Connect with us

    LATEST NEWS

    ಪ್ರತಿಷ್ಟಿತ ಗೋಲ್ಡ್ ಕಂಪನಿಯನ್ನೇ ಯಾಮಾರಿಸಿ, ವಂಚಿಸಿದ ಬೆಂಗಳೂರಿನ ಪ್ರಳಯಾಂತಕ!

    Published

    on

    ಪ್ರತಿಷ್ಟಿತ ಗೋಲ್ಡ್ ಕಂಪನಿಯನ್ನೇ ಯಾಮಾರಿಸಿ, ವಂಚಿಸಿದ ಬೆಂಗಳೂರಿನ ಪ್ರಳಯಾಂತಕ!

    ಬೆಂಗಳೂರು : ಸಾಮಾನ್ಯವಾಗಿ ಗೋಲ್ಡ್ ಕಂಪನಿಗಳು, ಫೈನಾನ್ಸ್ ಏಜೆನ್ಸಿಗಳು ಸ್ತ್ರೀ ಸಾಮಾನ್ಯರಿಗೆ ಮೋಸ ಮಾಡೋದನ್ನು ಕೇಳಿರುತ್ತೇವೆ.

    ಆದರೆ, ಇಲ್ಲೊಬ್ಬ ಖತರ್ನಾಕ್ ಸುಂದರಾಂಗ ಸೂಟು ಬೂಟು ಹಾಕಿಕೊಂಡು ಸಭ್ಯಸ್ಥನಂತೆ ವರ್ತಿಸುತ್ತಾ ಪ್ರತಿಷ್ಟಿತ ಚಿನ್ನ ಖರೀದಿ ಕಂಪನಿಗೆ ಪಂಗನಾಮ ಹಾಕಿ ಪೊಲೀಸರ ಅತಿಥಿಯಾಗಿದ್ದಾನೆ.

    ಬೆಂಗಳೂರಿನ ಪೀಣ್ಯ 2ನೇ ಹಂತದ ವಿದ್ಯಮಾನ ನಗರ ನಿವಾಸಿ ನರೇಶ್ (25) ಅಲಿಯಾಸ್ ನರಿ ಬಂಧಿತ ಆರೋಪಿ. ಜೀವನ ಮಾಡಲು ಅಮೇಜಾನ್ ಕಂಪನಿಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದರೂ ತನ್ನ ಶೋಕಿ ಜೀವನಕ್ಕೆ ದುಡ್ಡು ಸಾಕಾಗದ ಹಿನ್ನೆಲೆಯಲ್ಲಿ ಅಡ್ಡದಾರಿಯಲ್ಲಿ ದುಡ್ಡು ಮಾಡಲು ಮುಂದಾಗಿದ್ದ ನರೇಶ್.

    ಸಂಸದೆ ಸುಮಲತಾ ಅಂಬರೀಷ್ ಜಾಹಿರಾತು ನೀಡಿರುವ ಖಾಸಗಿ ಚಿನ್ನ ಖರೀದಿ ಕಂಪನಿಗೆ ಮೋಸ ಮಾಡಿದ ಈ ನರೇಶ್ ಸದ್ಯ ಮಾದನಾಯಕನಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.

    ಹಿಂದೂಸ್ಥಾನ್ ಗೋಲ್ಡ್ ಕಂಪನಿಯ ಜಾಹಿರಾತಿನಲ್ಲಿ ಕೊಡುವ ಕಸ್ಟಮರ್ ಕೇರ್ ನಂಬರ್‌ಗೆ ನವೆಂಬರ್ 28ರಂದು ಕರೆ ಮಾಡಿದ್ದ ಆರೋಪಿ ನರೇಶ್ ನನ್ನದು 25 ಗ್ರಾಂ ಚಿನ್ನ ಇದೆ, ಅದನ್ನು ಮಾದನಾಯಕನಹಳ್ಳಿ ಮಣಪ್ಪುರಂ ಗೋಲ್ಡ್ ಫೈನಾನ್ಸ್‌ನಲ್ಲಿ ಅಡಮಾನ ಇಟ್ಟಿದ್ದೇನೆ.

    ಸುಮಾರು 70 ಸಾವಿರ ಆಗಬಹುದು ನನ್ನಿಂದ ಬಿಡಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ತಾವೇ ಬಿಡಿಸಿಕೊಂಡು ಆನ್​ಲೈನ್ ಬೆಲೆಗೆ ಕೊಂಡುಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾನೆ.

    ನಿಮ್ಮ ದಾಖಲಾತಿಗಳನ್ನು ವಾಟ್ಸ್‌ಆಪ್ ಮೂಲಕ ಕಳುಹಿಸಿಕೊಡಿ ಎಂದು ಕಂಪನಿಯವರು ಕೇಳಿದಾಗ ನನ್ನ ಬಳಿ ಬೇಸಿಕ್ ಮೊಬೈಲ್ ಇರೋದು. ಇಲ್ಲಿಗೆ ಬಂದರೆ ನಾನು ಎಲ್ಲ ದಾಖಲೆಗಳನ್ನು ಒದಗಿಸುತ್ತೇನೆ ಎಂದಿದ್ದಾನೆ.‌

    ಗ್ರಾಹಕರನ್ನು ಕಳೆದುಕೊಳ್ಳಬಾರದು ಎಂದು ಕಂಪನಿಯವರು ಮಂಜುನಾಥ್ ಎಂಬ ಪ್ರತಿನಿಧಿಯನ್ನು ಮಾದನಾಯಕನಹಳ್ಳಿಗೆ ಕಳುಹಿಸಿದ್ದು, ಅಲ್ಲಿ ಆರೋಪಿ ನರೇಶ್ ಒಂದು ಹೈಡ್ರಾಮ ಸೃಷ್ಟಿಸಿದ್ದಾನೆ.

    ನನ್ನ ಚಿನ್ನದೊಂದಿಗೆ ಮತ್ತೆ 10 ಗ್ರಾಂ ಚಿನ್ನ ಇದೆ, ಅದು ಈಗಾಗಲೇ ಹರಾಜಿಗೆ ಹೋಗಿದೆ. ಅದನ್ನು ಬಿಡಿಸಿಕೊಂಡರೆ ಇದನ್ನು ಕೊಡುತ್ತಾರಂತೆ ಎಂದಿದ್ದಾರೆ.

    ಆಗ ಗೋಲ್ಡ್ ಕಂಪನಿಯ ಮಂಜುನಾಥ್ ಮಣಪ್ಪುರಂ ಫೈನಾನ್ಸ್‌ನವರನ್ನು ವಿಚಾರಿಸಿದಾಗ 95,000 ಆಗುತ್ತದೆ, ಕಟ್ಟಿ ಬಿಡಿಸಿಕೊಳ್ಳಿ ಎಂದಿದ್ದಾರೆ.ಹಣ ಇಲ್ಲದ ಕಾರಣ ಸೋಮವಾರ ಬರುತ್ತೇನೆಂದು ಮಂಜುನಾಥ್ ವಾಪಾಸ್ ಹೋಗಿದ್ದಾರೆ. ಸೋಮವಾರ ಒಂದು ಲಕ್ಷ ರೂ. ತಂದು ಅದರಲ್ಲಿ 95,000 ರೂ. ಹಣವನ್ನು ಆರೋಪಿ ನರೇಶ್ ಕೈ‌ಗೆ ನೀಡಿದ್ದಾನೆ.

    ಹಣವನ್ನು ಪಡೆದ ನರೇಶ್ ಮಣಪ್ಪುರಂ ಕಂಪನಿಗೆ ಹೋಗಿ ಬರುವುದಾಗಿ ಹೇಳಿ ಕಟ್ಟಡದ ಮತ್ತೊಂದು ಭಾಗದಿಂದ ಎಸ್ಕೇಪ್ ಆಗಿದ್ದು, ಎಷ್ಟು ಸಮಯವಾದರೂ ಆರೋಪಿ ನರೇಶ್ ಬಾರದ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಡಿದ ಮಂಜುನಾಥ್ ಕೊನೆಗೆ ಮೋಸ ಹೋಗಿರುವುದರ ಬಗ್ಗೆ ತಮ್ಮ ಮ್ಯಾನೇಜರ್‌ಗೆ ತಿಳಿಸಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ನರೇಶ್ ಮತ್ತೆ ಅದೇ ಮಣಪ್ಪುರಂ ಫೈನಾನ್ಸ್‌ಗೆ ಮತ್ತೊಬ್ಬರು ಗೋಲ್ಡ್ ಕಂಪನಿಯವರನ್ನು ಕರೆದುಕೊಂಡು ಬಂದಿದ್ದಾಗ ಸಿಕ್ಕಿ ಬಿದ್ದಿದ್ದಾನೆ.

    ಒಟ್ಟಾರೆ ಸಭ್ಯಸ್ಥನಂತೆ ಉಡುಗೆ ತೊಡುಗೆ ತೊಟ್ಟುಕೊಂಡು ವಿಲಾಸಿ ಜೀವನಕ್ಕಾಗಿ ಪ್ರತಿಷ್ಟಿತ ಗೋಲ್ಡ್ ಕಂಪನಿಗಳ ಬುಡಕ್ಕೆ ಕೈಹಾಕಿ ಮೋಸ ಮಾಡಲು ಯತ್ನಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದು,

    ಬಂಧಿತನಿಂದ 95,000 ರೂ. ಹಣ ಹಾಗೂ ಒಂದು ಬೈಕ್ ವಶಕ್ಕೆ ಪಡೆದು ಕೊಂಡಿದ್ದಾರೆ. ಈತನ ಬಂಧನದ ನಂತರ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಈತನ ಜಾಲದಲ್ಲಿ ಮತ್ತೆಷ್ಟು ಕುಳಗಳು ಅಡಗಿ ಕುಳಿತಿವೆ ಎಂದು ತನಿಖೆಯ ನಂತರ ತಿಳಿಯಬೇಕಿದೆ.

    BIG BOSS

    ಬಿಗ್ ಬಾಸ್ ಸೀಸನ್ 12ಕ್ಕೆ ಸಾರಥಿ ಇವರೇ ?

    Published

    on

    ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಸೀಸನ್ 11 ಶುರುವಾಗಿ ಎರಡು ವಾರ ಕಳೆದಿತ್ತು. ಅಕ್ಟೋಬರ್ 13ರಂದು ಟ್ವೀಟ್ ಮಾಡಿದ ಕಿಚ್ಚ ಇದೇ ನನ್ನ ಕೊನೆಯ ಸೀಸನ್ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

    ಬಿಗ್ ಬಾಸ್ ಶೋಗೆ ಕಿಚ್ಚ ಬಂದ್ರೆನೇ ಒಂದು ಕಳೆ ಬರೋದು. ಬಿಗ್ ಬಾಸ್ ಕಿಕ್ ಹೆಚ್ಚಿಸೋದೆ ಬಾದ್ ಶಾ ಕಿಚ್ಚ ಸುದೀಪ್. ಆದರೆ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಭಾವುಕ ಪೋಸ್ಟ್ ಒಂದನ್ನ ಶೇರ್ ಮಾಡಿದ್ರು. ಈ ಸುದ್ದಿ ಬಿಗ್ ಬಾಸ್ ಫ್ಯಾನ್ಸ್ ಗೆ ತೀವ್ರ ಬೇಸರ ಉಂಟು ಮಾಡಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಹೊಸ ಸುದ್ದಿಯೊಂದು ಹೊರಬಂದಿದೆ.

    ಇದನ್ನೂ ಓದಿ: ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?

    ಸಂದರ್ಶನವೊಂದರಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿರೋ ಕಿಚ್ಚ, ಶೂಟಿಂಗ್ ಹಾಗೂ ಶೋನ ಮಾಡೋದು ತುಂಬಾ ಸ್ಟ್ರೇಸ್ ಆಗ್ತಿದೆ. ಸಾಕು ಅನ್ನಿಸಿದ ತಕ್ಷಣ ಟ್ವೀಟ್ ಮಾಡಿದೆ. ಬೆಳಿಗ್ಗೆ ಮತ್ತೇ ಮೂಡ್ ಚೆಂಜ್ ಆಗಬಾರದು ಅಂತ ರಾತ್ರಿನೇ ಅನೌನ್ಸ್ ಮಾಡಿದೆ. ಆದ್ರೆ ಕಲರ್ಸ್ ಕನ್ನಡ ಇನ್ನೂ ಅದನ್ನ ಒಪ್ಪಿಕೊಂಡಿಲ್ಲ. ನೋಡೋಣ, ನನಗೆ ಬರ್ಬೇಕು ಅನ್ಸಿದ್ರೇ ಟ್ವೀಟ್ ಮಾಡ್ತೀನಿ, ಹಿಂಜರಿಯಲ್ಲ. ಖಂಡಿತ ಮತ್ತೇ ಬರ್ತಿನಿ ಎಂದು ಉತ್ತರಿಸಿದ್ದಾರೆ ಕಿಚ್ಚ ಸುದೀಪ್.

    ಈ ಮಾತುಗಳಿಂದ ಸುದೀಪ್ ಮತ್ತೆ ಬಿಗ್ ಬಾಸ್ ಶೋ ನಡೆಸಿಕೊಡಬಹುದು ಎಂಬ ನೀರಿಕ್ಷೆ ಬಿಗ್ ಬಾಸ್ ಆಭಿಮಾನಿಗಳಿಗೆ ಮೂಡಿದೆ. ಕಲರ್ಸ್ ಕನ್ನಡ ಚಾನೆಲ್ ಕನ್ವಿನ್ಸ್ ಮಾಡಿದರೆ ಕಿಚ್ಚ ಶೋಗೆ ಮರಳುವ ಸಾಧ್ಯತೆ ಇದೆ.

    Continue Reading

    LATEST NEWS

    ರಸ್ತೆ ಮಧ್ಯೆ ಹೊ*ತ್ತಿ ಉ*ರಿದ ಎರಡು ಲಾರಿಗಳು

    Published

    on

    ಮಂಗಳೂರು/ಚಿಕ್ಕಬಳ್ಳಾಪುರ: ಸಿಎನ್​​ಜಿ ಗ್ಯಾಸ್ ಸಿಲಿಂಡರ್​​ಗಳನ್ನು ತುಂಬಿದ್ದ ಕ್ಯಾಂಟರ್​​ವೊಂದಕ್ಕೆ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು  ಡಿ*ಕ್ಕಿ ಹೊಡೆದ ಕಾರಣ ಭೀಕರ ಅ*ಗ್ನಿ ಅ*ನಾಹುತ ಸಂಭವಿಸಿದ ಘಟನೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಹುನೇಗಲ್ ಗ್ರಾಮದಲ್ಲಿ ನಿನ್ನೆ (27) ತಡರಾತ್ರಿ ಸಂಭವಿಸಿದೆ. ಸಿಎನ್​​ಜಿ ಗ್ಯಾಸ್ ಸಿಲಿಂಡರ್​​ಗಳು ಸ್ಪೋ*ಟಗೊಂಡು ನೂರು ಅಡಿ ಎತ್ತರ ಬೆಂ*ಕಿಯ ಕೆನ್ನಾಲಿಗೆ ಚಿಮ್ಮಿದೆ. ಅದೃಷ್ಟವಶಾತ್ ಭಾರಿ ಅ*ನಾಹುತ ತಪ್ಪಿದ್ದು, ಎರಡೂ ಲಾರಿಗಳಲ್ಲಿದ್ದ ಚಾಲಕರು ಹಾಗೂ ಕ್ಲೀನರ್​ಗಳಿಗೆ ಗಾ*ಯಗಳಾಗಿವೆ.

     

    ಗಾ*ಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾಗೆ ದಾಖಲಿಸಲಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಹುನೇಗಲ್ ಬಳಿ ಕೆಲವು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಲಾಗಿತ್ತು. ಮೇಘಾ ಸಿಎನ್​​ಜಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಕಂಪನಿಗೆ ಸೇರಿದ ಸಿಎನ್​​ಜಿ ಗ್ಯಾಸ್ ಸಿ*ಲೆಂಡರ್​ಗಳನ್ನು ತುಂಬಿದ್ದ ಕ್ಯಾಂಟರ್ ಹುನೇಗಲ್ ಬಳಿ ಯೂ ಟರ್ನ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಭಸವಾಗಿ ಡಿ*ಕ್ಕಿ ಹೊಡೆದಿದೆ. ಇದರಿಂದ ಸಿಎನ್​​ಜಿ ಗ್ಯಾಸ್ ಸಿ*ಲಿಂಡರ್​ಗಳು ಸ್ಪೋ*ಟಗೊಂಡು ಬೆಂ*ಕಿ ಆವರಿಸಿದೆ.

    ತಕ್ಷಣ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಅ*ಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬೆಂಕಿ ನಂದಿಸಿ ಎರಡು ವಾಹನಗಳನ್ನೂ ರಸ್ತೆ ಬದಿ ನಿಲ್ಲಿಸಿದ್ದಾರೆ. ವಾಹನದಲ್ಲಿದ್ದ ಕೆಲವು ಸಿಎನ್​ಜಿ ಸಿಲಿಂಡರ್​​​ಗಳು ಮಾತ್ರ ಸ್ಪೋ*ಟಗೊಂಡಿದ್ದು ಭಾರಿ ಅ*ನಾಹುತ ತಪ್ಪಿದೆ. ತಕ್ಷಣ  ಅ*ಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಡವಂತಾಯಿತು.

    Continue Reading

    LATEST NEWS

    ಉಡುಪಿ : ಹೊಸ ವರ್ಷ ಮತ್ತು ವರ್ಷಾಂತ್ಯದ ರಜೆಗಳ ಹಿನ್ನಲೆ ಮಾರ್ಗ ಮಾರ್ಪಾಡು

    Published

    on

    ಉಡುಪಿ : ಹೊಸ ವರ್ಷ ಮತ್ತು ವರ್ಷಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಈ ಕೆಳಕಂಡ ಮಾರ್ಗಗಳಲ್ಲಿ ಮಾರ್ಪಾಡು ಮಾಡಲಾಗಿರುತ್ತದೆ. ಮಣಿಪಾಲ ಕಡೆಯಿಂದ ಬರುವ ಸರಕು ಲಘು ವಾಹನ, ಮಂಗಳೂರು, ಕಾಪು ಕಡೆ ಹೋಗುವವರು ಶಾರದಾ ಕಲ್ಯಾಣ ಮಂಟಪದ ಕಡೆಯಿಂದ ಚಲಿಸುವುದು.

    ‘ ಕಲ್ಸಂಕ ವೃತ್ತ’ :

    1) ಗುಂಡಿಬೈಲ ಕಡೆಯಿಂದ ಬರುವ ವಾಹನಗಳು ಕಡಿಯಾಳಿ ಎದುರು ತಿರುಗಿಸಿಕೊಂಡು ಕೃಷ್ಣಮಠ ಮತ್ತು ಉಡುಪಿ ಕಡೆ ಬರುವುದು.

    2) ಮಣಿಪಾಲ ಕಡೆಯಿಂದ ಬಂದು ಗುಂಡಿಬೈಲ ಕಡೆ ಹೋಗುವವರು ಸಿಟಿ ಬಸ್ಸ ನಿಲ್ದಾಣದ ಹತ್ತಿರ ತಿರುಗಿಸಿಕೊಂಡು ಬರುವುದು.

    ಕರಾವಳಿ ಜಂಕ್ಷನ್ :

    1) ಮಲ್ಪೆಯಿಂದ ಬರುವವರು ಕರಾವಳಿಗೆ ಬಂದು ಎಡಕ್ಕೆ ತಿರುಗಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ನಿಟ್ಟೂರ ಆಭರಣ ಮೋಟರ್ಸ ಎದುರಿಗೆ U Turn ಮಾಡಿಕೊಂಡು ನಗರದ ಕಡೆ ಬರುವುದು.

    2). ಮಂಗಳೂರು ಕಡೆಯಿಂದ ಬರುವವರು ಮಲ್ಪೆ ಹೋಗುವವರನ್ನು‌ ಹೊರತುಪಡಿಸಿ ಉಳಿದವರೆಲ್ಲರೂ ನಿಟ್ಟೂರ (ಆಭರಣ ಮೋಟರ್ಸ) ಎದುರು ತಿರುಗಿಸಿ ಉಡುಪಿಗೆ ಬರುವುದು.

    ಮಲ್ಪೆ :

    1) ಮಲ್ಪೆ ಬೀಚ್ ಕಡೆಯಿಂದ ಬರುವವರು ಬಲರಾಮ ಸರ್ಕಲನಿಂದ ಹೊರಟು ಹೂಡೆ, ನೇಜಾರು ಮಾರ್ಗ ಬಳಸಿ ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರುವುದು.

    2) ಸಾರ್ವಜನಿಕರು ನಾಳೆ ದಿನಾಂಕ 28.12.2024 ರಿಂದ ದಿನಾಂಕ 01.01.2025 ರ ಸಂಜೆ 4.00 ಗಂಟೆಯಿಂದ ರಾತ್ರಿ 9.00 ಗಂಟೆಯ ವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ಸೂಚಿಸಿದ ಮಾರ್ಗಗಳಲ್ಲಿ ಚಲಿಸಿ ಪೊಲೀಸರೊಂದಿಗೆ ಸಹಕರಿಸಲು ಕೋರಿದೆ.

    Continue Reading

    LATEST NEWS

    Trending