Connect with us

    LATEST NEWS

    ಇಂದು ಅಥವಾ ನಾಳೆ ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ..! ಮೊಬೈಲ್ ನೆಟ್​​ವರ್ಕ್, ಜಿಪಿಎಸ್ ಸಿಗ್ನಲ್ ಭಾರಿ ಹಾನಿ ಸಾಧ್ಯತೆ

    Published

    on

    ಬೆಂಗಳೂರು : ಮುಂದಿನ ಎರಡು ದಿನಗಳು ಭೂಮಿಗೆ ಪಾಲಿಗೆ ತುಂಬಾ ಮಹತ್ವದ್ದಾಗಿವೆ. ಇದಕ್ಕೆ ಕಾರಣ ಸೌರ ಬಿರುಗಾಳಿ. ಸೂರ್ಯನಿಂದ ಬರುತ್ತಿರುವ ಈ ಚಂಡಮಾರುತವು ಗಂಟೆಗೆ ಸುಮಾರು 1.6 ಲಕ್ಷ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ಇದು ಇಂದು ಅಥವಾ ನಾಳೆಯಿಂದ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ.

    ಸ್ಪೇಸ್‌ವೆದರ್‌ ವೆದರ್.ಕಾಮ್ ಉಲ್ಲೇಖಿಸಿದ ವರದಿಯ ಪ್ರಕಾರ, ಭೂಮಿಯ ಜೊತೆಗಿನ ಈ ಘರ್ಷಣೆಯಿಂದ ಸುಂದರವಾದ ಬೆಳಕು ಹೊರಹೊಮ್ಮಲಿದೆ .

    ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರು ರಾತ್ರಿಯ ಸಮಯದಲ್ಲಿ ಈ ಬೆಳಕನ್ನು ನೋಡಲು ಸಾಧ್ಯವಾಗಲಿದೆ. ಈ ಸೌರ ಚಂಡಮಾರುತ (Solar Storm) ಸಂಭವಿಸಿದಾಗ ಭೂಮಿಯ ಮೇಲಿನ ಜಿಪಿಎಸ್ (GPS Network), ಮೊಬೈಲ್ ಫೋನ್ (Mobile Phone Network) ಮತ್ತು ಉಪಗ್ರಹ ಟಿವಿಗಳು (Satellite TV Network) ಪ್ರಭಾವಕ್ಕೆ ಒಳಗಾಗಲಿವೆ ಮತ್ತು ಇತರೆ ರೇಡಿಯೋ  ಫ್ರಿಕ್ವೆನ್ಸ ಸಂಚಾಲಿತ ಸಾಧನಗಳೂ ಕೂಡ ಇದರ ಪ್ರಭಾವಕ್ಕೆ ಒಳಗಾಗಲಿವೆ.

    ಏನಿದು ಸೌರ ಬಿರುಗಾಳಿ?
    ಭೂಮಿಯ ಕಾಂತೀಯ ಮೇಲ್ಮೈ ನಮ್ಮ ಕಾಂತಕ್ಷೇತ್ರದಿಂದ ರಚಿತವಾಗಿದೆ ಮತ್ತು ಇದು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.

    ಹೆಚ್ಚಿನ ವೇಗದ ಕಿರಣಗಳು ಭೂಮಿಯ ಕಡೆಗೆ ಬಂದಾಗಲೆಲ್ಲಾ ಅದು ಕಾಂತೀಯ ಮೇಲ್ಮೈಗೆ ಡಿಕ್ಕಿ ಹೊಡೆಯುತ್ತವೆ.

    ಈ ಸೌರ ಕಾಂತಕ್ಷೇತ್ರವು ದಕ್ಷಿಣದಲ್ಲಿದ್ದರೆ, ಅದು ಭೂಮಿಯ ಎದುರು ಇರುವ ಕಾಂತಕ್ಷೇತ್ರವನ್ನು ಸೇರುತ್ತೆ. ನಂತರ ಭೂಮಿಯ ಕಾಂತಕ್ಷೇತ್ರವು ಈರುಳ್ಳಿ ಸಿಪ್ಪೆಗಳಂತೆ ತೆರೆದುಕೊಳ್ಳುತ್ತದೆ ಮತ್ತು ಸೌರ ಮಾರುತದ ಕಣಗಳು ಧ್ರುವಗಳಿಗೆ ಚಲಿಸುತ್ತವೆ.

    ಈ ಕಾರಣದಿಂದಾಗಿ, ಭೂಮಿಯ ಮೇಲ್ಮೈಯಲ್ಲಿ ಕಾಂತೀಯ ಚಂಡಮಾರುತವು ಸಂಭವಿಸುತ್ತದೆ ಮತ್ತು ಭೂಮಿಯ ಕಾಂತಕ್ಷೇತ್ರದಲ್ಲಿ ತೀಕ್ಷ್ಣವಾದ ಕುಸಿತ ಕಂಡುಬರುತ್ತದೆ.

    ಇದು ಸುಮಾರು 6 ರಿಂದ 12 ಗಂಟೆಗಳ ಕಾಲ ಹಾಗೇ ಉಳಿಯುತ್ತದೆ. ಕೆಲ ದಿನಗಳ ನಂತರ, ಈ ಆಯಸ್ಕಾಂತೀಯ ಕ್ಷೇತ್ರವು ತನ್ನದೇ ಆದ ರೀತಿಯಲ್ಲಿ ಚೇತರಿಸಿಕೊಳ್ಳಲು ಪ್ರಾರಂಭಿಸುತ್ತದೆ.

    ಈ ರೀತಿ ಪ್ರಭಾವ ಬೀರುತ್ತದೆ (Effect Of Solar Storm)
    ಇಂದು ಎಲ್ಲ ಸಂಗತಿಗಳು ತಂತ್ರಜ್ಞಾನವನ್ನು ಆಧರಿಸಿವೆ. ಹವಾಮಾನ ಕೆಟ್ಟದಾಗಿದ್ದಾಗ ಯಾವುದೇ ತಂತ್ರಜ್ಞಾನವು ಸೂಕ್ತವಾಗಿ ಕಾರ್ಯನಿರ್ವಹಿಸುವುದಿಲ್ಲ.

    ಸೌರ ಚಂಡಮಾರುತದ ಸಮಯದಲ್ಲಿ, ಬಲವಾದ ವಿದ್ಯುತ್ ಪ್ರವಾಹವು ಭೂಮಿಯ ಮೇಲ್ಮೈಗೆ ಹರಿಯುತ್ತದೆ. ಇದರಿಂದಾಗಿ ಹಲವು ಬಾರಿ ಪವರ್ ಗ್ರಿಡ್ ವಿಫಲಗೊಳ್ಳುತ್ತದೆ. ಕೆಲವು ಸ್ಥಳಗಳಲ್ಲಿ, ತೈಲ ಮತ್ತು ಅನಿಲ ಪೈಪ್‌ಲೈನ್‌ಗಳ ಮೇಲೂ ಅವುಗಳ ಪರಿಣಾಮ ಉಂಟಾಗುತ್ತದೆ.

    ಹೆಚ್ಚಿನ ಆವರ್ತನ ರೇಡಿಯೊ ಸಂವಹನದ ಮೇಲೆ ಅದರ ಪರಿಣಾಮದಿಂದಾಗಿ, ಜಿಪಿಎಸ್ ಇತ್ಯಾದಿಗಳು ಸಹ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ.

    ಸೌರ ಚಂಡಮಾರುತವು ಎಷ್ಟು ಕಾಲ ಉಳಿಯುತ್ತದೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಇದು ಕೆಲವು ನಿಮಿಷಗಳಿಂದ ಕೆಲ ಗಂಟೆಗಳವರೆಗೆ ಇರುತ್ತದೆ. ಆದರೆ ಭೂಮಿಯ ಕಾಂತೀಯ ಮೇಲ್ಮೈ ಮತ್ತು ವಾತಾವರಣದಲ್ಲಿ ಇದರ ಪರಿಣಾಮವು ಹಲವು ದಿನಗಳು ಅಥವಾ  ವಾರಗಳವರೆಗೆ ಇರುತ್ತದೆ.

    ಇದರ ಹಿಂದಿನ ವಿಜ್ಞಾನ ಯಾವುದು?
    ಸೌರ ಬಿರುಗಾಳಿಗಳು ಭೂಮಿಯ ಕಾಂತಕ್ಷೇತ್ರ ಮತ್ತು ಅಲೆಗಳು ಅಥವಾ ಮೋಡದ ಕಾಂತಕ್ಷೇತ್ರದ ನಡುವಿನ ಘರ್ಷಣೆಯಿಂದ ಉಂಟಾಗುತ್ತವೆ.  ಬ್ರಹ್ಮಾಂಡದ (Universe) ಆರಂಭದಲ್ಲಿ, ಸೂರ್ಯನ ಮೇಲೆ ಬಿರುಗಾಳಿಗಳು ಇದ್ದವು. ಜೀವನದ ಉತ್ಪತ್ತಿಗೂ ಕೂಡ ಇವು ಕಾರಣವಾಗಿವೆ ಎಂದು ಹೊಸ ಸಂಶೋಧನೆಗಳು ಸೂಚಿಸುತ್ತವೆ. ಇಂದು ನಾವು ನೋಡುತ್ತಿರುವ ಸೂರ್ಯನ ಪ್ರಕಾಶದ ಮುಕ್ಕಾಲು ಭಾಗ ಮಾತ್ರ ಸುಮಾರು 4 ಶತಕೋಟಿ ವರ್ಷಗಳ ಹಿಂದೆ ಕಾಣಿಸುತ್ತಿತ್ತು. ಆದರೆ ಅದರ ಮೇಲ್ಮೈಯಲ್ಲಿ ಘರ್ಷಣೆಯಿಂದ ಉತ್ಪತ್ತಿಯಾಗುವ ಸೌರ್ಯ ಪದಾರ್ಥ ಬಾಹ್ಯಾಕಾಶದಲ್ಲಿ ಕಿರಣಗಳನ್ನು ಉಂಟುಮಾಡಿವೆ. ಈ ಶಕ್ತಿಯುತ ಸೌರ ಸ್ಫೋಟಗಳು ಭೂಮಿಯನ್ನು ಬಿಸಿಮಾಡುವ ಶಕ್ತಿಯನ್ನು ನೀಡಿತು. ನಾಸಾ ತಂಡವು ನಡೆಸಿದ ಸಂಶೋಧನೆಯ ಪ್ರಕಾರ, ಈ  ಶಕ್ತಿಯು ಸರಳ ಅಣುಗಳನ್ನು ಆರ್‌ಎನ್‌ಎ ಮತ್ತು ಡಿಎನ್‌ಎಯಂತಹ ಸಂಕೀರ್ಣಅಣುಗಳಳನ್ನಾಗಿ ಪರಿವರ್ತಿಸಲು ಕಾರಣವಾಯಿತು, ಮತ್ತು ಇವು ಜೀವ ಸೃಷ್ಟಿಗೆ ತುಂಬಾ ಅವಶ್ಯಕವಾಗಿತ್ತು. ಈ ಸಂಶೋಧನೆ ನೇಚರ್ ಜಿಯೋ ಸೈನ್ಸ್‌ ಮ್ಯಾಗಜಿನ್ ನಲ್ಲಿ 23 ಮೇ 2016 ರಂದು ಪ್ರಕಟಗೊಂಡಿತ್ತು.

    kerala

    5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    Published

    on

    ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.

    ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.

    ಆನ್‌ ಲೈನ್ ಗೇಮಿಂಗ್‌ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?

    ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
    ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.

    Continue Reading

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    LATEST NEWS

    WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?

    Published

    on

    ಮಂಗಳೂರು/ಮಹಾರಾಷ್ಟ್ರ : ಬಸ್ಸಿನಲ್ಲಿ ಸೀಟಿಗಾಗಿ ಹಂಬಲಿಸೋರು ಅನೇಕ ಮಂದಿ ಇದ್ದಾರೆ. ಅದೂ ಸಿಎಂ ಕುರ್ಚಿಗಾಗಿ ನಡೆಯೋ ರಾಜಕೀಯ ಗುದ್ದಾಟಕ್ಕಿಂತಲೂ ಮಿಗಿಲು. ಬಸ್ ಬಂದು ನಿಂತಾಗ ಪರಸ್ಪರ ತಳ್ಳಾಡಿ ಸೀಟು ಹಿಡಿಯುವ ದೃಶ್ಯ ಸಾಮಾನ್ಯ. ಕೆಲವೊಮ್ಮೆ ಬಸ್ ಹತ್ತಿದವರು ತಮ್ಮರಿಗಾಗಿ ಕರ್ಚೀಫ್ ಹಾಕಿಡೋದೂ ಇದೆ. ಇನ್ನೂ ಕೆಲವರು ಸೀಟ್ ಹಿಡಿಯಲು ಕಿಟಕಿಯಿಂದಲೂ ಕರ್ಚೀಫ್ ಹಾಕೋದು, ಬ್ಯಾಗ್ ಇಡುವ ದೃಶ್ಯ ಕಾಣಲು ಸಿಗುತ್ತದೆ.
    ಆದರೆ, ಇಲ್ಲೊಬ್ಬ ಸೀಟಿಗಾಗಿ ಕಿಟಕಿಯಿಂದ ಬಸ್ ಏರಲು ಹೋಗಿ ಅವಾಂತರವಾಗಿದೆ. ಸದ್ಯ ಆ ವಿದ್ಯಾರ್ಥಿಯ ಎಡವಟ್ಟಿನ ವೀಡಿಯೋ ವೈರಲ್ ಆಗುತ್ತಿದೆ.

    ಸೀಟ್ ಗಾಗಿ ಎಡವಟ್ಟು :
    ಈ ವೈರಲ್ ದೃಶ್ಯ ನಡೆದಿರೋದು ಮಹಾರಾಷ್ಟ್ರದಲ್ಲಿ. ಅವನು ಮಾಮೂಲಿನಂತೆ ಬಾಗಿಲಿನಿಂದ ಬಸ್ ಏರಬಹುದಿತ್ತು. ಆದರೆ, ಸರ್ಕಸ್ ಮಾಡಲು ಹೋಗಿ ಎಡವಟ್ಟಾಗಿದೆ.

    ಇದನ್ನೂ ಓದಿ : ವಿದ್ಯುತ್ ಇಲ್ಲದೆ ಪರದಾಡುತ್ತಿರುವ ಮಲೆನಾಡು: ಮೊಬೈಲ್ ಫುಲ್ ಚಾರ್ಜ್‌ಗೆ 60 ರೂ., ಹಾಲ್ಫ್‌ಗೆ 40 ರೂ.
    ಆ ವಿದ್ಯಾರ್ಥಿ ಕಿಟಕಿಯ ಮೂಲಕ ಬಸ್ ಏರಿದ್ದಾನೆ. ಆದರೆ, ಕಿಟಕಿ ಸಮೇತ ಕೆಳಗೆ ಬಿದ್ದಿದ್ದಾನೆ.

    ರೋಹಿತ್‌ (avaliyapravasi) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಸೀಟ್ ಗಾಗಿ ವಿದ್ಯಾರ್ಥಿ ಕಿಟಕಿ ಏರುವ ಸರ್ಕಸ್ ಮಾಡಿದ್ದಾನೆ. ಕಿಟಕಿ ಗ್ಲಾಸ್ ಸರಿಸಿ ಒಳ ಹೋಗಲು ಪ್ರಯತ್ನಿಸುತ್ತಿದ್ದಂತೆ, ಕಿಟಕಿ ಸಹಿತ ಕೆಳಗೆ ಬಿದ್ದಿದ್ದಾನೆ. ಈ ವೀಡಿಯೋವನ್ನು ಅಲ್ಲೇ ಇದ್ದ ಇನ್ನೊಂದು ಬಸ್ ನಲ್ಲಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

    ಜುಲೈ 22 ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.

    Continue Reading

    LATEST NEWS

    Trending