Connect with us

bengaluru

ಬೆಂಗಳೂರು ರಾಜ ಮಹಾರಾಜ ಜೋಡುಕರೆ ಕಂಬಳ ಫಲಿತಾಂಶ

Published

on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬೆಳಿಗ್ಗೆ ಆರಂಭವಾದ ಕಂಬಳ ಸೋಮವಾರ ಮುಂಜಾನೆ ಅಂದರೆ ಇಂದು ಮುಂಜಾನೆ 5 ಗಂಟೆಗೆ ಸಂಭ್ರಮದ ತೆರೆಕಂಡಿದ್ದು, 2 ದಿನಗಳ ಕಾಲ ನಡೆದ ರಾಜ ಮಹಾರಾಜ ಜೋಡುಕರೆ ಕಂಬಳದ ಫಲಿತಾಂಶ ಬಂದಿದೆ.

ಕೂಟದಲ್ಲಿ ಒಟ್ಟು 159 ಜೊತೆ ಕೋಣಗಳು ಸ್ಪರ್ಧಿಸಿವೆ. ಕನೆ ಹಲಗೆಯಲ್ಲಿ 7 ಜೊತೆ, ಅಡ್ಡ ಹಲಗೆಯಲ್ಲಿ 6 ಜೊತೆ, ಹಗ್ಗ ಹಿರಿಯದಲ್ಲಿ 21 ಜೊತೆ, ನೇಗಿಲು ಹಿರಿಯಲ್ಲಿ 32 ಜೊತೆ, ಹಗ್ಗ ಕಿರಿಯದಲ್ಲಿ 31 ಜೊತೆ, ನೇಗಿಲು ಕಿರಿಯದಲ್ಲಿ 62 ಜೊತೆ ಕೋಣಗಳು ಕಂಬಳದ ಕರೆಗಿಳಿದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವು.

MRG ಸಮೂಹ ಸಂಸ್ಥೆ ಗಳ ಮುಖ್ಯಸ್ಥ ಪ್ರಕಾಶ್ ಶೆಟ್ಟಿಅವರ ಗೌರವ ಅಧ್ಯಕ್ಷತೆ, ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಈ ಕಂಬಳ ಮಹೋತ್ಸವ ಕೇವಲ ಕರಾವಳಿ ಭಾಗದ ಮಾತ್ರವಲ್ಲದೆ ಬೆಂಗಳೂರಿನ ಲಕ್ಷಾಂತರ ಮಂದಿಯೂ ನೋಡಿ ಆನಂದಿಸಿದರು.

ತಾರಾ ಚಿತ್ರನಟರಾದ ಉಪೇಂದ್ರ, ರಿಷಬ್ ಶೆಟ್ಟಿ,ಪೂಜಾ ಹೆಗ್ಡೆ,ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ಚಿತ್ರನಟರು, ಗಣ್ಯರು ಕಂಬಳ ವೀಕ್ಷಿಸಿ ಸಂತಸಪಟ್ಟರು. ಬೆಂಗಳೂರು ಕಂಬಳದ ಸಾರಥಿ ಅಶೋಕ್ ಕುಮಾರ್ ರೈ ಅಂತೂ ಯಶಸ್ಸಿನ ಗೆಲುವಿಗೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಕಂಬಳದ ಫಲಿತಾಂಶ:

ಕನೆಹಲಗೆ: 6.5 ಕೋಲು ನಿಶಾನೆಗೆ ನೀರು ಹಾಯಿಸುವುದುರ ಮೂಲಕ ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ “ಬಿ” ಬಹುಮಾನವನ್ನು ಪಡೆದುಕೊಂಡರು.

ಅಡ್ಡ ಹಲಗೆ:

ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ”
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ”

ನೇಗಿಲು ಹಿರಿಯ:
ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ನೇಗಿಲು ಕಿರಿಯ:
ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ
ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ

bangalore

ವಿಧಾನ ಪರಿಷತ್ ನಲ್ಲಿ ಕೋಲಾಹಲ..ಕೈ ಕೈ ಮಿಲಾಯಿಸೋ ಹಂತಕ್ಕೆ ಹೋದ ನಾಯಕರು

Published

on

ಬೆಂಗಳೂರು : ವಿಧಾನಸೌಧ ಆವರಣದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಆರೋಪ ವಿಧಾನ ಪರಿಷತ್ ಕಲಾಪದಲ್ಲೂ ಭಾರೀ ಕೋಲಾಹಲ ಹುಟ್ಟು ಹಾಕಿತು.


ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ವಿಷಯ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಚಾರಕ್ಕೆ ಕಿಡಿಕಾರಿದ ಪರಿಷತ್​ ಸದಸ್ಯ ಎನ್​ ರವಿಕುಮಾರ್ ​​ ಇದು “ದೇಶದ್ರೋಹಿ ಸರ್ಕಾರ” ಎಂದರು. ಇದರಿಂದ ಕೆರಳಿದ ಕಾಂಗ್ರೆಸ್​​​ ಸದಸ್ಯ ಅಬ್ದುಲ್ ಜಬ್ಬಾರ್ “ಅವನ ಬಾಯಿ ಬಂದ್ ಮಾಡಿ” ಎಂದು ರವಿಕುಮಾರ್​ ಅವರನ್ನು ಏಕವಚನದಲ್ಲೇ ಉಲ್ಲೇಖಿಸಿದ್ದು, ಪರಿಷತ್ ನಲ್ಲಿ ಕೋಲಾಹಲ ಎಬ್ಬಿಸಿತು. ಅಬ್ದುಲ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತಾಡಿದರೆ ಸರಿ ಇರಲ್ಲವೆಂದರು. ಬಳಿಕ ರವಿಕುಮಾರ್ ಎದ್ದು ಅಬ್ದುಲ್​ ಜಬ್ಬರ್​ ಬಳಿ ಹೋದರು. ರವಿಕುಮಾರ್ ಜೊತೆ ತುಳಸಿ ಮುನಿರಾಜುಗೌಡ ಮುನ್ನುಗ್ಗಿ ಹೋದರು. ಎರಡೂ ಕಡೆಯ ಸದಸ್ಯರು ಸಭಾಪತಿಗಳ ಮುಂದೆಯೇ ಕೈಕೈ ಮಿಲಾಯಿಸಲು ಮುಂದಾದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮಾರ್ಷಲ್‌ಗಳು ಹರಸಾಹಸಪಟ್ಟರು. ಮಧ್ಯ ಪ್ರವೇಶಿಸಿದ ಸಚಿವ ಹೆಚ್‌.ಕೆ.ಪಾಟೀಲ್‌ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಕ್ಷಮೆ ಕೇಳುವಂತೆ ಸಲಹೆ ನೀಡಿದರು. ಇದಕ್ಕೆ ಎನ್​. ರವಿಕುಮಾರ್​ ದೇಶದ ಪರವಾಗಿ ಮಾತನಾಡಿದ್ದೇನೆ, ಅದು ಕ್ಷಮೆ ಕೇಳುವ ವಿಷಯವಾ ಎಂದರು. ಇತ್ತ ಅಬ್ದುಲ್ ಜಬ್ಬಾರ್ ನಿಮ್ಮ ಮೂಲಕ ನಾನು ಆಡಿದ ಮಾತು ವಾಪಸ್ ಪಡೆಯುತ್ತೇನೆ ಎಂದರು.

Continue Reading

bengaluru

ಶಾಲೆಯಲ್ಲಿ ಕೊಟ್ಟ ಮಾತ್ರೆ ನುಂಗಿ 4ನೇ ತರಗತಿ ವಿದ್ಯಾರ್ಥಿನಿ ಸಾವು..!

Published

on

ಬೆಂಗಳೂರು: ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ನುಂಗಿ 4ನೇ ತರಗತಿ ಮೃತಪಟ್ಟ ಘಟನೆ ಬೆಂಗಳೂರಿನ ಕರಿಸಂದ್ರದ ಉರ್ದು ಶಾಲೆಯಲ್ಲಿ ನಡೆದಿದೆ.


ಝೋಯಾ (9) ಮೃತಪಟ್ಟ ವಿದ್ಯಾರ್ಥಿನಿ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಝೋಯಾ ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ಸೇವಿಸಿದ್ದಳು. ಆಕೆ ಮಾತ್ರೆ ತಿನ್ನುತ್ತಿದ್ದಂತೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿದೆ. ಆ ಬಳಿಕ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆದರೆ ಚಿಕಿತ್ಸೆ ಫಲಿಸದೆ ಝೋಯಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ

Continue Reading

bangalore

ಕೊಳೆತ ಬಟ್ಟೆ ನೋಡಿ ರೈತನನ್ನು ಮೆಟ್ರೋಗೆ ಹತ್ತಿಸದ ಸಿಬ್ಬಂದಿ – ಭಾರಿ ಆಕ್ರೋಶ..!

Published

on

ಬೆಂಗಳೂರು: ಮೂಟೆ ಹೊತ್ತುಕೊಂಡು ರೈತನೋರ್ವ ಮೆಟ್ರೋ ರೈಲಿಗೆ ಹತ್ತುವಾಗ ಮೆಟ್ರೋ ಸಿಬ್ಬಂದಿ ಗಲೀಜು ಬಟ್ಟೆ ಹಾಕಿದ್ದಾನೆ ಎಂದು ಅವರನ್ನು ಒಳಗೆ ಬಿಡದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಬೆನ್ನಲೆ ಭಾರಿ ವಿರೋಧಕ್ಕೆ ಕಾರಣವಾಗಿದೆ.

ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎನ್ನವ ವಿಡಿಯೋ ವೈರಲ್ ಆಗಿದೆ.

 

Continue Reading

LATEST NEWS

Trending