Connect with us

    LIFE STYLE AND FASHION

    ಸಂಗಾತಿಯಲ್ಲಿ ಈ ಗುಣಗಳಿದ್ರೆ ಹುಷಾರ್ !! ಅವರು ಸೈಕೋ ಆಗಿರ್ಬೋದು..?!

    Published

    on

    ‘ಸೈಕೋಪಾತ್’ ಎಂಬ ಪದವನ್ನು ಅನೇಕ ಬಾರಿ ಕೇಳಿರಬಹುದು. ಅಪರಾಧ ಸಂಬಂಧಿತ ಸುದ್ದಿಗಳಲ್ಲಿ ಇದನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ. ಸೈಕೋಪಾತ್ ಹೇಗಿರುತ್ತಾನೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಜಯಂತ್‌ನ ನೋಡಿ ತಿಳಿದುಕೊಳ್ಳಬಹುದು. ಆದರೆ ವೈಯಕ್ತಿಕ ಜೀವನದಲ್ಲಿ ಅಂತಹ ವ್ಯಕ್ತಿಯನ್ನು ಊಹಿಸುವುದೂ ಅಸಾಧ್ಯ. ಆದರೆ ಯಾರಲ್ಲಾದರೂ, ಅದರಲ್ಲೂ ಮುಖ್ಯವಾಗಿ ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ಎಚ್ಚೆತ್ತುಕೊಳ್ಳೋದು ತುಂಬಾನೆ ಮುಖ್ಯ.

    ಯಾವುದೇ ಸಂಬಂಧದಲ್ಲಿ, ಪ್ರೀತಿ, ನಂಬಿಕೆ ಮತ್ತು ಗೌರವವನ್ನು ಹೊಂದಿರುವುದು ತುಂಬಾನೆ ಮುಖ್ಯ. ಇಲ್ಲ ಎಲ್ಲಾ ಸರಿ ಇದೆ, ನನಗೆ ಮಾತ್ರ ಏನೋ ಸರಿ ಇಲ್ಲ ಎಂಬಂತೆ ಅನಿಸುತ್ತೆ ಎಂದು ನಂಬಿಕೊಂಡಿದ್ದರೆ, ಅದು ನಮ್ಮ ನಂಬಿಕೆಯ ವಿಚಾರವಾಗಿರುತ್ತದೆ. ಒಂದು ವೇಳೆ ಸಂಗಾತಿಯಲ್ಲಿ ಅಪನಂಬಿಕೆ, ಸ್ವಾರ್ಥ, ಆಕ್ರಮಣಶೀಲತೆ ಮೊದಲಾದ ಗುಣಗಳಿದ್ದರೆ, ಅಂತವರನ್ನು ಸೈಕೋ ಪಾತ್ ಎಂದು ಗುರುತಿಸಲಾಗುತ್ತದೆ.  ಆದರೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಜಯಂತ್‌ ಮಾತ್ರ ಚಿನ್ನುಮರಿ ನನಗಷ್ಟೇ ಬೇಕು, ಆಕೆಯ ಪ್ರೀತಿ ನನಗಷ್ಟೇ ಸೀಮಿತ, ಆಕೆ ನನ್ನ ಜೊತೆ ಮಾತನಾಡಬೇಕು ಎಂದು ಅಂದುಕೊಳ್ಳುವ ಗುಣವೇ, ಅದರ ಜೊತೆಗೆ ಆಕ್ರಮಣಕಾರಿ ಮನೋಭಾವ ಹೊಂದಿರುವುದೇ ಸೈಕೋಪಾತ್.

    ನೋವು ನೀಡುತ್ತಾರೆ, ಆದರೆ ಪಶ್ಚಾತ್ತಾಪ ಭಾವವಿರುವುದಿಲ್ಲ

    ಮನೋರೋಗಿಗಳು ಯಾರನ್ನಾದರೂ ನೋಯಿಸಬಹುದು, ಆದರೆ ಅವರು ತಮ್ಮ ಕೃತ್ಯಗಳಿಗೆ ಎಂದಿಗೂ ಪಶ್ಚಾತ್ತಾಪ ಪಡೋದಿಲ್ಲ. ಆರ್ಥಿಕವಾಗಿ ನಷ್ಟ ಮಾಡೋದು, ದೈಹಿಕವಾಗಿ ನೋಯಿಸೋದು, ಮಾನಸಿಕವಾಗಿ ಹಿಂಸಿಸೋದು ಇದೆಲ್ಲವೂ ಅವರ ಗುಣವಾಗಿರುತ್ತೆ. ಅವರಿಗೆ ಯಾವುದೇ ರೀತಿಯ ಅನುಕಂಪ ಇರೋದಿಲ್ಲ. ಹೀಗಿರೋವಾಗ, ಸಂಗಾತಿಯು ತಾನು ತಪ್ಪು ಮಾಡಿದ್ದೇನೆ ಅನ್ನೋದನ್ನ ತಿಳಿದ ನಂತರವೂ, ಅದಕ್ಕೆ ವಿಷಾಧಿಸದಿದ್ದರೆ ಆತ ಸೈಕೋ ಅನ್ನೋದನ್ನ ತಿಳಿಯಿರಿ.

    ಹೃದಯಗಳನ್ನು ಗೆಲ್ಲಲು ಸಂಗಾತಿಯನ್ನು ಅನುಸರಿಸುವುದು :

    ‘ಸೈಕೋಪಾತ್ಸ್ ಅಂಡ್ ಲವ್’ ಲೇಖಕಿ ಅಡೆಲೀನ್ ಬರ್ಚ್ ಪ್ರಕಾರ, ಮನೋರೋಗಿಗಳು ಸಂಗಾತಿಯ ಹೃದಯಗಳನ್ನು ಗೆಲ್ಲಲು ಅವರನ್ನ ಅನುಕರಿಸಲು ಪ್ರಾರಂಭಿಸುತ್ತಾರೆ. ಅವರು ನಮ್ಮಂತೆಯೇ ಆಗುತ್ತಾರೆ, ನಮ್ಮಂತೆಯೇ ಆಯ್ಕೆಗಳನ್ನು ಮಾಡ್ತಾರೆ. ಇದನ್ನು ಮಾಡುವ ಮೂಲಕ, ಅವರು ನಮ್ಮ ದೃಷ್ಟಿಯಲ್ಲಿ ಪರ್ಫೆಕ್ಟ್ ವ್ಯಕ್ತಿಯಾಗಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ, ಅವರು ಅಸೂಯೆ, ಅನುಮಾನ ಪಿಶಾಚಿಯೂ ಆಗಿರುತ್ತಾರೆ. ಜೊತೆಗೆ ನಿಮ್ಮನ್ನ ಕಂಟ್ರೋಲ್ ಮಾಡೋದಕ್ಕೆ ಪ್ರಯತ್ನಿಸ್ತಾರೆ.

    ಮನೋರೋಗಿಗಳಿಗೆ ಸ್ನೇಹಿತರು ಕಡಿಮೆ :

    ಮನೋರೋಗಿಗಳು ತಮ್ಮ ಬಗ್ಗೆ ಮತ್ತು ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಯೋಚಿಸುತ್ತಾರೆ, ಆದ್ದರಿಂದ ಅವರು ಬೇರೆ ಯಾರೊಂದಿಗೂ ಹೊಂದಿಕೊಳ್ಳುವುದಿಲ್ಲ, ಅಥವಾ ಅವರಿಗೆ ಹೆಚ್ಚಿನ ಸ್ನೇಹಿತರಿರೋದಿಲ್ಲ. ದೀರ್ಘ ಮತ್ತು ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವುದು ಅವರಿಗೆ ಕಷ್ಟ. ಅವರು ಯಾರೊಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ, ಯಾಕಂದ್ರೆ ಅವರಿಗೆ ಇತರರ ಮೇಲೆ ಅಧಿಕಾರ ಬೇಕು. ಅವರು ತಮ್ಮ ಸ್ವಂತ ಲಾಭಕ್ಕಾಗಿ ತಮ್ಮ ಸಂಗಾತಿಗೆ ಸುಳ್ಳು ಹೇಳುತ್ತಾರೆ ಮತ್ತು ಅವರನ್ನು ನೋಯಿಸುತ್ತಾರೆ.

    ಇವರನ್ನ ಗುರುತಿಸುವುದು ಸ್ವಲ್ಪ ಕಷ್ಟ :

    ಮನೋರೋಗಿಗಳನ್ನು ಗುರುತಿಸುವುದು ಕಷ್ಟ. ವಾಸ್ತವವಾಗಿ, ಈ ಜನರು ಇತರರ ಹೃದಯಗಳನ್ನು ಹೇಗೆ ಗೆಲ್ಲಬೇಕೆಂದು ತಿಳಿದಿದ್ದಾರೆ ಮತ್ತು ಸುಳ್ಳು ಸಹಾನುಭೂತಿಯನ್ನು ತೋರಿಸುವಲ್ಲಿಯೂ ನಿಪುಣರಾಗಿದ್ದಾರೆ. ಅವರ ವಿಶೇಷತೆಯೆಂದರೆ ಮಾತುಗಾರಿಕೆ. ತಮ್ಮ ಮಾತಿನಿಂದಲೇ ಇನ್ನೊಬ್ಬರನ್ನ ಸೆಳೆಯುವ ಗುಣ ಹೊಂದಿರುತ್ತಾರೆ.  ಇನ್ನೊಬ್ಬ ವ್ಯಕ್ತಿ ಇಷ್ಟಪಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಬುದ್ಧಿವಂತರಾಗಿ ಕಾಣಬಹುದು.  ಆದರೆ ಯಾರಾದರೂ ಅತಿಯಾದ ವಿನಯತೆ, ಅತಿಯಾದ ಒಳ್ಳೆಯತನ ತೋರಿಸಿದರೆ ಅದನ್ನು ನಂಬೋದಕ್ಕೆ ಹೋಗಬೇಡಿ.

    LIFE STYLE AND FASHION

    ಬೆಡ್‌ರೂಮ್‌ನಲ್ಲಿ ಇದನ್ನು ಇಟ್ಟು ನೋಡಿ; ಜೀವನದ ದಿಕ್ಕೇ ಬದಲಾಗುತ್ತೆ !!

    Published

    on

    ಜೀವನದಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಿದರೆ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಮಲಗುವ ಕೋಣೆಯಲ್ಲಿ ಇರುವ ವಿಭಿನ್ನ ವಸ್ತುಗಳು ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ತರಬಹುದು.

    ಮಲಗುವ ಕೋಣೆಯಲ್ಲಿ ಸತ್ತ ವ್ಯಕ್ತಿಯ ಭಾವಚಿತ್ರವನ್ನು ಇಡಬಾರದು. ಇದರ ಹೊರತಾಗಿ ಮಲಗುವ ಕೋಣೆಯಲ್ಲಿ ದೇವರ ಚಿತ್ರಗಳನ್ನು ಇಡಬಾರದು. ಏಕೆಂದರೆ ಮನೆಯಲ್ಲಿ ದೇವರನ್ನು ಇಡಬೇಕಾದ ವಿಶೇಷ ಪ್ರದೇಶವಿದೆ. ಬೆಡ್‌ರುಮ್‌ನಲ್ಲಿ ಡಾರ್ಕ್ ಪೇಂಟ್ ಹಾಕಬಾರದು. ಇದಲ್ಲದೆ, ಸುತ್ತಿನಲ್ಲಿ ಅಥವಾ ಅಂಡಾಕಾರದ ಪೀಠೋಪಕರಣಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಹಾಸಿಗೆಯ ಮೇಲೆ ಕುಳಿತು ಅನ್ನ ತಿನ್ನುವ ಅಭ್ಯಾಸವೂ ಒಳ್ಳೆಯದಲ್ಲ. ಅಷ್ಟೇ ಅಲ್ಲ ಹಾಸಿಗೆಯ ಮುಂದೆ ಕನ್ನಡಿ ಇಡಬಾರದು.

    ನಿಲ್ಲಿಸಿದ ಗಡಿಯಾರಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಹಾಸಿಗೆಯ ಕೆಳಗೆ ಭಕ್ಷ್ಯಗಳನ್ನು ಇಡಬಾರದು. ಕೋಣೆಯ ಈಶಾನ್ಯ ದಿಕ್ಕಿನಲ್ಲಿ ಬೀರು ಇಡಬಾರದು. ಸಂಗಾತಿಯ ಭಾವಚಿತ್ರವನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿ, ಮಲಗುವ ಕೋಣೆಯಲ್ಲಿ ಪ್ರೇಮ ಪಕ್ಷಿಗಳಂತಹ ಜೋಡಿಗಳ ಚಿತ್ರಗಳನ್ನು ಯಾವಾಗಲೂ ಇಡಬೇಕು. ಈ ನಿಯಮಗಳನ್ನು ಅನುಸರಿಸಿದರೆ, ಜೀವನದಲ್ಲಿ ಸಮಸ್ಯೆಗಳು ಕ್ರಮೇಣ ಕಣ್ಮರೆಯಾಗುತ್ತವೆ.

    Continue Reading

    LATEST NEWS

    ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !

    Published

    on

    ಮಂಗಳೂರು: ಕೆಲವರೆಲ್ಲಾ ಲಕ್ಷ-ಲಕ್ಷ ಕೊಟ್ಟು ಮೊಬೈಲ್ ತೆಗೆದುಕೊಳ್ಳುತ್ತಾರೆ. ಆದ್ರೆ, ಅದಕ್ಕಿಂತ ಕಡಿಮೆಯಲ್ಲಿ ಸಿಗುವ ಚಾರ್ಜರ್ ತೆಗೆದುಕೊಳ್ಳಲು ಜಿಪುಣತನ ತೋರಿಸುತ್ತಾರೆ. ಹಳೇ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಅಥವಾ ರಬ್ಬರ್ ಹಾಕಿ ಮೊಬೈಲ್ ಚಾರ್ಜ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಅಧ್ಯಯನ ಒಂದು ದೃಢ ಪಡಿಸಿದೆ.


    ಇದು ತುಂಬಾ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಯುನೈಟೆಡ್ ಕಿಂಗ್ ಡಮ್ ನ ಎಲೆಕ್ಟ್ರಿಕಲ್ ಸೇಫ್ಟಿ ಇನ್ ಸ್ಟಿಟ್ಯೂಟ್ ಈ ಬಗ್ಗೆ ಅಧ್ಯಯನ ನಡೆಸಿದೆ. ಕಳಪೆ ಗುಣಮಟ್ಟದ ಚಾರ್ಜರ್ ಹಾಗೂ ಚೈನೀಸ್ ಚಾರ್ಜರ್ ಗಳಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ, ಅಪಘಾತಗಳಿಗೆ ಗುರಿಯಾಗುವ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ಕುರಿತು ವಿವಿಧ ದೇಶಗಳಲ್ಲಿ ಅಧ್ಯಯನಗಳನ್ನು ನಡೆಸಿದೆ.
    ನೀವು ಎಷ್ಟೇ ದುಬಾರಿ ಮೊಬೈಲ್ ತೆಗೆದುಕೊಂಡರು ಕೂಡ, ಕಡಿಮೆ ಬೆಲೆಯ ಚಾರ್ಜರ್ ನಿಮ್ಮ ಮೊಬೈಲ್ ಹಾಳು ಮಾಡುತ್ತವೆ. ಇನ್ನೂ, ಚಾರ್ಜರ್ ಖರೀದಿಸುವಾಗ ತೂಕವಿಲ್ಲದೆ ಹಗುರವಾಗಿ ಕಂಡರೆ ಅದು ಒಳ್ಳೆಯದಲ್ಲ. ಬದಲಾಗಿ ಅದು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ. ಉತ್ತಮವಾದ ಚರ್ಜಾರ್ ಗಳು ಸ್ವಲ್ಪ ಭಾರವಾಗಿರುತ್ತದೆ.

    ಇದನ್ನೂ ಓದಿ: ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯಿಂದ ಸಿಹಿಸುದ್ಧಿ !!
    ಇತ್ತೀಚೆಗೆ, ಪ್ರಪಂಚದಾದ್ಯಂತ ಸೆಲ್ ಫೋನ್ ಗಳು ಸ್ಪೋಟಗೊಳ್ಳುವುದನ್ನು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಚಾರ್ಜರ್ ಗಳು ಎಂದು ಹೇಳಿದರೆ ನೀವು ನಂಬಲೇ ಬೇಕು. ಹಳೆಯ ಚಾರ್ಜರ್ ಗಳನ್ನು ಜನರು ಬಳಸಲು ಇನ್ನೊಂದು ಕಾರಣ, ಮೊಬೈಲ್ ಕಂಪನಿಗಳು ಫೋನ್ ಜೊತೆ ಚಾರ್ಜರ್ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ಹಳೆಯ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಸುತ್ತಿ ಅಥವಾ ಲಬ್ಬರ್ ಸುತ್ತಿ ಮತ್ತೆ ಮತ್ತೆ ಉಪಯೋಗಿಸುತ್ತಾರೆ. ಇಂತಹ ಚಾರ್ಜರ್ ಗಳನ್ನು ಬಳಸುವುದರಿಂದ ವಿದ್ಯುತ್ ಅಪಘಾತ ಸಂಭವಿಸಬಹುದು ಎಂದು ಅಧ್ಯಯನ ಹೇಳಿದೆ.
    ಗಮ್ ಟೇಪ್ ಅಥವಾ ಪ್ಲಾಸ್ಟರ್ ಸುತ್ತಿದ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆಗಳು ನಡೆದಿವೆ. ಒಂದು ವೇಳೆ ಚಾರ್ಜಿಂಗ್ ಕೇಬಲ್ ಎಲ್ಲಿಯಾದರೂ ಕತ್ತರಿಸಲ್ಪಟ್ಟರೆ ಮತ್ತು ಅದರ ಒಳ ಭಾಗವು ತುಂಬಾ ಕಾಣುತ್ತಿದ್ದರೆ, ಅದನ್ನು ಬಳಸುವುದನ್ನು ನಿಲ್ಲಿಸಿ.


    ಈ ಕತ್ತರಿಸಲ್ಪಟ್ಟ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಗಳಂತಹ ಘಟನೆಗಳು ಸಂಭವಿಸಿದೆ. ಮೊಬೈಲ್ ಫೋನ್ ಗಳು ಮಾತ್ರವಲ್ಲದೆ, ಟ್ಯಾಬ್, ಲ್ಯಾಪ್ ಟಾಪ್, ಟ್ರಿಮ್ಮರ್ ಹಾಗೂ ಇನ್ನಿತರೆ ಯಂತ್ರೋಪಕರಣಗಳಲ್ಲಿಯೂ ಹಾನಿಗೊಳಗಾದ ಕೇಬಲ್ ಗಳಿರುವ ಹಳೆಯ ಚಾರ್ಜರ್ ಗಳನ್ನು ಉಪಯೋಗಿಸಬಾರದು.
    ಆದಷ್ಟು ಉತ್ತಮ ಚಾರ್ಜರ್ ಕೇಬಲ್ ಗಳನ್ನು ಬಳಸುವುದರಿಂದ ಮೊಬೈಲ್ ಸುರಕ್ಷಿತವಾಗಿರುತ್ತದೆ ಮತ್ತು ಜಾಸ್ತಿ ಬಾಳಿಕೆ ಬರುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನೀವು ಸುರಕ್ಷಿತವಾಗಿರುತ್ತಿರ.

    Continue Reading

    International news

    80ರ ಪ್ರಾಯದಲ್ಲೂ ಅಜ್ಜಿಯ ಟ್ರೆಂಡಿಂಗ್ ಡ್ರೆಸ್ ಗೆ ಎಲ್ಲರೂ ಬೋಲ್ಡ್ !

    Published

    on

    ಮಂಗಳೂರು : ವಯಸ್ಸು ಎಂಬುದು ಕೇವಲ ಅಂಕೆಗಳು ಅಷ್ಟೇ. ಸಾಧನೆಗೆ ವಯಸ್ಸು ಅಡ್ಡಿ ಅಲ್ಲ, ಅದು ನೆಪ ಅಷ್ಟೇ. 80ರ ವಯಸ್ಸಿನಲ್ಲೂ ಫ್ಯಾಶನ್ ಲೋಕವನ್ನೆ ನಿದ್ದೆಗೆಡಿಸಿರುವ ಈ ಅಜ್ಜಿಯ ಸ್ಟೋರಿ ತುಂಬಾ ಕುತೂಹಲದಾಯಕವಾಗಿದೆ.


    ‘ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಎಂದು ಕೆಲಸವ’ ಎಂಬ ಹಾಡಿನ ಸಾಲಿನಂತೆ ಈ ಅಜ್ಜಿಗೆ ತನ್ನ ಮೊಮ್ಮಗಳೇ ಸ್ಪೂರ್ತಿ. ಕೆಲವೊಬ್ಬರು ಅಜ್ಜಿಯಂದಿರು, ಮೊಮ್ಮಕ್ಕಳು ಏನೇ ಹೇಳಿದರು ಅದನ್ನು ಮಾಡುತ್ತಾರೆ. ಹಾಗೆನೇ ಈ ಅಜ್ಜಿ ಕೂಡ ತನ್ನ ಮೊಮ್ಮಗಳ ಆಸೆ ಈಡೇರಿಸಲು ಹೋಗಿ ಇಂದು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.


    ಜಾಂಬಿಯಾ ದೇಶದ 80ರ ಹರೆಯದ ಈ ವೃದ್ದೆಯ ಹೆಸರು ಮಾರ್ಗರೇಟಾ ಚೋಲಾ. ಕಟ್ಟಿಗೆ ಚೇರಲ್ಲಿ ಕೂತು, ಕಣ್ಣಿಗೆ ಸ್ಟೈಲಿಶ್ ಗ್ಲಾಸ್ ಹಾಕಿಕೊಂಡು, ಬಣ್ಣ ಬಣ್ಣದ ಕಾಸ್ಟ್ಯೂಮ್ ಗಳು ಹಾಕಿಕೊಂಡಿರುವುದನ್ನು ನೋಡಿದರೆ ಎಂಥವರಿಗೂ, ಒಂದು ಕ್ಷಣ ರೋಮಾಂಚನಕಾರಿಯಾಗಬೇಕು. ಹಾಗಂತ ಇವರು ಯಾವುದೋ ರಾಯಲ್ ಫ್ಯಾಮೀಲಿಗೆ ಸೇರಿದವರಲ್ಲ. ಮಾರ್ಗರೇಟ್ ಚೋಲಾ 12-13 ವರ್ಷದಲ್ಲಿಯೇ ಶಿಕ್ಷಣಕ್ಕೆ ಗುಡ್ ಬೈ ಹೇಳಿ, 30ನೇ ವಯಸ್ಸಿಗೆ ಮದುವೆಯಾಗಿ ಬಡತನ, ಕಷ್ಟ ಎಲ್ಲವನ್ನೂ ಕಂಡವರು.

    ಇದನ್ನೂ ಓದಿ: ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ

    ಆದರೆ ಮೊಮ್ಮಗಳಾದ ಡಿಯಾನಾ ಕುಂಬಾ ನ್ಯೂಯಾರ್ಕ್ ಮೂಲದ ಸ್ಟೈಲಿಸ್. ಈಕೆಗೆ, ತನ್ನ ಅಜ್ಜಿಯನ್ನು ಹೊಸ ಹೊಸ ಅವತಾರದಲ್ಲಿ ನೋಡಲು ಇಷ್ಟವಂತೆ. ಈಗಾಗೀ ಹೊಸ ಹೊಸ ಬಗೆಯ ಕಾಸ್ಟ್ಯೂಮ್ ಹಾಕಿ ಖುಷಿ ಪಡುತ್ತಾರೆ. ಈ ಅಜ್ಜಿಯ ಜನಪ್ರೀಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳೇ ಸಂದರ್ಶನ ಮಾಡಲು ಬರುತ್ತಿವೆ. ತನ್ನ ಫ್ಯಾಶನ್ ಬಗ್ಗೆ ಮಾರ್ಗರೇಟ್ ಹೆಳೋದು ಹೀಗೆ, ನಾನು ಈ ರೀತಿಯ ಉಡುಗೆ-ತೊಡುಗೆಗಳನ್ನು ಹಾಕಿಕೊಳ್ಳುವುದರಿಂದ ನನ್ನನ್ನು ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವಂತಹ ಭಾವ ಬರುತ್ತದೆ. ನಾನು ಇಂತಹ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾ ಮತ್ತಷ್ಟು ಜೀವಂತಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಮಾರ್ಗರೇಟ್ ರವರ ಈ ಫ್ಯಾಶನ್ ಫೋಟೋಗಳಿಗೆ, ಕ್ಲೀನ್ ಬೊಲ್ಡ್ ಆಗಿರುವ ಅವರ ಅಭಿಮಾನಿಗಳು ಅಜ್ಜಿಯನ್ನು ಕೊಂಡಾಡುತ್ತಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 1 ಲಕ್ಷ 13 ಸಾವಿರದಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
    ನಿಮ್ಮ ವಯಸ್ಸು, ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗುವುದಿಲ್ಲ. ಗುರು ಮತ್ತು ಗುರಿ ಎರಡು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಮಾರ್ಗರೇಟ್ ಚೋಲಾ ನಿದರ್ಶನ.

    Continue Reading

    LATEST NEWS

    Trending