ಮಂಗಳೂರು: ವಾರಾಣಾಸಿಯಲ್ಲಿ ಶಿವಲಿಂಗ ಕಂಡುಬಂದಿದ್ದು, ಸಂತಸದ ವಿಚಾರ. ಸದ್ಯ ಆ ವಿಚಾರ ಕೋರ್ಟ್ನಲ್ಲಿರುವುದರಿಂದ ಸಂಘರ್ಷಕ್ಕೆ ಯಾರೂ ಇಳಿಯಬಾರದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಅವರು ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಮತ್ಸ್ಯಸಂಪದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಪುರಾಣದಲ್ಲಿ ಕಾಶಿಯ ಶಿವಲಿಂಗದ ಉಲ್ಲೇಖವಿದೆ.
ಇದು ಪ್ರತ್ಯಕ್ಷವಾಗಿದೆ ಸತ್ಯವಾಗಿದೆ. ಇಂತಹ ಅತಿಕ್ರಮಣಗಳು ಇದ್ದರೂ ಬೇಗನೆ ದೂರವಾಗಲಿ. ಇದು ಕೋರ್ಟ್ನ ಮೂಲಕ ನಡೆಯುತ್ತಿದೆ. ಇದರಲ್ಲಿ ಯಾರೂ ಸಂಘರ್ಷಕ್ಕೆ ಇಳಿಯದೇ ಹೃತ್ಪೂಕರ್ವಾಗಿ ಸ್ವಾತಿಸಬೇಕು ಎಂದರು.
ಇದೇ ವೇಳೆ ಅಯೋಧ್ಯೆ ಶ್ರೀರಾಮ ಮಂದಿರದ ಬಗ್ಗೆ ಮಾಹಿತಿ ನೀಡಿ, ಅಯೋಧ್ಯೆ ಶ್ರೀರಾಮ ಮಂದಿರದ ಭೂಮಿಯ ಧೃಡಪಡಿಸುವಿಕೆ, ಫ್ಲ್ಯಾಟ್ ಫಾರ್ಮ್ ಕಾರ್ಯ ಮುಗಿದಿದೆ.
ಜೂ.1ರಂದು ಗರ್ಭಗುಡಿಯ ಶಿಲಾನ್ಯಾಸ ನಡೆಯಲಿದೆ. 2024ರ ಜನವರಿಯಲ್ಲಿ ಮಂದಿರದ ಪ್ರತಿಷ್ಠಾ ಕಾರ್ಯ ನಡೆಯಲಿದೆ ಎಂದರು.