವನ್‌ ಮೂಲಕ ಈ ಕೃತ್ಯದಲ್ಲಿ ಕೇಶವ ಸಿಲುಕಿದ್ದ. ಹಣದಾಸೆ ತೋರಿಸಿ ದರ್ಶನ್ ಹೆಸರು ಹೇಳದೆ ಪೊಲೀಸರಿಗೆ ಶರಣಾಗುವಂತೆ ಹೇಳಲಾಗಿತ್ತು. ಅದರಂತೆ ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಗೆ ಬಂದು ಕೇಶವ ಮೂರ್ತಿ ಶರಣಾಗಿದ್ದ. ಆದರೆ ವಿಚಾರಣೆ ವೇಳೆ ಪೊಲೀಸರು ಎಲ್ಲಾ ವಿಚಾರಗಳನ್ನು ಬಯಲಿಗೆಳೆದಿದ್ದಾರೆ.

    Continue Reading

    LATEST NEWS

    ಸಿಡಿಲು ಬಡಿದು ಶಾಲಾ ಮಕ್ಕಳು ಸೇರಿದಂತೆ 8 ಮಂದಿ ಸಾ*ವು

    Published

    on

    ಮಂಗಳೂರು/ಛತ್ತೀಸಗಡ : ಸಿಡಿಲು ಬಡಿದು ಶಾಲಾ ಮಕ್ಕಳು ಸೇರಿದಂತೆ 8 ಮಂದಿ ಮೃ*ತಪಟ್ಟಿರುವ ಘಟನೆ ಛತ್ತೀಸ್ ಗಡ ರಾಜನಂದಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ವರದಿಯಾಗಿದೆ.

    ಸೋಮ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಜೋರತರಾಯ್ ಗ್ರಾಮದಲ್ಲಿ ಸೋಮವಾರ(ಸೆ.23) 1.30ಕ್ಕೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಿಡಿಲು ಬಡಿ*ದು ಶಾಲಾ ಮಕಳು ಸೇರಿ 8 ಮಂದಿ ಸಾ*ವಿಗೀಡಾಗಿದ್ದಾರೆ. ಒಬ್ಬ ವ್ಯಕ್ತಿ ಗಾ*ಯಗೊಂಡಿದ್ದಾರೆ.

    ಇದನ್ನೂ ಓದಿ : ಕಾಸರಗೋಡು: ಮೆದುಳು ಜ್ವರಕ್ಕೆ ಯುವಕ ಬಲಿ

    ಗಾ*ಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜನಂದಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗಾರ್ಗ್ ಮಾಹಿತಿ ನೀಡಿದ್ದಾರೆ.

    Continue Reading

    LATEST NEWS

    Trending