Connect with us

  DAKSHINA KANNADA

  ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದರೂ, ಅದನ್ನು ಎದುರಿಸಲು ಸಿದ್ಧರಾಗಿ: ವಿ. ಪೊನ್ನುರಾಜ್ ಸೂಚನೆ

  Published

  on

  ಮಂಗಳೂರು: ಹೆಚ್ಚು ಮಳೆಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪ ಸಂಭವಿಸಿದರೂ, ಅದನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ಸೂಚಿಸಿದರು.


  ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಪೂರ್ವಸಿದ್ಧತೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿ, ಮುಂದಿನ 10–15 ದಿನಗಳಲ್ಲಿ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.
  ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಹಾಗೂ ಎಂಜಿನಿಯರಿಂಗ್ ಹಾಗೂ ಮೆಸ್ಕಾಂ ಇಲಾಖೆಯ ಸಿಬ್ಬಂದಿ ತಂಡ ಸಿದ್ಧವಿರಬೇಕು.

  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ಜಿಲ್ಲೆಯ ಹೆದ್ದಾರಿ ನಿರ್ಮಾಣದ ಸ್ಥಳಗಳಲ್ಲಿ ಬಸ್‌ಗಳು ಸೇರಿದಂತೆ ಯಾವುದೇ ಪ್ರಯಾಣಿಕ ಹಾಗೂ ಗೂಡ್ಸ್ ವಾಹನಗಳು ಅಪಘಾತಕ್ಕೀಡಾಗದಂತೆ ರಸ್ತೆ ಬದಿಗಳಲ್ಲಿ ನಾಮಫಲಕ ಹಾಗೂ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು.

  ತಿರುವುಗಳಲ್ಲಿಯೂ ಈ ಕಾರ್ಯ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಅವರಿಗೆ ಸೂಚಿಸಿದರು.
  ಜಿಲ್ಲೆಯಲ್ಲಿ ಮುಖ್ಯವಾಗಿ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸುವ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸವಾಗಬೇಕು.

  ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿಗಳ ಹೂಳು ತೆಗೆಯಬೇಕು. ಜಲಾಶಯಗಳಲ್ಲಿ ಗೇಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.

  ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳಗಳನ್ನು ಪತ್ತೆ ಮಾಡಬೇಕು ಎಂದು ಹೇಳಿದರು.
  ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಉಪ ವಿಭಾಗಾಧಿಕಾರಿ ಮದನ್ ಮೋಹನ್ ಇದ್ದರು.

  DAKSHINA KANNADA

  ಜು. 1 ರಿಂದ ಗ್ರಾಮ ಪಂಚಾಯಿತಿಯಲ್ಲೇ ಜನನ, ಮರಣ ಪ್ರಮಾಣ ಪತ್ರ ಲಭ್ಯ

  Published

  on

  ಬೆಂಗಳೂರು: ಜುಲೈ 1 ರಿಂದ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೇ ಜನನ, ಮರಣ ಪ್ರಮಾಣ ಪತ್ರ ಲಭ್ಯವಿರಲಿದೆ. ರಾಜ್ಯದಲ್ಲಿ ಜುಲೈ 1ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಸಂಭವಿಸಿದ 30 ದಿನಗಳ ಒಳಗೆ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ.

  ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ ಗ್ರಾಪಂ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಆದೇಶ ಹೊರಡಿಸಲಾಗಿದೆ.

  ಜನನ, ಮರಣ ನಡೆದ 21 ದಿನಗಳ ಒಳಗೆ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 21 ರಿಂದ 30 ದಿನಗಳ ನಡುವೆ ನೋಂದಾಯಿಸಿದಲ್ಲಿ ಎರಡು ರೂಪಾಯಿ ಶುಲ್ಕ, 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ 5 ರೂ. ಶುಲ್ಕ ಪಡೆದು ನೋಂದಣಿ ಮಾಡಿಸಬಹುದು. ಒಂದು ವರ್ಷದ ಬಳಿಕ ನೋಂದಣಿ ಮಾಡಿದರೆ ಪ್ರಥಮ ದರ್ಜೆ ದಂಡಾಧಿಕಾರಿ ಆದೇಶದ ಮೇರೆಗೆ 10 ರೂಪಾಯಿ ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಿಸಬಹುದು.

  ವಿವರಗಳಿಗಾಗಿ ಇ-ಜನ್ಮ ಸಹಾಯವಾಣಿ ಸಂಖ್ಯೆ 1800 425 6578ಗೆ ಸಂಪರ್ಕಿಸಬಹುದಾಗಿದೆ.

  Continue Reading

  DAKSHINA KANNADA

  ಡಿಸಿಎಂ ಡಿಕೆ ಶಿವಕುಮಾರ್ ಕುಕ್ಕೆ ಕ್ಷೇತ್ರಕ್ಕೆ ಭೇಟಿ

  Published

  on

  ಮಂಗಳೂರು : ಕುಟುಂಬ ಸಮೇತರಾಗಿ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಮುಂಜಾನೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್ ನೇರವಾಗಿ ಕುಕ್ಕೆಗೆ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

  ಪತ್ನಿ ಹಾಗೂ ಮಗಳ ಜೊತೆ ಆಗಮಿಸಿದ್ದ ಡಿಕೆಶಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದು, ಮಹಾ ಪೂಜೆಯಲ್ಲೂ ಭಾಗಿಯಾಗಿದ್ದಾರೆ. ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದ ಡಿಸಿಎಂಗೆ ಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಭವ್ಯ ಸ್ವಾಗತ ನೀಡಲಾಗಿತ್ತು.

  ಇದನ್ನೂ ಓದಿ : ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ..!

  ವಾದ್ಯಘೋಷ ಹಾಗೂ ಕುಂಭ ಕಳಶದೊಂದಿಗೆ ಡಿಸಿಎಂ ಅವರನ್ನು ಸ್ವಾಗತಿಸಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗಿತ್ತು. ಡಿಕೆಶಿ ಕುಟುಂಬ ಹಲವಾರು ವರ್ಷಗಳಿಂದ ಕುಕ್ಕೆ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿದ್ದಾರೆ.

  Continue Reading

  DAKSHINA KANNADA

  ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ..!

  Published

  on

  ಮಂಗಳೂರು: ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ಮಾಡಿ ವ್ರತ ಆಚರಣೆ ಮಾಡಿದರೆ ಜೀವನದಲ್ಲಿರುವ ಸಮಸ್ಯೆಗಳೆಲ್ಲಾ ಮಾಯವಾಗುತ್ತೆ ಎನ್ನಲಾಗುತ್ತದೆ. ಈ ದಿನ ಗಣೇಶನ ಪೂಜೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.

  ಈ ದಿನ ಚಂದ್ರ ಹಾಗೂ ಗಣೇಶನ ಆರಾಧನೆ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಂಕಷ್ಟ ಚತುರ್ಥಿ ವ್ರತ ಚಂದ್ರ ದರ್ಶನ ಆಗದಿದ್ದರೆ ಅಪೂರ್ಣ ಎನ್ನಲಾಗುತ್ತದೆ. ಈ ಬಾರಿ ಚಂದ್ರ ರಾತ್ರಿ 10.12 ನಿಮಿಷಕ್ಕೆ ಉದಯಿಸಲಿದ್ದು, ಚಂದ್ರನ ದರ್ಶನ ಮಾಡಿ ಉಪವಾಸ ಪೂರ್ಣಗೊಳಿಸಬೇಕು. ಮಂಗಳವಾರ ಅಂದರೆ ಅಂಗಾರಕ ಸಂಕಷ್ಟಿಯ ದಿನ ಗಣೇಶನ ವ್ರತಾಚಾರಣೆ ಹಾಗೂ ಉಪವಾಸ ಮಾಡುವುದು ಇಡೀ ವರ್ಷದಲ್ಲಿ ಬರುವ ಸಂಕಷ್ಟ ಚತುರ್ಥಿ ಆಚರಣೆ ಮಾಡುವುದಕ್ಕೆ ಸಮ ಎನ್ನಲಾಗುತ್ತದೆ.

  ಅಂಗಾರಕ ಎಂದರೆ ಮಂಗಳಕರ ಎಂದು ಅರ್ಥ. ಈ ಸಂಕಷ್ಟಿ ಆಚರಣೆ ಮಾಡುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಹಾಗೂ ಇರುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ನಾವು ಮಾಡಿಕೊಂಡ ಸಂಕಲ್ಪಗಳು ಸಹ ಈಡೇರುತ್ತದೆ ಎನ್ನಲಾಗುತ್ತದೆ.

  ಪೂಜೆ ಮಾಡುವುದು ಹೇಗೆ?

  ಅಂಗಾರಕ ಸಂಕಷ್ಟಿಯ ದಿನ ಕೆಂಪು ಬಟ್ಟೆ ಮೇಲೆ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರ ದೇವರಿಗೆ ಹೂವುಗಳನ್ನು ಅರ್ಪಣೆ ಮಾಡಿ. ಮಲ್ಲಿಗೆ ಹೂವಿನ ಅರ್ಪಣೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.

  ನಂತರ ಗರಿಕೆಯನ್ನು ಅರ್ಪಣೆ ಮಾಡಬೇಕು. ನೈವೇದ್ಯಕ್ಕೆ ಲಡ್ಡು ಅಥವಾ ಮೋದಕ ಇದ್ದರೆ ಬಹಳ ಉತ್ತಮ. ಈ ಎರಡು ವಸ್ತುಗಳು ಗಣೇಶನಿಗೆ ಇಷ್ಟ. ಹಾಗೆಯೇ ದೇವರಿಗೆ ತುಪ್ಪದ ದೀಪ ಹಚ್ಚಿ, ಗಣೇಶ ಸ್ತುತಿ ಪಠಿಸಿ ಆರತಿ ಮಾಡಿ. ಅಲ್ಲದೇ ಈ ದಿನ ಪೂರ್ತಿ ಉಪವಾಸ ಇದ್ದು, ರಾತ್ರಿ ಚಂದ್ರ ದರ್ಶನ ಮಾಡಿ ಆಹಾರ ಸೇವಿಸಿ.

  Continue Reading

  LATEST NEWS

  Trending