ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಹಂಬಳ ಫಲ್ಕೆ ನಿವಾಸಿ ಸುಕೇಶ್ ಅವರ ಮನೆಯ ಅಡುಗೆ ಕೋಣೆಯಲ್ಲಿ ಅವಿತು ಕುಳಿತ್ತಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವೊಂದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ.
ಸುಮಾರು 12 ಆಡಿ ಕಾಳಿಂಗ ಸರ್ಪ ಸಿಲಿಂಡರ್ ರನ್ನು ಸುತ್ತುವರಿದಿತ್ತು. ಇದನ್ನು ಕಂಡ ಮನೆಯವರು ಸ್ನೇಕ್ ಅಶೋಕ್ ಅವರಿಗೆ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಅವರು ಭಾರೀ ಪ್ರಯತ್ನ ಪಟ್ಟು ಅದನ್ನು ಹಿಡಿದು ಗೋಣಿಚೀಲದೊಳಗೆ ತುಂಬಿಸಿ ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.