Connect with us

  BELTHANGADY

  Belthangady: ಅಕ್ರಮ ಮರಳು ಸಾಗಾಟ- ಲಾರಿ ವಶ..!

  Published

  on

   ಚಾರ್ಮಾಡಿಯಲ್ಲಿ ಪರವಾನಿಗೆ ಇಲ್ಲದೆ ಸಾಗಿಸುತಿದ್ದ ಅಕ್ರಮ ಮರಳು ಸಾಗಾಟದ ಲಾರಿಯನ್ನು ಧರ್ಮಸ್ಥಳ ಪೊಲೀಸರು ವಶ ಪಡಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ. 

  ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಪರವಾನಿಗೆ ಇಲ್ಲದೆ ಸಾಗಿಸುತಿದ್ದ ಅಕ್ರಮ ಮರಳು ಸಾಗಾಟದ ಲಾರಿಯನ್ನು ಧರ್ಮಸ್ಥಳ ಪೊಲೀಸರು ವಶ ಪಡಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.

  ಚಾರ್ಮಾಡಿಯಲ್ಲಿ ವಾಹನಗಳನ್ನು ತಪಾಸಣೆಗೈಯುತ್ತಿರುವ ವೇಳೆ ಮುನೀರ್ ಎಂಬತನಿಗೆ ಸೇರಿದ KA-19-AB-9516 ಸಂಖ್ಯೆಯ ಸುಲ್ತಾನ್ ಎಂಬ ಹೆಸರಿನ ಲಾರಿಯೊಂದನ್ನು ನಿಲ್ಲಿಸಿ ತಪಾಸಣೆ ಮಾಡುವಾಗ ಅದರಲ್ಲಿ ಯಾವುದೇ ಸರಕಾರಕ್ಕೆ ಉಪ ಖನಜ ಪಾವತಿ ಮಾಡದೆ ಪರವಾನಿಗೆ ಪಡೆಯದೆ ಅಕ್ರಮ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ.

  ಲಾರಿ ಚಾಲಕ ಅನ್ಸರ್ ಎಂಬಾತನಲ್ಲಿ ಮರಳು ಸಾಗಾಟದ ಪರವಾನಿಗೆ ಹಾಗೂ ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳಿಲ್ಲ ಎಂದಿದ್ದು, ಅದರಂತೆ ಲಾರಿಯನ್ನು ವಶಪಡಿಸಿಕೊಂಡ ಧರ್ಮಸ್ಥಳ ಪೊಲೀಸರು ಮುಂದಿನ ಕ್ರಮಕ್ಕಾಗಿ ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

  ತಪಾಸಣೆ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ, ಸಿಬ್ಬಂದಿಯಾದ ಪ್ರಶಾಂತ್, ಮಲ್ಲಿಕಾರ್ಜುನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

  Click to comment

  Leave a Reply

  Your email address will not be published. Required fields are marked *

  BELTHANGADY

  ಬೆಳ್ತಂಗಡಿ: ವಿದ್ಯುತ್‌ ತಗುಲಿ ಯುವಕ ಮೃ*ತ್ಯು

  Published

  on

  ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾ*ತಕ್ಕೆ ಬ*ಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

  ಹರೀಶ (32) ಮೃ*ತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃ*ತಪಟ್ಟಿದ್ದಾರೆ.

  Continue Reading

  BELTHANGADY

  ವಿಧಾನಸಭಾ ಅಧಿವೇಶನ: ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

  Published

  on

  ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.

  ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು.

  ಅಗಲಿದ ಗಣ್ಯರಾದ ಧಾರ್ಮಿಕ ಮುಖಂಡ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್), ನಿರೂಪಕಿ ಅಪರ್ಣಾ, ಸಾಹಿತಿ ಕಮಲಾ ಹಂಪನಾ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.

  Continue Reading

  BELTHANGADY

  ಚಾರ್ಮಾಡಿ ಫಾಲ್ಸ್ ಬಳಿ ಚೆಲ್ಲಾಟವಾಡುತ್ತಿದ್ದ ಯುವಕರ ಬಟ್ಟೆ ಎತ್ತಾಕಿಕೊಂಡು ಬಂದ ಪೊಲೀಸ್

  Published

  on

  ಮೂಡಿಗೆರೆ: ನಿಷೇಧಿತ ಪ್ರೆದೇಶ ಎಂದು ಘೋಷಿಸಿದ್ದ ಜಲಪಾತದಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದ ಯುವಕರನ್ನು ಪೊಲೀಸರು ಚಡ್ಡಿಯಲ್ಲಿ ಓಡಿಸಿದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ನಡೆದಿದೆ.

  ನಿಷೇಧಿತ ಪ್ರದೇಶದಲ್ಲಿ ಬಂಡೆ ಹತ್ತಿ ಹುಚ್ಚಾಟ ತೋರುತ್ತಿದ್ದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದ ಬಣಕಲ್ ಗಸ್ತು ಪೊಲೀಸರು ಯುವಕರ ಬಟ್ಟೆಗಳನ್ನು ತಂದು ಗಸ್ತು ವಾಹನಕ್ಕೆ ತುಂಬಿ ಶಾಕ್ ನೀಡಿದ್ದಾರೆ. ಪೊಲೀಸರ ಹಿಂದೆ ಚಡ್ಡಿಯಲ್ಲೇ ಓಡಿ ಬಂದ ಯುವಕರು ಪ್ಲೀಸ್ ಸರ್, ಇನ್ನೊಂದ್ ಸಲ ಹೀಗೆ ಮಾಡುವುದಿಲ್ಲ, ದಯವಿಟ್ಟು ಬಟ್ಟೆ ಕೊಡಿ ಎಂದು ಅಂಗಲಾಚಿದ್ದಾರೆ.

  ಆ ಬಳಿಕ ಪ್ರವಾಸಿ ಯುವಕರು ಬಟ್ಟೆ ಕೊಡುವಂತೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಕೊನೆಗೆ ಪೊಲೀಸರು ಎಚ್ಚರಿಕೆ ಕೊಟ್ಬ ಬಳಿಕ ಬಟ್ಟೆಗಳನ್ನು ಕೊಟ್ಟು ಕಳುಹಿಸಿದ್ದಾರೆ.

  Continue Reading

  LATEST NEWS

  Trending