Connect with us

    LATEST NEWS

    ಭವಾನಿ ರೇವಣ್ಣಗೆ ಬಿಗ್ ರಿಲೀಫ್..! ಮಧ್ಯಂತರ ಜಾಮೀನು ಮಂಜೂರು..!

    Published

    on

    ಹಾಸನ: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕಳೆದ 1 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.  ಇದರ ಜೊತೆಗೆ ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಕೆ.ಆರ್.ನಗರಕ್ಕೆ ತೆರಳದಂತೆ ಮತ್ತು ಹಾಸನಕ್ಕೂ ತೆರಳದಂತೆ ಭವಾನಿಗೆ  ಸೂಚನೆ ನೀಡಿದೆ. ಇದೀಗ ಮಧ್ಯಂತರ ನಿರೀಕ್ಷಣಾ ಜಾಮೀನಿನ ಬಳಿಕ ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

    ಮುಂದಿನ ಶುಕ್ರವಾರದವರೆಗೆ ಮಾತ್ರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದ್ದು ಮುಂದಿನ ವಿಚಾರಣೆಯನ್ನು ಅದೇ ದಿನ ಅಂದರೆ ಜೂ.14ಕ್ಕೆ  ಮುಂದೂಡಿದ್ದಾರೆ.  ಜೂ. 14ರ ಮಧ್ಯಾಹ್ನ 1 ಗಂಟೆ ಒಳಗೆ ವಿಚಾರಣೆಗೆ ‌ಹಾಜರಾಗಲು ಸೂಚಿಸಿ ನ್ಯಾಯಾಧೀಶ ಕೃಷ್ಣ ಎಸ್ ದೀಕ್ಷಿತ್ ವಿಚಾರಣೆ ಮುಂದೂಡಿದ್ದಾರೆ.

    ಮುಂದೆ ಓದಿ..; ”ಇನ್ಮೇಲೆ ನನ್ನನ್ನು ಬುದ್ಧಿವಂತ ಅಂತ ಕರೆದ್ರೆ ಚೆನ್ನಾಗಿರಲ್ಲ” ಅಂದಿದ್ಯಾಕೆ ಉಪೇಂದ್ರ..!? ಪವನ್ ಕಲ್ಯಾಣ್ ಬಗ್ಗೆ ನೆಟ್ಟಿಗರು ಹೇಳಿದ್ದೇನು?

    ಏನಿದು ಪ್ರಕರಣ? 

    ಅಪಹರಣಕ್ಕೆ ಒಳಗಾಗಿದ್ದ ಮಹಿಳೆಯ ಪುತ್ರ ಎಚ್‌.ಡಿ. ರಾಜು 2024ರ ಮೇ.2ರಂದು ಕೆ.ಆರ್‌.ನಗರ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣದ ಮೊದಲ ಆರೋಪಿ ಎಚ್‌.ಡಿ. ರೇವಣ್ಣ, ಪತ್ನಿ ಭವಾನಿ ರೇವಣ್ಣ ಸೂಚನೆ ಮೇರೆಗೆ ಎರಡನೇ ಆರೋಪಿ ಸತೀಶ್‌ ಬಾಬಣ್ಣ ತಮ್ಮ ತಾಯಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ನಂತರ ತಾಯಿ ಎಲ್ಲಿದ್ದಾರೆ ಎಂದು ಕೇಳಿದಾಗ ಮಾಹಿತಿ ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದರು.

    ಈ ಕುರಿತಾಗಿ ಕೆ.ಆರ್‌.ನಗರ ಠಾಣೆಯ ಪೊಲೀಸರು ಅಪಹರಣ ಆರೋಪ  ಎಫ್‌ಐಆರ್‌ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಭವಾನಿ ರೇವಣ್ಣ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

    ಇದರಿಂದ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮೇ 31ರಂದು ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೇ  ಜೂ. 3 ರಂದು  ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

    ಅರ್ಜಿಯಲ್ಲಿ ಎಫ್‌ಐಆರ್‌ ದಾಖಲಿಸಿರುವ ಮೈಸೂರಿನ ಕೆ.ಆರ್‌. ನಗರ ಠಾಣಾ ಪೊಲೀಸರನ್ನು ಪ್ರತಿವಾದಿ ಮಾಡಲಾಗಿದೆ. ಈ ಅರ್ಜಿ ವಿಚಾರಣೆಗೆ ನಿಗದಿಯಾಗಬೇಕಿದೆ. ಅಪಹರಣ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ಬಂಧಿಸಿ ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇಲ್ಲ, ಹಾಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು. ಜಾಮೀನು ಮಂಜೂರಾತಿಗೆ ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳಿಗೂ ಬದ್ಧವಾಗಿರುವುದಾಗಿ ಎಂದು ಅರ್ಜಿಯಲ್ಲಿ ಭವಾನಿ ರೇವಣ್ಣ ಉಲ್ಲೇಖಿಸಿದ್ದರು.

    FILM

    ಟಿಆರ್ ಪಿನಲ್ಲಿ ಟಾಪ್ 10 ರೊಳಗಿನ ಸ್ಥಾನ ಗಿಟ್ಟಿಸಿಕೊಂಡ ಹೊಸ ಧಾರಾವಾಹಿ; ನಂಬರ್ 1 ಸ್ಥಾನ ಯಾವುದಕ್ಕೆ?

    Published

    on

    ಮಂಗಳೂರು : ಧಾರಾವಾಹಿಗಳನ್ನು ಇಷ್ಟ ಪಡುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಧಾರಾವಾಹಿ ಪ್ರಿಯವಾದುದು. ನಿತ್ಯ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ ಬಾರಿ ಟಿ ಆರ್ ಪಿ ಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್ 1 ಸ್ಥಾನದಲ್ಲಿದೆ. ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ನಿತ್ಯ ಹೊಸ ಹೊಸ ತಿರುವಿನೊಂದಿಗೆ ಗಮನ ಸೆಳೆಯುತ್ತಿರುತ್ತದೆ.


    ಇನ್ನು ಎರಡನೇ ಸ್ಥಾನದಲ್ಲಿ, ‘ಲಕ್ಷ್ಮೀ ನಿವಾಸ’ ಇದೆ. ತುಂಬು ಸಂಸಾರದ ಕಥೆ ಹೊಂದಿರುವ ಲಕ್ಷ್ಮೀ ನಿವಾಸವನ್ನು ಆರಂಭದಿಂದಲೇ ಜನ ಮೆಚ್ಚಿಕೊಂಡಿದ್ದಾರೆ.


    ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ವಿದೆ. ಇದು ಈ ಧಾರಾವಾಹಿಗೆ ಭರ್ಜರಿ ಟಿಆಆರ್​ಪಿ ಸಿಕ್ಕಿದೆ.

    ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.


    ಇನ್ನು ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ.

    Continue Reading

    DAKSHINA KANNADA

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ

    Published

    on

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಾದ ಕೃ ತಿಕ್ ಮತ್ತು ಪೃತ್ವಿಕ್ 6 ರಿಂದ 10ನೇ ತರಗತಿಯ ಮಕ್ಕಳಿಗೆ ಯೋಗವನ್ನು ಹೇಳಿಕೊಟ್ಟರು.

    ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

     

    Continue Reading

    LATEST NEWS

    ಕರ್ನಾಟಕದ ಈ ಜನಪ್ರಿಯ ಸೀರೆಗಳು ನಿಮ್ಮಲ್ಲಿದ್ಯಾ?

    Published

    on

    ಮಂಗಳೂರು: ಕರ್ನಾಟಕದಲ್ಲಿ ಹಲವಾರು ಬಗೆಯ ಉಡುಗೆಗಳು ನೋಡಲು ಸಿಗುತ್ತದೆ. ಉತ್ತರ ಕರ್ನಾಟಕದವರ ಒಂದು ಶೈಲಿಯಾದರೆ, ದಕ್ಷಿಣ ಕರ್ನಾಟಕದವರದ್ದು ಇನ್ನೊಂದು ರೀತಿ. ಅದರಲ್ಲೂ ನಾರಿಯರು ಸೀರೆಯನ್ನುಡುವಾಗಲೂ ಅಲ್ಲಿ ಹಲವು ಶೈಲಿಗಳು ಇವೆ. ಅದಕ್ಕಾಗಿಯೇ ಸೀರೆಗಳು ಕೂಡ ತುಂಬಾ ಭಿನ್ನವಾಗಿರುವಂತದ್ದು ಇವೆ. ವಿವಿಧ ಶೈಲಿ, ಬಗೆಯ ಸೀರೆಗಳನ್ನು ಹಿಂದಿನಿಂದಲೂ ನಮ್ಮ ರಾಜ್ಯದಲ್ಲಿ ತಯಾರಿಸಿಕೊಂಡು ಬರಲಾಗುತ್ತಿದೆ. ಐದು ಬಗೆಯ ಸಾಂಪ್ರದಾಯಿಕ ಸೀರೆಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

    ​ಮೈಸೂರು ಸಿಲ್ಕ್

    ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿರುವಂತಹ ಮೈಸೂರು ಸಿಲ್ಕ್ ಗೆ ಹೆಚ್ಚು ವಿವರಣೆ ಬೇಕಾಗಿಲ್ಲ. ಮೈಸೂರು ಶ್ರೀಗಂಧ ಮತ್ತು ಸಿಲ್ಕ್ ಸೀರೆಗಳಿಗೆ ತುಮಬಾ ಜನಪ್ರಿಯ. ಕ್ರಿ.ಶ. ೧೭೮೫ರಲ್ಲಿ ಈ ಸೀರೆಗಳು ಅಸ್ತಿತ್ವಕ್ಕೆ ಬಂದವು ಮತ್ತು ಉನ್ನತ ಗುಣಮಟ್ಟದ ಸಿಲ್ಕ್ ನಯವಾದ ಮತ್ತು ಉನ್ನತ ವಿನ್ಯಾಸ ನೀಡುವುದು. ಇದು ತುಂಬಾ ದುಬಾರಿ ಸೀರೆಯಾಗಿದ್ದು, ಹೆಚ್ಚಾಗಿ ಶ್ರೀಮಂತರೇ ಇದನ್ನು ಧರಿಸುವರು.

    ಇಳಕಲ್

    ಉತ್ತರ ಕರ್ನಾಟಕದ ಇಳಕಲ್ ನಿಂದ ಈ ಸೀರೆಯು ಬಂದಿದ್ದು, ಈ ಭಾಗದ ಶೇ.50-60ರಷ್ಟು ಜನರು ಕೈಮಗ್ಗದ ಕೆಲಸವನ್ನೇ ಮಾಡುವರು. ಸುಮಾರು ೮ನೇ ಶತಮಾನದಿಂದಲೂ ಈ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಇಳಕಲ್ ಸೀರೆಯು ಅದರ ಅಂಚು ಮತ್ತು ಸೆರಗಿನಿಂದಾಗಿ ತುಂಬಾ ಜನಪ್ರಿಯವಾಗಿದೆ. ಚಿಕ್ಕಿಯ ಅಂಚು ಹೊಂದಿರುವಂತಹ ಇದನ್ನು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೂಡ ಧರಿಸುವರು.

    ​ಗುಳೇದಗುಡ್ಡ​

    ಉತ್ತರ ಕರ್ನಾಟಕದ ಬಾಗಲಕೋಟೆಯಿದ ಬಂದಿರುವ ಗುಳೇದಗುಡ್ಡ ಸೀರೆಯು ಸುಮಾರು ನೂರು ವರ್ಷಗಳಿಂದಲೂ ಜನಪ್ರಿಯವಾಗಿದೆ. ಈ ಸೀರೆಯನ್ನು ಗುಳೇದಗುಡ್ಡ ಖಾನ ಎಂದು ಕೂಡ ಕರೆಯಲಾಗುತ್ತದೆ. ಈಗ ಇದನ್ನು ಶರ್ಟ್, ಬ್ಯಾಗ್, ತಲೆದಿಂಬಿನ ಕವರ್ ಮತ್ತು ಡೆಕೋರೇಟಿವ್ ಉತ್ಪನ್ನಗಳಲ್ಲಿ ಬಳಕೆ ಮಾಡುವರು. ತೆಳು ಮತ್ತು ಸರಳವಾಗಿ ಬರುವ ಈ ಸೀರೆಗಳು ರಾಜ್ಯದೆಲ್ಲೆಡೆಯಲ್ಲಿ ತುಂಬಾ ಜನಪ್ರಿಯಾಗಿದೆ.

    ಪಟ್ಟೆದ ಅಂಚು​

     

    ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದಾಗಿದೆ. ಇಂತಹ ಸೀರೆಗಳನ್ನು ಹತ್ತನೇ ಶತಮಾನದಿಂದಲೂ ಧರಿಸಿಕೊಂಡು ಬರಲಾಗುತ್ತಿದೆ. ಈಗಲೂ ಈ ಸಾಂಪ್ರದಾಯಿಕ ಸೀರೆಯು ಜನಪ್ರಿಯವಾಗಿದೆ. ಅದರ ಅಂಚು ಮತ್ತು ಚೆಕ್ಸ್ ನಿಂದಾಗಿಯೇ ಅದಕ್ಕೆ ಈ ಹೆಸರು ಬಂದಿದೆ. ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಇದನ್ನು ವಿಶೇಷವಾಗಿ ತಯಾರಿಸಲಾಗಿದೆ. ಇದು ಉಡುವವರಿಗೆ ಒಳ್ಳೆಯ ಹಿತಕರ ಭಾವೆ ನೀಡುವುದು. ಇದರಲ್ಲಿ ಸಾಮಾನ್ಯವಾಗಿ ಹಳದಿ, ಕೆಂಪು, ಗುಲಾಬಿ, ಹಸಿರು ಬಣ್ಣಗಳು ಇವೆ.

    ​ಕಸೂತಿ ಸೀರೆ​

    ಕೈಮಗ್ಗದಿಂದ ಮಾಡಲ್ಪಡುವಂತಹ ಈ ಸೀರೆಯು ರಾಜ್ಯದ ಮಹಿಳೆಯರಲ್ಲಿ ತುಂಬಾ ಜನಪ್ರಿಯ ಸೀರೆಯಾಗಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಇದರ ಬಳಿಕ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಿಸಲಾಗುತ್ತದೆ. ಹತ್ತಿ, ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ, ಬೇರೆ ಕಡೆಗಳಲ್ಲೂ ತುಂಬಾ ಜನಪ್ರಿಯವಾಗಿದೆ.

    Continue Reading

    LATEST NEWS

    Trending