Saturday, July 2, 2022

ಬಂಟ್ವಾಳ: SVS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ಎಸ್‌.ವಿ.ಎಸ್ ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.


ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು, ಇತ್ತಿಚೆಗೆ ಅವರ ಬಂಧನ ಕೂಡ ಆಗಿತ್ತು.

ಜಾಮೀನಿನಲ್ಲಿ ಬಿಡುಗಡೆಯಾಗಿರುವ ಸಂಚಾಲಕರು ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಪ್ರಾಂಶುಪಾಲರನ್ನು ಮುಂದಿಟ್ಟು ವಿದ್ಯಾರ್ಥಿಗಳಿಗೆ ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.


ಎಫ್.ಐ.ಆರ್ ದಾಖಲಾಗಿರುವ ಕಾಲೇಜು ಸಂಚಾಲಕರ ಪ್ರಕಾಶ್ ಶೆಣೈ ತಕ್ಷಣ ರಾಜೀನಾಮೆ ನೀಡಬೇಕು ಹಾಗೂ ಎಫ್.ಐ.ಆರ್. ದಾಖಲಾಗಿರುವ ಇಬ್ಬರು ಶಿಕ್ಷಕರನ್ನು ತಕ್ಷಣ ವಜಾ ಮಾಡುವಂತೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮುಖ್ಯಮಂತ್ರಿಯಾಗುತ್ತಿದ್ದಂತೆ ಶಿಂಧೆ ಶಿವಸೇನೆಯಿಂದ ಉಚ್ಛಾಟನೆ

ಮುಂಬೈ: ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರನ್ನು ಶಿವಸೇನೆ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.‘ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ ಮತ್ತು ಸ್ವಯಂಪ್ರೇರಣೆಯಿಂದ ಶಿವಸೇನೆಯ ಸದಸ್ಯತ್ವವನ್ನು ತ್ಯಜಿಸಿದ್ದೀರಿ.ಆದ್ದರಿಂದ, ಶಿವಸೇನಾ ಪಕ್ಷದ ಪ್ರಮುಖನಾಗಿ ನನಗೆ ನೀಡಲಾದ...

ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಕರಾವಳಿ ಸಂತರ ಸಮಾಗಮ

ಉಡುಪಿ: ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಶುಕ್ರವಾರ (ಜು.1) ಕರಾವಳಿ ಸಂತರ ಸಮಾಗಮ ವೈಭವದಿಂದ ನೆರವೇರಿತು.ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ,ಬೆಂಗಳೂರು ಆರ್ಯ ಈಡಿಗ...

ದ್ವೇಷದ ಹೇಳಿಕೆ ನೀಡುವ ಮುನ್ನ ಎಚ್ಚರಿಕೆ ಅಗತ್ಯ-ಶಾಸಕ ಖಾದರ್

ಮಂಗಳೂರು: ಪ್ರವಾದಿ ಕುರಿತಂತೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಇದೀಗ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. ಈ ಹಿಂದೆಯೇ ಕಾಂಗ್ರೆಸ್‌ ಅವರ ಹೇಳಿಕೆ ಖಂಡಿಸಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ ಇಂತಹ ಹೇಳಿಕೆಯನ್ನು ಪ್ರತಿಯೊಬ್ಬರೂ...