bangalore
ಬೆಂಗಳೂರು: 5 ಗ್ಯಾರಂಟಿ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published
2 years agoon
By
Adminಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ಬೆಂಗಳೂರು: ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಇಂದಿನಿಂದಲೇ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದರು.
-ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್
-ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ.
– ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ
-ಪದವೀದರ, ಪಿಎಚ್ಡಿ, ಎಂಬಿಬಿಎಸ್ ಪದವೀದರ ನಿರುದ್ಯೋಗಿಗಳಿಗೆ ಎರಡೂವರೆ ವರ್ಷಗಳವರೆಗೆ ತಿಂಗಳಿಗೆ ಮೂರು ಸಾವಿರ ರೂ., ಡಿಪ್ಲಮಾ ಪಾಸ್ ಮಾಡಿದ ನಿರುದ್ಯೋಗಿಗಳಿಗೆ ಒಂದೂವರೆ ಸಾವಿರ ರೂ.
-ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಫ್ರೀ ಬಸ್ ಪಾಸ್
ಈ 5 ಗ್ಯಾರಂಟಿ ನೀಡುವುದಾಗಿ ಭರವಸೆ ನೀಡಿದರು.
ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.
ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.
ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.
bangalore
ಮಂಜುಮ್ಮೆಲ್ ಬಾಯ್ಸ್ ಸಿನಿಮಾ ರೀತಿಯ ಘಟನೆ; ಸೆಲ್ಫಿ ಹುಚ್ಚಿಗೆ ಬಲಿಯಾಗಬೇಕಿದ್ದ ಯುವತಿ ರೋಚಕ ಪಾರು !
Published
4 weeks agoon
28/10/2024ಕೊಚ್ಚಿಯಿಂದ ಹತ್ತು ಜನ ಸ್ನೇಹಿತರು ಕೊಡೈಕೆನಾಲ್‌ಗೆ ಹೋಗುತ್ತಾರೆ. ಕಮಲ್ ಹಾಸನ್ ಅಭಿನಯದ ಗುಣ ಚಿತ್ರದಲ್ಲಿನ ಗುಹೆಗಳನ್ನು ನೋಡಲೆಂದು ತೆರಳುತ್ತಾರೆ. ನಿರ್ಬಂಧಿತ ಪ್ರದೇಶ ಎಂದು ಗೊತ್ತಿದ್ದರೂ ಆಳವಾದ ಗುಹೆಗಳನ್ನು ಪ್ರವೇಶಿಸುತ್ತಾರೆ. ಆದರೆ, ಸ್ನೇಹಿತನೊಬ್ಬ ಆಕಸ್ಮಿಕವಾಗಿ ಆಳವಾದ ಕಣಿವೆಯಲ್ಲಿ ಬೀಳುತ್ತಾನೆ. ಉಳಿದ ಸ್ನೇಹಿತರು ಅವನನ್ನು ಹೇಗೆ ಹೊರಗೆ ಕರೆತಂದರು ಎಂಬುದೇ ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಕತೆ.
ನಿನ್ನೆ (ಅ.27) ತುಮಕೂರು ನಗರದ ಸಮೀಪದ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿರುವ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಹಂಸ (20) ಕೆಳಕ್ಕೆ ಬಿದ್ದು ಕಾಣೆಯಾಗಿದ್ದಳು. ಸಂಜೆಯಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಪಾಯಕ್ಕೆ ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿತ್ತು. ಅಲ್ಲದೆ, ಒಂದು ಹಂತದಲ್ಲಿ ಹಂಸ ಸತ್ತೇ ಹೋಗಿದ್ದಾಳೆ ಎಂದು ಭಾವಿಸಲಾಗಿತ್ತು. ಆದರೆ, ಅದೃಷ್ಟವಶಾತ್ ಹಂಸ ಬದುಕಿದ್ದಾಳೆ. ಪೊಟರೆಯಲ್ಲಿ ಸಿಲುಕಿಕೊಂಡಿದ್ದ ಆಕೆಯನ್ನು ಇದೀಗ ರಕ್ಷಣೆ ಮಾಡಲಾಗಿದೆ.
ಗುಬ್ಬಿ ತಾಲೂಕಿನ ಶಿವಪುರದ ಸೋಮನಾಥ್ ಎಂಬುವವರ ಪುತ್ರಿ ಹಂಸ ಸ್ನೇಹಿತರೊಂದಿಗೆ ಮೈದಾಳ ಕೆರೆ ನೋಡಲು ತೆರಳಿದ್ದರು. ಈ ವೇಳೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು.
bangalore
ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು ; ವಾರ್ನ್ ಮಾಡಿದ್ದಕ್ಕೆ ಬರ್ಬರ ಹ*ತ್ಯೆ
Published
4 weeks agoon
27/10/2024ಮಂಗಳೂರು/ಬೆಂಗಳುರು : ನಿನ್ನೆ (ಅ.26) ತಡರಾತ್ರಿ ಸುಲ್ತಾನ್ ತಿಪ್ಪಸಂದ್ರದ ಅಮ್ಜಾದ್ ಎಂಬಾತ ರೋಹಿದ್ ಅಲಿಯಾಸ್ ಅರ್ಬಾಜ್ನನ್ನು ಕೊ*ಲೆ ಮಾಡಿರುವ ಘಟನೆ ಜಮಾಲ್ ಷಾ ನಗರದಲ್ಲಿ ನಡೆದಿದೆ.
ರೋಹಿದ್ ಅಲಿಯಾಸ್ ಅರ್ಬಾಜ್(26) ಮೃ*ತ ವ್ಯಕ್ತಿ.
ಘಟನೆ ಹಿನ್ನಲೆ :
ರೋಹಿದ್ ಮತ್ತು ಅಮ್ಜಾದ್ ದೂರದ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದರು. ಹೀಗಿರುವಾಗ ಅಮ್ಜಾದ್ ಆಗಾಗ ರೋಹಿದ್ ಮನೆಗೆ ಬರುತ್ತಿದ್ದ. ಈ ವೇಳೆ ರೋಹಿದ್ ಅಣ್ಣನ ಹೆಂಡತಿ ಅಂದರೆ ಅತ್ತಿಗೆ ಮೇಲೆ ಕಣ್ಣು ಹಾಕಿದ್ದಾನೆ. ರೋಹಿದ್‌ಗೆ ತಿಳಿಯದಂತೆ ತನ್ನ ಅತ್ತಿಗೆ ಮೊಬೈಲ್ ನಂಬರ್ ಪಡೆದುಕೊಂಡು ಆಗ್ಗಾಗ ಫೋನ್ ಹಾಗೂ ವಿಡಿಯೋ ಕಾಲ್ ಮಾಡಿ ರೋಹಿದ್ ಅತ್ತಿಗೆಗೆ ಪಿಡಿಸುತ್ತಿದ್ದ ವಿಷಯ ತಿಳಿದ ರೋಹಿದ್ ಮತ್ತು ಸಂಬಂಧಿಕರು ಕಳೆದ ಎರಡು ತಿಂಗಳ ಹಿಂದೆ ಅಮ್ಜಾದ್ ಮನೆ ಬಳಿ ಹೋಗಿ ಗಲಾಟೆ ಮಾಡಿ ಎಚ್ಚರಿಕೆ ಕೊಟ್ಟು ಬಂದಿದ್ದರು.
ನಿನ್ನೆ (ಅ.26) ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದ ರೋಹಿದ್ ರಾತ್ರಿ ವಾಸಪ್ ಬರುತ್ತಿದ್ದಂತೆ ‘ನಿನ್ನ ಜೊತೆಗೆ ಮಾತನಾಡಬೇಕು ಬಾ’ ಎಂದು ಅಮ್ಜಾದ್ ಜಮಾಲ್ ಷಾ ನಗರದ ಹೊರಗೆ ಕರೆದಿದ್ದಾನೆ. ಅಮ್ಜಾದ್ ಕರೆದ ಜಾಗಕ್ಕೆ ರೋಹಿದ್ ಹೋಗಿದ್ದಾನೆ. ಈ ವೇಳೆ ಜಗಳ ತೆಗೆದು ರೋಹಿದ್ ಎದೆಗೆ ಚಾಕು*ವಿನಿಂದ ಇ*ರಿದು ಅಲ್ಲಿಂದ ಅಮ್ಜಾದ್ ಪರಾರಿಯಾಗಿದ್ದಾನೆ.
ಆರೋಪಿ ಬಂಧನ :
ಇನ್ನು ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕ್ಷಿಪ್ರಕಾರ್ಯಾಚರಣೆ ನಡೆಸಿ ಕೊ*ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಮ್ಜದ್ನನ್ನು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಲೆ*ಹಾಕುತ್ತಿದ್ದಾರೆ. ಇತ್ತ ಮಾಡಿದ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ರೋಹಿದ್ ಕುಟುಂಬ ಇವತ್ತು ಅನಾಥವಾಗಿ ಕಣ್ಣೀಕು ಹಾಕುವಂತಾಗಿದೆ.
LATEST NEWS
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
ಹೊಸ ಟ್ರೆಂಡ್ನ ಪ್ಯಾಂಟ್ ಧರಿಸಿದ ಯುವಕ; ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ
ಕದ್ರಿ ಪಾರ್ಕ್ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್ನಿಂದ ಲಾಂಛನ ಬಿಡುಗಡೆ
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ
KC Kotekar
21/05/2023 at 10:26 AM
India continued to be a country of snake charmers even after 70 years of Independence only because of the selfish votebank politics by keeping the citizens poorer with free bees. Wake up Indian learn to live a respectful life with hard work.